HOME » NEWS » State » CORONAVIRUS BBMP COMMISSIONER GIVES LOCKDOWN HINT AMTV MAK

CoronaVirus: ಜನರು ಎಚ್ಚೆತ್ತುಕೊಂಡಿಲ್ಲಾಂದ್ರೆ ಬೆಂಗಳೂರಿಗೆ ಬೀಗ; ಲಾಕ್​ಡೌನ್ ಸುಳಿವು ಕೊಟ್ಟರಾ ಬಿಬಿಎಂಪಿ ಕಮಿಷನರ್?

ನಗರದಲ್ಲಿ ಕೋವಿಡ್ ಹರಡುವಿಕೆ ಪ್ರತಿನಿತ್ಯ ಏಳು ಸಾವಿರದ ಗಡಿ ದಾಟಿದೆ. ತಾಂತ್ರಿಕ ಸಲಹಾ ಸಮಿತಿ ಕೊಟ್ಟಿರುವ ಸಲಹೆ ಪ್ರಕಾರ ಏಪ್ರಿಲ್ ಅಂತ್ಯಕ್ಕೆ ನಗರದಲ್ಲಿ ಸೋಂಕು ಅನೂಹ್ಯವಾಗಿ ದಾಖಲಾಗಲಿದ್ದು, ಮತ್ತೊಮ್ಮೆ ಲಾಕ್ ಡೌನ್ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ.

news18-kannada
Updated:April 12, 2021, 8:29 PM IST
CoronaVirus: ಜನರು ಎಚ್ಚೆತ್ತುಕೊಂಡಿಲ್ಲಾಂದ್ರೆ ಬೆಂಗಳೂರಿಗೆ ಬೀಗ; ಲಾಕ್​ಡೌನ್ ಸುಳಿವು ಕೊಟ್ಟರಾ ಬಿಬಿಎಂಪಿ ಕಮಿಷನರ್?
ಸಾಂದರ್ಭಿಕ ಚಿತ್ರ
  • Share this:
ಬೆಂಗಳೂರು (ಏಪ್ರಿಲ್ 12); ಕೋವಿಡ್ ಎರಡನೇ ಹಲೆ  ದಿನೆ ದಿನೆ ಸುನಾಮಿ ಅಲೆಗಳಂತೆ ಎದ್ದೇಳ್ತಾ ಇದ್ದು, ಹೇಗಪ್ಪ ನಿಯಂತ್ರಣ ಮಾಡೋದು ಎಂಬ ತಲೆ ನೋವು ಸರ್ಕಾರಕ್ಕೆ ಶುರುವಾಗಿದೆ.‌ ಅದ್ರಲ್ಲೂ ಭಾನುವಾರ ಬೆಂಗಳೂರಿನಲ್ಲಾದ ಕೊರೊನಾ ಬ್ಲಾಸ್ಟ್ ಪಾಲಿಕೆ ಅಧಿಕಾರಿಗಳ ಎದೆ ಜಲ್ಲೆನ್ನಿಸಿದೆ. ಈಗಾಗಿ ಹೇಗಾದ್ರೂ ಮಾಡಿ ಸೋಂಕಿನ ಓಟಕ್ಕೆ‌ ಕಡಿವಾಣ ಹಾಕಲೇಬೇಕು ಎಂಬ ನಿಟ್ಟಿನಲ್ಲಿ ಪಾಲಿಕೆ ಆಯುಕ್ತ ಗೌರವ್ ಗುಪ್ತಾ ಸೇರಿ ಇನ್ನಿತರ ಅಧಿಕಾರಿಗಳು ಸಭೆ ನಡೆಸಿದ್ದಾರೆ. 

ಕಳೆದ ಒಂದೇ ದಿನದಲ್ಲಿ 7,500ರ ಗಡಿ ದಾಟಿದ ಕೊರೋನಾ ಸೋಂಕಿತರು..!!

ಕಳೆದ ಒಂದು ವಾರದ ಕೊರೋನಾ ನಾಗಲೋಟ ನೋಡಿದರೆ ಅದೆಂಥವರ ನಿದ್ದೆಯೂ ಕೆಟ್ಟೋಗಬಹುದು. ಭಾನುವಾರ ಬಂದ ಬುಲೆಟಿನ್ ಬಿಬಿಎಂಪಿ ಮಾತ್ರವಲ್ಲ ಇಡೀ ರಾಜ್ಯವೇ ಹೌಹಾರಿ ಕೂರುವಂತೆ ಮಾಡಿದೆ. ಹೀಗಾಗಿ ಹೇಗಾದ್ರು ಮಾಡಿ ಸಿಲಿಕಾನ್ ಸಿಟಿ ಸೇರಿದಂತೆ ರಾಜ್ಯದಲ್ಲಿ ಸೋಂಕು ಕಡಿವಾಣಕ್ಕೆ ಇನ್ನಿಲ್ಲದ ಕಸರತ್ತು ನಡೆಸಲಾಗ್ತಿದೆ. ಈತನ್ಮಧ್ಯೆ ಸೋಮವಾರ ಬಿಬಿಎಂಪಿ ಆಯುಕ್ತ ಗೌರವ್ ಗುಪ್ತ ಎಲ್ಲಾ ವಾರ್ಡ್ ಮಟ್ಟದ ನೋಡಲ್ ಅಧಿಕಾರಿಗಳು, ಸೇರಿ ಇನ್ನಿತರ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ರು.‌

ಜನರು ಎಚ್ಚೆತ್ತಕೊಂಡಿಲ್ಲಾಂದ್ರೆ ಲಾಕ್ ಡೌನ್.. ಮತ್ತೆ ಲಾಕ್‌ ಸುಳಿವು ಕೊಟ್ಟ ಬಿಬಿಎಂಪಿ ಕಮಿಷನರ್.!!

ಸಭೆ ಬಳಿಕ‌ ಮಾತನಾಡಿದ ಆಯುಕ್ತರು, ನಗರದಲ್ಲಿ ಕೋವಿಡ್ ಲಸಿಕೆ ಅಭಿಯಾನವನ್ನು ಪ್ರತಿ ನಿತ್ಯ 35ರಿಂದ 70 ಸಾವಿರಕ್ಕೆ ಏರಿಸುವ ಕೆಲಸ ಆಗಲಿದೆ. ಹೀಗಾಗಿ ಲಸಿಕೆಗೆ ತುಂಬಾ ಬೇಡಿಕೆ ಇದೆ. ಹೆಚ್ಚಿನ ಲಸಿಕೆ ಅಗತ್ಯವಿರೋದ್ರಿಂದ ಕೇಂದ್ರದ ಜೊತೆ ಮಾತನಾಡಿದ್ದು, ಲಸಿಕೆ ತರೆಸಿಕೊಳ್ಳಲಾಗುತ್ತೆ ಎಂದರು. ಅಲ್ಲದೇ ದಿನೇ‌ ದಿನೆ‌ ಸೋಂಕು ಹೆಚ್ಚಾಗ್ತಿದ್ದು ನಗರ ವ್ಯಾಪ್ತಿಯಲ್ಲಿ ಬೆಡ್‌ಗಳ ಕೊರತೆ ಕಾಣುತ್ತಿದೆ.‌ ಇದೆಲ್ಲದಕ್ಕೂ ಸೂಕ್ತ ವ್ಯವಸ್ಥೆಯನ್ನು ಪಾಲಿಕೆ ಮಾಡಿಕೊಳ್ಳುತ್ತಿದೆ.

ಜೊತೆಗೆ  ಕೋವಿಡ್ ಅನ್ನು ಸರ್ಮಥವಾಗಿ ನಿಭಾಯಿಸುವಂತ ಎಲ್ಲಾ ಕ್ರಮಗಳನ್ನು ಪಾಲಿಕೆ ವತಿಯಿಂದ ಕೈಗೊಳ್ಳಲಾಗಿದೆ ಎಂದರು. ಅಲ್ದೆ ಈಗಲೂ ಜನರು ಎಚ್ಚೆತ್ತುಕೊಂಡಿಲ್ಲಾಂದ್ರೆ ಲಾಕ್ ಡೌನ್ ಆಗುತ್ತೆ ಅಂತ ಲಾಕ್ ಡೌನ್ ಆಗುವ ಸುಳಿವು ಕೊಟ್ಟರು.

ಏಪ್ರಿಲ್ ಅಂತ್ಯದಲ್ಲಿ ವಿಸ್ಫೋಟ.. ಮತ್ತೆ ಎದುರಾಗುತ್ತಾ ಬೆಡ್ & ಸೂಕ್ತ ಚಿಕಿತ್ಸೆಗಾಗಿ ಪರದಾಟ.!?ನಗರದಲ್ಲಿ ಕೋವಿಡ್ ಹರಡುವಿಕೆ ಪ್ರತಿನಿತ್ಯ ಏಳು ಸಾವಿರದ ಗಡಿ ದಾಟಿದೆ. ತಾಂತ್ರಿಕ ಸಲಹಾ ಸಮಿತಿ ಕೊಟ್ಟಿರುವ ಸಲಹೆ ಪ್ರಕಾರ ಏಪ್ರಿಲ್ ಅಂತ್ಯಕ್ಕೆ ನಗರದಲ್ಲಿ ಸೋಂಕು ಅನೂಹ್ಯವಾಗಿ ದಾಖಲಾಗಲಿದ್ದು, ಮತ್ತೊಮ್ಮೆ ಲಾಕ್ ಡೌನ್ ಆಗುವ ಸಾಧ್ಯತೆ ಇದೆ. ಹೀಗಾಗಿ ಪರಿಸ್ಥಿತಿಯನ್ನು ಹತೋಟಿಗೆ ತೆಗೆದುಕೊಳ್ಳಲು ಬಿಬಿಎಂಪಿ ಸಭೆ ನಡೆಸಿ ತಂತ್ರ ರೂಪಿಸುತ್ತಿದೆ.

ಮತ್ತೊಂದೆಡೆ ಡಿಸಿಎಂ‌ ಅಶ್ವಥ್ ನಾರಾಯಣ್ ಸಹ ಪಶ್ಚಿಮ ವಲಯದಲ್ಲಿ ಅಧಿಕಾರಿಗಳು ಸೇರಿ ಇನ್ನಿತರ ಅಧಿಕಾರಿಗಳೊಂದಿಗೆ ಮಲ್ಲೇಶ್ವರಂ ನ ಬಿಬಿಎಂಪಿ ಕಚೇರಿಯಲ್ಲಿ ಸಭೆ ನಡೆಸಿದರು.

ಸಭೆಯಲ್ಲಿ ಕೊರೊನಾ ಕಂಟ್ರೋಲ್‌ಗೆ ಅಗತ್ಯವಿರುವ ಎಲ್ಲಾ ಕ್ರಮಗಳನ್ನ ಕೈಗೊಳ್ಳೊದರ ಬಗ್ಗೆ ನಿರ್ಧಾರ ಮಾಡಲಾಗಿದೆ. ಅಲ್ಲದೇ ವಲಯದಲ್ಲಿ ಪ್ರತಿನಿತ್ಯ 6 ಸಾವಿರ ಕೋವಿಡ್ ಟೆಸ್ಟ್ ಗಳನ್ನ ನಡೆಸಲಾಗ್ತಿತ್ತಿತ್ತು.‌ ಇದೀಗ ಅದನ್ನ 10 ಸಾವಿರಕ್ಕೆ ಹೆಚ್ಚಿಸುವ ಕೆಲಸ ಆಗಿದೆ. ಇದರ ಜೊತೆಗೆ ಮನೆಗಳಲ್ಲಿಯೇ ಕೋವಿಡ್ ಟೆಸ್ಟ್ ಮಾಡಿ, ಕ್ವಾರಂಟೈನ್ ಮಾಡೋಕು ಪಾಲಿಕೆ ತಯಾರಿ ಮಾಡಿಕೊಂಡಿದೆ.

ಈ ಬಗ್ಗೆ ಜನರಿಗೆ ಮಾಹಿತಿ ತಿಳಿಯುವ ಸಲುವಾಗಿ ಮನೆಮನೆಗೆ ಪಾಂಪ್ಲೆಟ್ ಹಂಚಿಕೆ ಮಾಡಲಾಗುತ್ತೆ ಹಾಗೂ ಸೋಷಿಯಲ್‌ ಮೀಡಿಯಾದಲ್ಲೂ ಮಾಹಿತಿ ನೀಡುವ ಕೆಲಸಕ್ಕೆ ಪಾಲಿಕೆ ತಯಾರಾಗ್ತಿದೆ ಎಂದು ಡಿಸಿಎಂ ಅಶ್ವಥ್ ನಾರಾಯಣ ಮಾಹಿತಿ ನೀಡಿದರು.

ಇದನ್ನೂ ಓದಿ: ಹೆಲಿಟೂರಿಸಂಗೆ ನನ್ನ ವಿರೋಧ ಇದೆ, ಪ್ರವಾಸೋದ್ಯಮ ಇಲಾಖೆಯವರು ಕಾಗೆ ಹಾರಿಸಬಾರದು; ಪ್ರತಾಪ್‌ಸಿಂಹ

ಕೊರೋನಾ‌ ಬೇವು : ಲಸಿಕೆ‌ ಬೆಲ್ಲ - ಸಚಿವ ಸುಧಾಕರ್.!!

ಇದರ ಜೊತೆಗೆ ಸದ್ಯದ ಸ್ಥಿತಿಗತಿ ಬಗ್ಗೆ ಅವಲೋಕನ ಮಾಡಿರುವ ಆರೋಗ್ಯ ಸಚಿವ ಸುಧಾಕರ್ ರೆಡ್ಡಿ, ಲಾಕ್ಡೌನ್ ಮಾಡ್ತೀವಿ ಅಂತ ನಾವು ಹೇಳಿಲ್ಲ. ಕೈ ಮೀರಿದ್ರೆ ನಾವು ಅಸಹಾಯಕರಾಗುತ್ತೇವೆ. ಆ ಸ್ಥಿತಿ ಬಾರದಂತೆ ಜನ ನಿಗಾ ವಹಿಸಬೇಕು. ಲಾಕ್ ಡೌನ್ ಎಲ್ಲಾ ಜನರ ಕೈಯಲ್ಲೇ ಇದೆ. ಯುಗಾದಿಯನ್ನ ನೀವು ಇದ್ದಲ್ಲೇ ಆಚರಿಸಿ. ಬೇವು ಕೋವಿಡ್, ಬೆಲ್ಲ ಲಸಿಕೆ ಅಂತ ತಳಮಳ ವ್ಯಕ್ತಪಡಿಸಿದರು.‌

ಕಳೆದ ವರ್ಷ ಕಾಡಿದ್ದ ಕೊರೊನಾ ಈ ಬಾರಿ ಕಂಟ್ರೋಲ್ ಗೆ ತರಲಾಗುತ್ತೆ ಎಂದಿದ್ದ ಸರ್ಕಾರ ಹಾಗೂ ಬಿಬಿಎಂಪಿ ಪ್ಲಾನ್ ಟುಸ್ ಆಗಿದೆ. ಇದರ ನಡುವೆ ಡೋಸ್ ಗಳಿದ್ರೂ ಏನು ಕೆಲಸ ಮಾಡ್ತಿಲ್ಲ ಅನ್ನೋ ಆರೋಪವೂ ಇದೆ. ಇಷ್ಟೆಲ್ಲದರ ಮಧ್ಯೆ ಮುಂದಿನ ದಿನಗಳಲ್ಲಿ ಸುನಾಮಿ ಅಲೆಯ ಪ್ರಭಾವ ನಿರೀಕ್ಷೆಗೂ ಮೀರಿ ಬರಲಿದೆ ಅನ್ನೋ ತಾಂತ್ರಿಕ ಸಲಹಾ ಸಮಿತಿ ಲೆಕ್ಕಾಚಾರವಾಗಿದ್ದು, ಲಾಕ್ ಡೌನ್ ಗಾಳಿಯೂ ಸುಳಿದಾಡುತ್ತಿದೆ.‌ ಈಗಾಗಿ ಎಲ್ಲಾ ಊಹೆ ಸುಳ್ಳಾಗಲಿ ಅನ್ನೋದು ಜನ ಸಾಮಾನ್ಯರ ಆಶಯವಾಗಿದೆ.

(ವರದಿ - ಆಶಿಕ್ ಮುಲ್ಕಿ)
Published by: MAshok Kumar
First published: April 12, 2021, 8:29 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories