HOME » NEWS » State » CORONAVIRUS UPDATES BBMP WILL OPEN COVID CARE CENTERS IN EVERY ZONES OF BANGALORE AMTV LG

Coronavirus Updates: ಅಪಾರ್ಟ್​​ಮೆಂಟ್​​​‌ಗಳಲ್ಲೇ ಟೆಸ್ಟಿಂಗ್; ಪ್ರತಿ ಝೋನ್‌ಗೂ ಕೋವಿಡ್ ಕೇರ್ ಸೆಂಟರ್ ತೆರೆಯಲಿರುವ ಬಿಬಿಎಂಪಿ

ಈಗಾಗಲೇ ಈ ಬಗ್ಗೆ ಆ ವಲಯದ ಅಧಿಕಾರಿಗಳ ಜೊತೆಗೆ ಸಭೆ ನಡೆಸಿದ್ದು, ಕೋವಿಡ್ ಕೇರ್ ಸೆಂಟರ್ ತೆರೆಯಲು ಜಾಗ ಗೊತ್ತು ಮಾಡಲು ಸೂಚಿಸಿದ್ದಾರೆ. ಈ ಬಗ್ಗೆ ಮಾತನಾಡಿದ ಬಿಬಿಎಂಪಿ ಆಯುಕ್ತ ಗೌರವ್ ಗುಪ್ತಾ, ಸದ್ಯದಲ್ಲೇ ನಗರದ ಎಲ್ಲಾ ವಲಯಗಳಲ್ಲೂ ಕೋವಿಡ್ ಕೇರ್ ಸೆಂಟರ್ ತೆರೆಯಲಿದ್ದೇವೆ ಎಂದರು.

news18-kannada
Updated:April 11, 2021, 8:00 AM IST
Coronavirus Updates: ಅಪಾರ್ಟ್​​ಮೆಂಟ್​​​‌ಗಳಲ್ಲೇ ಟೆಸ್ಟಿಂಗ್; ಪ್ರತಿ ಝೋನ್‌ಗೂ ಕೋವಿಡ್ ಕೇರ್ ಸೆಂಟರ್ ತೆರೆಯಲಿರುವ ಬಿಬಿಎಂಪಿ
ಸಾಂದರ್ಭಿಕ ಚಿತ್ರ
  • Share this:
ಬೆಂಗಳೂರು(ಏ.11): ನಗರದಲ್ಲಿ ಕೊರೋನಾ ದಿನೇ ದಿನೇ ಹೆಚ್ಚುತ್ತಿದೆ. ನಿಯಂತ್ರಣಕ್ಕೆ ತೆಗೆದುಕೊಳ್ಳಲು ಬಿಬಿಎಂಪಿ ತಂತ್ರಗಳ ಮೇಲೆ ತಂತ್ರಗಳು ರೂಪಿಸುತ್ತಿದೆ. ಇದರ ಅಂಗವಾಗಿ, ಪ್ರತಿ ಝೋನ್‌ಗಳಲ್ಲೂ ಕೋವಿಡ್ ಕೇರ್ ಸೆಂಟರ್ ತೆರೆಯಲು ಚಿಂತನೆ ಮಾಡಿದೆ.

ಶುಕ್ರವಾರ ಒಂದೇ ದಿನ ಐದು ಸಾವಿರದ ಐನೂರರ ಗಡಿ ದಾಟಿದ ಪ್ರಕರಣಗಳು ದಿನದಿಂದ ದಿನಕ್ಕೆ ಆತಂಕ ಹೆಚ್ಚುವಂತೆ ಮಾಡುತ್ತಿದೆ. ಇದೇ ಕಾರಣಕ್ಕೆ ಶನಿವಾರದಿಂದ ಕೊರೋನಾ ನೈಟ್ ಕರ್ಫ್ಯೂ ಜಾರಿಯಾಗಿದ್ದು, ಲಾಕ್ ಡೌನ್‌ನ ಮುನ್ಸೂಚನೆ ಇದ್ದಂತಿದೆ. ನಗರದಲ್ಲಿ ಅನೂಹ್ಯವಾಗಿ ದಾಖಲಾಗುತ್ತಿರುವ ಪ್ರಕರಣಗಳು ಮತ್ತೊಂದು ಸುತ್ತಿಗೆ ಸಾವಿನ ರಣಕೇಕೆಗೆ ಕಾರಣವಾಗಲಿದ್ಯಾ ಅನ್ನೋ ಅನುಮಾನ ಶುರುವಾಗಿದೆ.

ಹೀಗಾಗಿ ಬಿಬಿಎಂಪಿ ತನ್ನೆಲ್ಲಾ ಸಾಮರ್ಥ್ಯವನ್ನು ಕೊರೋನಾ ತಡೆಗಟ್ಟಲು ಸೀಮಿತ ಮಾಡಿಕೊಂಡಿದೆ. ಈ ಬಗ್ಗೆ ಅಧಿಕಾರಿಗಳ ಜೊತೆ ನಿರಂತರ ಸಭೆ ಮಾಡುತ್ತಿರುವ ಆಯುಕ್ತ ಗೌರವ್ ಗುಪ್ತಾ, ಮೊದಲ ಅವಧಿಯಲ್ಲಿ ಆದಂತೆ ದುರಂತಗಳನ್ನು ತಪ್ಪಿಸುವ ಪಣ ತೊಟ್ಟಿದ್ದಾರೆ.

ರಸಗೊಬ್ಬರ ಬೆಲೆ ಬಗ್ಗೆ ಸೋಮವಾರ ರಸಗೊಬ್ಬರ ಕಂಪನಿಗಳ ಜೊತೆ ಕೇಂದ್ರ ಸಚಿವ ಡಿವಿ ಸದಾನಂದಗೌಡ ಸಭೆ

ಹೀಗಾಗಿ ಹೆಚ್ಚೆಚ್ಚು ಪ್ರಕರಣಗಳು ಪತ್ತೆಯಾಗುತ್ತಿರುವ ಅಪಾರ್ಟ್ಮೆಂಟ್ ಗಳಲ್ಲಿ ಅಲ್ಲಿಯೇ ಟೆಸ್ಟಿಂಗ್ ನಡೆಸಲು ಸೂಚಿಸಿದ್ದಾರೆ. ಅಲ್ದೇ ಎಲ್ಲಾ ಸಂಸ್ಥೆಗಳಲ್ಲೂ ಕಡ್ಡಾಯವಾಗಿ ಕೊರೋನಾ ಪರೀಕ್ಷೆ ಮಾಡಿಸಲು ಖಡಕ್ ಸೂಚನೆ ಕೊಟ್ಟಿದ್ದಾರೆ. ಇದರ ಜೊತೆಗೆ ಸೂಕ್ತ ರೀತಿಯಲ್ಲಿ ಜನರಿಗೆ ಕೊರೋನಾ ಸೇವೆ ಸಿಗಲಿ ಎಂಬ ಕಾರಣಕ್ಕೆ ಪ್ರತಿ ಝೋನ್‌ಗಳಲ್ಲೂ ಕೋವಿಡ್ ಕೇರ್ ಸೆಂಟರ್ ತೆರೆಯಲು ಸಿದ್ಧತೆ ನಡೆಸಿಕೊಳ್ಳುತ್ತಿದ್ದಾರೆ.

ಈಗಾಗಲೇ ಈ ಬಗ್ಗೆ ಆ ವಲಯದ ಅಧಿಕಾರಿಗಳ ಜೊತೆಗೆ ಸಭೆ ನಡೆಸಿದ್ದು, ಕೋವಿಡ್ ಕೇರ್ ಸೆಂಟರ್ ತೆರೆಯಲು ಜಾಗ ಗೊತ್ತು ಮಾಡಲು ಸೂಚಿಸಿದ್ದಾರೆ. ಈ ಬಗ್ಗೆ ಮಾತನಾಡಿದ ಬಿಬಿಎಂಪಿ ಆಯುಕ್ತ ಗೌರವ್ ಗುಪ್ತಾ, ಸದ್ಯದಲ್ಲೇ ನಗರದ ಎಲ್ಲಾ ವಲಯಗಳಲ್ಲೂ ಕೋವಿಡ್ ಕೇರ್ ಸೆಂಟರ್ ತೆರೆಯಲಿದ್ದೇವೆ ಎಂದರು.

ಸದ್ಯ ನಗರದಲ್ಲಿ ಇರೋದು ಎರಡು ಕೋವಿಡ್ ಕೇರ್ ಸೆಂಟರ್‌ಗಳು ಮಾತ್ರ. ಹಜ್ ಭವನ ಹಾಗೂ ಹೆಚ್‌ಎಎಲ್ ಕೇಂದ್ರಗಳು ಮಾತ್ರ. ಇದರ ಹೊರತಾಗಿ ಒಂದು ಕೇಂದ್ರ ಕೋರಮಂಗಲದ ನ್ಯಾಷನಲ್ ಗೇಮ್ಸ್‌ ವಿಲೇಜ್‌ನಲ್ಲಿ ಸಿದ್ಧಗೊಳ್ತಿದೆ. ಒಟ್ಟು 580 ಬೆಡ್ ಗಳು ಈಗ ಕೋವಿಡ್ ಕೇರ್ ಸೆಂಟರ್ ನಲ್ಲಿ ಲಭ್ಯವಿದೆ. ಇದರ ಸಂಖ್ಯೆಯನ್ನೂ‌ ಬಿಬಿಎಂಪಿ ಹೆಚ್ಚಿಸಲಿದೆ.
Youtube Video

ಇದರ ಜೊತೆಯಲ್ಲೇ ಸದ್ಯಕ್ಕೆ ಬಿಬಿಎಂಪಿ ಬಳಿ 2414 ಬೆಡ್‌ಗಳು ಒಟ್ಟಾರೆ ಲಭ್ಯವಿದೆ. ಇದನ್ನು 6 ಸಾವಿರಕ್ಕೆ ಏರಿಸಲೂ ಬಿಬಿಎಂಪಿ ಶ್ರಮಿಸುತ್ತಿದೆ. ಬಿಡ್‌ಗಳ ಸಮಸ್ಯೆ ಬಗೆಹರಿಸಲೆಂದೇ ವಿಶೇಷ ತಂಡ ರಚನೆಯಾಗಿದ್ದು, ಅವಶ್ಯಕತೆಗೆ ಅನುಗುಣವಾಗಿ ಬೆಡ್‌ಗಳನ್ನು ಖಾಸಗ ಆಸ್ಪತ್ರೆಗಳ ಸಹಾಯದೊಂದಿಗೆ ಬಿಬಿಎಂಪಿ ಬೆಂಗಳೂರಿಗರಿಗೆ ಒದಗಿಸಿಕೊಡಲಿದೆ.
Published by: Latha CG
First published: April 11, 2021, 8:00 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories