ಮಹಾರಾಷ್ಟ್ರದಲ್ಲಿ ಕೊರೋನಾ ಎರಡನೇ ಅಲೆ; ಬಾಗಲಕೋಟೆಯ ಐತಿಹಾಸಿಕ ಹೋಳಿಗೆ ಬ್ರೇಕ್​​ ಹಾಕಲು ನಿರ್ಧಾರ

ಕಳೆದ ಐದಾರು ತಿಂಗಳಿಂದ ಬಾಗಲಕೋಟೆ ಜಿಲ್ಲೆಯಲ್ಲಿ ಕೊರೋನಾ ಸಂಪೂರ್ಣ ನಿಯಂತ್ರಣದಲ್ಲಿ ಇತ್ತು. ನಿತ್ಯ 2ಸಾವಿರಕ್ಕೂ ಅಧಿಕ ಟೆಸ್ಟ್ ಮಾಡಿದರೂ ಕೇಸ್ ಒಂದು, ಎರಡು ಮಾತ್ರ ಇರುತ್ತಿದ್ದವು. ಆದರೆ, ಇದೀಗ ಕಳೆದ ವಾರ 8 ಕೇಸ್ ಗಳು ಪತ್ತೆ ಆಗಿವೆ. ಅದರಲ್ಲೂ ಮುಖ್ಯವಾಗಿ ಮಹಾರಾಷ್ಟ್ರಕ್ಕೆ ಕನ್ಯೆ ನೋಡಲು ಹೋಗಿದ್ದ ಜಿಲ್ಲೆಯ ರಬಕವಿ-ಬನಹಟ್ಟಿ ಮೂಲದ ಇಬ್ಬರಿಗೆ ಕೊರೊನಾ ವಕ್ಕರಿಸಿರುವುದು ಜಿಲ್ಲಾಡಳಿತದ ನಿದ್ದೆಗೆಡೆಸಿದೆ

ಬಣ್ಣದೋಕುಳಿ

ಬಣ್ಣದೋಕುಳಿ

  • Share this:
ಬಾಗಲಕೋಟೆ (ಮಾ. 19): ನೆರೆಯ ಮಹಾರಾಷ್ಟ್ರದಲ್ಲಿ ಕೋವಿಡ್ ಎರಡನೇ ಅಲೆ ಶುರುವಾಗಿದ್ದು, ರಾಜ್ಯದಲ್ಲಿ ಕೋವಿಡ್ 2ನೇ ಅಲೆಯ ಭೀತಿ ಶುರುವಾಗಿದೆ.ಹೋಳಿ ಆಚರಣೆಯಲ್ಲಿ  ಕೋಲ್ಕತ್ತಾ ನಂತರ ದೇಶದಲ್ಲಿ  ಬಾಗಲಕೋಟೆ ಹೋಳಿ ಎರಡನೇ ಸ್ಥಾನ ಪಡೆದಿದೆ.ಇದೀಗ ಕೊರೊನಾ ಎರಡನೇ ಅಲೆ ಭೀತಿಯಿಂದಾಗಿ ಐತಿಹಾಸಿಕ ಬಾಗಲಕೋಟೆ ಹೋಳಿ ಬಣ್ಣದಾಟಕ್ಕೆ ಬ್ರೇಕ್ ಹಾಕಲು ಬಾಗಲಕೋಟೆ ಜಿಲ್ಲಾಡಳಿತ ಸಜ್ಜಾಗಿದೆ.

ಬಾಗಲಕೋಟೆ ಹೋಳಿ ಹಬ್ಬದ ಬಣ್ಣದಾಟಕ್ಕೆ ಬ್ರೇಕ್ ಬೀಳುವ ಸಾಧ್ಯತೆ ಇದೆ.  ಇದೇ ತಿಂಗಳ ಮಾರ್ಚ್ 28,29,30,31ಹಾಗೂ ಏಪ್ರಿಲ್ 01ವರೆಗೆ ಬಾಗಲಕೋಟೆಯಲ್ಲಿ ಹೋಳಿ ಆಚರಣೆ ವಿವಿಧ ಕಾರ್ಯಕ್ರಮಗಳು ನಡೆಯಲಿದ್ದು, ಅದ್ರಲ್ಲಿ ಬಣ್ಣದಾಟಕ್ಕೆ ಬ್ರೇಕ್ ಹಾಕಲು ಜಿಲ್ಲಾಡಳಿತ ಸಜ್ಜಾಗಿದೆ. ಕಳೆದ ಬಾರಿಯ ಬಣ್ಣದಾಟದಲ್ಲಿ 1ಲಕ್ಷ ಜನ ಸೇರಿದ್ದರು. ಹೀಗಾಗಿ ಈ ಬಾರಿ ನೆರೆಯ ಮಹಾರಾಷ್ಟ್ರದಲ್ಲಿ ಎರಡನೇ ಕೋವಿಡ್ ಅಲೆ ಹಿನ್ನೆಲೆಯಲ್ಲಿ ಬಾಗಲಕೋಟೆ ಬಣ್ಣದಾಟವನ್ನು ಜಿಲ್ಲಾಡಳಿತ ನಿಷೇಧಿಸಿ, ಹೆಚ್ಚು ಜನ್ರು ಒಂದೆಡೆ ಸೇರೋದನ್ನ ತಡೆಯಲು ಕ್ರಮ ವಹಿಸಲಾಗುತ್ತಿದೆ.

ಇದೀಗ ಮಹಾಮಾರಿ ಕೊರೊನಾ ಸಂಭ್ರಮದ ಬಣ್ಣದಾಟಕ್ಕೆ ಕೊಕ್ಕೆ ಹಾಕುವ ಲಕ್ಷಣಗಳು ಇವೆ. ಮೂರು ದಿನಗಳ ಕಾಲ ನಡೆಯುವ ಬಣ್ಣದೋಕುಳಿಯಲ್ಲಿ ಅಂದಾಜು ಒಂದು ಲಕ್ಷ ಜನರು ಬಣ್ಣದಲ್ಲಿ ಮಿಂದೇಳುತ್ತಾರೆ. ಬಣ್ಣ,ನೀರು ಎರೆಚುವುದು, ಮುಖ ಬಣ್ಣ ಹಚ್ಚುವುದು ಹೀಗೆಲ್ಲ ಮಾಡುವುದರಿಂದ ಸಾಂಕ್ರಮಿಕ ಸೋಂಕು ಹರಡುವ ಸಾಧ್ಯತೆ ಇದ್ದು, ಬಣ್ಣದಾಟಕ್ಕೆ ಬ್ರೇಕ್ ಹಾಕುವುದು ಅನಿವಾರ್ಯ ಅನ್ನೋದು ಜಿಲ್ಲಾ ಪೊಲೀಸ್ ಇಲಾಖೆಯದ್ದು.

Baba Ka Dhaba 2.0: ಬಾಬಾ ಕಾ ಡಾಬಾ 2.0: ಜೊಮೆಟೋದಿಂದ ಸಹಾಯ

ಇನ್ನು ಕಳೆದ ಐದಾರು ತಿಂಗಳಿಂದ ಬಾಗಲಕೋಟೆ ಜಿಲ್ಲೆಯಲ್ಲಿ ಕೊರೋನಾ ಸಂಪೂರ್ಣ ನಿಯಂತ್ರಣದಲ್ಲಿ ಇತ್ತು. ನಿತ್ಯ 2ಸಾವಿರಕ್ಕೂ ಅಧಿಕ ಟೆಸ್ಟ್ ಮಾಡಿದರೂ ಕೇಸ್ ಒಂದು, ಎರಡು ಮಾತ್ರ ಇರುತ್ತಿದ್ದವು. ಆದರೆ, ಇದೀಗ ಕಳೆದ ವಾರ 8 ಕೇಸ್ ಗಳು ಪತ್ತೆ ಆಗಿವೆ. ಅದರಲ್ಲೂ ಮುಖ್ಯವಾಗಿ ಮಹಾರಾಷ್ಟ್ರಕ್ಕೆ ಕನ್ಯೆ ನೋಡಲು ಹೋಗಿದ್ದ ಜಿಲ್ಲೆಯ ರಬಕವಿ-ಬನಹಟ್ಟಿ ಮೂಲದ ಇಬ್ಬರಿಗೆ ಕೊರೊನಾ ವಕ್ಕರಿಸಿರುವುದು ಜಿಲ್ಲಾಡಳಿತದ ನಿದ್ದೆಗೆಡೆಸಿದೆ.

ಜಿಲ್ಲೆಗೆ ಮಹಾರಾಷ್ಟ್ರ ಮೂಲಕ ಕೋವಿಡ್ 2ನೇ ಅಲೆ ಕಾಲಿಟ್ಟಿದ್ದು, ಇದನ್ನು ಕಟ್ಟುನಿಟ್ಟಾಗಿ ನಿಯಮ ಪಾಲನೆ ಮಾಡಿದರೆ ಮಾತ್ರ ಸೋಂಕು ನಿಯಂತ್ರಣ ಸಾಧ್ಯ. ಇದೇ ಕಾರಣಕ್ಕೆ ಪ್ರತಿ ದಿನ 10 ಸಾವಿರ ಜನರಿಗೆ ಲಸಿಕೆ ಹಾಕಿಸುವುದು ಹಾಗೂ 3 ರಿಂದ 4 ಸಾವಿರ ಜನರಿಗೆ ಕೊರೊನಾ ಟೆಸ್ಟ್ ಮಾಡಿಸಲು ಜಿಲ್ಲಾಡಳಿತ ಗುರಿ ಹಾಕಿಕೊಂಡು ಆ ನಿಟ್ಟಿನಲ್ಲಿ ಜಾಗೃತಿ ಆರಂಭಿಸಿದೆ. ಇಂತದ್ದರಲ್ಲಿ ಬಾಗಲಕೋಟೆ ಹೋಳಿ ಆಚರಣೆಗೆ ಅವಕಾಶ ಕೊಟ್ಟಲ್ಲಿ ಒಂದೇ ಜಾಗದಲ್ಲಿ ಹತ್ತಿಪ್ಪತ್ತು ಸಾವಿರ ಜನರು ಸೇರುವುದು, ಬಣ್ಣದೋಕುಳಿ ಆಡುವುದರಿಂದ ಸೋಂಕು ಮತ್ತಷ್ಟು ಉಲ್ಬಣಗೊಳ್ಳುವ ಆತಂಕ ಇದೆ. ಹೀಗಾಗಿ ಬಣ್ಣದಾಟ ಈ ವರ್ಷ ಬೇಡ ಎನ್ನುವುದು ಜಿಲ್ಲಾಡಳಿತದ ಅಭಿಪ್ರಾಯ.

ಹೀಗಾಗಿಯೇ ಹೋಳಿ ಆಚರಣಾ ಸಮಿತಿ, ಹಿರಿಯ ನಾಗರಿಕರು, ವಿವಿಧ ಸಂಘ-ಸಂಸ್ಥೆಗಳ ಸದಸ್ಯರ ಸಭೆ ನಡೆಸಿ, ಅವರಿಗೆ ಈ ಬಗ್ಗೆ ತಿಳುವಳಿಕೆ ಮೂಡಿಸುವ ಕೆಲಸವನ್ನು ಮಾಡಿದ್ದು, ಇಂದು(ಶುಕ್ರವಾರ) ಸಂಜೆ ಜಿಲ್ಲಾಡಳಿತ ಹೋಳಿ ಆಚರಣೆ ಬಗ್ಗೆ ಪರಿಷ್ಕೃತ  ಸ್ಪಷ್ಟ ಆದೇಶ ಹೊರಡಿಸಲಿದೆ ಎಂದು ಜಿಲ್ಲಾಧಿಕಾರಿ ಕ್ಯಾಪ್ಟನ್ ರಾಜೇಂದ್ರ,ಎಸ್ಪಿ ಲೋಕೇಶ್ ಜಗಲಾಸರ ತಿಳಿಸಿದ್ದಾರೆ.ಇನ್ನು  ಈಚೆಗೆ ಬಾಗಲಕೋಟೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಅರವಿಂದ್ ಲಿಂಬಾವಳಿ ಆಗಮಿಸಿದ ವೇಳೆ ಬಾಗಲಕೋಟೆ ಹೋಳಿ ಹಬ್ಬವನ್ನು ಸಾಂಸ್ಕೃತಿಕ ಮೆರುಗು, ಜೊತೆಗೆ ಸರ್ಕಾರ ಅನುದಾನ ಕೋರಿ ಹೋಳಿ ಆಚರಣಾ ಸಮಿತಿ ಮನವಿ ಸಲ್ಲಿಸಿತ್ತು.ಇದಕ್ಕೆ  ಸಚಿವರು ಸಕಾರಾತ್ಮಕ ಸ್ಪಂದನೆ ನೀಡಿದರು. ಈ ವರ್ಷವೇ ಕ್ರಮ ಕೈಗೊಳ್ಳಲಾಗುವುದು ಎಂದಿದ್ದರು.

ಆ ಬೆನ್ನಲ್ಲೇ ಇದೀಗ ಜಿಲ್ಲಾಡಳಿತ  ಬಣ್ಣದಾಟಕ್ಕೆ ಬ್ರೇಕ್ ಹಾಕಲು ಮುಂದಾಗಿದೆ.ಒಟ್ಟಾರೆ, ಐತಿಹಾಸಿಕ ಬಾಗಲಕೋಟೆ ಹೋಳಿ ಹಬ್ಬ, ಬಣ್ಣದೋಕುಳಿಗೆ ಕೊರೊನಾ 2ನೇ ಅಲೆ ದೊಡ್ಡ ಆತಂಕ ತಂದೊಡ್ಡಿದೆ. ಸದ್ಯ ಜಿಲ್ಲಾಡಳಿತವು ಬಣ್ಣದೋಕುಳಿ ನಿಲ್ಲಿಸುವ ಬಗ್ಗೆ ಹೆಚ್ಚು ಒಲವು ಹೊಂದಿದ್ದು, ಇಂದು ಜಿಲ್ಲಾಧಿಕಾರಿಗಳು ಯಾವ ಆದೇಶ ಹೊರಡಿಸುತ್ತಾರೆ ಅನ್ನೋದು ತೀವ್ರ ಕುತೂಹಲ ಮೂಡಿಸಿದೆ.
Published by:Latha CG
First published: