HOME » NEWS » State » CORONA VIRUS KARNATAKA HERE IS THE REASON FOR INCREASING CORONAVIRUS IN BANGALORE AMTV LG

Coronavirus: ಬೆಂಗಳೂರಿನಲ್ಲಿ ಕೊರೋನಾ ಸೋಂಕು ಹೆಚ್ಚಾಗಲು ಕಾರಣವೇನು ಗೊತ್ತಾ?

ಕಳೆದ ಏಳು ದಿನಗಳಲ್ಲಿ ಸಾವನ್ನಪ್ಪಿದ ಸೋಂಕಿತರಲ್ಲಿ ಕಂಡು ಬಂದಿದ್ದು SARI ಸಮಸ್ಯೆ. ಅಂದರೆ ಉಸಿರಾಟದ ತೊಂದರೆ. ಕಳೆದೊಂದು ವಾರದಲ್ಲಿ ಕೊರೋನಾದಿಂದ ಸಾವನ್ನಪ್ಪಿದ್ದ‌ 92 ಮಂದಿಯಲ್ಲಿ ಶೇ. 80 ರಷ್ಟು ಮಂದಿಗೆ ಉಸಿರಾಟದ ತೊಂದರೆ ಇತ್ತು ಎಂದು ಆರೋಗ್ಯ ಇಲಾಖೆ ತಮ್ಮ ಬುಲೆಟಿನ್ ನಲ್ಲಿ ಹೇಳಿದೆ.

news18-kannada
Updated:March 31, 2021, 6:30 PM IST
Coronavirus: ಬೆಂಗಳೂರಿನಲ್ಲಿ ಕೊರೋನಾ ಸೋಂಕು ಹೆಚ್ಚಾಗಲು ಕಾರಣವೇನು ಗೊತ್ತಾ?
ಸಾಂದರ್ಭಿಕ ಚಿತ್ರ
  • Share this:
ಬೆಂಗಳೂರು(ಮಾ.31): ಸಾವು-ನೋವುಗಳಿಗೆ ಕೊರೋನಾ ಮತ್ತೊಮ್ಮೆ ಸೈಲೆಂಟಾಗಿ ಮುನ್ನುಡಿ ಬರೀತಿದ್ಯಾ ಅನ್ನೋ ಅನುಮಾನ ಕಾಡತೊಡಗಿದೆ. ಯಾಕಂದ್ರೆ ಒಂದು ಕಡೆ ಕೊರೋನಾ ಮರಣ ಪ್ರಮಾಣ ಜಾಸ್ತಿಯಾಗ್ತಿದ್ರೆ, ಮತ್ತೊಂದೆಡೆ SARI  ಪ್ರಕರಣಗಳು ಜಾಸ್ತಿಯಾಗ್ತಿದೆ. ಹೀಗಾಗಿ ಕೊರೋನಾ ಎರಡನೇ ಅಲೆ ಮತ್ತೊಮ್ಮೆ ಸಾವು ನೋವುಗಳಿಗೆ ಮುನ್ನುಡಿ ಬರೆಯಲಿದ್ಯಾ ಎನ್ನುವ ಶಂಕೆ ವ್ಯಕ್ತವಾಗ್ತಿದೆ.

ಕಳೆದೊಂದು ವಾರದಿಂದ ಕೊರೋನಾ ಸೈಲೆಂಟಾಗಿ ಸಾವಿಗೆ ಮುನ್ನುಡಿ ಬರೆಯೋಕೆ ಹೊರಟಂತಿದೆ. ಯಾಕಂದ್ರೆ ಕಳೆದ ಒಂದೇ ವಾರದಲ್ಲಿ ಕೊರೋನಾ ರಣಕೇಕೆಗೆ ರಾಜ್ಯದ 92 ಮಂದಿ ಸಾವನ್ನಪ್ಪಿದ್ದಾರೆ. ಜೊತೆಗೆ ಬೆಂಗಳೂರಿನಲ್ಲಿ ಮಾತ್ರ ಕಳೆದ ಒಂದು ವಾರದಲ್ಲಿ 36 ಮಂದಿ ಮೃತ ಪಟ್ಟಿದ್ದಾರೆ. ಕಳೆದ 24 ತಾಸಿನಲ್ಲಿ ಕೊರೋನಾ ಮೃತರ ಶೇಕಡಾವಾರು ಪ್ರಮಾಣ ಕೂಡ ಏರಿದೆ. ಅಂದರೆ, ಒಂದೇ ದಿನದಲ್ಲಿ 0.70%ಗೆ ರಾಜ್ಯದ ಕೊರೋನಾ ಡೆತ್ ರೇಶಿಯೋ ಹೆಚ್ಚಾಗಿದೆ.‌ ಇದೊಂದು ಆಘಾತಕಾರಿ ಸುದ್ದಿ. ಇದ್ದಕ್ಕಿದ್ದ ಹಾಗೆ ಡೆತ್ ರೇಶಿಯೋ ಹೆಚ್ಚಿರುವುದು ಮತ್ತೊಂದು ಸುತ್ತಿನ ಆತಂಕಕ್ಕೆ ಕಾರಣವಾಗಿದೆ. ಅಂದಹಾಗೆ, ಈವರೆಗೆ ಕೊರೋನಾಗೆ 12,541 ಮಂದಿಗೆ ಬಲಿಯಾಗಿದ್ದಾರೆ ರಾಜ್ಯದಲ್ಲಿ.

ಕಳೆದೊಂದು ವಾರದ ದಿನವಾರು ಕೋರೋನಾ ಮೃತರ ಸಂಖ್ಯೆ.!!
ರಾಜ್ಯ ‌   ಬೆಂಗಳೂರು
ಮಾರ್ಚ್ 30-    21           11
ಮಾರ್ಚ್ 29-     16           00
ಮಾರ್ಚ್ 28-     12           07ಮಾರ್ಚ್ 27-     08           02
ಮಾರ್ಚ್ 26-      13           03
ಮಾರ್ಚ್ 25-       10           06
ಮಾರ್ಚ್ 24-       12           07

Online Interview: ಆನ್​ಲೈನ್​ ಸಂದರ್ಶನ ಎದುರಿಸುವ ಮುನ್ನ ಈ ಟಿಪ್ಸ್ ನೆನಪಿರಲಿ...!

ಮಹಾನಗರ ಬೆಂಗಳೂರಿನಲ್ಲೂ ಕೂಡ ಸಾವಿನ ಸಂಖ್ಯೆ ಹೆಚ್ಚುತ್ತಿದೆ. ಜೊತೆಗೆ ಸೋಂಕಿತರ ಪ್ರಮಾಣ ಕೂಡ. ಇನ್ನು ಕಳೆದ ಏಳು ದಿನಗಳಲ್ಲಿ ಸಾವನ್ನಪ್ಪಿದ ಸೋಂಕಿತರಲ್ಲಿ ಕಂಡು ಬಂದಿದ್ದು SARI ಸಮಸ್ಯೆ. ಅಂದರೆ ಉಸಿರಾಟದ ತೊಂದರೆ. ಕಳೆದೊಂದು ವಾರದಲ್ಲಿ ಕೊರೋನಾದಿಂದ ಸಾವನ್ನಪ್ಪಿದ್ದ‌ 92 ಮಂದಿಯಲ್ಲಿ ಶೇ. 80 ರಷ್ಟು ಮಂದಿಗೆ ಉಸಿರಾಟದ ತೊಂದರೆ ಇತ್ತು ಎಂದು ಆರೋಗ್ಯ ಇಲಾಖೆ ತಮ್ಮ ಬುಲೆಟಿನ್ ನಲ್ಲಿ ಹೇಳಿದೆ. ಹೀಗಾಗಿ ಉಸಿರಾಟದ ಸಮಸ್ಯೆ ಇರುವವರಲ್ಲೇ ಕೊರೋನಾ ತೀಕ್ಷ್ಣವಾಗಿ ಹರಡುತ್ತಿದೆ.

ಕಳೆದ ಕೆಲವು ದಿನಗಳಿಂದ ನಗರದಲ್ಲಿ ಹೆಚ್ಚಾಗ್ತಿದೆ SARI ಪ್ರಕರಣಗಳು.!!

ಇಡೀ ರಾಜ್ಯಕ್ಕೆ ಹೋಲಿಸಿದರೆ ರಾಜಧಾನಿ ಬೆಂಗಳೂರೇ ಕೊರೋನಾ‌ ಹಾಟ್ ಸ್ಪಾಟ್. ಬೆಂಗಳೂರಿನಲ್ಲೇ ಅತಿ‌ ಹೆಚ್ಚು ಕೊರೋನಾ ಸೋಂಕಿತರು ಪತ್ತೆಯಾಗ್ತಿದ್ದಾರೆ. ಇದಕ್ಕೇನು ಕಾರಣ ಎಂಬವುದುಕ್ಕೆ ಕೊರೋನಾ‌ ಟಾಸ್ಕ್ ಫೋರ್ಸ್ ಸದಸ್ಯ ಹಾಗೂ ರಾಜೀವ್ ಗಾಂಧಿ ಎದೆರೋಗ ಆಸ್ಪತ್ರೆಯ ನಿರ್ದೇಶಕ ಡಾಕ್ಟರ್ ನಾಗರಾಜ್ ನ್ಯೂಸ್ 18 ಕನ್ನಡ ಜೊತೆ ಮಾತನಾಡಿದ್ದಾರೆ.

ಸೋಂಕಿತರ ಪೈಕಿ ಶೇ. 50ರಷ್ಟು ಮಂದಿಯಲ್ಲಿ SARI ಲಕ್ಷಣಗಳು ಕಂಡು ಬರುತ್ತಿದೆ. ಧೂಳು ಹೆಚ್ಚಳವೇ ಬೆಂಗಳೂರಿನಲ್ಲಿ ಕೊರೋನಾ ತೀವ್ರತೆ ಹೆಚ್ಚಲು‌ ಕಾರಣ ಎಂಬುವುದು ನಮ್ಮದೊಂದು ಅಂದಾಜು. SARI ಲಕ್ಷಣದಿಂದ ಆಸ್ಪತ್ರೆ ಸೇರುತ್ತಿರುವ 100 ರೋಗಿಗಳ ಪೈಕಿ 50 ಮಂದಿಗೆ ಕೊರೋನಾ ಸೋಂಕು ದೃಢ ಆಗ್ತಿದೆ. ರಸ್ತೆ ಕಾಮಗಾರಿ, ನಮ್ಮ ಮೆಟ್ರೋ ಕಾಮಗಾರಿಯಿಂದ ನಗರದಲ್ಲಿ ಧೂಳು ಹೆಚ್ಚಾಗ್ತಿದೆ. ಇದರಿಂದಾಗಿ ಪರಿಸರದಲ್ಲಿ ಮಾಲಿನ್ಯಕಾರಕಗಳು ಹೆಚ್ಚಾಗಿ ಜನರಿಗೆ ಉಸಿರಾಟದ ಸಮಸ್ಯೆ ಉಂಟಾಗಿದೆ. ಉಸಿರಾಟದ ಸಮಸ್ಯೆ ಕೊರೋನಾದ ಮುಖ್ಯ ಲಕ್ಷಣಗಳಲ್ಲೊಂದು. ಹೀಗಾಗಿ SARI ಬಾಧಿತ ಜನರಿಗೆ ಕೊರೋನಾ ಸೋಂಕು ದೃಢ ಆಗ್ತಿದೆ ಅಂತ ಹೇಳಿದ್ದಾರೆ.
Youtube Video

ಇನ್ನು ಸದ್ಯ ರಾಜ್ಯದಲ್ಲಿ ಕೊರೋನಾಗೆ ತುತ್ತಾಗಿ 240 ಮಂದಿ ಐಸಿಯೂನಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ. ಕೊರೋನಾ ಹಿನ್ನೆಲೆ ಬೆಂಗಳೂರುವೊಂದರಲ್ಲಿ ಮಾತ್ರ 108 ಮಂದಿ ಐಸಿಯೂನಲ್ಲಿದ್ದಾರೆ. ಕಲಬುರ್ಗಿ 25, ತುಮಕೂರು 14, ಚಾಮರಾಜನಗರ 09, ಬೀದರ್ 08 ಮಂದಿ ತುರ್ತು ಚಿಕಿತ್ಸಾ ವಿಭಾಗದಲ್ಲಿದ್ದಾರೆ. ಹೀಗಾಗಿ ಕೊರೋನಾ ಸೋಂಕು ದಿನೇ ದಿನೆ ಹೆಚ್ಚುತ್ತಲೇ ಇದೆ. ಇದ್ರ ನಡುವೆ ತಾಪಮಾನ ಏರಿಕೆ, ದೂಳು ಕೂಡ ಉರಿಯುವ ಬೆಂಕಿಗೆ ತುಪ್ಪ ಸುರಿದಂತಾಗ್ತಿದೆ.
Published by: Latha CG
First published: March 31, 2021, 6:30 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories