ಬಿಡದಿಯ ಬಾಷ್ ಕಂಪನಿಯಲ್ಲಿ ಕೊರೋನಾ ಸ್ಫೋಟ; 62ಕ್ಕೂ ಹೆಚ್ಚು ಸಿಬ್ಬಂದಿಗೆ ಸೋಂಕು

ದಿನಕ್ಕೆ 3 ಶಿಫ್ಟ್ ನಂತೆ ಬಾಷ್ ಕಂಪನಿಯಲ್ಲಿ ಕಾರ್ಯ ನಿರ್ವಹಣೆ ಮಾಡಲಾಗ್ತಿದೆ. ಕಂಪನಿಯಲ್ಲಿ ಕೊರೋನಾ ಸೋಂಕು ಹೆಚ್ಚುತ್ತಿದ್ದರೂ ಕೆಲಸಕ್ಕೆ ರಜೆ ಇಲ್ಲ.

news18-kannada
Updated:July 4, 2020, 8:38 AM IST
ಬಿಡದಿಯ ಬಾಷ್ ಕಂಪನಿಯಲ್ಲಿ ಕೊರೋನಾ ಸ್ಫೋಟ; 62ಕ್ಕೂ ಹೆಚ್ಚು ಸಿಬ್ಬಂದಿಗೆ ಸೋಂಕು
ಬಿಡದಿಯಲ್ಲಿರುವ ಬಾಷ್ ಕಂಪನಿ
  • Share this:
ರಾಮನಗರ (ಜು. 4): ರಾಮನಗರ ಜಿಲ್ಲೆಯ ಬಿಡದಿಯ ಬಾಷ್ ಕಂಪನಿಯಲ್ಲಿ ಕೊರೋನಾ ಮಹಾ ಸ್ಫೋಟವಾಗಿದ್ದು, 62 ಜನರಿಗೆ ಕೊರೋನಾ ಪಾಸಿಟಿವ್ ಪತ್ತೆಯಾಗಿದೆ. 3,200 ಜನ ಕಂಪನಿಯಲ್ಲಿ ಕಾರ್ಯ ನಿರ್ವಹಣೆ ಮಾಡುತ್ತಿದ್ದು, ಈ ಪೈಕಿ 762 ಜನರಿಗೆ ಈವರೆಗೆ ಕೊರೋನಾ ಟೆಸ್ಟ್ ಮಾಡಲಾಗಿದೆ. 182 ಜನ ಪ್ರಾಥಮಿಕ ಸಂಪರ್ಕದಡಿಯಲ್ಲಿ ಕ್ವಾರಂಟೈನ್ ಮಾಡಲಾಗಿದ್ದು, 62ರಲ್ಲಿ ಓರ್ವ ಕೊರೋನಾ ಸೋಂಕಿತ ಗುಣಮುಖ ಎಂಬ ಮಾಹಿತಿ ಲಭ್ಯವಾಗಿದೆ.

62 ಜನರ ಜೊತೆಗೆ ಮತ್ತಷ್ಟು ಉದ್ಯೋಗಿಗಳಿಗೆ ಸೋಂಕು ಹರಡಿರುವ ಸಾಧ್ಯತೆ ಹೆಚ್ಚಿದೆ. ಸದ್ಯ ಸೋಂಕಿತರು ಬೆಂಗಳೂರಿನ ನಿಗದಿತ ಕೋವಿಡ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ಶಿಫ್ಟ್ ಆಗಿದ್ದಾರೆ. ಇನ್ನು ಕಂಪನಿಯಲ್ಲಿ ಕೊರೋನಾ ಸೋಂಕು ಹೆಚ್ಚುತ್ತಿದ್ದರೂ ಕೆಲಸಕ್ಕೆ ರಜೆ ಇಲ್ಲ. ದಿನಕ್ಕೆ 3 ಶಿಫ್ಟ್ ನಂತೆ ಬಾಷ್ ಕಂಪನಿಯಲ್ಲಿ ಕಾರ್ಯ ನಿರ್ವಹಣೆ ಮಾಡಲಾಗ್ತಿದೆ. ಈ ಬಗ್ಗೆ ಕಂಪನಿಯ ಉದ್ಯೋಗಿಗಳು ನ್ಯೂಸ್ 18 ಗೆ ಮಾಹಿತಿ ನೀಡಿ, ನಮಗೆ ಕೆಲಸ ಮಾಡಲು ಭಯವಾಗುತ್ತಿದೆ. ಕಂಪನಿಯನ್ನು ಲಾಕ್ ಡೌನ್ ಮಾಡಲಿ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Bangalore Coronavirus: ಬೆಂಗಳೂರಿನ 73 ಖಾಸಗಿ ಆಸ್ಪತ್ರೆಗಳಲ್ಲಿನ್ನು ಕೊರೋನಾಗೆ ಚಿಕಿತ್ಸೆ; ರಾಜ್ಯ ಸರ್ಕಾರ ಆದೇಶ

ಇನ್ನು, ಈ ಹಿಂದೆ ಟೊಯೋಟಾ ಕಂಪನಿಯಲ್ಲೂ ಕೊರೋನಾ ಕಾಣಿಸಿಕೊಂಡಿದ್ದು, ಸದ್ಯ 9 ಜನರು ಸೋಂಕಿಗೆ ಒಳಗಾಗಿದ್ದಾರೆ. ಎರಡು ದಿನಗಳ ಕಾಲ ಕಂಪನಿಯನ್ನು ಲಾಕ್ ಡೌನ್ ಮಾಡಿ ನಂತರ ಮೂರು  ಶಿಫ್ಟ್ ಇದ್ದಿದ್ದನ್ನು ಒಂದು ಶಿಫ್ಟ್ ಗೆ ಕಡಿತ ಮಾಡಿ ಕೆಲಸ ಪ್ರಾರಂಭಿಸಿದ್ದಾರೆ. ಅಲ್ಲಿಯೂ 12 ಸಾವಿರಕ್ಕೂ ಹೆಚ್ಚು ಜನ ಕಾರ್ಮಿಕರು ಕಾರ್ಯ ನಿರ್ವಹಿಸುತ್ತಾರೆ. ಇನ್ನು ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ ಈ ಬಗ್ಗೆ ಮಾಹಿತಿ ನೀಡಿದ್ದು,  ಕೊರೋನಾ ಸೋಂಕಿತರಿಗೆ ಚಿಕಿತ್ಸೆ ಕೊಡಲಾಗುತ್ತದೆ. ಆದರೆ, ಕಂಪನಿಯಲ್ಲಿ ಅಗತ್ಯ ಕ್ರಮಗಳನ್ನು ಅನುಸರಿಸಿ ಕೆಲಸ ಮುಂದುವರೆಸಲಾಗುತ್ತದೆ. ಕಂಪನಿಯನ್ನು ಲಾಕ್ ಡೌನ್ ಮಾಡಲು ಸರ್ಕಾರದ ಆದೇಶ ಇಲ್ಲ ಎಂದು ತಿಳಿಸಿದ್ದಾರೆ.
Published by: Sushma Chakre
First published: July 4, 2020, 8:38 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading