ಕೊರೋನಾ ಭೀತಿ; ಶಾಸಕರ ಸಭೆ ಕರೆದ ಸಿಎಂ ಯಡಿಯೂರಪ್ಪ; ಬೆಂಗಳೂರು ಲಾಕ್​​​ಡೌನ್ ಬಗ್ಗೆ ಆಗಲಿದೆಯೇ ನಿರ್ಧಾರ?

ಈಗಾಗಲೇ ಕೊರೋನಾ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಲಾಕ್​ಡೌನ್​ ಮಾಡಬೇಕು ಎನ್ನುವ ಆಗ್ರಹ ಕೇಳಿ ಬಂದಿದೆ. ಈ ವಿಚಾರಕ್ಕೆ ಸಂಬಂಧಿಸಿ ಸಿಎಂ ಶಾಸಕರ ಅಭಿಪ್ರಾಯ, ಸಲಹೆಯನ್ನು ಪಡೆಯಲಿದ್ದಾರೆ.  ಶಾಸಕರು ಲಾಕ್‌ಡೌನ್​ಗೆ ಒತ್ತಡ ಹಾಕಿದರೆ ಬೆಂಗಳೂರನ್ನು ಮತ್ತೆ ಲಾಕ್‌ಡೌನ್ ಮಾಡುವ ಸಾಧ್ಯತೆ ಇದೆ.  

news18-kannada
Updated:July 4, 2020, 11:59 AM IST
ಕೊರೋನಾ ಭೀತಿ; ಶಾಸಕರ ಸಭೆ ಕರೆದ ಸಿಎಂ ಯಡಿಯೂರಪ್ಪ; ಬೆಂಗಳೂರು ಲಾಕ್​​​ಡೌನ್ ಬಗ್ಗೆ ಆಗಲಿದೆಯೇ ನಿರ್ಧಾರ?
ಸಿಎಂ ಬಿ.ಎಸ್.ಯಡಿಯೂರಪ್ಪ.
  • Share this:
ಬೆಂಗಳೂರು (ಜು.4): ನಗರದಲ್ಲಿ ಕೊರೋನಾ ವೈರಸ್​ ಮಿತಿ ಮೀರಿ ಹಬ್ಬುತ್ತಿದ್ದು, ನಿತ್ಯ ಸುಮಾರ 1 ಸಾವಿರ ಪ್ರಕರಣ ದಾಖಲಾಗುತ್ತಿದೆ. ಇದು ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ ಅವರನ್ನು ಚಿಂತೆಗೀಡು ಮಾಡಿದೆ. ಹೀಗಾಗಿ, ಸೋಮವಾರ ಶಾಸಕರ ಸಭೆ ಕರೆದಿದ್ದು, ಎಲ್ಲರೂ ಹಾಜರಾಗುವಂತೆ ಆದೇಶಿಸಿದ್ದಾರೆ.

ರಾಜಧಾನಿಯಲ್ಲಿ ಕೊರೋನಾ ಸಮುದಾಯಕ್ಕೆ ಹರಡಿದೆ ಎಂದು ತಜ್ಞರು ಹೇಳಿದ್ದಾರೆ. ಇದರಿಂದ ಸರ್ಕಾರ ಬೆಚ್ಚಿಬಿದ್ದಿದೆ. ಹೀಗಾಗಿ, ಕೊರೋನಾ ನಿಯಂತ್ರಣ ಮಾಡಲು ತೆಗೆದುಕೊಳ್ಳಬಹುದಾದ ಕ್ರಮದ ಬಗ್ಗೆ ಶಾಸಕರ ಜೊತೆ ಚರ್ಚೆ ಮಾಡಲು ಬಿಎ​ಸ್​ವೈ ಮುಂದಾಗಿದ್ದಾರೆ.

ಸೋಮವಾರ ಸಂಜೆ 4 ಗಂಟೆಗೆ ಶಾಸಕರ ಸಭೆ ಕರೆಯಲಾಗಿದೆ. ಬೆಂಗಳೂರು ಹಾಗೂ ಸುತ್ತಮುತ್ತಲ ತಾಲೂಕಿನ ಶಾಸಕರನ್ನು ಸಭೆಗೆ ಆಹ್ವಾನ ಮಾಡಲಾಗಿದೆ. ಈ ವೇಳೆ 27 ಕ್ಷೇತ್ರದ ಶಾಸಕರು ಹಾಜರಿರಲಿದ್ದಾರೆ ಎನ್ನಲಾಗಿದೆ. ಇನ್ನು, ಬೆಂಗಳೂರಿನ ಸಚಿವರು ಸಭೆಗೆ ಕಡ್ಡಾಯವಾಗಿ ಇರುವಂತೆಯೂ ಸೂಚನೆ ನೀಡಿದ್ದಾರೆ.

ಈಗಾಗಲೇ ಕೊರೋನಾ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಲಾಕ್​ಡೌನ್​ ಮಾಡಬೇಕು ಎನ್ನುವ ಆಗ್ರಹ ಕೇಳಿ ಬಂದಿದೆ. ಈ ವಿಚಾರಕ್ಕೆ ಸಂಬಂಧಿಸಿ ಸಿಎಂ ಶಾಸಕರ ಅಭಿಪ್ರಾಯ, ಸಲಹೆಯನ್ನು ಪಡೆಯಲಿದ್ದಾರೆ.  ಶಾಸಕರು ಲಾಕ್‌ಡೌನ್​ಗೆ ಒತ್ತಡ ಹಾಕಿದರೆ ಬೆಂಗಳೂರನ್ನು ಮತ್ತೆ ಲಾಕ್‌ಡೌನ್ ಮಾಡುವ ಸಾಧ್ಯತೆ ಇದೆ.

ರಾಜ್ಯದಲ್ಲಿ ಗುರುವಾರ ಸಂಜೆಯಿಂದ ಶುಕ್ರವಾರ ಸಂಜೆವರೆಗೆ ರಾಜ್ಯದಲ್ಲಿ 1,694 ಕೊರೋನಾ ಕೇಸ್​ ಪತ್ತೆ ಆಗಿದೆ. 21 ಮಂದಿ ಸಾವನ್ನಪ್ಪಿದ್ದಾರೆ. ಬೆಂಗಳೂರು ನಗರವೊಂದರಲ್ಲೇ 997 ಪ್ರಕರಣಗಳು ಬೆಳಕಿಗೆ ಬಂದಿವೆ. ರಾಜ್ಯದಲ್ಲಿ ಒಟ್ಟು ಸಾವಿನ ಸಂಖ್ಯೆ 293 ಆಗಿದೆ. ಬೆಂಗಳೂರಿನಲ್ಲೇ 105 ಮಂದಿ ನಿಧನರಾಗಿದ್ದಾರೆ. ರಾಜ್ಯದಲ್ಲಿ ಈವರೆಗೆ ದಾಖಲಾಗಿರುವ ಒಟ್ಟು ಪ್ರಕರಣ 19,710ಕ್ಕೆ ಮುಟ್ಟಿದೆ. ಬೆಂಗಳೂರಿನಲ್ಲಿ ಕೇಸ್​ಗಳ ಸಂಖ್ಯೆ 7,173 ತಲುಪಿದೆ.
Published by: Rajesh Duggumane
First published: July 4, 2020, 11:58 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading