HOME » NEWS » State » CORONAVIRUS BANGALORE THIS DOCTORS TEAM FIGHTING AGAINST CORONAVIRUS AND SAVING LIVES AMTV LG

Coronavirus Bangalore: ಸೂಕ್ತ ಸಮಯಕ್ಕೆ ಚಿಕಿತ್ಸೆ ಸಿಗದ ಸೋಂಕಿತರ ಪಾಲಿಗೆ ಇವರೇ ದೇವರು...!

ಕೋವಿಡ್ ಅಪ್ಪಳಿಸಿದ ಹಿನ್ನೆಲೆ ಸಂಪೂರ್ಣವಾಗಿ ಕೋವಿಡ್ ರೋಗಿಗಳನ್ನೇ ಟ್ರೀಟ್ ಮಾಡ್ತಿದ್ದಾರೆ ಇವರು. ಅಂತರಾಷ್ಟ್ರೀಯ ವೈದ್ಯಕೀಯ ಸಂಸ್ಥೆಗಳಲ್ಲಿ ಅನುಭವ ಹೊಂದಿರುವ ನುರಿತ ವೈದ್ಯರಿಂದ ಚಿಕಿತ್ಸೆ ಕೊಡಲಾಗ್ತಿದೆ. 24*7 ಮಾದರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಈ ಸಂಸ್ಥೆಯಲ್ಲಿ  30 ನರ್ಸ್‌ಗಳು, 12 ನುರಿತ ವೈದ್ಯರು ಹಾಗೂ ಅತ್ಯಾಧುನಿಕ ರಡಾರ್ ಟೆಕ್ನಾಲಜಿ ಬಳಸಲಾಗ್ತಿದೆ.

news18-kannada
Updated:April 20, 2021, 9:31 AM IST
Coronavirus Bangalore: ಸೂಕ್ತ ಸಮಯಕ್ಕೆ ಚಿಕಿತ್ಸೆ ಸಿಗದ ಸೋಂಕಿತರ ಪಾಲಿಗೆ ಇವರೇ ದೇವರು...!
ವೈದ್ಯರ ತಂಡ
  • Share this:
ಬೆಂಗಳೂರು(ಏ.20): ಕೊರೋನಾ ಕಬಂಧಬಾಹುವಿನಲ್ಲಿದೆ ಕರ್ನಾಟಕ. ಬೆಂಗಳೂರಿನಲ್ಲೂ ಕೊರೋನಾ ರಣಕೇಕೆ ಹಾಕ್ತಿದೆ. ದಿನೇ ದಿನೇ ಸೋಂಕು ಊಹೆಗೂ ಮೀರಿ ಪತ್ತೆಯಾಗ್ತಿದೆ. ಸೋಂಕು ನಿಯಂತ್ರಣಕ್ಕೆ ಬಾರದೆ ಜನರು ಪರದಾಡ್ತಿದ್ದಾರೆ‌. ಇದರ ನಡುವೆ ಇಲ್ಲೊಂದು ವೈದ್ಯರ ತಂಡ ಕೊರೋನಾಗೆ ಸೈಲೆಂಟ್ ಮುಹೂರ್ತ ಇಡ್ತಿದ್ದಾರೆ.

ಒಂದೆಡೆ ಕೊರೋನಾ ಜನರನ್ನು ಹಿಂಡಿ ಹಿಪ್ಪೆಮಾಡ್ತಿದೆ. ಕೊರೋನಾ ಹೊಡೆತಕ್ಕೆ ಜನರು ಕೈಲಾಸವನ್ನೇ ನೋಡ್ತಿದ್ದಾರೆ. ಇದರ ನಡುವೆ ಸೈಲೆಂಟಾಗಿ ಜನರಿಗೆ ಕೊರೋನಾದಿಂದ ಮುಕ್ತಿ ಕೊಡಿಸಲು ಇಲ್ಲೊಂದು ಗುಂಪು ಕೆಲಸ ಮಾಡ್ತಿದೆ. ಹೌದು... ಒಂದು ಕೋಣೆಯಲ್ಲಿ ಕೂತು ಸೋಂಕಿತರಿಗೆ ಚಿಕಿತ್ಸೆ ನೀಡ್ತಿದೆ ಡಾಕ್ಟರ್‌ಗಳ ಒಂದು ಗುಂಪು. ರಡಾರ್ ಎನ್ನುವ ತಂತ್ರಜ್ಞಾನ ಬಳಸಿ ಸೋಂಕಿತರಿಗೆ ಚಿಕಿತ್ಸೆ ನೀಡಲಾಗ್ತಿದೆ. ನಗರದ ಕ್ಲೌಡ್ ಫಿಸೀಶಿಯನ್ ಎಂಬ ವೈದ್ಯಕೀಯ ಸಂಸ್ಥೆ ಕೊರೋನಾ ಜೊತೆ ವಾರ್ ನಡೆಸ್ತಿದ್ದಾರೆ. ದೇಶದ ಒಟ್ಟು 10 ರಾಜ್ಯಗಳಲ್ಲಿನ ಸೋಂಕಿತರಿಗೆ ಬೆಂಗಳೂರಿನಿಂದಲೇ ಚಿಕಿತ್ಸೆ ನೀಡ್ತಿದೆ ಈ ವೈದ್ಯರ ದಂಡು.‌ ಕರ್ನಾಟಕ, ಮಹಾರಾಷ್ಟ್ರ, ಲೇಹ್ ಲಡಾಕ್, ಕೇರಳ, ತಮಿಳು ನಾಡು, ಗುಜರಾತ್ ಸೇರಿದಂತೆ 10 ರಾಜ್ಯದಲ್ಲಿನ ಕೊರೋನಾ ಸೋಂಕಿತರಿಗೆ ಚಿಕಿತ್ಸೆ ಈವರೆಗೆ ಇವರು ನೀಡಿದ್ದಾರೆ.

ಕ್ಲೌಡ್ ಫಿಸೀಶಿಯನ್ ರಾಜ್ಯದಲ್ಲಿನ‌ 10 ಜಿಲ್ಲೆಗಳ ಆಸ್ಪತ್ರೆಗಳಲ್ಲಿರುವ ಸೋಂಕಿತರಿಗೂ ಚಿಕಿತ್ಸೆ ಕೊಡ್ತಿದೆ. ಬೆಂಗಳೂರು, ಬೀದರ್, ಚಿತ್ರದುರ್ಗ, ರಾಮನಗರ, ಮೈಸೂರು, ಶಿವಮೊಗ್ಗ ಮುಂತಾದ ಜಿಲ್ಲೆಗಳಲ್ಲಿರುವ ಗಂಭೀರ ಪ್ರಕರಣಗಳಿಗೆ ಇವರಿಂದ ಟ್ರೀಟ್ಮೆಂಟ್ ನಡೀತಿದೆ. ಕ್ಲೌಡ್ ಫಿಸೀಶಿಯನ್ ನ ತಜ್ಞ ವೈದ್ಯರ ಗುಂಪು ಈವರೆಗೆ 2,700 ಮಂದಿ ಸೋಂಕಿತರನ್ನು ಸಾವಿನಿಂದ ಪಾರು ಮಾಡಿದ್ದಾರೆ. ರಡಾರ್ ಎಂಬ ಟೆಕ್ನಾಲಜಿ ಬಳಸಿ ತಜ್ಞ ವೈದ್ಯರ ಅಭಾವ ಇರುವ ಆಸ್ಪತ್ರೆಗಳ ಸೋಂಕಿತರಿಗೆ ಚಿಕಿತ್ಸೆ ನೀಡಲಾಗ್ತಿದೆ. ಅಂದಹಾಗೆ 2017ರಲ್ಲಿ ಆರಂಭಗೊಂಡ ವೈದ್ಯಕೀಯ ಸಂಸ್ಥೆ ಇದು.

ಘಟಪ್ರಭಾ ಬಲದಂಡೆ ನೀರು ಹಂಚುವ ಕಾಲುವೆ ನಿರ್ಮಾಣ; 21 ಗುಂಟೆ ಭೂಸ್ವಾಧೀನಕ್ಕೆ 2 ಕೋಟಿ 79 ಲಕ್ಷ ಪರಿಹಾರ ಮಂಜೂರು

ಏನಿದು ರಡಾರ್ ತಂತ್ರಜ್ಞಾನ.!?

  • ದೇಶದ ಯಾವುದೇ ಮೂಲೆಯಲ್ಲಿರುವ ಆಸ್ಪತ್ರೆಗಳಲ್ಲಿ ವೈದ್ಯರು ಇಲ್ಲದಿದ್ದರೆ ಇವರ ಕೆಲಸ ಶುರು.
  • ಇಲ್ಲೇ ಬೆಂಗಳೂರಲ್ಲಿ ಕೂತು ಕ್ಯಾಮ್ ಮೂಲಕ ಅಲ್ಲಿನ ನರ್ಸಿಂಗ್ ಸಿಬ್ಬಂದಿಗಳನ್ನು ಬಳಸಿ ರೋಗಿಗೆ ಚಿಕಿತ್ಸೆ.

  • ಡಾಕ್ಟರ್ ಭೌತಿಕವಾಗಿ ಇರುವ ರೀತಿಯಲ್ಲೇ ಚಿಕಿತ್ಸೆ ನೀಡಲಾಗುತ್ತೆ.

  • ಇದನ್ನು ರಡಾರ್ ಎಂಬ ಸಾಫ್ಟ್ವೇರ್ ಬಳಸಿ ಮಾನಿಟರ್ ಮಾಡಲಾಗುತ್ತೆ.

  • ರಡಾರ್ ನಲ್ಲಿ ರೋಗಿಯ ಎಲ್ಲಾ ಹಾಗುಹೋಗುಗಳ ಕುರಿತು ಮಾಹಿತು ಪಡೆದು ಸೂಕ್ತ‌ ಚಿಕಿತ್ಸೆ.

  • ಈ ಮಾದರಿಯಲ್ಲಿ ಈಗಾಗಲೇ 17,000 ರೋಗಿಗಳಿಗೆ ಚಿಕಿತ್ಸೆ ನೀಡಲಾಗಿದೆ.

  • ಈವರೆಗೆ 2,700 ಗಂಭೀರವಾಗಿರುವ ಕೊರೋನಾ ಸೋಂಕಿತರನ್ನು ಈ ಟೆಕ್ನಾಲಜಿ ಮೂಲಕ ಚಿಕಿತ್ಸೆ ನೀಡಿ ಬದುಕುಳಿಸಲಾಗಿದೆ.


ಕೋವಿಡ್ ಅಪ್ಪಳಿಸಿದ ಹಿನ್ನೆಲೆ ಸಂಪೂರ್ಣವಾಗಿ ಕೋವಿಡ್ ರೋಗಿಗಳನ್ನೇ ಟ್ರೀಟ್ ಮಾಡ್ತಿದ್ದಾರೆ ಇವರು. ಅಂತರಾಷ್ಟ್ರೀಯ ವೈದ್ಯಕೀಯ ಸಂಸ್ಥೆಗಳಲ್ಲಿ ಅನುಭವ ಹೊಂದಿರುವ ನುರಿತ ವೈದ್ಯರಿಂದ ಚಿಕಿತ್ಸೆ ಕೊಡಲಾಗ್ತಿದೆ. 24*7 ಮಾದರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಈ ಸಂಸ್ಥೆಯಲ್ಲಿ  30 ನರ್ಸ್‌ಗಳು, 12 ನುರಿತ ವೈದ್ಯರು ಹಾಗೂ ಅತ್ಯಾಧುನಿಕ ರಡಾರ್ ಟೆಕ್ನಾಲಜಿ ಬಳಸಲಾಗ್ತಿದೆ.

ಕೊರೋನಾ ಮೊದಲ ಅವಧಿಯಲ್ಲಿ ರಾಜ್ಯ ಸರ್ಕಾರದ ಜೊತೆ ಕೆಲಸ ಮಾಡಿದ್ದ ಕ್ಲೌಡ್ ಫಿಸೀಶಿಯನ್ ಸಂಸ್ಥೆ, ಸರ್ಕಾರದ ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡಿ ಬದುಕುವಂತೆ ಮಾಡಿದ್ದಾರೆ. ಸದ್ಯ ಕೊರೋನಾ‌ ರೋಗಿಗಳನ್ನೇ ಟಾರ್ಗೆಟ್ ಮಾಡಿರುವ ಇವರು ಗಂಭೀರ ಸಮಸ್ಯೆಗಳಿರುವ ಸೋಂಕಿತರಿಗೆ ವರ್ಚುವಲ್ ಮೂಲಕ‌ ಚಿಕಿತ್ಸೆ ಕೊಡಮಾಡುತ್ತಾರೆ.

ಇದೀಗ ಕೊರೋನಾ ರಣಕೇಕೆಯ ಮಧ್ಯೆ ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಪರಿಸ್ಥಿತಿಯನ್ನು ಎದುರಿಸುತ್ತಿರುವ ಇವರು ಕೊರೋನಾ ನಿರ್ಮೂಲನೆಯ ಪಣ ತೊಟ್ಟಿದ್ದಾರೆ.
Published by: Latha CG
First published: April 20, 2021, 9:26 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories