HOME » NEWS » State » CORONAVIRUS UPDATES KARNATAKA STATE GOVERNMENT WILL IMPOSED LOCK DOWN IF SITUATION BECOME WORSE LG

ಬೆಂಗಳೂರಿನಲ್ಲಿ ಕೊರೋನಾ ರಣಕೇಕೆ; ಪರಿಸ್ಥಿತಿ ಕೈ ಮೀರುವ ಮುನ್ನ ಲಾಕ್​ಡೌನ್​?; ಸಂದಿಗ್ಧ ಸ್ಥಿತಿಯಲ್ಲಿ ಸರ್ಕಾರ

ಪರಿಸ್ಥಿತಿ ಕೈ ಮೀರುತ್ತಿದೆ, ಹಾಗಾಗಿ ಸಾರ್ವಜನಿಕರು ಒಪ್ಪಲಿ, ಬಿಡಲಿ ಲಾಕ್‍ಡೌನ್  ಜಾರಿ ಮಾಡಲೇಬೇಕಾದ ಸಂದಿಗ್ಧ ಸ್ಥಿತಿಯಲ್ಲಿ ಸರ್ಕಾರವಿದೆ. ನಾಳೆ ನಡೆಯುವ ಸಭೆಯಲ್ಲಿ  ಸಿಎಂ ಜೊತೆ ಮತ್ತೊಮ್ಮೆ ಮಾತುಕತೆ ನಡೆಸಿ ಬೆಂಗಳೂರಿಗೆ ಲಾಕ್‍ಡೌನ್ ಘೋಷಣೆ ಮಾಡುವ ಸಾಧ್ಯತೆ ಬಹುತೇಕ ನಿಚ್ಚಳವಾಗಿದೆ.

news18-kannada
Updated:April 18, 2021, 1:55 PM IST
ಬೆಂಗಳೂರಿನಲ್ಲಿ ಕೊರೋನಾ ರಣಕೇಕೆ; ಪರಿಸ್ಥಿತಿ ಕೈ ಮೀರುವ ಮುನ್ನ ಲಾಕ್​ಡೌನ್​?; ಸಂದಿಗ್ಧ ಸ್ಥಿತಿಯಲ್ಲಿ ಸರ್ಕಾರ
ಸಿಎಂ ಬಿಎಸ್ ಯಡಿಯೂರಪ್ಪ.
  • Share this:
ಬೆಂಗಳೂರು(ಏ.18): ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕೊರೋನಾ ಸೋಂಕು ಸಮುದಾಯಕ್ಕೂ ಹಬ್ಬುತ್ತಿದೆ.  ಕಠಿಣ ಕ್ರಮಗಳನ್ನು ಕೈಗೊಳ್ಳದಿದ್ದರೆ ಪರಿಸ್ಥಿತಿ ಕೈ ಮೀರಲಿದೆ. ಈಗಾಗಲೇ ನರಕ ಸದೃಶ್ಯ ಪರಿಸ್ಥಿತಿ ನಿರ್ಮಾಣವಾಗಿದೆ. ಮುಂದೆ ಇಂತಹ ಪರಿಸ್ಥಿತಿ ಮರುಕಳಿಸುವುದು ಬೇಡ ಎಂಬುದು ಎಲ್ಲರ ಮಾತಾಗಿದೆ. ಹಾಗಾಗಿ ಅನಿವಾರ್ಯವಾಗಿ ಕಠಿಣ ಕ್ರಮಗಳನ್ನು ಕೈಗೊಳ್ಳಲೇಬೇಕಾಗಿದೆ. ಹೀಗಾಗಿ  ತಜ್ಞರಿಂದ ಅಭಿಪ್ರಾಯವನ್ನೂ ಸಹ ಸಂಗ್ರಹಿಸಲಾಗಿದೆ.  ಇದೇ ಕಾರಣಕ್ಕೆ ಬೆಂಗಳೂರಿನಲ್ಲಿ ಕೊರೋನಾ ನಿಯಂತ್ರಣಕ್ಕೆ ಸರ್ಕಾರ ಕೆಲವು ಬಿಗಿ ಕ್ರಮ ಕೈಗೊಳ್ಳಲು ಪ್ಲ್ಯಾನ್​  ಮಾಡಿದೆ.

ಹಾಗಾದರೆ, ಸರ್ಕಾರ ಒಂದು ವೇಳೆ ಬಿಗಿ ಕ್ರಮ ಕೈಗೊಂಡರೆ ಏನೆಲ್ಲಾ ಕ್ರಮಗಳನ್ನು ಜರುಗಿಸಬಹುದು ಎಂಬುದನ್ನು ನೋಡೋಣ. ಬಹುತೇಕ ವಾರಾಂತ್ಯ(ವೀಕೆಂಡ್)ದ ಲಾಕ್‍ಡೌನ್ ಜಾರಿ ಮಾಡುವ ಸಾಧ್ಯತೆ ಇದೆ. ಪ್ರಾಯೋಗಿಕವಾಗಿ ಶನಿವಾರ ಮತ್ತು ಭಾನುವಾರ ಲಾಕ್‍ಡೌನ್ ಜಾರಿ ಸಾಧ್ಯತೆ ಎನ್ನಲಾಗುತ್ತದೆ.  ಅಗತ್ಯ ಸೇವೆಗಳನ್ನು ಹೊರತುಪಡಿಸಿ ಉಳಿದೆಲ್ಲ ಚಟುವಟಿಕೆಗಳಿಗೆ ಕಡಿವಾಣ ಹಾಕುವ ಸಾಧ್ಯತೆ ಇದೆ.

ಪರಿಸ್ಥಿತಿ ಕೈ ಮೀರುತ್ತಿದೆ, ಹಾಗಾಗಿ ಸಾರ್ವಜನಿಕರು ಒಪ್ಪಲಿ, ಬಿಡಲಿ ಲಾಕ್‍ಡೌನ್  ಜಾರಿ ಮಾಡಲೇಬೇಕಾದ ಸಂದಿಗ್ಧ ಸ್ಥಿತಿಯಲ್ಲಿ ಸರ್ಕಾರವಿದೆ. ನಾಳೆ ನಡೆಯುವ ಸಭೆಯಲ್ಲಿ  ಸಿಎಂ ಜೊತೆ ಮತ್ತೊಮ್ಮೆ ಮಾತುಕತೆ ನಡೆಸಿ ಬೆಂಗಳೂರಿಗೆ ಲಾಕ್‍ಡೌನ್ ಘೋಷಣೆ ಮಾಡುವ ಸಾಧ್ಯತೆ ಬಹುತೇಕ ನಿಚ್ಚಳವಾಗಿದೆ.

ರಸ್ತೆ, ಬ್ರಿಡ್ಜ್ ಆನಂತರ‌ ಕಟ್ಟೋಣ, ಮೊದಲು ಜನರ ಆರೋಗ್ಯದ ಬಗ್ಗೆ ಗಮನ ಕೊಡಿ; ಸರ್ಕಾರಕ್ಕೆ ಡಿಕೆ ಶಿವಕುಮಾರ್ ಸಲಹೆ

ಲಾಕ್‍ಡೌನ್ ಯಾವ ರೀತಿ ಇರಲಿದೆ?:

ಕಂಟೈನ್ಮೆಂಟ್ ಅಲ್ಲದ ವಲಯಗಳಲ್ಲಿ ಸರ್ಕಾರಿ ಕಚೇರಿಗಳು, ಆರೋಗ್ಯ, ವಿದ್ಯುತ್ , ನೀರು, ವೈದ್ಯಕೀಯ ಶಿಕ್ಷಣ,ಪೊಲೀಸ್ ಸೇರಿದಂತೆ ತುರ್ತು ಸೇವೆಗಳಿಗೆ ನಿರ್ಬಂಧ ಇರುವುದಿಲ್ಲ.  ನಗರದಾದ್ಯಂತ 144 ಸೆಕ್ಷನ್ ಜಾರಿಯಲ್ಲಿರುತ್ತದೆ. ಅನಗತ್ಯವಾಗಿ ತಿರುಗಾಟ, ಗುಂಪಗೂಡಿದರೆ, ಅವರ ವಿರುದ್ಧ ವಿಪ್ಪತ್ತು ನಿರ್ವಹಣಾ ಕಾಯ್ದೆಯಡಿ ದೂರು ದಾಖಲಾಗುತ್ತದೆ.

ವಿಧಾನಸೌಧ, ವಿಕಾಸಸೌಧ ,ಬಹುಮಹಡಿ ಕಟ್ಟಡಗಳಲ್ಲಿರುವ ಕಚೇರಿಗಳಲ್ಲಿ ಶೇ.50ರಷ್ಟು ಸಿಬ್ಬಂದಿ ಕಾರ್ಯ ನಿರ್ವಹಣೆ ಮಾಡಬಹುದಾಗಿದೆ. ಕೋವಿಡ್-19ಗೆ  ಸಂಬಂಧಿಸಿದ ಕಾರ್ಯಾಚರಣೆಗೆ ನಿಯೋಜಿಸಿರುವ ಸರ್ಕಾರೇತರ ಸಂಸ್ಥೆಗಳು, ಸ್ವಯಂ ಸೇವಕರು ಹಾಗೂ ಇತರೆ ಎಲ್ಲ ಕಚೇರಿಗಳ ಸಿಬ್ಬಂದಿ ಮನೆಯಿಂದಲೇ ಕಾರ್ಯ ನಿರ್ವಹಿಸಲು ಸೂಚನೆ ನೀಡಲಾಗುತ್ತದೆ.ಇನ್ನು, ರಾಜ್ಯ ಸರ್ಕಾರದ ಕಚೇರಿಗಳು, ಸ್ವಾಯತ್ತ ಸಂಸ್ಥೆಗಳು, ನಿಗಮಗಳು ಮುಚ್ಚಿರಲಿವೆ. ಕೇಂದ್ರ ಸರ್ಕಾರದ ಕಚೇರಿಗಳು, ಅದರ ಸ್ವಾಯತ್ತ ಕಚೇರಿಗಳು ಹಾಗೂ ಸಾರ್ವಜನಿಕ ಸಂಸ್ಥೆಗಳು ಮುಚ್ಚಿರುತ್ತವೆ.

ರಕ್ಷಣೆ, ಸಶಸ್ತ್ರ, ಪೊಲೀಸ್ ಪಡೆ, ದೂರ ಸಂಪರ್ಕ ಸೇವೆ ಸೇರಿ ಅಗತ್ಯ ಸೇವೆಗಳನ್ನು ನಿರ್ವಹಿಸುವ ಕಚೇರಿಗಳು ತೆರೆದಿರಲಿವೆ. ಅಂಚೆ ಕಚೇರಿಗಳು, ಬ್ಯಾಂಕ್​ಗಳು, ವೇತನ, ಲೆಕ್ಕಪತ್ರ, ಹಣಕಾಸು ಸಲಹೆಗಾರರು ಹಾಗೂ ಮಹಾ ಲೆಕ್ಕ ನಿಯಂತ್ರಕರ ಕಚೇರಿಗಳು ಕನಿಷ್ಠ ಸಿಬ್ಬಂದಿಯೊಂದಿಗೆ ಕಾರ್ಯ ನಿರ್ವಹಿಸಲಿವೆ. ಎಲ್ಲಾ ಆರೋಗ್ಯ ಸೇವೆಗಳು,  ಆಯುಷ್ ಮತ್ತು ಪಶು ವೈದ್ಯಕೀಯ ಆಸ್ಪತ್ರೆಗಳು ಕಾರ್ಯನಿರ್ವಹಿಸಲಿವೆ.

ಕಂಟೈನ್ಮೆಂಟ್ ವಲಯದ ಹೊರಗೆ:

ಕೃಷಿ ಮತ್ತು ತೋಟಗಾರಿಕೆ ಚಟುವಟಿಕೆಗಳು ಪೂರ್ಣ ಪ್ರಮಾಣದಲ್ಲಿ ಕಾರ್ಯ ನಿರ್ವಹಿಸಲು ಅವಕಾಶ ನೀಡುವ ಸಾಧ್ಯತೆ ಇದೆ. ಎಲ್ಲಾ ಮಂಡಿ, ತರಕಾರಿ ಮತ್ತು ಹಣ್ಣು ಮಾರುಕಟ್ಟೆಗಳು, ಕೃಷಿ ಯಂತ್ರೋಪಕರಣ ಮಳಿಗೆ, ಕೀಟನಾಶಕ, ಬೀಜ ತಯಾರಿಕೆ, ವಿತರಣೆ ಮಳಿಗೆಗಳು ತೆರೆದಿರಲಿವೆ. ಮೀನುಗಾರಿಕೆ ಚಟುವಟಿಕೆಗಳು, ಮೊಟ್ಟೆ ಕೇಂದ್ರಗಳು, ಕೋಳಿ, ಜಾನುವಾರು ಸಾಗಣೆ, ಹಾಲು ಮತ್ತು ಹಾಲಿನ ಉತ್ಪನ್ನಗಳ ಸಂಸ್ಕರಣೆ, ವಿತರಣೆ ಹಾಗೂ ಮಾರಾಟಕ್ಕೆ ಯಾವುದೇ ನಿರ್ಬಂಧ ಇರುವುದಿಲ್ಲ.
Published by: Latha CG
First published: April 18, 2021, 1:54 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories