Haveri: ಗ್ರಾಮೀಣ ಭಾಗಕ್ಕೆ ಎಂಟ್ರಿ ಕೊಡ್ತಿದೆ ಡೆಡ್ಲಿ ಕೊರೋನಾ; ನಿರ್ಲಕ್ಷಿಸಿದರೆ ಅಪಾಯ ಗ್ಯಾರಂಟಿ..!

ಹೆಮ್ಮಾರಿ‌ ಕೊರೊನಾ ಹಾವೇರಿ ಜಿಲ್ಲೆಯ ಜನರನ್ನ ಬೆಚ್ಚಿ ಬೀಳಿಸಿದೆ. ಯಾಕಂದ್ರೆ ಜಿಲ್ಲೆಯ ಎಂಟು ತಾಲೂಕುಗಳಿಗೂ ಕೊರೊನಾ ಎರಡನೆ ಅಲೆ ಎಂಟ್ರಿ ಕೊಟ್ಟಿದೆ. ಹಾವೇರಿ, ರಾಣೆಬೆನ್ನೂರು, ಹಿರೇಕೆರೂರು, ಶಿಗ್ಗಾಂವಿ, ಸವಣೂರು ಹೀಗೆ ಜಿಲ್ಲೆಯ ಎಲ್ಲ ತಾಲೂಕುಗಳಿಗೂ ಕೊರೊನಾ‌ ಹರಡಿದೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಹಾವೇರಿ(ಮೇ 03): ಜಿಲ್ಲೆಯಲ್ಲಿ ಕೊರೋನಾ ಎರಡನೆ ಅಲೆಯ ಅಬ್ಬರ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಕಳೆದೊಂದು ತಿಂಗಳ ಹಿಂದೆ‌ ಜಿಲ್ಲೆಯಲ್ಲಿ ಒಂದು ಎರಡು ಕೊರೊನಾ ಕೇಸ್​​ಗಳು ಕಂಡುಬರುತ್ತಿದ್ದವು. ಆದ್ರೆ ಈಗ ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದಿನಕ್ಕೆ ಇನ್ನೂರರ‌ ಗಡಿ ದಾಟುತ್ತಿದೆ. ಅದ್ರಲ್ಲೂ ಜಿಲ್ಲೆಯ ಎಂಟೂ ತಾಲೂಕಿನ ಹಳ್ಳಿಗಳಿಗೆ ಕೊರೋನಾ‌ ಸೋಂಕು ವ್ಯಾಪಿಸಿದೆ. ಇದು ಗ್ರಾಮೀಣ ಪ್ರದೇಶದ ಜನರಲ್ಲಿ ಎಲ್ಲಿಲ್ಲದ‌ ಆತಂಕ‌ ಸೃಷ್ಟಿಸಿದೆ.

  ಹೆಮ್ಮಾರಿ‌ ಕೊರೊನಾ ಹಾವೇರಿ ಜಿಲ್ಲೆಯ ಜನರನ್ನ ಬೆಚ್ಚಿ ಬೀಳಿಸಿದೆ. ಯಾಕಂದ್ರೆ ಜಿಲ್ಲೆಯ ಎಂಟು ತಾಲೂಕುಗಳಿಗೂ ಕೊರೊನಾ ಎರಡನೆ ಅಲೆ ಎಂಟ್ರಿ ಕೊಟ್ಟಿದೆ. ಹಾವೇರಿ, ರಾಣೆಬೆನ್ನೂರು, ಹಿರೇಕೆರೂರು, ಶಿಗ್ಗಾಂವಿ, ಸವಣೂರು ಹೀಗೆ ಜಿಲ್ಲೆಯ ಎಲ್ಲ ತಾಲೂಕುಗಳಿಗೂ ಕೊರೊನಾ‌ ಹರಡಿದೆ. ಅದ್ರಲ್ಲೂ ಗ್ರಾಮೀಣ ಪ್ರದೇಶಗಳಿಗೆ ಎಂಟ್ರಿ ಕೊಟ್ಟಿರೋ ಕೊರೊನಾದಿಂದ ಗ್ರಾಮೀಣ ಪ್ರದೇಶಗಳ ಜನರು ಕಂಗಾಲಾಗಿದ್ದಾರೆ. ಜಿಲ್ಲೆಯ ಪ್ರತಿ ತಾಲೂಕಿನ ಎಂಟತ್ತು ಗ್ರಾಮಗಳಲ್ಲಿ ಕೊರೊನಾ‌ ಸೋಂಕು ಕಾಣಿಸಿಕೊಂಡಿದೆ. ಅದ್ರಲ್ಲೂ ಎರಡನೆ ಅಲೆ ಆರಂಭವಾದ್ಮೇಲೆ ಜಿಲ್ಲೆಯಲ್ಲಿ ಅತಿ ಹೆಚ್ಚು ಅಂದ್ರೆ ಒಂದೇ ದಿನಕ್ಕೆ 268 ಕೊರೊನಾ ಪ್ರಕರಣಗಳು ದೃಢಪಟ್ಟಿವೆ.

  ಈಗಾಗಲೆ ಜಿಲ್ಲೆಯ ಎಲ್ಲ ತಾಲೂಕುಗಳಿಗೆ ಸೋಂಕು ಹರಡಿದ್ದು, ಕೆಲವು ಗ್ರಾಮಗಳಿಗೂ ಸೋಂಕು ಎಂಟ್ರಿ ಕೊಟ್ಟಿದೆ. ಹೀಗಾಗಿ ಜಿಲ್ಲಾಡಳಿತ ಮತ್ತು ಸರಕಾರ ಗ್ರಾಮೀಣ ಪ್ರದೇಶಗಳಲ್ಲಿನ ಜನರಿಗೆ ಕೊರೊನಾ‌ ಸೋಂಕು ಹರಡೋದನ್ನ ತಡೆಯೋ ಬಗ್ಗೆ ಜಾಗೃತಿ ಮೂಡಿಸಬೇಕಿದೆ.

  ಅಂದು ಶಿಕ್ಷಕ ಇಂದು ಬಸವಕಲ್ಯಾಣ ಕ್ಷೇತ್ರದ ಶಾಸಕ...! ಜೋಳದ ವ್ಯಾಪಾರಿ, ರೈತನ‌ ಪುತ್ರನಿಗೆ ಒಲಿದ ಅದೃಷ್ಟ!

  ಕೊರೊನಾ ಎರಡನೆ ಅಲೆಯ ಅಬ್ಬರ ಶುರುವಾದ್ಮೇಲೆ ಜಿಲ್ಲೆಗೆ ಬೇರೆ ಬೇರೆ ಜಿಲ್ಲೆಗಳಿಂದ ಹಾಗೂ ಬೇರೆ ಬೇರೆ ರಾಜ್ಯಗಳಿಂದ ಸಾಕಷ್ಟು ಜನರು ಎಂಟ್ರಿ ಕೊಟ್ಟಿದ್ದಾರೆ. ಅಲ್ದೆ ಸರಕಾರ ಹದಿನಾಲ್ಕು ದಿನಗಳ ಕಾಲ ಟಫ್ ರೂಲ್ಸ್ ಜಾರಿ ಮಾಡಿದ ನಂತರದಲ್ಲಿ ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಿಂದ ನೂರಾರು ಜನರು ಜಿಲ್ಲೆಗೆ ಎಂಟ್ರಿ ಕೊಟ್ಟಿದ್ದಾರೆ. ಈಗಾಗಲೆ ಇನ್ನೂರು ಜನರು ಬೆಂಗಳೂರು ಸೇರಿದಂತೆ ಬೇರೆ ಬೇರೆ ಜಿಲ್ಲೆಗಳಿಂದ ಬಂದಿರೋದನ್ನ ಪತ್ತೆ ಮಾಡಿದೆ. ಉಳಿದಂತೆ ಗ್ರಾಮ ಪಂಚಾಯಿತಿ ಅಧಿಕಾರಿಗಳ ಮೂಲಕ ಬೇರೆ ಬೇರೆ ಜಿಲ್ಲೆಗಳಿಂದ ಬಂದಿರೋರ ಬಗ್ಗೆ ಮಾಹಿತಿ ಕಲೆ‌ ಹಾಕ್ತಿದೆ.

  ಮಾಹಿತಿ ಕಲೆ‌ ಹಾಕೋದು ಮಾತ್ರವಲ್ಲದೆ ಬೇರೆ ಬೇರೆ ಜಿಲ್ಲೆಗಳಿಂದ ಬಂದವರಿಗೆ ಆರೋಗ್ಯದಲ್ಲಿ ಏನಾದ್ರೂ ಸಮಸ್ಯೆ ಕಾಣಿಸಿಕೊಂಡ್ರೆ ತಕ್ಷಣ ಅಂಥವರ ಸ್ವ್ಯಾಬ್ ಕಲೆಕ್ಟ್ ಮಾಡಿ ಕೊರೊನಾ ಟೆಸ್ಟ್ ಮಾಡಿಸುವಂತೆ ಜಿಲ್ಲಾಡಳಿತ ತಾಲೂಕು ಅಧಿಕಾರಿಗಳ ಮೂಲಕ ಜಿಲ್ಲೆಯ ಎಲ್ಲ ಗ್ರಾಮ ಪಂಚಾಯಿತಿ ಮಟ್ಟದ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಕೊರೊನಾ ತಡೆಗೆ ಬೇಕಾದ ಎಲ್ಲ ರೀತಿಯ ಕ್ರಮಗಳನ್ನ ಜಿಲ್ಲಾಡಳಿತ ಕೈಗೊಂಡಿದೆ. ಜಿಲ್ಲಾಸ್ಪತ್ರೆ ಜೊತೆಗೆ ಜಿಲ್ಲೆಯ ಎಲ್ಲ ತಾಲೂಕು ಆಸ್ಪತ್ರೆಗಳನ್ನ ಕೋವಿಡ್ ಆಸ್ಪತ್ರೆಗಳನ್ನಾಗಿ ಮಾಡಿದೆ. ಆಕ್ಸಿಜನ್ ಸಿಲಿಂಡರ್, ರೆಮ್ ಡಿಸಿವಿರ್ ಸೇರಿದಂತೆ ಕೊರೊನಾ ಸೋಂಕು ತಡೆಯಲು ಬೇಕಾದ ಸಿದ್ಧತೆಗಳನ್ನ ಜಿಲ್ಲಾಡಳಿತ ಮಾಡಿಕೊಂಡಿದೆ.

  ಜಿಲ್ಲೆಯಲ್ಲಿ ಕೊರೊನಾ ಎರಡನೆ ಅಲೆ ಶುರುವಾದ್ಮೇಲೆ ಸಕ್ರಿಯ ಸೋಂಕಿತರ ಸಂಖ್ಯೆ 698 ಕ್ಕೆ ಏರಿದೆ. ಕೆಲವು ಗ್ರಾಮಗಳಲ್ಲಿ ಮೃತ ಕೊರೊನಾ ಸೋಂಕಿತರ ಅಂತ್ಯಕ್ರಿಯೆಯನ್ನ ಗ್ರಾಮಸ್ಥರು ಇರ್ಲಿ ಅವರ‌ ಕುಟುಂಬಸ್ಥರು ಸಹ ಮಾಡಲು ಭಯಪಟ್ಟು ಹಿಂದೇಟು ಹಾಕಿರೋ ಘಟನೆಗಳು ನಡೆದಿದೆ.

  ಒಟ್ಟಿನಲ್ಲಿ ಜಿಲ್ಲೆಯ ಎಲ್ಲ ತಾಲೂಕುಗಳ ಹಲವು ಗ್ರಾಮಗಳಿಗೆ ಕೊರೊನಾ ಸೋಂಕು ಹರಡಿದ್ದು, ಜಿಲ್ಲಾಡಳಿತ ಗ್ರಾಮೀಣ ಪ್ರದೇಶಗಳ ಜನರಲ್ಲಿ ಮನೆ ಮಾಡಿರೋ ಆತಂಕವನ್ನ ದೂರ ಮಾಡೋ‌ ನಿಟ್ಟಿನಲ್ಲಿ ಅಗತ್ಯ ಜಾಗೃತಿ ಕಾರ್ಯಕ್ರಮಗಳನ್ನ ರೂಪಿಸಬೇಕಿದೆ.

  • ವರದಿ: ಮಂಜುನಾಥ ತಳವಾರ

  Published by:Latha CG
  First published: