Corona Virus: ಚೀನಾದಲ್ಲಿ ಮಹಾಮಾರಿ ಕರೋನಾ ವೈರಸ್​ಗೆ 25 ಬಲಿ; ಬೆಂಗಳೂರಿಗರಿಗೂ ಕಾಡಿದ ಆತಂಕ

2002-2003ರಲ್ಲಿ ಸಾರ್ಸ್​ ಹೆಸರಿನ ಭೀಕರ ವೈರಸ್​ ಕಾಣಿಸಿಕೊಂಡಿತ್ತು. ಇದು 650 ಜನರನ್ನು ಬಲಿ ತೆಗೆದುಕೊಂಡಿತ್ತು. ಈಗ ಪತ್ತೆಯಾಗಿರುವ ಕರೋನಾ ವೈರಸ್​ಗೂ ಸಾರ್ಸ್​​ಗೂ ಸಾಮ್ಯತೆ ಇರುವುದರಿಂದ ವೈದ್ಯರು ಸಾಕಷ್ಟು ಆತಂಕಗೊಂಡಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಬೆಂಗಳೂರು (ಜ.24): ಚೀನಾದಲ್ಲಿ ಮಹಾಮಾರಿ ಕರೋನಾ ವೈರಸ್ 25 ಜನರನ್ನು ಬಲಿ ತೆಗೆದುಕೊಂಡಿದೆ. ಬೆಂಗಳೂರಿನಲ್ಲೂ ಚೀನಾ ದೇಶದವರಿದ್ದು, ಭಾರೀ ಆತಂಕ ಸೃಷ್ಟಿಸಿದೆ.

ಕರೋನಾ ವೈರಸ್ ತಗುಲಿರುವ 830 ಪ್ರಕರಣ ದಾಖಲಾಗಿದೆ. ಜನವರಿ 25 ಚೀನಾಗೆ ಹೊಸ ವರ್ಷ. ಹೀಗಾಗಿ, ರಜೆಯ ಮಜ ಕಳೆಯಲು ವಿಶ್ವದ ನಾನಾ ಭಾಗಕ್ಕೆ ಚೀನಾ ದೇಶದವರು ಪ್ರವಾಸಕ್ಕೆ ತೆರಳುತ್ತಿದ್ದಾರೆ. ಹೀಗಾಗಿ ವಿಶ್ವಾದ್ಯಂತ ಈ ರೋಗ ಹರಡುವ ಭೀತಿ ಎದುರಾಗಿದೆ. ಸದ್ಯ, ಪ್ರವಾಸ ರದ್ದು ಮಾಡಿ ದೇಶದಲ್ಲೇ ಉಳಿದುಕೊಳ್ಳುವಂತೆ ಸರ್ಕಾರ ಸೂಚಿಸಿದೆ.

ಕೇಂದ್ರ ಚೀನಾದ ಹುಬೈ ಭಾಗದಲ್ಲಿ 24 ಜನರು ಮೃತಪಟ್ಟರೆ ಉತ್ತರ ಚೀನಾದಲ್ಲಿ ಒಂದು ಸಾವು ಸಂಭವಿಸಿದೆ ಎಂದು ರಾಷ್ಟ್ರೀಯ ಆರೋಗ್ಯ ಇಲಾಖೆ ತಿಳಿಸಿದೆ. ಚೀನಾದ್ಯಂತ ಕರೋನಾ ವೈರಸ್ ಸಂಬಂಧಿತ 830 ಪ್ರಕರಣ ದಾಖಲಾಗಿದೆ.

2002-2003ರಲ್ಲಿ ಸಾರ್ಸ್​ ಹೆಸರಿನ ಭೀಕರ ವೈರಸ್​ ಕಾಣಿಸಿಕೊಂಡಿತ್ತು. ಇದು 650 ಜನರನ್ನು ಬಲಿ ತೆಗೆದುಕೊಂಡಿತ್ತು. ಈಗ ಪತ್ತೆಯಾಗಿರುವ ಕರೋನಾ ವೈರಸ್​ಗೂ ಸಾರ್ಸ್​​ಗೂ ಸಾಮ್ಯತೆ ಇರುವುದರಿಂದ ವೈದ್ಯರು ಸಾಕಷ್ಟು ಆತಂಕಗೊಂಡಿದ್ದಾರೆ.

ಬೆಂಗಳೂರಿನಲ್ಲೂ ಭೀತಿ:

ಚೀನಾದ ಕರೋನಾ ವೈರಸ್ ಬೆಂಗಳೂರಿಗರೂ ಆತಂಕ ಮೂಡಿಸಿದೆ. ಬೆಂಗಳೂರಿನಲ್ಲಿ ಚೀನಾದ ವಲಸಿಗರು ಸಾಕಷ್ಟು ಸಂಖ್ಯೆಯಲ್ಲಿ ವಾಸವಿದ್ದಾರೆ. ಹೀಗಾಗಿ ಈ ಬಗ್ಗೆ ಹೆಚ್ಚು ಗಮನಹರಿಸುವಂತೆ ವೈದ್ಯಾಧಿಕಾರಿಗಳಿಗೆ ಆರೋಗ್ಯ ಸಚಿವ ಶ್ರೀರಾಮುಲು ಸೂಚನೆ ನೀಡಿದ್ದಾರೆ.
First published: