HOME » NEWS » State » CORONA VACCINE VEHICLE CAME TO BELAGAVI DISTRICT BY TODAY MORNING CSB LG

ಬೆಳಗಾವಿಗೆ ಆಗಮಿಸಿದ ಕೋವಿಶೀಲ್ಡ್ ವ್ಯಾಕ್ಸಿನ್; ಪುಣೆಯಿಂದ ಬಂದ ವಾಹನಕ್ಕೆ ಪೂಜೆ, ವಾದ್ಯ ಮೇಳದಿಂದ ಸ್ವಾಗತ

ವಿತರಣೆ ಮಾಡಲು ಬೆಳಗಾವಿ ಜಿಲ್ಲೆಯಲ್ಲಿ ‌ 12 ಕೇಂದ್ರಗಳನ್ನು ಆಯ್ಕೆ ಮಾಡಲಾಗಿದೆ. 37 ಸಾವಿರ ವೈದ್ಯಕೀಯ ಸಿಬ್ಬಂದಿಗೆ ಮೊದಲು ಕೊರೋನಾ ಲಸಿಕೆ ಹಾಕಲಾಗುವುದು. ನಂತರ ಹಂತ-ಹಂತವಾಗಿ ಎಲ್ಲರಿಗೂ ಲಸಿಕೆ ವಿತರಣೆ ಮಾಡಲಾಗುವುದು. ಬೆಳಗಾವಿಯಿಂದ 8 ಜಿಲ್ಲೆಗೆ ಇಂದು ಲಸಿಕೆ ರವಾನೆಯಾಗಲಿದೆ. ಒಂದು ದಿನದಲ್ಲಿ ನೂರು ಜನರಿಗೆ ಲಸಿಕೆ ವಿತರಣೆ ಮಾಡಲು ಸಿದ್ಧತೆ ನಡೆದಿದೆ ಎಂದರು.

news18-kannada
Updated:January 13, 2021, 10:36 AM IST
ಬೆಳಗಾವಿಗೆ ಆಗಮಿಸಿದ ಕೋವಿಶೀಲ್ಡ್ ವ್ಯಾಕ್ಸಿನ್; ಪುಣೆಯಿಂದ ಬಂದ ವಾಹನಕ್ಕೆ ಪೂಜೆ, ವಾದ್ಯ ಮೇಳದಿಂದ ಸ್ವಾಗತ
ವ್ಯಾಕ್ಸಿನ್ ಹೊತ್ತು ತಂದ ವಾಹನ
  • Share this:
ಬೆಳಗಾವಿ(ಜ.13)- ಬೆಳಗಾವಿ ಇಂದು ಬೆಳ್ಳಂ ಬೆಳಗ್ಗೆ ಕೊರೊನಾ ಲಸಿಕೆ ಕೋವಿಶೀಲ್ಡ್ ಆಗಮಿಸಿದೆ. ವ್ಯಾಕ್ಸಿನ್ ಡಿಪೋದಲ್ಲಿ ಪುಣೆಯಿಂದ ಲಸಿಕೆ ಹೊತ್ತು ತಂದ ವಾಹನಕ್ಕೆ ಪೂಜೆ ಸಲ್ಲಿಕೆ ಮಾಡಲಾಯಿತು. ವಾಹನಕ್ಕೆ ವಿಭೂತಿ ಹಚ್ಚಿ, ತೆಂಗಿನಕಾಯಿ ಒಡೆದು, ಆರತಿ ಬೆಳಗಲಾಯಿತು. ಲಸಿಕೆ ಹೊತ್ತ ವಾಹನವನ್ನು ವಾದ್ಯ ಮೇಳಗಳಿಂದ ಸ್ವಾಗತಿಸಲಾಯಿತು. ಇದೇ ತಿಂಗಳ 16 ರಿಂದ ವ್ಯಾಕ್ಸಿನ್ ವಿತರಣೆಗೆ ಬೆಳಗಾವಿ ಜಿಲ್ಲಾಡಳಿತ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಂಡಿದೆ.

ಪುಣೆಯಿಂದ ನಿನ್ನೆ ರಾತ್ರಿ ಬಿಟ್ಟಿದ್ದ ಕೋವಿಶೀಲ್ಡ್ ಲಸಿಕೆ ಹೊತ್ತ ವಾಹನ ಬೆಳಗ್ಗೆ 5ಕ್ಕೆ ಬೆಳಗಾವಿ ತುಲುಪಿತು. ಪೊಲೀಸ್‌ ಬೆಂಗಾವಲಿನಲ್ಲಿ ಬಂದ ವಾಹನ ಸ್ವಾಗತಿಸಲು ಯಾರೊಬ್ಬರೂ ಇರಲಿಲ್ಲ. ವ್ಯಾಕ್ಸಿನ್ ವಾಹನ ಬರೋ ಮಾಹಿತಿ ಹಿನ್ನೆಲೆಯಲ್ಲಿ ಯಾರೊಬ್ಬರೂ ಇರಲಿಲ್ಲ. ಒಂದು ಗಂಟೆ ಕಾಲ ವ್ಯಾಕ್ಸಿನ್ ಹೊತ್ತ ವಾಹನ ಡಿ ಎಚ್ ಓ ಕಚೇರಿ ಮುಂದೆ ನಿಲ್ಲಿಸಲಾಗಿತ್ತು. ನಂತರ ಸ್ಥಳಕ್ಕೆ ಜಿಲ್ಲಾಧಿಕಾರಿ ಎಂ ಜಿ ಹಿರೇಮಠ, ಡಿ ಎಚ್ ಓ ಶಶಿಕಾಂತ ಮುನ್ಯಾಳ, ಸರ್ವೇಕ್ಷಣಾ ಅಧಿಕಾರಿ ತುಕ್ಕಾರ ಭೇಟಿ ನೀಡಿದರು.

ಮುರುಗೇಶ್ ನಿರಾಣಿಗೆ 2020ರ ಸಂಕ್ರಾಂತಿ ಕಹಿ; ಕಳೆದ ವರ್ಷ ನಡೆದ ಕಹಿ ಘಟನೆಯಾದರೂ ಏನು?

ಲಸಿಕೆ ಹೊತ್ತು ಬಂದ ವಾಹನಕ್ಕೆ ವಿಭೂತಿ ಹಚ್ಚಿ, ತೆಂಗಿನಕಾಯಿ ಒಡೆದು, ಆರತಿ ಬೆಳೆಯುವರ ಜತಗೆ ವಾಹನದ ಮುಂದೆ ವಾದ್ಯ ಮೇಳಗಳಿಂದ ಸ್ವಾಗತ ಕೋರಲಾಯಿತು. ನಂತರ ವಾಕ್ ಇನ್ ಕೂಲರ್ ನಲ್ಲಿ ಲಸಿಕೆ ಸಂಗ್ರಹ ಮಾಡಲಾಯಿತು. ಇಂದು ಉತ್ತರ ಕರ್ನಾಟಕದ 8 ಜಿಲ್ಲೆಗಳಿಗೆ ವ್ಯಾಕ್ಸಿನ್ ಸರಬರಾಜು ಮಾಡಲು ಅಧಿಕಾರಿಗಳು ಸಿದ್ಧತೆ ಮಾಡಿಕೊಂಡಿದ್ದಾರೆ.

ವ್ಯಾಕ್ಸಿನ್ ಡಿಪೋಕ್ಕೆ ಭೇಟಿ‌ ನೀಡಿ ಪರಿಶೀಲನೆ ನಡೆಸಿ ಬಳಿಕ ಜಿಲ್ಲಾಧಿಕಾರಿ ಎಂ.ಜಿ ಹಿರೇಮಠ ಮಾತನಾಡಿದರು. ಬೆಳಗಾವಿಗೆ 13 ಬಾಕ್ಸ್ ನಲ್ಲಿ ಕೋವಿಶಿಲ್ಡ್ 1.47 ಲಕ್ಷ ಡೋಸ್ ವ್ಯಾಕ್ಸಿನ್ ಬಂದಿದೆ. ವಿತರಣೆ ಮಾಡಲು ಬೆಳಗಾವಿ ಜಿಲ್ಲೆಯಲ್ಲಿ ‌ 12 ಕೇಂದ್ರಗಳನ್ನು ಆಯ್ಕೆ ಮಾಡಲಾಗಿದೆ. 37 ಸಾವಿರ ವೈದ್ಯಕೀಯ ಸಿಬ್ಬಂದಿಗೆ ಮೊದಲು ಕೊರೋನಾ ಲಸಿಕೆ ಹಾಕಲಾಗುವುದು. ನಂತರ ಹಂತ-ಹಂತವಾಗಿ ಎಲ್ಲರಿಗೂ ಲಸಿಕೆ ವಿತರಣೆ ಮಾಡಲಾಗುವುದು. ಬೆಳಗಾವಿಯಿಂದ 8 ಜಿಲ್ಲೆಗೆ ಇಂದು ಲಸಿಕೆ ರವಾನೆಯಾಗಲಿದೆ. ಒಂದು ದಿನದಲ್ಲಿ ನೂರು ಜನರಿಗೆ ಲಸಿಕೆ ವಿತರಣೆ ಮಾಡಲು ಸಿದ್ಧತೆ ನಡೆದಿದೆ ಎಂದರು.
Published by: Latha CG
First published: January 13, 2021, 10:10 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories