ಕಲಬುರ್ಗಿಯಲ್ಲಿ ಕೈದಿಗಳಿಗೂ ವಕ್ಕರಿಸಿದ ಕೊರೋನಾ; ಪೆರೋಲ್ ಮೇಲೆ ಹೋಗಿದ್ದ 10 ಮಂದಿಗೆ ಸೋಂಕು

ಪೆರೋಲ್ ಪಡೆದು ಊರೂರು ಸುತ್ತಿ ವಾಪಾಸ್ಸಾಗಿದ್ದ ಕೈದಿಗಳಿಗೆ ಸೋಂಕು ದೃಢವಾಗಿದೆ. ಸೋಂಕಿತ ಕೈದಿಗಳಿಗೆ ಕೊರೊನಾ ಕೇರ್ ಸೆಂಟರ್ ಗೆ ಶಿಫ್ಟ್ ಮಾಡಲಾಗಿದೆ.  ಪೆರೋಲ್​ ಪಡೆದು ವಾಪಸ್ಸಾದವರನ್ನು ಪ್ರತ್ಯೇಕವಾಗಿ ಇಡಲಾಗಿತ್ತು.

news18-kannada
Updated:July 10, 2020, 3:25 PM IST
ಕಲಬುರ್ಗಿಯಲ್ಲಿ ಕೈದಿಗಳಿಗೂ ವಕ್ಕರಿಸಿದ ಕೊರೋನಾ; ಪೆರೋಲ್ ಮೇಲೆ ಹೋಗಿದ್ದ 10 ಮಂದಿಗೆ ಸೋಂಕು
ಸಾಂದರ್ಭಿಕ ಚಿತ್ರ
  • Share this:
ಕಲಬುರ್ಗಿ(ಜು.10): ಕಲಬುರ್ಗಿ ಕೇಂದ್ರ ಕಾರಾಗೃಹಕ್ಕೂ ಕೊರೋನಾ ವಕ್ಕರಿಸಿದೆ. ಕಲಬುರ್ಗಿ ಕೇಂದ್ರ ಕಾರಾಗೃಹದಲ್ಲಿರೋ 10 ಕೈದಿಗಳಿಗೆ ಪಾಸಿಟಿವ್ ದೃಢಪಟ್ಟಿದೆ. ಪೆರೋಲ್ ಮೇಲೆ ಹೋಗಿ ಬಂದಿದ್ದ ಕೈದಿಗಳಿಗೆ ಕೊರೋನಾ ಬಂದಿದೆ.

ಒಟ್ಟು 60 ಕೈದಿಗಳು ಪೆರೋಲ್ ಮೇಲೆ ಹೋಗಿ ವಾಪಸ್ಸಾಗಿದ್ದರು. ಪೆರೋಲ್ ಮುಗಿಸಿಕೊಂಡು ವಾಪಸ್ಸಾದ ನಂತರ ಅವರನ್ನು ಜೇವರ್ಗಿ ರಸ್ತೆಯಲ್ಲಿರೋ ಮಹ್ಮದೀ ಬಿ.ಎಡ್. ಕಾಲೇಜನಲ್ಲಿ ಸ್ಥಾಪಿಸಿರೋ ಹೊಸ ಜೈಲಿನಲ್ಲಿ ಪ್ರತ್ಯೇಕವಾಗಿ ಇಡಲಾಗಿತ್ತು. ಅವರ ಥ್ರೋಟ್ ಸ್ಯಾಂಪಲ್ ಸಂಗ್ರಹಿಸಿ ಲ್ಯಾಬ್ ಗೆ ಕಳುಹಿಸಿಕೊಡಲಾಗಿತ್ತು. ಇದೀಗ ವರದಿ ಬಂದಿದ್ದು, 10 ಕೈದಿಗಳಿಗೆ ಸೋಂಕು ದೃಢಪಟ್ಟಿದೆ.

ಹುಬ್ಬಳ್ಳಿ- ಧಾರವಾಡದಲ್ಲಿ ಕೊರೋನಾ ಸೋಂಕಿತರಿಗೆ ಹೋಂ ಐಸೋಲೇಷನ್; ಮನೆಯಲ್ಲಿಯೇ ಟೆಲಿಕನ್ಸಲ್ಟೇಷನ್ ಚಿಕಿತ್ಸೆ

ಪೆರೋಲ್ ಪಡೆದು ಊರೂರು ಸುತ್ತಿ ವಾಪಾಸ್ಸಾಗಿದ್ದ ಕೈದಿಗಳಿಗೆ ಸೋಂಕು ದೃಢವಾಗಿದೆ. ಸೋಂಕಿತ ಕೈದಿಗಳಿಗೆ ಕೊರೊನಾ ಕೇರ್ ಸೆಂಟರ್ ಗೆ ಶಿಫ್ಟ್ ಮಾಡಲಾಗಿದೆ.  ಪೆರೋಲ್​ ಪಡೆದು ವಾಪಸ್ಸಾದವರನ್ನು ಪ್ರತ್ಯೇಕವಾಗಿ ಇಡಲಾಗಿತ್ತು.

ಹೊರಗಿನಿಂದ ಬಂದವರಿಗಾಗಿಯೇ ಪ್ರತ್ಯೇಕ ಜೈಲು ವ್ಯವಸ್ಥೆ ಮಾಡಲಾಗಿದೆ, ಅವರನ್ನು ಅಲ್ಲಿಟ್ಟಿದ್ದುದರಿಂದ ಜೈಲಿನಲ್ಲಿರೋರಿಗೆ ಯಾವುದೇ ತೊಂದರೆಯಿಲ್ಲ. ಜೈಲಿನೊಳಗೆ ಕೊರೋನಾ ಸೋಂಕು ಹರಡೋ ಆತಂಕವಿಲ್ಲ ಎಂಗು ಮುಖ್ಯ ಜೈಲು ಅಧೀಕ್ಷಕ ರಮೇಶ್ ನ್ಯೂಸ್ 18 ಗೆ ಸ್ಪಷ್ಟಪಡಿಸಿದ್ದಾರೆ.

Published by: Latha CG
First published: July 10, 2020, 2:47 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading