HOME » NEWS » State » CORONAVIRUS POLICE STAFF CREATE AWARENESS IN PEOPLE ABOUT COVID 19 IN BANGALORE GVTV LG

Coronavirus: ಕೋವಿಡ್-19 ನಿಯಮ ಉಲ್ಲಂಘಿಸುವ ಜನರಿಗೆ ಬಿಸಿ ಮುಟ್ಟಿಸಲು ಮುಂದಾದ ಖಾಕಿಪಡೆ

ಇಲ್ಲಿಯವರೆಗೂ ಕೊರೋನಾ ಸಂಖ್ಯೆ ಇಳಿಯುತ್ತಿದೆ ಅಂತ ನಿಟ್ಟುಸಿರು ಬಿಡುತ್ತಿದ್ದ ಮಂದಿಗೆ, ಈಗ ಮತ್ತೆ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಏರಿಕೆಯಾಗುವುದರ ಮುಖಾಂತರ ಶಾಕ್ ನೀಡಿದೆ. ಈಗಲಾದರೂ ಪೊಲೀಸರ ಮಾತು ಕೇಳಿ ಜನ ಎಚ್ಚೆತ್ತುಕೊಳ್ಳದಿದ್ರೆ, ಮತ್ತೆ ಬಾರಿ ಗಂಡಾಂತರ ಕಾದಿರೋದು ಕಟ್ಟಿಟ್ಟ ಬುತ್ತಿ.

news18-kannada
Updated:April 4, 2021, 7:35 AM IST
Coronavirus: ಕೋವಿಡ್-19 ನಿಯಮ ಉಲ್ಲಂಘಿಸುವ ಜನರಿಗೆ ಬಿಸಿ ಮುಟ್ಟಿಸಲು ಮುಂದಾದ ಖಾಕಿಪಡೆ
ಜಾಗೃತಿ ಮೂಡಿಸುತ್ತಿರುವ ಪೊಲೀಸರು
  • Share this:
ಬೆಂಗಳೂರು(ಏ.04): ನಗರದಲ್ಲಿ ಮತ್ತೆ ಕೊರೋನಾ ಆತಂಕ ಶುರುವಾಗಿದೆ. ದಿನದಿಂದ ದಿನಕ್ಕೆ ಗಣನೀಯವಾಗಿ ಪಾಸಿಟಿವ್ ಕೇಸ್ ಹೆಚ್ಚಾಗ್ತಿದ್ದು,  ಜನರಲ್ಲಿ ಜಾಗೃತಿ ಮೂಡಿಸಲು ಪೊಲೀಸ್ ಇಲಾಖೆ ಮುಂದಾಗಿದೆ. ಖುದ್ದಾಗಿ ಫೀಲ್ಡ್ ಗಿಳಿದು ಮಾಸ್ಕ್ ಮತ್ತು ಸಾಮಾಜಿಕ ಅಂತರದ ಬಗ್ಗೆ ಅರಿವು ಮೂಡಿಸ್ತಿದ್ದಾರೆ. ಹೌದು, ಸಿಲಿಕಾನ್ ಸಿಟಿಯಲ್ಲಿ ದಿನದಿಂದ ದಿನಕ್ಕೆ ಮತ್ತೆ ಕೊರೋನಾ ಸೊಂಕಿತರ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿದೆ. ಇದರ ನಡುವೆ, ಸಿಲಿಕಾನ್ ಸಿಟಿಯ ಕೆಲ ಜನಜಂಗುಳಿ ಇರುವ ಸ್ಥಳದಲ್ಲಿ ಯಾವುದೇ ಕೊವಿಡ್ ನಿಯಮ ಪಾಲನೆ ಆಗುತ್ತಿಲ್ಲ. ಅಲ್ಲದೇ, ಕೊರೋನಾ ಆತಂಕ ಗಾಳಿಗೆ ತೂರಿ ಮಾಸ್ಕ್ ಹಾಕದೆ ಸಾಮಾಜಿಕ ಅಂತರ ಇಲ್ಲದೆ ಜನ ಓಡಾಡೋ ದೃಶ್ಯಗಳು ಸರ್ವೇ ಸಾಮಾನ್ಯ ಎಂಬಂತೆ ಭಾಸವಾಗುತ್ತಿದೆ.

ಇನ್ನು ಹೀಗೆ ಮುಂದುವರೆದರೆ ಮತ್ತೆ ಕಳೆದ ವರ್ಷದ ಕಹಿ ಸನ್ನಿವೇಶಗಳು ಮರುಕಳುಹಿಸೋ ಸಾಧ್ಯತೆಗಳಿವೆ. ಹೀಗಾಗಿ ಇದಕ್ಕೆಲ್ಲಾ ಬ್ರೇಕ್ ಹಾಕಲೆಂದೇ ಪೊಲೀಸರು ಮತ್ತೆ ಫೀಲ್ಡ್ ಗೆ ಇಳಿದಿದ್ದು, ನಗರದಲ್ಲಿ ಮಾಸ್ಕ್, ಸಾಮಾಜಿಕ ಅಂತರ ನಿಯಮ ಪಾಲನೆ ಮಾಡದವರಿಗೆ ಶಾಕ್ ನೀಡಿದ್ದಾರೆ.

ಹೌದು, ನಗರದ ಮಾರ್ಕೆಟ್, ಮೆಜೆಸ್ಟಿಕ್ ಸೇರಿದಂತೆ ಅತಿ ಹೆಚ್ಚು ಜನಜಂಗುಳಿ ಇರುವ ಪ್ರದೇಶಗಳಿಗೆ ಕೊರೋನಾ ವಾರಿಯರ್ಸ್​​ಗಳಾದ ಪೊಲೀಸರು ಶನಿವಾರ ಎಂಟ್ರಿ ಕೊಟ್ಟಿದ್ದರು. ಈ ವೇಳೆ ಮಾಸ್ಕ್ ಹಾಕದ, ಸಾಮಾಜಿಕ ಅಂತರ ಕಾದುಕೊಳ್ಳದವರಿಗೆ ತಿಳಿ ಹೇಳಿದ ಪೊಲೀಸರು ಕೊರೋನಾ ಹೆಚ್ಚುತ್ತಿರುವ ತೀವ್ರತೆ ಬಗ್ಗೆ ಮನವರಿಕೆ ಮಾಡಿದರು.

Real Star Upendra: ಕಬ್ಜಾ ಚಿತ್ರದ ಶೂಟಿಂಗ್ ವೇಳೆ ರಿಯಲ್ ಸ್ಟಾರ್ ಉಪೇಂದ್ರ ತಲೆಗೆ ಪೆಟ್ಟು

ಸಾಮಾಜಿಕ ಅಂತರ, ಮಾಸ್ಕ್ ಹಾಗೂ ಸ್ಯಾನಿಟೈಜರ್ ಬಳಕೆ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಅಂತ ವಾರ್ನಿಂಗ್ ನೀಡಿದ್ದಾರೆ. ಇನ್ನು ಇದಷ್ಟೇ ಅಲ್ಲದೇ, ನಗರದ ಪಶ್ಚಿಮ ವಿಭಾಗದ ಎಲ್ಲಾ ಠಾಣಾ ವ್ಯಾಪ್ತಿಯಲ್ಲೂ ಕೊರೋನಾ ಹೆಚ್ಚುತ್ತಿರುವ ಬಗ್ಗೆ ಮೈಕ್ ಮೂಲಕ ತಿಳುವಳಿಕೆ ಹೇಳುವ ಕೆಲಸ ಪೊಲೀಸರಿಂದ ಆರಂಭಗೊಂಡಿದೆ.

ಒಟ್ಟಿನಲ್ಲಿ ಇಲ್ಲಿಯವರೆಗೂ ಕೊರೋನಾ ಸಂಖ್ಯೆ ಇಳಿಯುತ್ತಿದೆ ಅಂತ ನಿಟ್ಟುಸಿರು ಬಿಡುತ್ತಿದ್ದ ಮಂದಿಗೆ, ಈಗ ಮತ್ತೆ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಏರಿಕೆಯಾಗುವುದರ ಮುಖಾಂತರ ಶಾಕ್ ನೀಡಿದೆ. ಈಗಲಾದರೂ ಪೊಲೀಸರ ಮಾತು ಕೇಳಿ ಜನ ಎಚ್ಚೆತ್ತುಕೊಳ್ಳದಿದ್ರೆ, ಮತ್ತೆ ಬಾರಿ ಗಂಡಾಂತರ ಕಾದಿರೋದು ಕಟ್ಟಿಟ್ಟ ಬುತ್ತಿ.

ಸದ್ಯ ಎಲ್ಲಾ ವಿಭಾಗಳಲ್ಲಿ ಪೊಲೀಸ್ರು ಜಾಗೃತಿ ಮೂಡಿಸಬೇಕೆಂದು ಪೊಲೀಸ್ ಆಯುಕ್ತ ಕಮಲ್ ಪಂಥ್ ಸೂಚನೆ ನೀಡಿದ್ದಾರೆ. ಜೊತೆಗೆ ಮೊದಲಿನಂತೆ ಅಂಗಡಿಗಳ, ಮಾಲ್ ಸೇರಿ ಜನ ಜಂಗುಳಿ ಪ್ರದೇಶಗಳಲ್ಲಿ ಹೆಚ್ಚಾಗಿ ಪೊಲೀಸರು ಅಲರ್ಟ್ ಇರಬೇಕು. ದಂಡದ ಜೊತೆಗೆ ಜಾಗೃತಿ ಮುಖ್ಯ ಎಂದಿದ್ದಾರೆ.
Youtube Video

ಇದರ ಬೆನ್ನಲ್ಲೆ ಬೇರೆ ಠಾಣೆಗಳಲ್ಲೂ ಪ್ರತಿನಿತ್ಯ ಮಾಸ್ಕ್ ಕಾರ್ಯಾಚರಣೆ ಮಾಡ್ತಿದ್ದು ಜನರಲ್ಲಿ ಅರಿವು ಮೂಡಿಸ್ತಿದ್ದಾರೆ. ಜೊತೆಗೆ ಹೆಚ್ಚು ಸೋಂಕಿತ ಪ್ರದೇಶಗಳಲ್ಲಿ ಬೇಕಾದ ಅಗತ್ಯ ಸಹಾಯಕ್ಕೂ ಬಿಬಿಎಂಪಿ ಜೊತೆ ನಗರ ಪೊಲೀಸ್ ಇಲಾಖೆ ಕೈ ಜೋಡಿಸಿದೆ. ಪೊಲೀಸರೇ ಖುದ್ದು ಫೀಲ್ಡ್​​ಗಿಳಿದು ಫ್ರೆಂಟ್ ಲೈವ್ ವಾರಿಯರ್ಸ್​​ನಂತೆ ಮತ್ತೆ ಪ್ರಾರಂಭಿಸಿರೋದಕ್ಕೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ.
Published by: Latha CG
First published: April 4, 2021, 7:35 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories