ಬೆಂಗಳೂರಿನಲ್ಲಿ ಕೊರೋನಾ ಆತಂಕ; ಎಸಿ ಬಸ್​ಗಳನ್ನು ಕೇಳೋರೇ ಇಲ್ಲ

ಎಸಿ ಬಸ್​ಗಳಲ್ಲಿ ಓಡಾಡುವ ಟೆಕ್ಕಿಗಳು ಮನೆಯಲ್ಲೇ ಕೆಲಸ ಮಾಡುತ್ತಿರುವುದರಿಂದ ಎಸಿ ಬಸ್​ಗಳು ಖಾಲಿ ಹೊಡೆಯುತ್ತಿವೆ. ಸದ್ಯ ಶೇ.14 ಎಸಿ ಬಸ್, ಶೇ.19 ರಷ್ಟು ನಾನ್ ಎಸಿ ಸಾಮಾನ್ಯ ಬಸ್ ಕಡಿತಗೊಳಿಸಲಾಗಿದೆ.

ಬಿಎಂಟಿಸಿ ಬಸ್

ಬಿಎಂಟಿಸಿ ಬಸ್

  • Share this:
ಬೆಂಗಳೂರು (ಮಾ. 18): ರಾಜ್ಯಾದ್ಯಂತ ಕೊರೋನಾ ಭೀತಿ ಹೆಚ್ಚಾಗಿದ್ದು, ಈಗಾಗಲೇ 11 ಜನರಲ್ಲಿ ಕೊರೋನಾ ಪತ್ತೆಯಾಗಿದೆ. ಓರ್ವ ಕೊರೋನಾ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಬೆಂಗಳೂರಿನಲ್ಲಿ ಕಟ್ಟೆಚ್ಚರ ವಹಿಸಲಾಗಿದ್ದು, ಸಾರ್ವಜನಿಕರು ತಮ್ಮ ಸುರಕ್ಷತಾ ದೃಷ್ಟಿಯಿಂದ ಬಸ್​ಗಳಲ್ಲಿ ಸಂಚಾರ ಮಾಡುವುದನ್ನು ಕಡಿಮೆ ಮಾಡಿದ್ದಾರೆ. ಇದರಿಂದ ಬಿಎಂಟಿಸಿ ಸಂಸ್ಥೆ ತೀವ್ರ ನಷ್ಟಕ್ಕೆ ಸಿಲುಕಿದೆ.

ಕೊರೋನೋ ವೈರಸ್ ಭೀತಿ ಹಿನ್ನೆಲೆ ಎಸಿ ಬಸ್​ಗಳಿಗಿಂತ ನಾನ್ ಎಸಿ ಬಸ್​ಗಳ ಬಗ್ಗೆಯೇ ಹೆಚ್ಚು ಒಲವು ತೋರುತ್ತಿದ್ದಾರೆ. ಎಸಿ ಬಸ್​ಗಳಲ್ಲಿ ಪ್ರಯಾಣಿಸಿದರೆ ಕೊರೋನೋ ಬರಬಹುದು ಎಂಬ ನಂಬಿಕೆ ಇರುವುದರಿಂದ ಗಾಳಿ ಬಾರದ ಕಾರಣ ಎಸಿ ಬಸ್​ಗಳಲ್ಲಿ ಓಡಾಡಲು ಜನರು ಹಿಂದೇಟು ಹಾಕುತ್ತಿದ್ದಾರೆ. ಬಿಎಂಟಿಸಿ ಸಾಮಾನ್ಯ ಬಸ್​ಗಳಲ್ಲಿ ಶೇ.70ಕ್ಕೂ ಹೆಚ್ಚು ಪ್ರಯಾಣಿಕರಿಂದ ಪ್ರಯಾಣ ಮಾಡುತ್ತಿದ್ದಾರೆ. ಫ್ಯಾಕ್ಟರಿ, ಕಂಪನಿಗಳಲ್ಲಿ ಕೆಲಸ ಮಾಡುವ ಕಾರ್ಮಿಕರು ಸಾಮಾನ್ಯ ಬಸ್​ಗಳಲ್ಲಿ ಪ್ರಯಾಣ ಮಾಡುತ್ತಿದ್ದಾರೆ.

ಇದನ್ನೂ ಓದಿ: ಕೊರೋನಾ ವೈರಸ್​: ನಾಳೆಯಿಂದ ಮಂಗಳೂರು-ಮಡಗಾಂವ್ ರೈಲು ಸಂಚಾರ ರದ್ದು

ಎಸಿ ಬಸ್​ಗಳಲ್ಲಿ ಓಡಾಡುವ ಟೆಕ್ಕಿಗಳು ಮನೆಯಲ್ಲೇ ಕೆಲಸ ಮಾಡುತ್ತಿರುವುದರಿಂದ ಎಸಿ ಬಸ್​ಗಳು ಖಾಲಿ ಹೊಡೆಯುತ್ತಿವೆ. ಸದ್ಯ ಶೇ.14 ಎಸಿ ಬಸ್, ಶೇ.19 ರಷ್ಟು ನಾನ್ ಎಸಿ ಸಾಮಾನ್ಯ ಬಸ್ ಕಡಿತಗೊಳಿಸಲಾಗಿದೆ. ಬಿಎಂಟಿಸಿಯಲ್ಲಿ ಒಟ್ಟು 6400 ಬಸ್ ಗಳಿವೆ. ಪ್ರತಿದಿನ ಒಂದುಕೋಟಿ 80 ಲಕ್ಷ ಕಲೆಕ್ಷನ್ ಆಗುತ್ತಿತ್ತು. ಇದೀಗ ಒಂದು ಕೋಟಿ 30 ಲಕ್ಷಕ್ಕೂ ಕಡಿಮೆ ಕಲೆಕ್ಷನ್ ಆಗುತ್ತಿದೆ.

ಇದನ್ನೂ ಓದಿ: ಮಧ್ಯಪ್ರದೇಶ ಹೈಡ್ರಾಮ: ಅತೃಪ್ತರ ಮನವೊಲಿಕೆಗೆ ಮುಂದಾದ ಡಿಕೆಶಿ ಟೀಂ

ಕಳೆದ 10 ದಿನಗಳಿಂದ ಪ್ರಯಾಣಿಕರ ಸಂಖ್ಯೆ ಭಾರೀ ಕಡಿಮೆಯಾಗಿರುವುದರಿಂದ ಸಾರಿಗೆ ಸಂಸ್ಥೆಗಳಿಗೆ ಹೊಡೆತ ಬಿದ್ದಿದೆ. 10 ದಿನಗಳಲ್ಲಿ ಕೋಟಿಗಟ್ಟಲೆ ನಷ್ಟ ಉಂಟಾಗಿದೆ. ಕೊರೋನಾ ವೈರಸ್​ ಆತಂಕದ ಪರಿಣಾಮ ಬರೋಬ್ಬರಿ ಐದೂವರೆ ಕೋಟಿ ರೂ. ನಷ್ಟ ಸಂಭವಿಸಿದೆ. ಮಾ. 11 ರಿಂದ 15ರ ಅವಧಿಯಲ್ಲಿ ಕೆಎಸ್​ಆರ್​ಟಿಸಿಗೆ ಅತಿ ಹೆಚ್ಚು ನಷ್ಟ ಉಂಟಾಗಿದೆ. ಕೊರೋನಾ ಭೀತಿಯಿಂದ ಬಿಎಂಟಿಸಿ ಮತ್ತು ಕೆಎಎಸ್​ಆರ್​ಟಿಸಿ ವಹಿವಾಟಿನಲ್ಲಿ ಶೇ. 50ಕ್ಕೂ ಹೆಚ್ಚು ಇಳಿಕೆಯಾಗಿದೆ.
First published: