ಬಳ್ಳಾರಿಯಲ್ಲಿ ಸಾವಿನ ಸರಣಿ ಮುಂದುವರಿಕೆ; ಒಂದೇ ದಿನ 18  ಜನರನ್ನು ಬಲಿ ಪಡೆದ ಕೊರೋನಾ ಹೆಮ್ಮಾರಿ

ಒಂದು ಕಡೆ ಕರೋನಾ ಸೊಂಕು ಜಿಲ್ಲೆಯಲ್ಲಿ ವ್ಯಾಪಕವಾಗಿ ಹರಡುತ್ತಿದ್ದು, ಕೊರೋನಾ ಕಂಟ್ರೋಲ್‌ ಗೂ ಸಿಗುತ್ತಿಲ್ಲ. ಈ ಮಧ್ಯೆ ಕರೋನಾ ಸೋಂಕಿನ ವಿರುದ್ಧ ಹೋರಾಡಲು ಇರುವ ಸಂಜೀವಿನಿಯಂತೆ ಇರುವ ಕೋವಿಡ್ ಲಸಿಕೆ ಬಳ್ಳಾರಿಯಲ್ಲಿ ಸಿಗುತ್ತಿಲ್ಲ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಬಳ್ಳಾರಿ(ಏ.28): ಕೊರೋನಾ ಸೋಂಕು ಎರಡನೇ ಅಲೆ ತನ್ನ ಕದಂಬ ಬಾಹುವನ್ನು ಎಲ್ಲೆಡೆ ಪಸರಿಸುತ್ತಿದೆ. ಈ ಹಿಂದೆ ಇದ್ದ ವೇಗಕ್ಕಿಂತ ದುಪ್ಪಟ್ಟು ವೇಗದಲ್ಲಿ ಸೋಂಕು ಹರಡಿ ಸಾಕಷ್ಟು ಹಾನಿ ಮಾಡುತ್ತಿದೆ. ಇನ್ನು ಗಣಿ ನಾಡು ಬಳ್ಳಾರಿಯಲ್ಲಿ ನಿನ್ನೆ ಕೊರೋನಾ ಸೋಂಕು ಹೊಸ ದಾಖಲೆ ಬರೆದು, ಸಾವಿನಲ್ಲೂ ದಾಖಲೆ ಬರೆದಿದೆ. ಒಂದೇ ದಿನ  18 ಜನರು ಕೊರೋನಾ ಸೋಂಕಿಗೆ ಬಲಿಯಾಗುವ ಮೂಲಕ ಬಳ್ಳಾರಿ ಜನತೆಯನ್ನು ಬೆಚ್ಚಿ ಬೀಳಿಸಿದೆ.

  ಹೌದು, ಗಣಿ ನಾಡು ಬಳ್ಳಾರಿ ಜಿಲ್ಲೆಯಲ್ಲಿ ಕೊರೋನಾ ಸೋಂಕು ತನ್ನ ಅಟ್ಟಹಾಸ ಮುಂದು ವರೆಸಿದೆ. ಕಳೆದ 15 ದಿನಗಳಲ್ಲಿ ಸೋಂಕಿನ ಪ್ರಮಾಣ ವಿಪರೀತವಾಗಿ ಏರಿಕೆ ಕಂಡು ಬಂದಿದೆ.  ಇಂದು ಒಂದೇ ದಿನ 907 ಸೋಂಕಿತರು ಪತ್ತೆಯಾಗಿದ್ದು, ಜೊತೆಯಲ್ಲಿ ಒಂದೇ ದಿನ 18 ಜನರನ್ನ ಕರೋನಾ ಸೋಂಕು ಬಲಿ ಪಡೆದಿದೆ. ಜಿಲ್ಲೆಯಲ್ಲಿ ಇಷ್ಟು ಪ್ರಮಾಣದಲ್ಲಿ ಸಾವು ಸಂಭವಿಸಿರುವುದು ಇದೇ ಮೊದಲ ಬಾರಿ. ಹೀಗಾಗಿ ಜಿಲ್ಲೆಯ ಜನತೆಯಲ್ಲಿ ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ. ಇನ್ನು ಸೋಂಕಿಗೆ ಈವರೆಗೂ ಬಲಿಯಾದವರ ಸಂಖ್ಯೆ 692 ಕ್ಕೆ ಏರಿಕೆ ಕಂಡಿದೆ. ಇನ್ನು ಸಕ್ರಿಯ ಸೋಂಕಿತರ ಸಂಖ್ಯೆ ಸಹ 6589 ಕ್ಕೆ ಏರಿಕೆ ಕಂಡಿದೆ.

  ಇನ್ನು ಇಷ್ಟೊಂದು ಪ್ರಮಾಣದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಜೊತೆಗೆ ಹೆಮ್ಮಾರಿ ಕೋವಿಡ್‌ ದಿನ ಒಂದಕ್ಕೆ 18 ಜನರನ್ನ ಬಲಿ ಪಡೆದುಕೊಳ್ಳುತ್ತಿದೆ. ಇದರ ಮಧ್ಯೆ ಬಳ್ಳಾರಿಯಲ್ಲಿ ಕೋವಿಡ್ ಲಸಿಕೆ  ಖಾಲಿಯಾಗಿದೆ. ಸೋಂಕು ಹೆಚ್ಚಾಗುತ್ತಿರುವ ಹಿನ್ನಲೆ ಜನ್ರು ಕೋವಿಡ್ ಲಸಿಕೆ ಪಡೆಯಲು ಮುಂದಾಗುತ್ತಿದ್ದಾರೆ. ಕೋವಿಡ್ ಲಸಿಕೆ ಮಾತ್ರ ಸಿಗುತ್ತಿಲ್ಲ.

  COVID-19 Protocols: ಕೊಡಗಿನಲ್ಲಿ ಕೋವಿಡ್ ನಿಯಮ ಉಲ್ಲಂಘಿಸಿದ ಮಸೀದಿ ಮೇಲೆ ತಹಶೀಲ್ದಾರ್ ದಾಳಿ

  ಸೋಂಕಿತರ ಜೀವ ಉಳಿಸುವ ಸಂಜೀವಿನಿಗೆ ಹಾಹಾಕಾರ

  ಹೌದು, ಒಂದು ಕಡೆ ಕರೋನಾ ಸೊಂಕು ಜಿಲ್ಲೆಯಲ್ಲಿ ವ್ಯಾಪಕವಾಗಿ ಹರಡುತ್ತಿದ್ದು, ಕೊರೋನಾ ಕಂಟ್ರೋಲ್‌ ಗೂ ಸಿಗುತ್ತಿಲ್ಲ. ಈ ಮಧ್ಯೆ ಕರೋನಾ ಸೋಂಕಿನ ವಿರುದ್ಧ ಹೋರಾಡಲು ಇರುವ ಸಂಜೀವಿನಿಯಂತೆ ಇರುವ ಕೋವಿಡ್ ಲಸಿಕೆ ಬಳ್ಳಾರಿಯಲ್ಲಿ ಸಿಗುತ್ತಿಲ್ಲ. ದಿನಕ್ಕೆ ಸುಮಾರು 15 ಸಾವಿರಕ್ಕೂ ಅಧಿಕ ಲಸಿಕೆ ಬೇಕಿದೆ. ಆದ್ರೆ ಬಳ್ಳಾರಿಯಲ್ಲಿ ಲಸಿಕೆ ಅಸಮರ್ಪಕವಾಗಿ ಹಂಚಿಕೆಯಾಗುತ್ತಿದೆ. ಹೀಗಾಗಿ ಆರೋಗ್ಯ ಇಲಾಖೆಯ ಸಿಬ್ಬಂದಿ ಲಸಿಕೆ ನೀಡಿಲ್ಲ. ಸಲಿಕೆ ಪಡೆಯಲು ಬಂದವರು ವಾಪಸ್ ಮರಳಿದ್ದಾರೆ.

  ಈ ಮಧ್ಯೆ ನಿನ್ನೆ ಬಳ್ಳಾರಿ ಮಹಾನಗರ ಪಾಲಿಕೆ ಚುನಾವಣೆಗೆ ಮತದಾನ ನಡೆಯಿತು, ಕೋವಿಡ್ ಗೆ ಅಂಜಿ ಜನ ಮಾತ್ರ ಮತ ಚಲಾಯಿಸಲು ಕಡೆಮೆ ಪ್ರಮಾಣದಲ್ಲಿ ಬಂದರು. ಜಿಲ್ಲೆಯಲ್ಲಿ ಈವರೆಗೆ 50.9% ಮಾತ್ರ ಮತದಾನ ವಾಗಿದೆ. ಕಳೆದ ಹತ್ತು ದಿನಗಳಿಂದ ರಾಜಕೀಯ ಪಕ್ಷಗಳು ಕೋವಿಡ್ ನಿಯಮ ಗಾಳಿಗೆ ತೂರಿ ಅಬ್ಬರದ ಪ್ರಚಾರ ಮಾಡಿದ್ದಾರೆ‌.

  ಮತದಾನಕ್ಕೆ ಎಲ್ಲ ರೀತಿಯ ಕೋವಿಡ್ ನಿಯಮಗಳನ್ನ ಪಾಲನೆ ಮಾಡಿ ಮತದಾನ ಮಾಡಿಸಲಾಯಿತು. ಆದರೂ ಜನ ಸೋಂಕು ಹೆಚ್ಚಾಗುತ್ತಿರುವ ಹಿನ್ನಲೆ ಮತಗಟ್ಟೆಗೆ ಬರಲು ಹಿಂದೇಟು ಹಾಕಿದ್ದಾರೆ.

  • ವರದಿ: ವಿನಾಯಕ ಬಡಿಗೇರ

  Published by:Latha CG
  First published: