HOME » NEWS » State » CORONAVIRUS NO TOUGH RULES AT GOA KARAWAR BORDER OF UTTARA KANNADA DISTRICT DKK LG

Coronavirus: ಗೋವಾ-ಕಾರವಾರ ಗಡಿಯಲ್ಲಿ ಮುಕ್ತ ಸಂಚಾರಕ್ಕೆ ಸೈ ಎಂದ ಗೋವಾ ಸರ್ಕಾರ

ಉತ್ತರ ಕನ್ನಡ ಜಿಲ್ಲಾಡಳಿತ ಕಾರವಾರ-ಗೋವಾ ಗಡಿಯಲ್ಲಿ ಕೋವಿಡ್ ಟಫ್​ ರೂಲ್ಸ್ ಜಾರಿಗೆ ತರುವುದಾಗಿ ಹೇಳಿತ್ತು. ಜತೆಗೆ ಮಹಾರಾಷ್ಟ್ರದಿಂದ ಬರುವ ಪ್ರತಿಯೊಬ್ಬರೂ ಕೋವಿಡ್ ನೆಗೆಟಿವ್ ವರದಿ ತೆಗೆದುಕೊಂಡು ಬಂದು ಕರ್ನಾಟಕ ಪ್ರವೇಶ ಮಾಡಬೇಕೆಂದು ಹೇಳಿತ್ತು.

news18-kannada
Updated:March 20, 2021, 3:28 PM IST
Coronavirus: ಗೋವಾ-ಕಾರವಾರ ಗಡಿಯಲ್ಲಿ ಮುಕ್ತ ಸಂಚಾರಕ್ಕೆ ಸೈ ಎಂದ ಗೋವಾ ಸರ್ಕಾರ
ಪ್ರಾತಿನಿಧಿಕ ಚಿತ್ರ.
  • Share this:
ಕಾರವಾರ(ಮಾ.20): ಕೋವಿಡ್ ಎರಡನೇ ಅಲೆಯ ಆತಂಕದ ಹಿನ್ನಲೆಯಲ್ಲಿ ರಾಜ್ಯ ಸರಕಾರ ಅಂತರರಾಜ್ಯ ಗಡಿಯಲ್ಲಿ ಕೆಲವೊಂದು ಟಫ್​ ರೂಲ್ಸ್ ಜಾರಿ ಮಾಡಿದೆ. ಆದ್ರೆ ಉತ್ತರ ಕನ್ನಡ ಜಿಲ್ಲೆಯ ಕಾರವಾರ-ಗೋವಾ ಗಡಿ ಭಾಗದಲ್ಲಿ ರೂಲ್ಸ್ ಸರಿಯಾಗಿ ಪಾಲನೆ ಆಗುತ್ತಿಲ್ಲ. ಮಹಾರಾಷ್ಟ್ರ ನೋಂದಣಿ ವಾಹನವನ್ನು ಕೇವಲ ಕಾಟಾಚಾರಕ್ಕಾಗಿ ತಪಾಸಣೆ ಮಾಡುವ ಕಾರ್ಯ ನಡೆಯುತ್ತಿದ್ದು, ಜನರಲ್ಲಿ ಗೊಂದಲದ ವಾತಾವರಣ ಮುಂದುವರೆದಿದೆ.

ಅಂತರ್ ರಾಜ್ಯ ಗಡಿಯಲ್ಲಿ ಇಂದಿನಿಂದ ರಾಜ್ಯ ಸರಕಾರ ಟಫ್​​ ರೂಲ್ಸ್ ಜಾರಿ ಮಾಡಿದ ಮೇಲೆ ಉತ್ತರ ಕನ್ನಡ ಜಿಲ್ಲೆಯ ಕಾರವಾರ-ಗೋವಾ ಗಡಿ ಭಾಗದಲ್ಲಿ ಕೋವಿಡ್ ನಿಯಮ ಪಾಲನೆ ಆಗುತ್ತಿಲ್ಲ. ಗೋವಾ ಮೂಲಕ ಮಹಾರಾಷ್ಟ್ರ ಕರ್ನಾಟಕ ಪ್ರವೇಶ ಮಾಡುವ ಜನರಿಗೆ ಯಾವುದೇ ರೀತಿಯ ತಪಾಸಣೆ ನಡೆಯುತ್ತಿಲ್ಲ. ಕೇವಲ ವಾಹನದ ನಂಬರ್ ಬರೆದುಕೊಂಡು ಮುಂದಿನ ಸಂಚಾರಕ್ಕೆ ಅನುವು ಮಾಡಿಕೊಡುತ್ತಿದ್ದಾರೆ.

Mission Paani: ನೀರಿನ ಸಂರಕ್ಷಣೆಯ ಹಲವು ಪ್ರಯೋಜನಗಳು ಮತ್ತು ಅವಶ್ಯಕತೆ

ಇನ್ನು ರಾಜ್ಯದ ಚೆಕ್ ಪೋಸ್ಟ್ ನಲ್ಲಿ ಕೋವಿಡ್ ನಿಯಮ ಪಾಲನೆಗೆ ಇನ್ನು ಕೂಡಾ ಸರಕಾರದಿಂದ ಆದೇಶದಿಂದ ಬಂದಿಲ್ಲ. ಈ ಹಿನ್ನಲೆಯಲ್ಲಿ ಗೋವಾ ರಾಜ್ಯಕ್ಕೆ ಹೋಗಲು ಅಥವಾ ಗೋವಾದಿಂದ ಬರಲು ಮುಕ್ತ ಅವಕಾಶ ಇದೆ. ಇಲ್ಲಿ ನಿರ್ಬಂಧ ಇಲ್ಲವಾಗಿದೆ. ಈ ಬಗ್ಗೆ ನ್ಯೂಸ್ 18 ಕನ್ನಡ ಗೋವಾ ರಾಜ್ಯದ ಪೋಲಿಸ್ ಸಿಬ್ಬಂದಿಯೊಂದಿಗೆ ಮಾತಿಗೆ ಇಳಿದಾಗ ಗೋವಾ ಸರಕಾರ ಇನ್ನೂ ಕೂಡಾ ನಮಗೆ ಗಡಿಯಲ್ಲಿ ಕೋವಿಡ್ ಟಫ್​ ರೂಲ್ಸ್ ಬಗ್ಗೆ ಆದೇಶಿಸಿಲ್ಲ ಮತ್ತು ಆ ತರಹದ ನಿಯಮ ಜಾರಿಗೆ ತಂದಿಲ್ಲ ಎಂದರು. ಗೋವಾ ಗಡಿಯಲ್ಲಿ ಅಂತರರಾಜ್ಯ ವಾಹನ ಸಂಚಾರಕ್ಕೆ ಸರಕಾರವೇ ಮುಕ್ತ ಅವಕಾಶ ನೀಡಿದೆ.

ಕಾರವಾರ ಗಡಿಯಲ್ಲಿ ಕಾಟಾಚಾರಕ್ಕೆ ನಡೆಯುತ್ತಿದೆ ವಾಹನ ತಪಾಸಣೆ

ನಿನ್ನೆ ಉತ್ತರ ಕನ್ನಡ ಜಿಲ್ಲಾಡಳಿತ ಕಾರವಾರ-ಗೋವಾ ಗಡಿಯಲ್ಲಿ ಕೋವಿಡ್ ಟಫ್​ ರೂಲ್ಸ್ ಜಾರಿಗೆ ತರುವುದಾಗಿ ಹೇಳಿತ್ತು. ಜತೆಗೆ ಮಹಾರಾಷ್ಟ್ರದಿಂದ ಬರುವ ಪ್ರತಿಯೊಬ್ಬರೂ ಕೋವಿಡ್ ನೆಗೆಟಿವ್ ವರದಿ ತೆಗೆದುಕೊಂಡು ಬಂದು ಕರ್ನಾಟಕ ಪ್ರವೇಶ ಮಾಡಬೇಕೆಂದು ಹೇಳಿತ್ತು. ಈ ಆಧಾರದ ಮೇಲೆ ಇವತ್ತು ನ್ಯೂಸ್ 18 ಕನ್ನಡ ರಿಯಾಲಿಟಿ ಚೆಕ್ ಗೆ ಇಳಿದಾಗ ಅಲ್ಲಿ ಕಂಡು ಬಂದಿದ್ದು, ಕೇವಲ ಕಾಟಾಚಾರದ ತಪಾಸಣೆ ಮತ್ತು ನಿರ್ಲಕ್ಷ್ಯ, ಆರೋಗ್ಯ ಇಲಾಖೆಯ ಸಿಬ್ಬಂದಿ ನೇಮಕ ಮಾಡಿಲ್ಲ.

ಕೇವಲ ಇಬ್ಬರು ಕಂದಾಯ ಇಲಾಖೆಯ ಸಿಬ್ಬಂದಿಯನ್ನ ಗಡಿಯಲ್ಲಿ ಕರ್ತವ್ಯಕ್ಕೆ ನಿಯೋಜನೆ ಮಾಡಿದ್ದಾರೆ. ಅವರು ಹೋಗಿ ಬರುವ ವಾಹನದ ನೋಂದಣಿ ನಂಬರ್ ಬರೆದುಕೊಂಡು ಮುಂದಿನ ಸಂಚಾರಕ್ಕೆ ಅನುವು ಮಾಡಿಕೊಡುತ್ತಿದ್ದಾರೆ. ಕೇವಲ ಇಷ್ಟು ಮಾಡೋದು ಟಫ್​ ರೂಲ್ಸ್? ಅಂತಾ ಸಾರ್ವಜನಿಕರೇ ಪ್ರಶ್ನಿಸುತ್ತಿದ್ದಾರೆ.

ಜನರಲ್ಲಿ ಮತ್ತೆ ಲಾಕ್ ಡೌನ್ ಗೊಂದಲ

ಅಂತರ ರಾಜ್ಯ ಗಡಿಯಲ್ಲಿ ಕೆಲವೊಂದು ಟಫ್​​ ರೂಲ್ಸ್ ಜಾರಿಗೆ ಬಂದ ಮೇಲೆ ಉತ್ತರ ಕನ್ನಡ ಜಿಲ್ಲೆಯ ಜನ ಮತ್ತೆ ಲಾಕ್ ಡೌನ್ ಆಗುತ್ತಾ ಎಂದು ಕೇಳುತ್ತಿದ್ದಾರೆ. ಜನರಲ್ಲಿ ಮತ್ತೆ ಮತ್ತೆ ಲಾಕ್ ಡೌನ್ ಗೊಂದಲ ಮುಂದುವರೆದಿದೆ. ಈಗಾಗಲೇ ಮದುವೆ-ಮುಂಜಿ ಕಾರ್ಯಕ್ಕೆ ಎಲ್ಲ ಸಿದ್ಧತೆ ಮಾಡಿಕೊಂಡ ಜನರು ಆತಂಕದಲ್ಲೇ ದಿನ ದೂಡುತ್ತಿದ್ದಾರೆ. ಜತೆಗೆ ಈಗಾಗಲೇ ಜಿಲ್ಲೆಯಲ್ಲಿ ಜಾತ್ರೆ ಸಂಭ್ರಮ ಮನೆ ಮಾಡುತ್ತಿದೆ. ಹೀಗಿರುವಾಗ ಮತ್ತೆ ಎಲ್ಲಿ ಜಾತ್ರೆ ಜಾಗರಣೆಗೆ ಸರಕಾರ ಬ್ರೇಕ್​ ಹಾಕುತ್ತೆ ಎನ್ನುವ ಗೊಂದಲ ಮುಂದುವರೆದಿದೆ.
Published by: Latha CG
First published: March 20, 2021, 3:27 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories