ಕಾಫಿಗೆ ಅಂತ ಕರ್ಕೊಂಡ್ ಹೋಗಿ ಬಿಜೆಪಿಗೆ ಸೇರಿಸಿಬಿಟ್ರು: ವಸಂತ್ ಅಳಲು

ಕಾಂಗ್ರೆಸ್ ಕಾರ್ಪೊರೇಟರ್ ವಸಂತ್ ಕುಮಾರ್ ಮರು ಕಾಂಗ್ರೆಸ್ ಸೇರಿದ್ದಾರೆ. ಸ್ವತಃ ಸಿಎಂ ಹಾಗೂ ಅವರ ಆಪ್ತರು ಹೀಗೆ ಮಾಡಿದ್ದಾರೆ ಅಂದರೆ ಅವರು ನೈತಿಕ ರಾಜಕಾರಣ ಮಾಡುತ್ತಿಲ್ಲ. ಶಿವಾಜಿನಗರ ಕ್ಷೇತ್ರದಲ್ಲಿ ಸೋಲುವ ಭಯದಿಂದ ಹೀಗೆ ಮಾಡಿದ್ದಾರೆ- ದಿನೇಶ್​ ಗುಂಡೂರಾವ್​

ಕೆಪಿಸಿಸಿ ಅಧ್ಯಕ್ಷ ದಿನೇಶ್​ ಗುಂಡೂರಾವ್​

ಕೆಪಿಸಿಸಿ ಅಧ್ಯಕ್ಷ ದಿನೇಶ್​ ಗುಂಡೂರಾವ್​

  • Share this:
ಬೆಂಗಳೂರು(ಡಿ.05): ಉಪಚುನಾವಣೆ  ಹೊತ್ತಲ್ಲೇ ಕಾಂಗ್ರೆಸ್​ ತೊರೆದು ಬಿಜೆಪಿ ಸೇರಿದ್ದ ಬಿಬಿಎಂಪಿ  ಕಾರ್ಪೊರೇಟರ್​​ ವಸಂತ್​ಕುಮಾರ್​ ಇಂದು ಮತ್ತೆ ಮಾತೃ ಪಕ್ಷಕ್ಕೆ ವಾಪಸ್ಸಾಗಿದ್ದಾರೆ. 

"ಕಾಫಿ ಕುಡಿಯಲು ಕರದುಕೊಂಡು ಹೋಗಿ ಬಿಜೆಪಿ ಸೇರಿಸಿಕೊಂಡಿದ್ದರು. ಆ ಸಮಯದಲ್ಲಿ ನನಗೆ ಏನೂ ಮಾಡಲು ತೋಚಲಿಲ್ಲ. ನನ್ನಿಂದ ತಪ್ಪಾಗಿದೆ. ಅಧ್ಯಕ್ಷರಿಗೆ ತಿಳಿಸಿ, ಈಗ ಪಕ್ಷಕ್ಕೆ ವಾಪಸ್​ ಬಂದಿದ್ದೇನೆ. ಹಣ ಪಡೆದು ಬಿಜೆಪಿ ಸೇರಿದ್ದು, ಈಗ ಮತ್ತೆ ಹಣ ಪಡೆದು ಕಾಂಗ್ರೆಸ್​​ಗೆ ಬಂದೆ ಎಂಬುದು ಸುಳ್ಳು," ಎಂದು ಕಾರ್ಪೊರೇಟರ್​ ವಸಂತ್​ಕುಮಾರ್​ ಸ್ಪಷ್ಟನೆ ನೀಡಿದ್ದಾರೆ.

ನಿಷೇಧವಿದ್ದರೂ ಮತದಾನದ ಫೋಟೋ ತೆಗೆದು ಜನರು; ಹಲಸೂರಿನಲ್ಲಿ ಒಬ್ಬನ ಬಂಧನ; ವೋಟ್ ಅಸಿಂಧು


ಇದೇ ವೇಳೆ, ಕೆಪಿಸಿಸಿ ಅಧ್ಯಕ್ಷ ದಿನೇಶ್​ ಗುಂಡೂರಾವ್​​ , "ಕಾಂಗ್ರೆಸ್ ಕಾರ್ಪೊರೇಟರ್ ವಸಂತ್ ಕುಮಾರ್ ಮರು ಕಾಂಗ್ರೆಸ್ ಸೇರಿದ್ದಾರೆ. ಸ್ವತಃ ಸಿಎಂ ಹಾಗೂ ಅವರ ಆಪ್ತರು ಹೀಗೆ ಮಾಡಿದ್ದಾರೆ ಅಂದರೆ ಅವರು ನೈತಿಕ ರಾಜಕಾರಣ ಮಾಡುತ್ತಿಲ್ಲ. ಶಿವಾಜಿನಗರ ಕ್ಷೇತ್ರದಲ್ಲಿ ಸೋಲುವ ಭಯದಿಂದ ಹೀಗೆ ಮಾಡಿದ್ದಾರೆ. ಬಿಜೆಪಿಯ ಈ ರೀತಿಯ ಕೀಳು ಮಟ್ಟದ ರಾಜಕಾರಣವನ್ನು ನಾನು ಖಂಡಿಸುತ್ತೇನೆ. ಗೆಲ್ಲಲು ವಾಮ ಮಾರ್ಗ ಅನುಸರಿಸುತ್ತಿದ್ದಾರೆ.  ಒತ್ತಡ ಹೇರಿ ಕರೆದುಕೊಂಡು ಹೋಗಿದ್ದರು, ಆದರೆ ಈಗ ವಸಂತ್ ಮತ್ತೆ ವಾಪಸ್ಸಾಗಿದ್ದಾರೆ.  ಬಿಜೆಪಿಯದ್ದು ಇದು ಹಳೇ ಚಾಳಿ, ಕುದುರೆ ವ್ಯಾಪಾರ ಮಾಡುತ್ತಿದ್ದಾರೆ," ಎಂದು ಕಿಡಿಕಾರಿದರು.

ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಶಾಸಕ ಹ್ಯಾರಿಸ್, ಪಾಲಿಕೆ ಸದಸ್ಯ ವಸಂತ್ ಕುಮಾರ್ ಭಾಗಿಯಾಗಿದ್ದರು.

Karnataka By-Elections 2019: ಮತಯಂತ್ರ ವಾಸ್ತುಪ್ರಕಾರ ಇಲ್ವಂತೆ; ಇವಿಎಂ ಯಂತ್ರವನ್ನೇ ತಿರುಗಿಸಿ ಮತದಾನ ಮಾಡಿ ನಗೆಪಾಟಲಿಗೀಡಾದ ಜೆಡಿಎಸ್ ಅಭ್ಯರ್ಥಿ
First published: