HOME » NEWS » State » CORONAVIRUS CHITRADURGA MP A NARAYANASWAMY SUSPECT ABOUT OFFICERS WHO GAVE CORONA VACCINE VTC LG

ಲಸಿಕೆ ನೀಡುವ ಅಧಿಕಾರಿಗಳ ಕಾರ್ಯಕ್ಷಮತೆ ಬಗ್ಗೆ ಅನುಮಾನವಿದೆ; ಸಂಸದ ಎ.ನಾರಾಯಣ ಸ್ವಾಮಿ

ಜಿಲ್ಲೆಯಲ್ಲಿ ಕೋವಿಡ್ ಲಸಿಕಾ ಆಂದೋಲನ ಹಮ್ಮಿಕೊಂಡು, ಜಿಲ್ಲೆಯ ಎಲ್ಲಾ ಗ್ರಾಮದ ಜನರಿಗೆ ಲಸಿಕೆ ನೀಡಬೇಕು. ಸಂಪೂರ್ಣ ಆ ಗ್ರಾಮದ ಎಲ್ಲಾ ಜನರ ಲಸಿಕೆ ಪಡೆದರೆ ಆ ಗ್ರಾಮವನ್ನು ಲಸಿಕೆ ಪಡೆದ ಗ್ರಾಮ ಎಂದು ಘೋಷಣೆ ಮಾಡಬೇಕು. ಈ ಕಾರ್ಯಕ್ಕೆ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ  ಹಾಗೂ ಗ್ರಾಮ ಸದಸ್ಯರು ಕೈಜೋಡಿಸಿ ರಾಜ್ಯಕ್ಕೆ ಮಾದರಿಯಾಗೋಣ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

news18-kannada
Updated:April 27, 2021, 7:49 AM IST
ಲಸಿಕೆ ನೀಡುವ ಅಧಿಕಾರಿಗಳ ಕಾರ್ಯಕ್ಷಮತೆ ಬಗ್ಗೆ ಅನುಮಾನವಿದೆ; ಸಂಸದ ಎ.ನಾರಾಯಣ ಸ್ವಾಮಿ
ಸಂಸದ ಎ.ನಾರಾಯಣಸ್ವಾಮಿ
  • Share this:
ಚಿತ್ರದುರ್ಗ(ಏ.27): ಕೊರೋನಾ ಎರಡನೇ ಅಲೆ ಹೆಚ್ಚಳವಾಗುತ್ತಿದ್ದರೂ ಶೇ.50 ರಷ್ಟು ಲಸಿಕಾ ಪ್ರಮಾಣ ಗುರಿ ತಲುಪಲು ಸಾಧ್ಯವಾಗಿಲ್ಲ. ಇದರಿಂದ ಅಧಿಕಾರಿಗಳ ಕಾರ್ಯಕ್ಷಮತೆ ಬಗ್ಗೆ ನಮಗೆ ಅನುಮಾನ ಮೂಡುತ್ತಿದೆ. ಅಧಿಕಾರಿಗಳು ಜಾಗೃತಿ ವಹಿಸಿ ಕಾರ್ಯ ನಿರ್ವಹಿಸಬೇಕು. ಜಿಲ್ಲೆಯಲ್ಲಿ ಕೊರೋನಾ ಲಸಿಕಾ ಉತ್ಸವಕ್ಕೆ ಗಮನ ಕೊಡಬೇಕು ಎಂದು ಚಿತ್ರದುರ್ಗ ಸಂಸದ ಎ.ನಾರಾಯಣ ಸ್ವಾಮಿ ತಾಕೀತು ಮಾಡಿದ್ದಾರೆ.

ಚಿತ್ರದುರ್ಗ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕೊರೋನಾ ರೋಗ ತಡೆ ಕುರಿತು ಆರೋಗ್ಯ ಇಲಾಖೆ ಅಧಿಕಾರಿಗಳ ಜೊತೆ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕೊರೋನಾ ರೋಗ ತಡೆಗಟ್ಟುವ ನಿಟ್ಟಿನಲ್ಲಿ ಕೋವಿಡ್ ವ್ಯಾಕ್ಸಿನೇಷನ್ ಪ್ರಮಾಣ ಏರಿಕೆ ಮಾಡುವ ದೃಷ್ಠಿಯಿಂದ ಕೋವಿಡ್ ಲಸಿಕೋತ್ಸವ ಪ್ರಾರಂಭ ಮಾಡಬೇಕು,ಆದರೇ ಕೋವಿಡ್-19 ಎರಡನೇ ಅಲೆ ಹೆಚ್ಚಾಗುತ್ತಿದ್ದರೂ ಜಿಲ್ಲೆಯಲ್ಲಿ ಶೇ.50 ರಷ್ಟು ಲಸಿಕಾ ಪ್ರಮಾಣ ಗುರಿ ತಲುಪಲು ಸಾಧ್ಯವಾಗಿಲ್ಲ. ಇದರಿಂದ ಅಧಿಕಾರಿಗಳ ಕಾರ್ಯಕ್ಷಮತೆ ಬಗ್ಗೆ ನಮಗೆ ಅನುಮಾನ ಮೂಡುತ್ತಿದೆ ಎಂದು ಹೇಳಿದ್ದಾರೆ.

ಇನ್ನೂ ಕೊರೋನಾ ತಡೆಯುವಲ್ಲಿ ಅಧಿಕಾರಿಗಳು ಜಾಗೃತಿವಹಿಸಿ ಕೆಲಸ ಮಾಡಬೇಕು. ಜೊತೆಗೆ ಕೋವಿಡ್ ಲಸಿಕಾ ಉತ್ಸವಕ್ಕೆ ಹೆಚ್ಚಿನ ಗಮನ ಕೊಡಬೇಕು ಎಂದು ತಾಕೀತು ಮಾಡಿದರು. ಅಲ್ಲದೇ ಜಿಲ್ಲೆಯಲ್ಲಿ ಕೋವಿಡ್ ಲಸಿಕಾ ಆಂದೋಲನ ಹಮ್ಮಿಕೊಂಡು, ಜಿಲ್ಲೆಯ ಎಲ್ಲಾ ಗ್ರಾಮದ ಜನರಿಗೆ ಲಸಿಕೆ ನೀಡಬೇಕು. ಸಂಪೂರ್ಣ ಆ ಗ್ರಾಮದ ಎಲ್ಲಾ ಜನರ ಲಸಿಕೆ ಪಡೆದರೆ ಆ ಗ್ರಾಮವನ್ನು ಲಸಿಕೆ ಪಡೆದ ಗ್ರಾಮ ಎಂದು ಘೋಷಣೆ ಮಾಡಬೇಕು. ಈ ಕಾರ್ಯಕ್ಕೆ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ  ಹಾಗೂ ಗ್ರಾಮ ಸದಸ್ಯರು ಕೈಜೋಡಿಸಿ ರಾಜ್ಯಕ್ಕೆ ಮಾದರಿಯಾಗೋಣ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Astrology: ಹನುಮನ ಜಯಂತಿ ದಿನದ ಇಂದು ಯಾವ ರಾಶಿಗೆ ಯಾವ ಫಲ; ಇಲ್ಲಿದೆ ದ್ವಾದಶ ರಾಶಿ ಭವಿಷ್ಯ

ಈಗಿನ ಪರಿಸ್ಥಿತಿಯಲ್ಲಿ ಕೊರೋನಾ ರೋಗಿಗಳಿಗೆ ಆಸ್ಪತ್ರೆಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಚಿಕಿತ್ಸೆ ದೊರೆಯುವಂತಾಗಬೇಕು. ಯಾವುದೇ ಕಾರಣಕ್ಕೂ ಅರ್ಧದಲ್ಲಿಯೇ ಚಿಕಿತ್ಸೆ ನೀಡಿ ಆಸ್ಪತ್ರೆಯಿಂದ ಹೊರಗೆ ಹಾಕಬಾರದು. ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಇಂತಹ ಪ್ರಕರಣಗಳು ನಡೆಯುತ್ತಿವೆ. ಇಂತಹ ಆಸ್ಪತ್ರೆಗಳ ಮೇಲೆ ಪ್ರಕರಣ ದಾಖಲಿಸಲು ಯಾರು ಮುಂದಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಅಲ್ಲದೇ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕೊರೋನಾ ಸಂದಿಗ್ಧ ಸಮಯದಲ್ಲಿ ಜೀವನಕ್ಕಿಂತ ಜೀವ ಮುಖ್ಯ, ಬೆಂಗಳೂರು ಸೇರಿದಂತೆ ಹಲವೆಡೆ ಆಕ್ಸಿಜನ್, ರೆಮಿಡಿಸಿವಿರ್, ಬೆಡ್ ಸಮಸ್ಯೆ ಇದೆ. ಇವೆಲ್ಲಾ ಸಮಸ್ಯೆಗೆ ಕೇವಲ ಸರ್ಕಾರ ಮಾತ್ರ ಕಾರಣ ಅಲ್ಲ ಎಂದಿದ್ದಾರೆ.

ಬಳಿಕ ಸಭೆಯಲ್ಲಿ ಸಂಸದ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿರುವ DHO ಡಾ.ಫಾಲಾಕ್ಷ, ಜಿಲ್ಲೆಯಲ್ಲಿ 191 ಲಸಿಕಾ ತಂಡಗಳ ಮೂಲಕ ಲಸಿಕೆ ನೀಡಲಾಗುತ್ತಿದೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಲಸಿಕೆ ನೀಡಲು ಗುರಿ ನಿಗಧಿಪಡಿಸಲಾಗಿದ್ದು, ಜಿಲ್ಲೆಯಲ್ಲಿ ಶೇ.47 ರಷ್ಟು ಲಸಿಕೆ ಹಾಕಲಾಗಿದೆ. ಕಳೆದ 10 ದಿನಗಳಿಂದ ಜಿಲ್ಲೆಯಲ್ಲಿ ಸದ್ಯ 877 ಸಕ್ರಿಯ ಪ್ರಕರಣಳಿದ್ದು, 658 ಪ್ರಕರಣಗಳಿಗೆ ಹೋಂ ಐಸೋಲೇಷನ್‍ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.  ಸಮುದಾಯ ಆರೋಗ್ಯ ಕೇಂದ್ರ ಹಾಗೂ ಸಾರ್ವಜನಿಕ ಆಸ್ಪತ್ರೆಗಳ ಡಿಸಿಹೆಚ್ ಆಸ್ಪತ್ರೆಯಲ್ಲಿ 38 ಸಕ್ರಿಯ ಪ್ರಕರಣಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಜಿಲ್ಲಾ ಆಸ್ಪತ್ರೆಯಲ್ಲಿ 15 ಮಂದಿ ಕೋವಿಡ್ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಮಾಹಿತಿ ನೀಡಿದರು.
Youtube Video

ಹೋಂ ಐಸೋಲೇಷನ್‍ನಲ್ಲಿ ಚಿಕಿತ್ಸೆ ಪಡೆಯುತ್ತಿರುವವರಿಗೆ ಸರಿಯಾದ ರೀತಿಯಲ್ಲಿ ಮಾರ್ಗದರ್ಶನ ನೀಡಬೇಕು. ಸರಿಯಾದ ಮಾರ್ಗದರ್ಶನ, ಮಾನಸಿಕ ಸ್ಥೈರ್ಯ ಇಲ್ಲದೇ ಇರುವುದರಿಂದ ಆಸ್ಪತ್ರೆಗಳಲ್ಲಿ ಹಾಸಿಗೆ, ಆಕ್ಸಿಜನ್ ಸಮಸ್ಯೆ ಉಂಟಾಗುತ್ತಿದೆ. ಹಾಗಾಗಿ ಹೋಂ ಐಸೋಲೇಷನ್ ಇರುವವರನ್ನು ಸರಿಯಾಗಿ ನಿರ್ವಹಣೆ ಮಾಡಬೇಕು ಎಂದು ಸಂಸದ ಎ.ನಾರಾಯಣಸ್ವಾಮಿ ಸೂಚಿಸಿದ್ದಾರೆ.
Published by: Latha CG
First published: April 27, 2021, 7:49 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories