ಕಾಫಿನಾಡಲ್ಲಿ ಕೊರೋನಾ ಸ್ಫೋಟ: ಒಂದೇ ಗ್ರಾಮದ 75 ಜನರಿಗೆ ಸೋಂಕು; ಹಳ್ಳಿ ಜನರಲ್ಲಿ ಹೆಚ್ಚಿದ ಆತಂಕ

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಚಿಕ್ಕಮಗಳೂರು ಶಾಸಕ ಸಿ.ಟಿ.ರವಿ ಸ್ಥಳಕ್ಕೆ ಭೇಟಿ ನೀಡಿ ಯಾರೂ ಆತಂಕಪಡದಂತೆ ಧೈರ್ಯ ತುಂಬಿದ್ದಾರೆ. ಪಾಸಿಟಿವ್ ಬಂದಿರೋ 75 ಜನರ 47 ಕುಟುಂಬಗಳಿಗೂ ರೇಷನ್ ಕಿಟ್ ನೀಡಿದ್ದಾರೆ.

ಗ್ರಾಮಕ್ಕೆ ಭೇಟಿ ನೀಡಿರುವ ಸಿ.ಟಿ.ರವಿ

ಗ್ರಾಮಕ್ಕೆ ಭೇಟಿ ನೀಡಿರುವ ಸಿ.ಟಿ.ರವಿ

  • Share this:
ಚಿಕ್ಕಮಗಳೂರು(ಮೇ 16): ಕಾಫಿನಾಡಿನ ಹಳ್ಳಿವೊಂದರಲ್ಲಿ ಕೊರೋನಾ ಸ್ಪೋಟಗೊಂಡಿದ್ದು ಗ್ರಾಮದ 75 ಜನಕ್ಕೆ ಕೊರೋನಾ ಸೋಂಕು ಕಾಣಿಸಿಕೊಂಡಿರೋ ಘಟನೆ ಚಿಕ್ಕಮಗಳೂರು ತಾಲೂಕಿನ ಕೊಳ್ಳಿಕೊಪ್ಪ ನಡೆದಿದೆ.  ತಾಲೂಕಿನ ಕಳಸಾಪುರ ಸಮೀಪದ ಕೊಳ್ಳಿಕೊಪ್ಪ ಗ್ರಾಮದಲ್ಲಿ ಹಕ್ಕಿಪಿಕ್ಕಿ ಜನಾಂಗದವರೇ ಹೆಚ್ಚಿದ್ದಾರೆ. ಎಲ್ಲರೂ ತಲೆಕೂದಲು, ಏರ್‍ಪಿನ್ ಸೇರಿದಂತೆ ಹಳ್ಳಿಹಳ್ಳಿ ಸುತ್ತಿ ವಿವಿಧ ರೀತಿಯ ವ್ಯಾಪಾರ ಮಾಡಿಕೊಂಡು ಬದುಕುತ್ತಿದ್ದರು. ಆದರೆ, ಅವರಿಗೆ ಹೆಮ್ಮಾರಿ ಕೊರೋನಾದ ಸೋಂಕು ಎಲ್ಲಿಂದ ಬಂತೋ ಏನೋ ಇಡೀ ಊರಿಗೆ ಊರೇ ಸೋಂಕಿನಿಂದ ಕೂಡಿದೆ.

ವಿಷಯ ತಿಳಿದ ಕೂಡಲೇ ತಾಲೂಕು ಆಡಳಿತಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ತಹಶೀಲ್ದಾರ್ ಕಾಂತರಾಜು, ಎಸಿ ನಾಗರಾಜು, ಪಿಡಿಓ ಸ್ಥಳಕ್ಕೆ ಭೇಟಿ ನೀಡಿ ಅವರಿಗೆ ಸೋಂಕಿನ ತೀವ್ರತೆಯ ಬಗ್ಗೆ ಮಾಹಿತಿ ನೀಡಿ ಯಾರೂ ಮನೆಯಿಂದ ಆಚೆ ಬರದಂತೆ ಸೂಚಿಸಿದ್ದಾರೆ. ನಿಮಗೆ 15 ದಿನಕ್ಕೆ ಆಗುವಷ್ಟು ರೇಷನ್ ವ್ಯವಸ್ಥೆಯನ್ನ ತಾಲೂಕು ಆಡಳಿತವೇ ಮಾಡಲಿದೆ. ನೀವು ಯಾರೂ ಕೆಲಸಕ್ಕೆ ಹೋಗುವ ಅಗತ್ಯವಿಲ್ಲ. ಮನೆಯಿಂದ ಹೊರಬಾರದಂತೆ ಸೂಚಿಸಿದ್ದಾರೆ.

ಆಕ್ಸಿಜನ್ ಬಿಕ್ಕಟ್ಟು ನಿವಾರಣೆಗೆ ದಾನಿಗಳು ಮುಂದಾಗಬೇಕು: ದಾವಣಗೆರೆ ಜಿಲ್ಲಾಧಿಕಾರಿ ಮನವಿ

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಚಿಕ್ಕಮಗಳೂರು ಶಾಸಕ ಸಿ.ಟಿ.ರವಿ ಸ್ಥಳಕ್ಕೆ ಭೇಟಿ ನೀಡಿ ಯಾರೂ ಆತಂಕಪಡದಂತೆ ಧೈರ್ಯ ತುಂಬಿದ್ದಾರೆ. ಪಾಸಿಟಿವ್ ಬಂದಿರೋ 75 ಜನರ 47 ಕುಟುಂಬಗಳಿಗೂ ರೇಷನ್ ಕಿಟ್ ನೀಡಿದ್ದಾರೆ. ಗ್ರಾಮದಲ್ಲಿ ಸೋಂಕಿತರನ್ನ ಹೊರತುಪಡಿಸಿ ಉಳಿದವರು ಪ್ರತಿಯೊಬ್ಬರು ಪರೀಕ್ಷೆಗೆ ಒಳಪಡುವಂತೆ ಸೂಚಿಸಿದ್ದಾರೆ. ಯಾರಾದರೂ ಪರೀಕ್ಷೆಗೆ ಹಿಂದೇಟು ಹಾಕಿದರೆ ಅವರ ವಿರುದ್ಧ ಕೇಸ್ ದಾಖಲಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಜೊತೆಗೆ, ಪಾಸಿಟಿವ್ ಬಂದ ಕುಟುಂಬಗಳಿಗೆ ರೇಷನ್ ವ್ಯವಸ್ಥೆ ಮಾಡಿದ್ದು ಯಾರಾದರೂ ಮನೆಯಿಂದ ಹೊರಬಂದರೆ ಅವರ ವಿರುದ್ಧವೂ ಕೇಸ್ ದಾಖಲಿಸುವುದಾಗಿ ಎಚ್ಚರಿಸಿದ್ದಾರೆ. ಅಧಿಕಾರಿಗಳು ಇಡೀ ಗ್ರಾಮದ ತುಂಬ ಮೈಕ್‍ನಲ್ಲಿ ಅನೌನ್ಸ್ ಮಾಡಿ ಸೋಂಕಿನ ತೀವ್ರತೆಯ ಬಗ್ಗೆ ಜಾಗೃತಿ ಮೂಡಿಸಿದ್ದಾರೆ.

ತಾಲೂಕಿನಲ್ಲಿ ಸೋಂಕು ಹರಡುವಿಕೆಯ ಪ್ರಮಾಣ ಯತೇಚ್ಛವಾಗಿದೆ. ಜಿಲ್ಲೆಯಲ್ಲಿ ಸೋಂಕು ಸಮುದಾಯಕ್ಕೆ ಹರಡಿದ್ಯಾ ಎಂಬ ಅನುಮಾನ ಬಲವಾಗಿದೆ. ಯಾಕಂದ್ರೆ, ಕಳೆದೊಂದು ವಾರದಲ್ಲೇ ತಾಲೂಕಿನ ನಾಲ್ಕೈದು ಹಳ್ಳಿಗಳಲ್ಲಿ 30ಕ್ಕೂ ಹೆಚ್ಚು ಕೇಸ್‍ಗಳು ದಾಖಲಾಗಿವೆ.

ಸದ್ಯ ಈ ಗ್ರಾಮದ ಎಲ್ಲಾ ಬೀದಿಗಳನ್ನ ಮುಚ್ಚಲಾಗಿದ್ದು, ಆರೋಗ್ಯ ಇಲಾಖೆ ಸಿಬ್ಬಂದಿಗಳು ಗ್ರಾಮದಲ್ಲೇ ಮೊಕ್ಕಾಂ ಮಾಡಿದ್ದಾರೆ. ಸುಮಾರು 47 ಕುಟುಂಬಗಳ 75 ಜನರಿಗೆ ಕೊರೊನಾ ಹರಡಿರೋದ್ರಿಂದ ಅಕ್ಕಪಕ್ಕದ ಗ್ರಾಮಗಳಿಗೂ ಸೋಂಕಿನ ಭೀತಿ ಎದುರಾಗಿದೆ. ಮೊದಮೊದಲು ಕೇವಲ ನಗರ ಪ್ರದೇಶಗಳಲ್ಲಿ ಮಾತ್ರ ಸೋಂಕಿತರ ಸಂಖ್ಯೆ ಹೆಚ್ಚಾಗಿ ಕಂಡು ಬರುತ್ತಿತ್ತು, ಆದ್ರೆ ಇದೀಗ ಜಿಲ್ಲೆಯ ಬಹುತೇಕ ಹಳ್ಳಿ ಹಳ್ಳಿಗಳಲ್ಲೂ ಕೊರೊನಾ ರಣಕೇಕೆ ಹಾಕ್ತಿದ್ದು, ಹೇಗಪ್ಪಾ ಈ ಹೆಮ್ಮಾರಿಯಿಂದ ಬಚಾವಾಗೋದು ಅಂತಾ ಕಾಫಿನಾಡಿಗರು ಕಂಗಲಾಗಿದ್ದಾರೆ.
Published by:Latha CG
First published: