ಗದಗ(ಜು.07): ನಿಮಗೆ ಎಷ್ಟು ಜನ ಪಿಎಗಳು ಅಂತಾ ಕೇಳಿದ್ದಕ್ಕೆ ಗದಗ ಬೆಟಗೇರಿ ನಗರಸಭೆ ಅಧ್ಯಕ್ಷೆ ಉಷಾ ದಾಸರ್ (Usha Sadar) ಅವರು ಸಭೆಯಲ್ಲೇ ಗಳಗಳನೆ ಅತ್ತ ಘಟನೆ ನಡೆದಿದೆ. ಹೌದು ಉಷಾ ದಾಸರ್ ಅವರ ಅಧ್ಯಕ್ಷತೆಯಲ್ಲಿ ಇಂದು ನಗರಸಭೆಯ ವಿಶೇಷ ಸಾಮಾನ್ಯ ಸಭೆ ನಡೀಯಿತು. ನಿಗದಿಯಂತೆ ಸಭೆಯಲ್ಲಿ, ಸ್ಥಾಯಿ ಸಮಿತಿ ಆಯ್ಕೆ ಹಾಗೂ ನಗರಸಭೆಯ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯ ಹೈಸ್ಕೂಲ್ ಸಮಿತಿ ಸದಸ್ಯರ (Highschool Committee Members) ಆಯ್ಕೆ ಮಾಡುವ ಕುರಿತು ಚರ್ಚೆ ಬೇಕಾಗಿತ್ತು. ಆರಂಭದಲ್ಲೇ ಆಕ್ಷೇಪ ವ್ಯಕ್ತ ಪಡಿಸಿದ ವಿರೋಧ ಪಕ್ಷದ ನಾಯಕ ಎಲ್ ಡಿ ಚೆಂದಾವರಿ, ಸಭೆ ನೋಟಿಸ್ ನಲ್ಲಿ ಎಷ್ಟು ಸ್ಥಾಯಿ ಸಮಿತಿಗೆ ಸದಸ್ಯರ ಆಯ್ಕೆ ಎಂಬ ಬಗ್ಗೆ ಪ್ರಸ್ತಾಪ ಮಾಡಿಲ್ಲ ಅಂತಾ ಮಾತು ಆರಂಭಿಸಿದ್ದಾರೆ.
ಅಧ್ಯಕ್ಷರ ನಡೆ ಪ್ರಶ್ನೆ
ನಂತ್ರ ಸಫಾಯಿ ಕರ್ಮಚಾರಿಗಳ ಬಿಲ್ ಸಹಿ ಮಾಡದೆ ವಿಳಂಭದೋರಣೆ ತಾಳಿದ ಅಧ್ಯಕ್ಷರ ನಡೆಯನ್ನ ಚಂದಾವರಿ ಪ್ರಶ್ನಿಸಿದರು. ಮುಂದುವರೆದು ನಿಮಗೆಷ್ಟು ಪಿಎ ಗಳಿದ್ದಾರೆ ಅಂತಾ ಚೇಡಿಸಿದರು. ಸಿಎಂ ಬೊಮ್ಮಾಯಿಗೂ ನಿಮಷ್ಟು ಪಿಎಗಳಿಲ್ಲ ಅಂತಾ ಕಿಚಾಯಿಸಲು ಮುಂದಾದರು. ಇದ್ರಿಂದ ವಿಚಲಿತರಾದ ಅಧ್ಯಕ್ಷೆ ಉಷಾ ದಾಸರ್ ಗಳಗಳನೆ ಅತ್ತು ಸಭಾ ತ್ಯಾಗಕ್ಕೂ ಮುಂದಾಗಿದ್ದರು.
ಇದನ್ನೂ ಓದಿ: Zameer Ahmed: ಅಕ್ರಮ ಆಸ್ತಿ ಗಳಿಸಿದ್ದಾರಾ ಜಮೀರ್ ಅಹ್ಮದ್? ಎಸಿಬಿ ದಾಳಿ ವೇಳೆ ಸ್ಫೋಟಕ ಮಾಹಿತಿ
ಸಭಾತ್ಯಾಗಕ್ಕೆ ಮುಂದಾದ ಅಧ್ಯಕ್ಷೆ
ಆದ್ರೆ, ಸಭೆಯಲ್ಲಿದ್ದ ಬಿಜೆಪಿ ಸದಸ್ಯರು ಅಧ್ಯಕ್ಷರನ್ನ ಸಂತೈಸೋದಕ್ಕೆ ಮುಂದಾದ್ರು. ಉತ್ತರ ಕೊಡೋಣ ಸಭಾತ್ಯಾಗ ಮಾಡಬೇಡಿ ಅಂತಾ ಮನವೊಲಿಸಿದರು. ಸಭೆಯಲ್ಲಿ ಮಹಿಳೆಯರ ಬಗ್ಗೆ ಗೌರವ ಇದೆ. ನಗರಸಭೆಯ ಕಡತಗಳನ್ನ ಸರ್ಕಾರೇತರ ವ್ಯಕ್ತಿಗಳು ನೋಡಲು ಬರಲ್ಲ. ನಗರಸಭೆ ವತಿಯಿಂದ ಪಿಎ ನೇಮಿಸಿಕೊಳ್ಳಬಹುದು ಅಂತಾ ವಿರೋಧ ಪಕ್ಷದ ನಾಯಕ ಎಲ್ ಡಿ ಚಂದಾವರಿ ಸಲಹೆ ನೀಡಿದರು.
ಶಾಸಕರ ಮೇಲೆ ಕಿಡಿ
ವಿರೋಧ ಪಕ್ಷದ ನಾಯಕ ಎಲ್ ಡಿ ಚಂದಾವರಿ ಅವರ ಮಾತಿಗೆ ಅಧ್ಯಕ್ಷೆ ಉಷಾ ದಾಸರ ತಿರುಗೇಟು ನೀಡಿದ್ದರು. ನಾನು ಐದು ನಿಮಿಷ ಸಹ ಯಾವುದೇ ಫೈಲ್ ಇಟ್ಟಿಕೊಂಡಿಲ್ಲ ಎಲ್ಲವನ್ನು ಸಹಿ ಮಾಡಿಕೊಟ್ಟಿದೇನೆ. ಇನ್ನು ನಿಮ್ಮ ಶಾಸಕರು ಎರಡು ತಿಂಗಳಿಂದ ಸಹಿ ಮಾಡದೆ ಹಾಗೇ ಫೈಲ್ ಇಟ್ಟಿಕೊಂಡು ಕುಳಿತಿದ್ದಾರೆ ಎಂದು ಕಿಡಿಕಾರಿದರು.
ಇದನ್ನೂ ಓದಿ: Karnataka Weather Report: ಮೂರು ಜಿಲ್ಲೆಗೆ ರೆಡ್ ಅಲರ್ಟ್, ನಾಲ್ಕು ಜಿಲ್ಲೆಗೆ ಆರೆಂಜ್; ರಜೆ ವಿಸ್ತರಣೆ
ನಾನು ಯಾವುದಕ್ಕೂ ಹೆದರಂಗಿಲ್ಲ. ಊರ ತುಂಬಾ ಲೂಟಿ ಹೊಡೆದಿರೋ ನೀವೆ ಇಷ್ಟು ಮಾತಾಡುತ್ತಿರಬೇಕಾದ್ರೆ. ನಾನೇಷ್ಟು ಮಾತಾಡಬಾರದು. ಎಷ್ಟು ಲೂಟಿ ಹೊಡೆದಿಯಪ್ಪಾ ನೀನು ಎಂದು ವಿರೋಧ ಪಕ್ಷ ನಾಯಕ ಎಲ್ ಡಿ ಚಂದಾವರಿ ವಿರುದ್ಧ ಗುಡುಗಿದ್ದರು. ಹಿರಿಯರು ಇದ್ದಿರಾ ಅಂತಾ ಸುಮ್ನೆ ಕುಳಿತರೆ ಬಹಳ ಮಾತಾಡುತ್ತಿರಾ.? ಇನ್ನು ಜಾಸ್ತಿ ಮಾತಾಡಬೇಡಾ ನೀನು ಎಂದು ಖಡಕ್ ವಾರ್ನಿಂಗ್ ನೀಡಿದ ನಗರಸಭೆ ಅಧ್ಯಕ್ಷೆ ಉಷಾ ದಾಸರ.
ಆಡಳಿತದಲ್ಲಿ ಹಸ್ತಕ್ಷೇಪ ಮಾಡಿಲ್ಲ
ಇನ್ನು ನಗರಸಭೆ ಅಧ್ಯಕ್ಷರು ಕಿರಿಯ ವಯಸ್ಸಿನವರಾಗಿದ್ದಾರೆ. ಆಡಳಿದ ಬಗ್ಗೆ ತಿಳಿದುಕೊಳ್ಳಲು ಸಲಹೆ ನೀಡಿಲು ಕೆಲ ಆಪ್ತರು ಅವರ ಜೊತೆಗಿದ್ದಾರೆ. ಹಾಗಂತ ಅವರು ಆಡಳಿತದಲ್ಲಿ ಹಸ್ತಕ್ಷೇಪ ಮಾಡಿಲ್ಲ ಅಂತಾ ಬಿಜೆಪಿ ಸದಸ್ಯರು ತಿಳಿಸಿದ್ದಾರೆ. ಇಂದಿನ ಸಾಮಾನ್ಯ ಸಭೆ ಚುರುಕು ಚರ್ಚೆ ಕೆಲ ಆಕ್ಷೇಪಣೆಯ ಮಧ್ಯೆ ಜೋರಾಗಿ ನಡೆದಿದೆ. ಬರುವ ಸಭೆಗಳಲ್ಲಿ ಅನಾವಶ್ಯಕ ಚರ್ಚೆ ಬಿಟ್ಟು ಕುಡಿಯುವ ನೀರಿನ ಸಮಸ್ಯೆ ಸೇರಿದಂತೆ ಜನರ ಸಮಸ್ಯೆಗಳು ಚರ್ಚೆಯಾಗ್ಲಿ ಅನ್ನೋದು ಜನರ ಒತ್ತಾಯವಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ