Coronavirus: ಬೆಳಗಾವಿಯ ಬಾವನ ಸವದತ್ತಿ ಗ್ರಾಮದಲ್ಲಿ ಮತ್ತೆ 16 ಮಂದಿಗೆ ಕೊರೋನಾ; 41ಕ್ಕೇರಿದ ಸೋಂಕಿತರ ಸಂಖ್ಯೆ

ಒಂದೇ ವಾರದಲ್ಲಿ ಬಾವನ ಸವದತ್ತಿ ಗ್ರಾಮದಲ್ಲಿ ಒಟ್ಟು  41 ಪ್ರಕರಣಗಳು ಕಾಣಿಸಿಕೊಂಡ ಹಿನ್ನಲೆ, ಇಡೀ ತಾಲೂಕಾಡಳಿತವೇ ಗ್ರಾಮದಲ್ಲಿ ಬೀಡು ಬಿಟ್ಟಿದೆ. ಮನೆ ಮನೆಗೆ ತೆರಳಿ ಸರ್ವೆ ಕಾರ್ಯ ನಡೆಸಲಾಗುತ್ತದೆ. 

ಪ್ರಾತಿನಿಧಿಕ ಚಿತ್ರ.

ಪ್ರಾತಿನಿಧಿಕ ಚಿತ್ರ.

  • Share this:
ಚಿಕ್ಕೋಡಿ(ಮಾ.27): ಕೊರೋನಾ ಮಹಾಮಾರಿ ಎರಡನೆ ಅಲೆ ಕ್ರಮೇಣವಾಗಿ ಹೆಚ್ಚುತ್ತಲೇ ಇದೆ. ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೋನಾ ಪಾಸಿಟಿವ್ ಸಂಖ್ಯೆ ಹೆಚ್ಚುತ್ತಿದ್ದು, ಇದು ಜನರಲ್ಲಿ ಆತಂಕ ಸೃಷ್ಟಿಸಿದೆ. ಇನ್ನು ಮಹಾರಾಷ್ಟ್ರದ ಪಕ್ಕದಲ್ಲೆ ಇರುವ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಬಾವನ ಸವದತ್ತಿ ಗ್ರಾಮದಲ್ಲಿ ನಿನ್ನೆ ಒಂದೇ ದಿನದಲ್ಲಿ 16 ಜನರಲ್ಲಿ ಕೊರೋನಾ ಪಾಸಿಟಿವ್ ಕಾಣಿಸಿಕೊಂಡಿದ್ದು, ಇಡೀ ಗ್ರಾಮಕ್ಕೆ ಕೊರೋನಾ ಆತಂಕ ಕಾಣಿಸಿಕೊಂಡಿದೆ.

ಹೌದು, ಇದೇ ಗ್ರಾಮದಲ್ಲಿ ಒಂದು ವಾರದ ಹಿಂದಷ್ಟೇ ಒಂದೆ ಕುಟುಂಬ 25 ಜನರಲ್ಲಿ ಕೊರೋನಾ ಪಾಸಿಟಿವ್ ಕಾಣಿಸಿಕೊಂಡಿತ್ತು. ಅವತ್ತಿನಿಂದಲೂ ಗ್ರಾಮದಲ್ಲಿ ಸ್ವಾಬ್ ಪಡೆದು 25 ಜನರಿಗೆ ಹೋಂ ಕ್ವಾರಂಟೈನಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿತ್ತು. ಆದ್ರೆ ವಾರ ಕಳೆಯುವುದರೊಳಗಾಗಿ ಮತ್ತೆ 16 ಜನರಲ್ಲಿ ಕೊರೋನಾ ಪಾಸಿಟಿವ್ ಕಾಣಿಸಿಕೊಂಡಿದ್ದು, ಅದರಲ್ಲಿ 11 ಜನ ವಿದ್ಯಾರ್ಥಿಗಳೇ ಆಗಿದ್ದಾರೆ. ಪರಿಣಾಮ ಇಡೀ ಗ್ರಾಮದಲ್ಲಿ ಈಗ ಸೋಂಕಿನ ಭೀತಿ ಆರಂಭವಾಗಿದೆ.

ಇನ್ನು ವಿದ್ಯಾರ್ಥಿಗಳಲ್ಲಿ ಕೊರೋನಾ ಕಾಣಿಸಿಕೊಂಡ ಹಿನ್ನೆಲೆ ಶಾಲೆಗಳಲ್ಲಿಯು ಆತಂಕ ಮನೆ ಮಾಡಿದೆ. 11 ಜನ ವಿದ್ಯಾರ್ಥಿಗಳು 8, 9, ಹಾಗೂ 10 ನೆ ತರಗತಿಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರು. ಕೊರೋನಾ ಪಾಸಿಟಿವ್ ಕಾಣಿಸಿಕೊಂಡಿರುವ ಹಿನ್ನಲೆ ಇಡೀ ಶಾಲೆಗೆ ಈಗ ರಜೆ ಘೋಷಣೆ ಮಾಡಲಾಗಿದೆ. ಶಾಲೆಗೆ ಬರುತ್ತಿದ್ದ ಎಲ್ಲಾ ವಿದ್ಯಾರ್ಥಿಗಳಿಗೂ ಕೋವಿಡ್ ಟೆಸ್ಟ್ ನಡೆಸಲು ನಿರ್ಧಾರ ಮಾಡಲಾಗಿದೆ. ಅಲ್ಲದೆ ಪಾಸಿಟಿವ್ ಆಗಿರುವ ವಿದ್ಯಾರ್ಥಿಗಳ ಮನೆಯವರಿಗೂ ಕೋವಿಡ್ ಟೆಸ್ಟ್ ಮಾಡಲು ನಿರ್ಧರಿಸಲಾಗಿದೆ. ಇಡೀ ಶಾಲೆಯನ್ನ ಸ್ಯಾನಿಟೈಸ್ ಮಾಡಿದ ಬಳಿಕ ಪುನಃ ಶಾಲೆ ಆರಂಭಿಸುವಂತೆ ತಾಲೂಕಾಡಳಿತ ಆದೇಶ ಮಾಡಿದೆ.

ಚನ್ನಪಟ್ಟಣದ ಈ ಗ್ರಾಮಕ್ಕಿಲ್ಲ ಸರ್ಕಾರಿ ಬಸ್; ತೊಂದರೆ ಅನುಭವಿಸುತ್ತಿರುವ 65 ಕ್ಕೂ ಹೆಚ್ಚು ವಿದ್ಯಾರ್ಥಿಗಳು

ಒಂದೇ ವಾರದಲ್ಲಿ ಬಾವನ ಸವದತ್ತಿ ಗ್ರಾಮದಲ್ಲಿ ಒಟ್ಟು  41 ಪ್ರಕರಣಗಳು ಕಾಣಿಸಿಕೊಂಡ ಹಿನ್ನಲೆ, ಇಡೀ ತಾಲೂಕಾಡಳಿತವೇ ಗ್ರಾಮದಲ್ಲಿ ಬೀಡು ಬಿಟ್ಟಿದೆ. ಮನೆ ಮನೆಗೆ ತೆರಳಿ ಸರ್ವೆ ಕಾರ್ಯ ನಡೆಸಲಾಗುತ್ತದೆ. ರಾಯಬಾಗ ತಹಶೀಲ್ದಾರ ಮೋಹನ್ ಭಸ್ಮೆ ಹಾಗೂ ತಾಲೂಕು ವೈದ್ಯಾಧಿಕಾರಿ ಎಸ್. ಎಸ್. ಬಾನೆ ಭೇಟಿ ನೀಡಿ ಗ್ರಾಮದಲ್ಲಿ ಸಭೆ ನಡೆಸಿದ್ದಾರೆ. 16 ಜನರ ಪ್ರಾಥಮಿಕ ಹಾಗೂ ದ್ವೀತಿಯ ಸಂಪರ್ಕಿತರನ್ನ ಪತ್ತೆ ಹಚ್ಚಿ ಅವರಿಂದ ಸ್ವಾಬ್ ಪಡೆದು ಕೋವಿಡ್ ಟೆಸ್ಟ್ ಗೆ ಕಳಿಸಲಾಗಿದೆ. ಇನ್ನು ಪಾಸಿಟಿವ್ ಆಗಿರುವ 16 ಜನರಲ್ಲಿ ರೋಗ ಲಕ್ಷಣಗಳು ಇಲ್ಲದೆ ಇರುವ ಕಾರಣ ಹೋಂ ಕ್ವಾರಂಟೈನ ಮೂಲಕ ಚಿಕಿತ್ಸೆ ನೀಡಲಾಗುತ್ತದೆ.

ಗ್ರಾಮದ ಜಾತ್ರೆ ಹಾಗೂ ಸಂತೆ ರದ್ದು

ಇನ್ನು ಗ್ರಾಮದಲ್ಲಿ ಒಂದೇ ವಾರದಲ್ಲಿ 41 ಪ್ರಕರಣಗಳು ಬೆಳಕಿಗೆ ಬಂದಿರುವ ಹಿನ್ನಲೆ ಕೋವಿಡ್ ಆತಂಕ ಜೋರಾಗಿದ್ದು, ಗ್ರಾಮದ ಸುಗಂಧಾ ದೇವಿ ಜಾತ್ರೆಯನ್ನ ರದ್ದು ಮಾಡಲಾಗಿದೆ. ಮೊದಲು ಸಾಂಪ್ರದಾಯಿಕವಾಗಿ ಆಚರಣೆ ನಡೆಸಲು ಅನುಮತಿ ನೀಡಲಾಗಿತ್ತು. ಆದ್ರೆ ಕೋವಿಡ್ ಪ್ರಕರಣಗಳು ಹೆಚ್ಚಿದ ಹಿನ್ನಲೆ ಸಂಪೂರ್ಣ ಜಾತ್ರೆಯನ್ನ ರದ್ದು ಮಾಡಲಾಗಿದೆ. ಅಲ್ಲದೇ ಗ್ರಾಮದಲ್ಲಿ ನಡೆಯುವ ವಾರದ ಸಂತೆಗೂ ಬ್ರೇಕ್ ಹಾಕಲಾಗಿದೆ. ಸದ್ಯ ಸಾಕಷ್ಟು ಜನರ ಸ್ವಾಬ್ ಪಡೆದಿದ್ದು ಇನ್ನಷ್ಟು ಕೋವಿಡ್ ಪ್ರಕರಣಗಳು ಬೆಳಕಿಗೆ ಬರುವ ಸಾಧ್ಯತೆ ಇದೆ.
Published by:Latha CG
First published: