ಬೆಂಗಳೂರು: ಕೊರೋನಾದಿಂದ ಬೆಂಗಳೂರು ಸೇಫಾಯ್ತು ಅಂತ ಅನ್ಕೊಳ್ತಿರ್ಬೇಕಾದ್ರೆ ಮತ್ತೆ ಆತಂಕ ಶುರುವಾಗಿದೆ. ಕರೋನಾ ಎರಡನೇ ಅಲೆಗೆ ಅಪಾರ್ಟ್ ಮೆಂಟ್ ಗಳೇ ಟಾರ್ಗೇಟ್ ಆಗ್ತಿರೋದು ಪಾಲಿಕೆಯ ನಿದ್ದೆಗಡಿಸಿದೆ. ಹೀಗಾಗಿ ಸಿಟಿ ಮಂದಿಗೆ ಬಿಬಿಎಂಪಿ ಖಡಕ್ ಎಚ್ಚರಿಕೆಯೊಂದನ್ನು ನೀ ಡಿದೆ. ಕಳೆದ ವರ್ಷದ ಮಾರ್ಚ್ ತಿಂಗಳಲ್ಲಿ ಅತಿ ಹೆಚ್ಚು ಸೋಂಕು ಕಾಣಿಸುತ್ತಿದ್ದ ಬೆಂಗಳೂರು ಇದೀಗ ಮತ್ತೊಮ್ಮೆ ಅಂಥದ್ದೇ ಸ್ಥಿತಿಗೆ ತಲುಪಿದೆ. ಕಳೆದೊಂದು ವಾರದಿಂದ ದಾಖಲಾಗ್ತಿರೋ ಸೋಂಕಿನ ಪ್ರಮಾಣ ಗಮನಿಸಿದ್ರೆ ಕರೋನಾ ಎರಡನೇ ಅಲೆ ಸೃಷ್ಟಿಯಾಗಿದ್ಯಾ ಅನ್ನೋ ಪ್ರಶ್ನೆ ಮೂಡ್ತಿದೆ. ಅಷ್ಟಕ್ಕೂ ಇಂಥ ಪ್ರಶ್ನೆ ಮೂಡುವಂತೆ ಮಾಡಿರೋ ಅಪಾರ್ಟ್ ಮೆಂಟ್ ಗಳೇ ಈ ಬಾರಿ ಕರೋನಾ ಹಾಟ್ ಸ್ಪಾಟ್ ಆಗ್ತಿವೆಯಂತೆ. ಸ್ವತಃ ಬಿಬಿಎಂಪಿ ಈ ವಿಚಾರವನ್ನ ಒಪ್ಪಿಕೊಂಡಿದೆ.
ಅಪಾರ್ಟ್ಮೆಂಟ್ ಏಕೆ ಹಾಟ್ ಸ್ಪಾಟ್..?
ಹೀಗಾಗಿ ಅಪಾರ್ಟ್ ಮೆಂಟ್ ಗಳಲ್ಲಿ ಪಾರ್ಟಿ ಆಯೋಜನೆ ಮಾಡೋದಕ್ಕೆ ಬ್ರೇಕ್ ಹಾಕೋ ಜತೆಗೆ. ಪಾರ್ಕ್ ಗಳಲ್ಲಿ ಜಿಮ್ ಉಪಕರಣಗಳನ್ನ ಬಳಕೆ ಮಾಡೋದಕ್ಕೆ ಬ್ರೇಕ್ ಹಾಕಲು ಬಿಬಿಎಂಪಿ ಮುಂದಾಗಿದೆ.
ಇದನ್ನೂ ಓದಿ: ಕಷ್ಟಕಾಲದಲ್ಲಿ ಹೆಂಡತಿ ಒಡವೆ ಅಡವಿಟ್ಟು ಸಹಾಯ ಮಾಡಿದ ಸ್ನೇಹಿತನಿಗೆ ಮೋಸ; ಜೀವದ ಗೆಳೆಯ ಮಾಡಿದ್ದೇನು?
ಸದ್ಯ ಬೆಂಗಳೂರಿನಲ್ಲಿ ಪ್ರತಿ ದಿನ ಹತ್ರತ್ರ ಸಾವಿರ ಪ್ರಕರಣಗಳು ದಾಖಲಾಗುತ್ತಿದ್ದು, ಇದರ ಪ್ರಮಾಣ ಹೀಗೆ ಮುಂದುವರೆಯೋ ಲಕ್ಷಣ ಕಾಣ್ತಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಕೋರಮಂಗಲ, ಹಜ್ ಭವನ ಹಾಗೂ ಆರ್ಟ್ ಆಫ್ ಲೀವಿಂಗ್ ನಲ್ಲಿ ಬೆಡ್ ಗಳನ್ನ ಸಿದ್ಧಪಡಿಸಲಾಗ್ತಿದೆ. ಸೋಮವಾರದಿಂದ ಕೋವಿಡ್ ಕೇರ್ ಸೆಂಟರ್ ಗಳನ್ನ ಪುನರಾರಂಭ ಮಾಡಲು ಬಿಬಿಎಂಪಿ ಮುಂದಾಗಿದೆ. ಹಾಗೆನೇ ಸರ್ಕಾರಿ ಆಸ್ಪತ್ರೆಗಳಲ್ಲಿ ಬೆಡ್ ಗಳ ಕೊರತೆ ಆಗದಂತೆ ಅಗತ್ಯ ಕ್ರಮ ವಹಿಸಲಾಗಿದೆ ಅಂತಾನೂ ಬಿಬಿಎಂಪಿ ಮಾಹಿತಿ ನೀಡಿದೆ.
(ವರದಿ - ಆಶಿಕ್ ಮುಲ್ಕಿ)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ