HOME » NEWS » State » CORONAVIRUS KARNATAKA DOCTORS NOT ADMIT CORONA PATIENT WHO IS SUFFERING FROM BREATHING PROBLEM AT YADAGIRI NMPG LG

ಮಾನವೀಯತೆ ಎಲ್ಲಿದೆ?; ಉಸಿರಾಟ ಸಮಸ್ಯೆಯಿಂದ ನರಳುತ್ತಿದ್ದರೂ ಆಸ್ಪತ್ರೆಗೆ ದಾಖಲಿಸಿಕೊಳ್ಳದ ವೈದ್ಯರು

ತಡವಾಗಿ ವೈದ್ಯರು ಸೋಂಕಿತನನ್ನು ದಾಖಲಿಸಿಕೊಂಡು ಆಕ್ಸಿಜನ್ ಸೌಲಭ್ಯ ನೀಡಿದ್ದಾರೆ. ಸೋಂಕಿತ ವ್ಯಕ್ತಿ ಈಗ ಆರಾಮವಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾನೆ. ಈ ಘಟನೆಯ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಕೋವಿಡ್ ಆಸ್ಪತ್ರೆ ವೈದ್ಯರ ನಿಷ್ಕಾಳಜಿಗೆ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

news18-kannada
Updated:April 23, 2021, 7:42 AM IST
ಮಾನವೀಯತೆ ಎಲ್ಲಿದೆ?; ಉಸಿರಾಟ ಸಮಸ್ಯೆಯಿಂದ ನರಳುತ್ತಿದ್ದರೂ ಆಸ್ಪತ್ರೆಗೆ ದಾಖಲಿಸಿಕೊಳ್ಳದ ವೈದ್ಯರು
ಬಿದ್ದು ನರಳಾಡುತ್ತಿರುವ ಕೊರೋನಾ ಸೋಂಕಿತ
  • Share this:
ಯಾದಗಿರಿ(ಏ.23): ರಾಜ್ಯದ ಕೆಲ ಜಿಲ್ಲೆಗಳಲ್ಲಿ ಕೊರೋನಾ ಸೋಂಕಿತರು ಬೆಡ್,ಆಕ್ಸಿಜನ್ ಸೌಲಭ್ಯವಿಲ್ಲದೇ ನರಳಾಡಿದ್ದನ್ನು ನೋಡಿದ್ದೇವೆ. ಆದರೆ, ಬೆಡ್ ಹಾಗೂ ಆಕ್ಸಿಜನ್ ಸೌಲಭ್ಯ ಇದ್ದರೂ‌ ಯಾದಗಿರಿಯಲ್ಲಿ ಮಾತ್ರ ಕೋವಿಡ್ ಆಸ್ಪತ್ರೆ ವೈದ್ಯರು ಹಾಗೂ ಸಿಬ್ಬಂದಿಗಳು ಸಂಪೂರ್ಣ ನಿಷ್ಕಾಳಜಿ ತೋರಿದ್ದಾರೆ. ಕೋವಿಡ್ ಸೋಂಕಿತನೋರ್ವ ಉಸಿರಾಟ ಸಮಸ್ಯೆಯಿಂದ ಬಳಲಿ ಕೋವಿಡ್ ಆಸ್ಪತ್ರೆಯಲ್ಲಿ ಗಂಟೆಗಟ್ಟಲೇ  ನರಳಾಡಿದರೂ ಆಸ್ಪತ್ರೆ ಸಿಬ್ಬಂದಿಗಳು ನೋಡಿಯೂ ಮೌನ ವಹಿಸಿದ್ದಾರೆ.

ಕಂದಕೂರ ಗ್ರಾಮದ ಸೋಂಕಿತ ವ್ಯಕ್ತಿ ತಮ್ಮ ಸಹೋದರಿ ಜೊತೆ ಯಾದಗಿರಿ ತಾಲೂಕಿನ ಮುದ್ನಾಳ ಸಮೀಪದಲ್ಲಿರುವ ಕೋವಿಡ್ ಆಸ್ಪತ್ರೆಗೆ ದಾಖಲಾಗಲು ಬಂದಿದ್ದರು. ಆದರೆ ಉಸಿರಾಟ ಸಮಸ್ಯೆದಿಂದ ಸೋಂಕಿತ ವ್ಯಕ್ತಿ ಗಂಟೆಗಟ್ಟಲೆ  ನರಳಿ ನರಳಿ ಒದ್ದಾಡಿದ್ದರು ಕೋವಿಡ್ ಆಸ್ಪತ್ರೆ ವೈದ್ಯರು ಹಾಗೂ ಸಿಬ್ಬಂದಿಗಳು ಎಲ್ಲವನ್ನೂ ನೋಡಿಯೂ ಸುಮ್ಮನಾಗಿದ್ದಾರೆ. ಸೋಂಕಿತ ವ್ಯಕ್ತಿಯ ಸಹೋದರಿಗೆ ಬೆಡ್ ಇಲ್ಲ ಎಂಬ ನೇಪ ಹೇಳಿ ಹೋಂ ಕ್ವಾರೈಂಟೈನ್ ನಲ್ಲಿರಲು ಹೇಳಿದ್ದಾರೆ.

ನೈಟ್ ಕರ್ಫ್ಯೂ ಮುಗಿಯೋದ್ರೊಳಗೆ ಶಾಕ್; ಅಂಗಡಿ ಮುಂಗಟ್ಟು ಮುಚ್ಚಿಸಿದ್ದಕ್ಕೆ ವರ್ತಕರ ಆಕ್ರೋಶ

ಕೋವಿಡ್ ಆಸ್ಪತ್ರೆಯಲ್ಲಿ ಬೆಡ್ ಹಾಗೂ ಆಕ್ಸಿಜನ್ ಸೌಲಭ್ಯ ಇದ್ದರೂ ವೈದ್ಯರು ಹಾಗೂ ಸಿಬ್ಬಂದಿಗಳು ಸೋಂಕಿತ ವ್ಯಕ್ತಿಯನ್ನು ಬೇಗ ಆಸ್ಪತ್ರೆಗೆ ದಾಖಲಿಸಿಕೊಳ್ಳುವ ಕೆಲಸ ಮಾಡಿಲ್ಲ. ಇದರಿಂದ ಗಂಟೆಗಟ್ಟಲೆ ನರಳಾಡಿದ್ದಾನೆ. ಉಸಿರಾಟ ಸಮಸ್ಯೆ ಇದೆ ಎಂದು ಹೇಳಿದರೂ ಸಹ ವೈದ್ಯರು ನಿಷ್ಕಾಳಜಿ ತೋರಿದ್ದಾರೆ.

ಇದರಿಂದ ನೊಂದ ಸೋಂಕಿತ ವ್ಯಕ್ತಿಯು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ. ನನಗೆ ಬದುಕಲು ಆಗುತ್ತಿಲ್ಲ ಎಂದು ಸಹೋದರಿ ಹತ್ತಿರ ನೋವು ತೊಡಿಕೊಂಡಿದ್ದಾನಂತೆ. ನಂತರ ಈ ವಿಷಯವನ್ನು ಮಾಧ್ಯಮದವರಿಗೆ ಹೇಳುತ್ತೇವೆ ಎಂದು‌ ಹೇಳಿದ್ದಕ್ಕೆ ಭಯಗೊಂಡು, ಅದೇ ರೀತಿ ಗುರುಮಠಕಲ್ ಶಾಸಕ ನಾಗನಗೌಡ ಕಂದಕೂರ ಅವರ ಪುತ್ರ ಶರಣಗೌಡ ಕಂದಕೂರ ಅವರು ಈ ಬಗ್ಗೆ ಆಸ್ಪತ್ರೆ ವೈದ್ಯರಿಗೆ ಮಾತನಾಡಿದಾಗ ಶೀಘ್ರವಾಗಿ ದಾಖಲು ಮಾಡಿಕೊಂಡಿದ್ದಾರೆ.

ತಡವಾಗಿ ವೈದ್ಯರು ಸೋಂಕಿತನನ್ನು ದಾಖಲಿಸಿಕೊಂಡು ಆಕ್ಸಿಜನ್ ಸೌಲಭ್ಯ ನೀಡಿದ್ದಾರೆ. ಸೋಂಕಿತ ವ್ಯಕ್ತಿ ಈಗ ಆರಾಮವಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾನೆ. ಈ ಘಟನೆಯ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಕೋವಿಡ್ ಆಸ್ಪತ್ರೆ ವೈದ್ಯರ ನಿಷ್ಕಾಳಜಿಗೆ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕರ್ತವ್ಯ ಪಾಲನೆ ಜೊತೆ ಮಾನವೀಯತೆ ಮೆರೆದು ಅಗತ್ಯ ಚಿಕಿತ್ಸೆ ನೀಡಬೇಕಾದ ವೈದ್ಯರ ನಿಷ್ಕಾಳಜಿಗೆ  ಸೋಂಕಿತ ವ್ಯಕ್ತಿಯ ಸಹೋದರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೋವಿಡ್ ಆಸ್ಪತ್ರೆಯಲ್ಲಿ ಉಳ್ಳವರಿಗೆ ಬೇಗ ಆಸ್ಪತ್ರೆಯಲ್ಲಿ ದಾಖಲಿಸಿಕೊಳ್ಳುತ್ತಾರೆ. ಬಡ ರೋಗಿಗಳು ಬಂದರೆ ಹೋಂ ಕ್ವಾರೈಂಟೈನ್ ನಲ್ಲಿ ಇರಲು ವೈದ್ಯರು ಸೂಚಿಸುತ್ತಿದ್ದಾರಂತೆ.
Youtube Video

ಈ ಬಗ್ಗೆ ನ್ಯೂಸ್ 18 ಕನ್ನಡಕ್ಕೆ ಜೆಡಿಎಸ್ ಮುಖಂಡ ಶರಣಗೌಡ ಕಂದಕೂರು ಮಾತನಾಡಿ, ಕೋವಿಡ್ ಆಸ್ಪತ್ರೆಯಲ್ಲಿ ಬಡವರು,ಶ್ರೀಮಂತರು ಅಂತ ತಾರತಮ್ಯ ಮಾಡಬಾರದು ಸೋಂಕಿತರ ಪರಿಸ್ಥಿತಿ ಅರಿತು ಶೀಘ್ರವಾಗಿ ಆಸ್ಪತ್ರೆಗೆ ದಾಖಲಿಸಿಕೊಳ್ಳಬೇಕಿದೆ. ಜನಸಾಮಾನ್ಯರಿಗೆ ಇಂತಹ ದುಸ್ಥಿತಿಯಾದರೆ ಹೇಗೆ? ಯಾರೇ ಇರಲಿ ತಾರತಮ್ಯ ಮಾಡದೇ ಪ್ರತಿಯೊಬ್ಬರ ಜೀವ ಉಳಿಸುವ ಕೆಲಸ ಮಾಡಬೇಕಿದೆ.
Published by: Latha CG
First published: April 23, 2021, 7:42 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories