Coronavirus: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿಲ್ಲದ ಕೊರೋನಾ ಅಟ್ಟಹಾಸ

ಕಳೆದ ಮೂರ್ನಾಲ್ಕು ದಿನಗಳಲ್ಲಿ ಸಂಸ್ಥೆಯಲ್ಲಿ 30ಕ್ಕೂ ಅಧಿಕ ಕೊರೋನಾ ಪಾಸಿಟಿವ್ ಪ್ರಕರಣಗಳು  ಪತ್ತೆಯಾಗಿರುವ ಹಿನ್ನಲೆಯಲ್ಲಿ ಆರೋಗ್ಯ ಇಲಾಖೆ ಸೂಚನೆಯಂತೆ ಶಿಕ್ಷಣ ಸಂಸ್ಥೆಗಳನ್ನು ಬಂದ್ ಮಾಡಲಾಗಿದೆ. ಇದರ ಜೊತೆ ಶ್ರೀ ದೇವಿ ನರ್ಸಿಂಗ್ ಕಾಲೇಜುನ್ನು ಕಂಟೋನ್ಮೆಂಟ್ ಝೋನ್ ಎಂದು ಘೋಷಿಸಲಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ದಕ್ಷಿಣ ಕನ್ನಡ(ಮಾ.20): ಕೊರೋನಾ ಇನ್ನೇನು ಹತೋಟಿಗೆ ಬಂತು ಎಂದು ನಿಟ್ಟುಸಿರು ಬಿಡುತ್ತಿದ್ದ ಕರಾವಳಿಯ ಜನತೆಗೆ ಮತ್ತೆ ಭೀತಿ ಎದುರಾಗಿದೆ. ಕಳೆದ ನಾಲ್ಕು ದಿನದಿಂದ ಕೊರೋನಾ ಪಾಸಿಟಿವ್ ಸಂಖ್ಯೆ ಹೆಚ್ಚುತ್ತಲೇ ಇದೆ. ನೆರೆಯ ಕೇರಳದಿಂದಲೇ ಈ ಸಮಸ್ಯೆ ಹೆಚ್ಚಾಗುತ್ತಿರೋದು ಗೊತ್ತಾಗಿದ್ರೂ ಜಿಲ್ಲಾಡಳಿತ ಮಾತ್ರ ಕೈ ಚೆಲ್ಲಿ ಕೂತಿದೆ. ಜನರೂ ನಮಗೇನಾಗಲ್ಲ ಎಂದು ಆರಾಮವಾಗಿದ್ದಾರೆ. ಕಳೆದ ವರ್ಷ ಇದೇ ತಿಂಗಳಲ್ಲಿ ಕೊರೋನಾ ಮಹಾಮಾರಿಯ ಬಗ್ಗೆ ಕೇಳಿ‌ ಹೆದರುತ್ತಿದ್ದ ಜನ, ಬಳಿಕ ಕೆಟ್ಟ ಪರಿಸ್ಥಿತಿಯನ್ನು ಎದುರಿಸಿಯಾಯಿತು. ಇದೀಗ ಕೆಲ ತಿಂಗಳಿನಿಂದ ಹತೋಟಿಗೆ ಬಂದಿದ್ದ ಕೊರೋನಾ ಪಾಸಿಟಿವ್ ಇದೀಗ ಎರಡನೇ ಅಲೆ ಎಂಬಂತೆ ಮತ್ತೆ ಕಾಣಿಸಿಕೊಂಡಿದೆ.

ಕರಾವಳಿಯ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೆಲ‌ ತಿಂಗಳಿನಿಂದ 20 ಪಾಸಿಟಿವ್ ದಾಟುತ್ತಿರಲಿಲ್ಲ. ಇದೀಗ ನಾಲ್ಕು ದಿನದಿಂದ ಪ್ರತಿದಿನ‌ 50 ಪಾಸಿಟಿವ್ ದಾಟುತ್ತಿದ್ದು ನಿನ್ನೆ 72 ಮಂದಿಗೆ ಪಾಸಿಟಿವ್ ಆಗಿದೆ. ಕೇರಳದಿಂದ ಬಂದ ವಿದ್ಯಾರ್ಥಿಗಳಿಂದಲೇ ಪಾಸಿಟಿವ್ ಸಂಖ್ಯೆ ಹೆಚ್ಚಾಗಿರೋದು ಇದೀಗ ಜಿಲ್ಲೆಯ ಜನತೆಗೆ ಆತಂಕ‌ ಸೃಷ್ಟಿಯಾಗಿರೋದು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಲ್ಲಿ ಕೊರೋನಾ ಪಾಸಿಟಿವ್ ಪ್ರಕರಣಗಳು ಎರಡಂಕೆಯ ಸಂಖ್ಯೆಯಲ್ಲಿ ಏರುತ್ತಿದೆ.ಮೆಡಿಕಲ್, ಡೆಂಟಲ್, ನರ್ಸಿಂಗ್ ಶಿಕ್ಷಣಕ್ಕಾಗಿ ಕೇರಳದಿಂದ ಬರುವ ವಿದ್ಯಾರ್ಥಿಗಳಲ್ಲೇ ಪಾಸಿಟಿವ್ ದೃಢವಾಗುತ್ತಿದೆ. ಯೆನೆಪೋಯಾ ವಿವಿಯ ಶಿಕ್ಷಣ ಸಂಸ್ಥೆಗಳಲ್ಲಿಯೂ ಕೋವಿಡ್ ಪ್ರಕರಣ ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ಯೆನೆಪೋಯಾ ವಿವಿಗೆ ಸೇರಿದ 9 ಶಿಕ್ಷಣ ಸಂಸ್ಥೆಗಳನ್ನು ಸಂಪೂರ್ಣ ಬಂದ್ ಮಾಡಲಾಗಿದೆ.

Raichur: ಅಕ್ರಮ ಮದ್ಯ ನಿಷೇಧ; ಗರಿಗೆದರದ ಜಿಲ್ಲಾ ಪಂಚಾಯತ್​ಗಳ ನಡೆ

ಕಳೆದ ಮೂರ್ನಾಲ್ಕು ದಿನಗಳಲ್ಲಿ ಸಂಸ್ಥೆಯಲ್ಲಿ 30ಕ್ಕೂ ಅಧಿಕ ಕೊರೋನಾ ಪಾಸಿಟಿವ್ ಪ್ರಕರಣಗಳು  ಪತ್ತೆಯಾಗಿರುವ ಹಿನ್ನಲೆಯಲ್ಲಿ ಆರೋಗ್ಯ ಇಲಾಖೆ ಸೂಚನೆಯಂತೆ ಶಿಕ್ಷಣ ಸಂಸ್ಥೆಗಳನ್ನು ಬಂದ್ ಮಾಡಲಾಗಿದೆ. ಇದರ ಜೊತೆ ಶ್ರೀ ದೇವಿ ನರ್ಸಿಂಗ್ ಕಾಲೇಜುನ್ನು ಕಂಟೋನ್ಮೆಂಟ್ ಝೋನ್ ಎಂದು ಘೋಷಿಸಲಾಗಿದೆ.

ಈ ಹಿಂದೆ ಮಂಗಳೂರಿನ ಯೆನೇಪೋಯಾ ವಿವಿಯ ಶಿಕ್ಷಣ ಸಂಸ್ಥೆಗಳಲ್ಲಿ ಕೋವಿಡ್ ಪ್ರಕರಣ ಹೆಚ್ಚಳ ಹಿನ್ನೆಲೆಯಲ್ಲಿ ಯೆನೇಪೋಯಾ ವಿವಿಗೆ ಸೇರಿದ 9 ಶಿಕ್ಷಣ ಸಂಸ್ಥೆಗಳು ಸಂಪೂರ್ಣ ಬಂದ್ ಮಾಡಲಾಗಿತ್ತು..ಮೆಡಿಕಲ್, ಡೆಂಟಲ್, ನರ್ಸಿಂಗ್ ಸೇರಿದಂತೆ 9 ಶಿಕ್ಷಣ ಸಂಸ್ಥೆಗಳು ಬಂದ್ ಮಾಡಲಾಗಿತ್ತು..ಆರೋಗ್ಯ ಇಲಾಖೆ ಸೂಚನೆಯಂತೆ ಶಿಕ್ಷಣ ಸಂಸ್ಥೆಗಳು ಬಂದ್ ಮಾಡಲಾಗಿತ್ತು..ಶಿಕ್ಷಕರು ಮತ್ತು ಇತರೆ ಸಿಬ್ಬಂದಿ ಹೊರತುಪಡಿಸಿ ವಿದ್ಯಾರ್ಥಿಗಳಿಗೆ ಪ್ರವೇಶ ನಿಷೇಧಿಸಲಾಗಿತ್ತು.ಕೇರಳ ಮೂಲದ ವಿದ್ಯಾರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿರುವ ಯೆನೇಪೋಯಾ ಶಿಕ್ಷಣ ಸಂಸ್ಥೆ  ಮಂಗಳೂರು ಹೊರವಲಯದ ದೇರಳಕಟ್ಟೆಯಲ್ಲಿದೆ.

ವಿದ್ಯಾರ್ಥಿಗಳಿಗೆ ಆನ್ ಲೈನ್ ಮೂಲಕವೇ ಎಲ್ಲಾ ತರಗತಿ ನಡೆಸಲು ನಿರ್ಧಾರ ಮಾಡಲಾಗಿದೆ. ಕೇರಳದಿಂದ ಬರುವ ವಿದ್ಯಾರ್ಥಿಗಳಲ್ಲೇ ಪಾಸಿಟಿವ್ ಹೆಚ್ಚಾಗುತ್ತಿರೋದು ಬೆಳಕಿಗೆ ಬಂದಿದ್ರೂ ಇದನ್ನು ತಡೆಗಟ್ಟುವ ಕೆಲಸ ಆಗುತ್ತಿಲ್ಲ. ಪ್ರತಿದಿನ‌ ಸಾವಿರಾರು ಸಂಖ್ಯೆಯಲ್ಲಿ ಕೇರಳದಿಂದ ಮಂಗಳೂರಿಗೆ ಜನ‌ ಬಂದು ಹೋಗುತ್ತಿದ್ದರೂ, ಯಾರಿಗೂ ಯಾವುದೇ ಟೆಸ್ಟ್, ಮುಂಜಾಗ್ರತಾ ಕ್ರಮ ಇಲ್ಲ. ಕಟ್ಟುನಿಟ್ಟಿನ ಕ್ರಮ ಮಾಡುತ್ತೇವೆ ಎನ್ನುವ ಜಿಲ್ಲಾಡಳಿತ ಇನ್ನೂ ಎಚ್ಚೆತ್ತುಕೊಂಡಿಲ್ಲ.ಪರಿಸ್ಥಿತಿ ಕೈ ಮೀರಿ‌ ಹೋಗೋ ಮೊದಲಾದ್ರೂ ಜಿಲ್ಲಾಡಳಿತ ಎಚ್ಚೆತ್ತುಕೊಂಡರೆ ಜಿಲ್ಲೆಗೆ ಒಳಿತು.
Published by:Latha CG
First published: