Lockdown In Hassan: ಹಾಸನದಲ್ಲಿ ಸಾರಾಯಿ ಮಾರಿದರೆ 500 ರೂ. ದಂಡ; ರಸ್ತೆಯಲ್ಲಿ ತಿರುಗಾಡಿದರೆ ಬಸ್ಕಿ ಹೊಡೆಯೋ ಶಿಕ್ಷೆ​

Lockdown In Hasana News: ಹಾಸನ ಜಿಲ್ಲೆಯ ತೆಂಕನಹಳ್ಳಿ ಗ್ರಾಮದಲ್ಲಿ ಅಕ್ರಮವಾಗಿ ವ್ಯಕ್ತಿಯೊಬ್ಬ ಮದ್ಯ ಮಾರಾಟ ಮಾಡುತ್ತಿದ್ದ. ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿರಲಿಲ್ಲ.

news18-kannada
Updated:March 30, 2020, 11:00 AM IST
Lockdown In Hassan: ಹಾಸನದಲ್ಲಿ ಸಾರಾಯಿ ಮಾರಿದರೆ 500 ರೂ. ದಂಡ; ರಸ್ತೆಯಲ್ಲಿ ತಿರುಗಾಡಿದರೆ ಬಸ್ಕಿ ಹೊಡೆಯೋ ಶಿಕ್ಷೆ​
ಸಾಂದರ್ಭಿಕ ಚಿತ್ರ
  • Share this:
ಹಾಸನ (ಮಾ. 30): ಲಾಕ್​ಡೌನ್ ಘೋಷಿಸಿರುವುದರಿಂದ ಅನಗತ್ಯವಾಗಿ ಯಾರೂ ಮನೆಯಿಂದ ಹೊರಗೆ ಓಡಾಡುವಂತಿಲ್ಲ. ದಿನನಿತ್ಯದ ಬಳಕೆಯ ವಸ್ತುಗಳನ್ನು ಹೊರತುಪಡಿಸಿ ಬೇರಾವ ವಸ್ತುಗಳನ್ನೂ ಮಾರಾಟ ಮಾಡುವಂತಿಲ್ಲ. ಆದರೂ ಹಾಸನದಲ್ಲಿ ಅಕ್ರಮವಾಗಿ ಸಾರಾಯಿ ಮಾರಾಟ ಮಾಡಲಾಗುತ್ತಿದೆ. ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗದ ಕಾರಣ ಗ್ರಾಮಸ್ಥರೇ ಹೊಸ ನಿಯಮ ಜಾರಿಗೆ ತಂದಿದ್ದು, ಸಾರಾಯಿ ಮಾರಾಟ ಮಾಡುವವರಿಗೆ 500 ರೂ. ದಂಡ ವಿಧಿಸಲಾಗುತ್ತಿದೆ.

ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ತೆಂಕನಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಈ ಗ್ರಾಮದಲ್ಲಿ ಪ್ರತಿನಿತ್ಯ ಸಾರಾಯಿ ಮಾರಾಟ ಮಾಡಲಾಗುತ್ತಿತ್ತು. ಕೊರೋನಾ ವೈರಸ್​ ಹರಡದಂತೆ ತಡೆಗಟ್ಟಲು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದ್ದರೂ ಸಾರಾಯಿ ಮಾರಾಟ ಮಾತ್ರ ನಿಂತಿಲ್ಲ. ಈ ಹಿನ್ನೆಲೆಯಲ್ಲಿ ಸಾರಾಯಿ ಮಾರಾಟ ಮಾಡಿದರೆ 500 ರೂ. ದಂಡ ವಿಧಿಸಲಾಗುವುದು ಎಂದು ಗ್ರಾಮದ ತುಂಬ ಡಂಗುರ ಹೊಡೆಸಲಾಗಿದೆ.

ಇದನ್ನೂ ಓದಿ: ನಂಜನಗೂಡಿನ ಸೋಂಕಿತರ ಜೊತೆ ಹಾಸನದ 10 ಮಂದಿ ಸಂಪರ್ಕ; ಅವರಲ್ಲಿ ಮೂವರು ನಾಪತ್ತೆ

ತೆಂಕನಹಳ್ಳಿ ಗ್ರಾಮದಲ್ಲಿ ಅಕ್ರಮವಾಗಿ ವ್ಯಕ್ತಿಯೊಬ್ಬ ಮದ್ಯ ಮಾರಾಟ ಮಾಡುತ್ತಿದ್ದ. ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿರಲಿಲ್ಲ. ಹೀಗಾಗಿ ಗ್ರಾಮದಲ್ಲಿ ಡಂಗುರ ಸಾರುತ್ತಿರುವ ಗ್ರಾಮಸ್ಥರು 500 ರೂ. ದಂಡ ವಿಧಿಸಲು ಮುಂದಾಗಿದ್ದಾರೆ. ನಾವು ನೇರವಾಗಿ ಸಾರಾಯಿ ಮಾರುವ ವ್ಯಕ್ತಿಯ ಮನೆಗೆ ನುಗ್ಗಲು ಆಗುವುದಿಲ್ಲ. ಹಾಗೆ ಮಾಡಿದರೆ ಗ್ರಾಮದಲ್ಲಿ ಗಲಾಟೆ ಆಗುತ್ತದೆ. ಆದ್ದರಿಂದ ಅಧಿಕಾರಿಗಳು ಪರಿಶೀಲನೆ ನಡೆಸಬೇಕು ಎಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.

ರಸ್ತೆಯಲ್ಲಿ ಓಡಾಡಿದರೆ ಬಸ್ಕಿ ಶಿಕ್ಷೆ:

ಇನ್ನೊಂದೆಡೆ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಹೊಂಕರವಳ್ಳಿ ವೃತ್ತದಲ್ಲಿ ಅನಗತ್ಯವಾಗಿ ತಿರುಗಾಡುತ್ತಿದ್ದ ಯುವಕರಿಗೆ ಹಾಸನ ಪೊಲೀಸರು ಬಸ್ಕಿ ಶಿಕ್ಷೆ ನೀಡಿದ್ದಾರೆ. ಸಕಲೇಶಪುರ ಗ್ರಾಮಾಂತರ ಠಾಣೆ ಪೊಲೀಸರಿಂದ ಈ ಶಿಕ್ಷೆ ವಿಧಿಸಲಾಗಿದೆ. ಲಾಕ್​ಡೌನ್ ಇದ್ದರೂ ಮನಸೋಇಚ್ಛೆ ತಿರುಗಾಡಿಕೊಂಡಿದ್ದ ಯುವಕರನ್ನು ಹಿಡಿದು ಬಸ್ಕಿ ಹೊಡೆಯುವಂತೆ ಹೇಳಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿರುವವರನ್ನು ಹಳ್ಳಿಗಳಿಗೆ ವಾಪಾಸ್ ಕಳಿಸಿ; ಸಿಎಂಗೆ ಶಾಸಕ ಎಂ.ಪಿ. ಕುಮಾರಸ್ವಾಮಿ ಮನವಿ
First published:March 30, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading