ಬಿಜೆಪಿ ನಾಯಕರಿಗೂ ತಟ್ಟಿದ ಕೊರೋನಾ ಬಿಸಿ​​: ಸಿಎಂ ಯಡಿಯೂರಪ್ಪ ಸೇರಿದಂತೆ ಹಲವರಿಗೆ ಸ್ಕ್ರೀನಿಂಗ್ ಟೆಸ್ಟ್​​

ಹೌದು, ರಾಜ್ಯದ ಪ್ರಮುಖ ಬಿಜೆಪಿ ನಾಯಕರಿಗೂ ಕೊರೋನಾ ಬಿಸಿ ತಟ್ಟಿದೆ. ಇದಕ್ಕೆ ಸ್ವತಃ ಮುಖ್ಯಮಂತ್ರಿ ಯಡಿಯೂರಪ್ಪ ಕೂಡ ಹೊರತಾಗಿಲ್ಲ. ಇಂದು ಸಿಎಂ ಬಿ.ಎಸ್​​ ಯಡಿಯೂರಪ್ಪಗೂ ಕೊರೋನಾ ಸೋಂಕಿನ ತಪಾಸಣೆ ಮಾಡಲಾಗಿದೆ. ಥರ್ಮಲ್ ಸ್ಕ್ರೀನಿಂಗ್ ಟೆಸ್ಟ್ ಮೂಲಕ ಮುಖ್ಯಮಂತ್ರಿ ಅವರನ್ನೂ ತಪಾಸಣೆಗೊಳಪಡಿಸಲಾಗಿತ್ತು.

Updated:March 14, 2020, 8:56 PM IST
ಬಿಜೆಪಿ ನಾಯಕರಿಗೂ ತಟ್ಟಿದ ಕೊರೋನಾ ಬಿಸಿ​​: ಸಿಎಂ ಯಡಿಯೂರಪ್ಪ ಸೇರಿದಂತೆ ಹಲವರಿಗೆ ಸ್ಕ್ರೀನಿಂಗ್ ಟೆಸ್ಟ್​​
ಸಿಎಂ ಬಿ.ಎಸ್​​ ಯಡಿಯೂರಪ್ಪ.
  • Share this:
ಬೆಂಗಳೂರು(ಮಾ.14): ಕೊರೋನಾ ವೈರಸ್ ಎಂಬ ಮಾರಕ ಈಗಾಗಲೇ ದೇಶಾದ್ಯಂತ ಎಲ್ಲಾ ಕಡೆ ಹಬ್ಬಿದೆ. ಕರ್ನಾಟಕ, ತಮಿಳುನಾಡು, ಆಂಧ್ರ ಪ್ರದೇಶ, ಮಹಾರಾಷ್ಟ್ರ, ದೆಹಲಿ, ಗುಜರಾತ್, ಮಧ್ಯಪ್ರದೇಶದ ಹಾಗೂ ವಿವಿಧ ರಾಜ್ಯಗಳಲ್ಲೂ ಈ ಮಾರಕ ಸೋಂಕಿಗೆ ಜನ ಬೆಚ್ಚಿಬಿದ್ದಿದ್ದಾರೆ. ಜನಸಾಮಾನ್ಯರು, ವರ್ತಕರು, ಕಾರ್ಮಿಕರು, ಮಹಿಳೆಯರು, ಚಾಲಕರು, ರೈತರು ಸೇರಿದಂತೆ ಯಾರಿಗೆ ಆಗಲೀ ಕೊರೊನಾ ಸೊಂಕು ಇದ್ದರೆ, ನಮಗೂ ತಗಲುವ ಸಾಧ್ಯತೆ ಇರುತ್ತದೆ. ಇವರ ಸಮಸ್ಯೆ ಆಲಿಸಲು ಮುಂದಾಗುವ ಜನಪ್ರತಿನಿಧಿಗಳಿಗೂ ಎಚ್ಚರವಹಿಸದಿದ್ದರೆ ಸೋಂಕು ತಗಲುವ ಸಂಭವವಿರುತ್ತದೆ. ಹಾಗಾಗಿ ಎಲ್ಲಿ ಏನೇ ಕಾರ್ಯಕ್ರಮ ನಡೆದರೂ ಜಿಲ್ಲಾಡಳಿತ ಮತ್ತು ಸಂಬಂಧಪಟ್ಟ ಅಧಿಕಾರಿಗಳು ನಿಗಾವಹಿಸಿ ತಪಾಸಣೆ ನಡೆಸಬೇಕು. ಹೀಗೆ ಮಾಡುವ ಕೊರೋನಾ ವೈರಸ್​​ ಸೋಂಕು ತಪಾಸಣೆ ಬಿಜೆಪಿ ಪ್ರಮುಖ ನಾಯಕರಿಗೂ ಬಿಟ್ಟಿಲ್ಲ ಎಂಬುದು ಗಮನಾರ್ಹ.

ಹೌದು, ರಾಜ್ಯದ ಪ್ರಮುಖ ಬಿಜೆಪಿ ನಾಯಕರಿಗೂ ಕೊರೋನಾ ಬಿಸಿ ತಟ್ಟಿದೆ. ಇದಕ್ಕೆ ಸ್ವತಃ ಮುಖ್ಯಮಂತ್ರಿ ಯಡಿಯೂರಪ್ಪ ಕೂಡ ಹೊರತಾಗಿಲ್ಲ. ಇಂದು ಸಿಎಂ ಬಿ.ಎಸ್​​ ಯಡಿಯೂರಪ್ಪಗೂ ಕೊರೋನಾ ಸೋಂಕಿನ ತಪಾಸಣೆ ಮಾಡಲಾಗಿದೆ. ಥರ್ಮಲ್ ಸ್ಕ್ರೀನಿಂಗ್ ಟೆಸ್ಟ್ ಮೂಲಕ ಮುಖ್ಯಮಂತ್ರಿ ಅವರನ್ನೂ ತಪಾಸಣೆಗೊಳಪಡಿಸಲಾಗಿತ್ತು.

ಸಿಎಂ ಬಿ.ಎಸ್​ ಯಡಿಯೂರಪ್ಪ ಮಾಗಡಿ ರಸ್ತೆಯ ಚನ್ನೇನಹಳ್ಳಿಯಲ್ಲಿ ಆರ್​ಎಸ್​ಎಸ್​ನ ಜನಸೇವಾ ಸಂಸ್ಥೆಯಲ್ಲಿ ನಡೆದ ಸಭೆಯಲ್ಲಿ ಭಾಗಿಯಾಗಿದ್ದರು. ಸಭೆಗೆ ಹೋಗುವ ಮುನ್ನ ಸಿಎಂ ಸೇರಿದಂತೆ ಬಿಜೆಪಿ ನಾಯಕರಿಗೆ ಕೊರೋನಾ ಟೆಸ್ಟ್ ಮಾಡಲಾಗಿದೆ.

ಇದನ್ನೂ ಓದಿ: ಕೊರೋನಾ ವೈರಸ್​​: ಶಾಲಾ ಕಾಲೇಜು ಬೆನ್ನಲ್ಲೇ ಹಾಸ್ಟೆಲ್​​ಗಳಿಗೂ ರಜೆ ಘೋಷಣೆ; ಸರ್ಕಾರ ಆದೇಶ

ಇನ್ನು, ಬಿ.ಎಸ್​ ಯಡಿಯೂರಪ್ಪ ಜತೆಗೆ ಡಿಸಿಎಂಗಳಾದ ಗೋವಿಂದ ಕಾರಜೋಳ, ಲಕ್ಷ್ಮಣ್ ಸವದಿ, ಸಚಿವ ಸೋಮಶೇಖರ್ ಸೇರಿ ಹಲವರಿಗೆ ಪರೀಕ್ಷೆ ನಡೆಸಲಾಗಿದೆ. ಹಾಗೆಯೇ ಸಭೆಯಲ್ಲಿ ಭಾಗಿಯಾಗಿದ್ದ ಆರ್​ಎಸ್​ಎಸ್​ ಮುಖ್ಯಸ್ಥ ಮೋಹನ್ ಭಾಗವತ್, ಆರ್​ಎಸ್​ಎಸ್​ ಕಾರ್ಯವಾಹ ಸುರೇಶ್ ಬೈಯಾಜಿ ಜೋಷಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರಿಗೂ ಮುಂಜಾಗ್ರತಾ ಕ್ರಮವಾಗಿ ತಪಾಸಣೆ ಮಾಡಲಾಗಿದೆ.
First published:March 14, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading