CoronaVirus: ಕೊರೋನಾ ಎರಡನೇ ಅಲೆ: ಮತ್ತೆ ರೀ ಓಪನ್ ಆಗುತ್ತಿವೆ ಕೋವಿಡ್ ಕೇರ್ ಸೆಂಟರ್!

ಯಾವಾಗ ಸೋಂಕಿತರ ಸಂಖ್ಯೆ ಕಡಿಮೆ ಆಯ್ತೋ ಆಗಲೇ ಕೋವಿಡ್ ಕೇರ್ ಸೆಂಟರ್ ಗಳನ್ನು ಮುಚ್ಚಲಾಗಿತ್ತು. ಆದ್ರೆ ಇದೀಗ ಎರಡನೇ ಅಲೆಯಲ್ಲಿ ಪ್ರಕರಣಗಳ ಸಂಖ್ಯೆ ದಿನೇ.. ದಿನೇ ಏರಿಕೆ ಆಗ್ತಿರೋದ್ರಿಂದ ನಗರದ ಕೋರಮಂಗಲ‌ದ ಕೋವಿಡ್ ಕೇರ್ ಸೆಂಟರ್ ಅನ್ನ ರೀ ಓಪನ್ ಮಾಡಲು ಪಾಲಿಕೆ ತೀರ್ಮಾನಿಸಿದೆ.

ಕೊರೋನಾ ಕೋವಿಡ್ ಸೆಂಟರ್.

ಕೊರೋನಾ ಕೋವಿಡ್ ಸೆಂಟರ್.

  • Share this:
ಬೆಂಗಳೂರು: ಹೋದ್ಯಲ್ಲಾ ಪಿಶಾಚಿ ಅಂದ್ರೆ ಬಂದೆ ಗವಾಕ್ಷಿ ಅನ್ನೋಹಾಗೇ ಈ ಕೊರೋನಾ ಮುಗಿಯೋ ಲಕ್ಷಣ ಕಾಣಿಸ್ತಿಲ್ಲ. ಮ್ಯುಟೇಷನ್ ವೈರಸ್ ಒಂದ್ಕಡೆಯಾದ್ರೆ ಒಂದಾದಮೇಲೆ ಒಂದರಂತೆ ಅಲೆ ಇನ್ನೊಂದು ಕಡೆ. ಸದ್ಯ ರಾಜ್ಯಕ್ಕೆ ಎರಡನೇ ಅಲೆ ಕನ್ಫರ್ಮ್ ಆಗಿದ್ದು ಮಹಾನಗರಿ ಬೆಂಗಳೂರಿನಲ್ಲಿ ಕೊರೋನಾ ಓಟಕ್ಕೆ ಬ್ರೇಕ್ ಹಾಕೋದು ಸರ್ಕಾರಕ್ಕೆ ರಿಯಲ್ ಟಾಸ್ಕ್ ಆಗಿ ಪರಿಣಮಿಸಿದೆ. ಹೀಗಾಗಿ ನಗರದ ಕೆಲ ಕೋವಿಡ್ ಕೇರ್ ಸೆಂಟರ್ ಗಳು ರೀ ಓಪನ್ ಆಗ್ತಿವೆ. ಕಂಟ್ರೋಲ್ ಇಲ್ಲದೇ ಓಡಿ ದಿಢೀರ್ ಅಂತ ತೆರೆಮರೆಗೆ ಸರಿಯುತ್ತಿದ್ದ ವೂಹಾನ್ ವೈರಸ್ ಮತ್ತೆ ಪ್ರತಿದಿನ ಡಬ್ಕಿಡಬಲ್ ಬಾರಿಸಲು ಶುರುಮಾಡಿದೆ. 15 ದಿನದ ಹಿಂದೆ ದಿನದ ಪಾಸಿಟಿವ್ ಪ್ರಮಾಣ 300ರಷ್ಟಿದ್ದ ಕೊರೋನಾ ವಾರದ ಹಿಂದೆ 700ಕ್ಕೆ ಏರಿತ್ತು. ಈಗ 900ರ ಗಡಿದಾಟಿದೆ. ಹೀಗೆ ಕೊರೋನಾ ಏರುತ್ತಲೇ ಸಾಗುತ್ತಿವೆ.

ರಾಜ್ಯದಲ್ಲಿ ಪಾಸಿಟಿವ್ ಬರ್ತಿರೋದ್ರಲ್ಲಿ ಅರ್ಧಕ್ಕೂ ಹೆಚ್ಚು ಬೆಂಗಳೂರಿನದ್ದೇ ಆಗಿದೆ. ಬೆಂಗಳೂರಿನಲ್ಲಿ ಈಬಾರಿ ಅಪಾರ್ಟ್ಮೆಂಟ್ಗಳನ್ನೇ ಟಾರ್ಗೆಟ್ ಮಾಡಿಕೊಂಡಿರೋ ಕೊರೋನಾ ದಿನದಿನಕ್ಕೂ ಏರುತ್ತಲೇ ಸಾಗ್ತಿದೆ.  ಈ ನಡುವೆ ರಾಜಧಾನಿಯಲ್ಲಿ ಕೊರೋನಾ ನಿಗ್ರಹಕ್ಕೆ ಬಿಬಿಎಂಪಿ ಹಾಗೂ ಆರೋಗ್ಯ ಇಲಾಖೆ ಒಂದಿಷ್ಟು ಟಫ್ ರೂಲ್ಸ್ ಜಾರಿಗೆ ತಂದಿದೆ.

ಸದ್ಯ ಜನರಲ್ಲಿ ಮನವಿ ಮಾಡಿಕೊಂಡಿರೋ ಸರ್ಕಾರ ಮಾಸ್ಕ್ ಹಾಗೂ ಸಾಮಾಜಿಕ ಅಂತರದ ಬಗ್ಗೆ ಗಮನ ಹರಿಸುವಂತೆ ಸೂಚಿಸಿದೆ. ಅಲ್ದೇ ಕಳೆದ ವರ್ಷ ನಗರದಲ್ಲಿ ನಾಲ್ಕು ಕಡೆ ಬಹುದೊಡ್ಡ ಕೋವಿಡ್ ಕೇರ್ ಸೆಂಟರ್ ಗಳನ್ನ ಓಪನ್ ಮಾಡಿತ್ತು.‌

ಯಾವಾಗ ಸೋಂಕಿತರ ಸಂಖ್ಯೆ ಕಡಿಮೆ ಆಯ್ತೋ ಆಗಲೇ ಕೋವಿಡ್ ಕೇರ್ ಸೆಂಟರ್ ಗಳನ್ನು ಮುಚ್ಚಲಾಗಿತ್ತು. ಆದ್ರೆ ಇದೀಗ ಎರಡನೇ ಅಲೆಯಲ್ಲಿ ಪ್ರಕರಣಗಳ ಸಂಖ್ಯೆ ದಿನೇ.. ದಿನೇ ಏರಿಕೆ ಆಗ್ತಿರೋದ್ರಿಂದ ನಗರದ ಕೋರಮಂಗಲ‌ದ ಕೋವಿಡ್ ಕೇರ್ ಸೆಂಟರ್ ಅನ್ನ ರೀ ಓಪನ್ ಮಾಡಲು ಪಾಲಿಕೆ ತೀರ್ಮಾನಿಸಿದೆ.

ಹೌದು... ಲಗಾಮಿಲ್ಲದ ಕದುರೆಯಂತೆ ಓಡ್ತಿರೋ ಕೊರೊನಾ ಪ್ರಕರಣಗಳನ್ನು ತಡೆಯೋಕೆ ಸರ್ಕಾರ ಇದೀಗ ಇನ್ನಲ್ಲದ ಸರ್ಕಸ್ ಮಾಡ್ತಿದೆ. ಟಫ್ ರೂಲ್ಸ್ ಗಳನ್ನು ತರೋದಲ್ಲದೇ ನಗರದಲ್ಲಿ ಮುಚ್ಚಿದ್ದ ಕೋವಿಡ್ ಕೇರ್ ಸೆಂಟರ್ ನ್ನು ರೀ‌ ಓಪನ್ ಮಾಡ್ತಿದೆ. ಕೋರಮಂಗಲದ ಇಂಡೋರ್ ಕ್ರೀಡಾಂಗಣದಲ್ಲಿ ನೀರ್ಮಾಣ ಮಾಡಿದ್ದ 250 ಹಾಸಿಗೆಯುಳ್ಳ  ಹೈ ಟೆಕ್ ಕೋವಿಡ್ ಕೇರ್ ಸೆಂಟರ್ ನ್ನು ಮತ್ತೆ ಪುನಃ ಆರಂಭ ಮಾಡಲಾಗ್ತಿದ್ದು, ಸ್ವಚ್ಚತಾ ಕೆಲಸ ಈಗಾಗಲೇ ಪ್ರಾರಂಭಿಸಿದೆ. ಇನ್ನೆರಡು ದಿನಗಳಲ್ಲಿ ಈ ಕೋವಿಡ್ ಕೇರ್ ಸೆಂಟರ್ ಸಂಪೂರ್ಣವಾಗಿ ಸಿದ್ದವಾಗಲಿದೆ ಎಂದು ನಗರದ ಜಂಟೀ ಕಮಿಷನರ್ ವೀರಭದ್ರಪ್ಪ ನ್ಯೂಸ್ 18 ಕನ್ನಡಕೆ ತಿಳಿಸಿದ್ದಾರೆ.

ಇದನ್ನೂ ಓದಿ: ಮೈಮುಲ್ ಚುನಾವಣಾ ಫಲಿತಾಂಶ; ಸುದ್ದಿಗೋಷ್ಠಿಯಲ್ಲಿ ಜಿ.ಟಿ. ದೇವೇಗೌಡ ವಿರುದ್ಧ ಸಾರಾ ಮಹೇಶ್ ಕಿಡಿ

ಇನ್ನು ಕಳೆದ ಬಾರಿ‌ ಈ ಕೋವಿಡ್ ಕೇರ್ ಸೆಂಟರ್ ನಿರ್ಮಾಣಕ್ಕೆ‌ ಸ್ಥಳೀಯರಿಂದ ಭಾರಿ ವಿರೋಧ ವ್ಯಕ್ತವಾಗಿತ್ತು.‌ ನಮ್ಮ ಭಾಗದಲ್ಲಿ ಕೋವಿಡ್ ಕೇರ್ ಸೆಂಟರ್ ನಿರ್ಮಾಣ ಮಾಡಿದ್ರೆ ಸುತ್ತ ಮುತ್ತಲಿನ‌ ಜನತೆಗೆ ಕೊರೋನ ಬರುತ್ತೆ ಎಂದು ಹೆದರಿದ್ದ ಜನರಿಗೆ ಈಗ ಅದೇ ಭಯ ಕಾಡತೊಡಗಿದೆ. ಮತ್ತೆ ಯಾಕೆ ಇಲ್ಲಿ ಕೋವಿಡ್ ಕೇರ್ ಸೆಂಟರ್ ನ್ನು ನಿರ್ಮಾಣ ಮಾಡ್ತಿದ್ದಾರೆ ಎಂದು ಸ್ಥಳೀಯರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

ಒಂದುವೇಳೆ ಜನ ಮೈಮರೆತು ಓಡಾಟ ನಡೆಸಿದ್ರೆ ಮತ್ತೆ ಎಲ್ಲಾ ಚಟುವಟಿಕೆಗಳಿಗೂ ಕಡಿವಾಣ ಹಾಕುವತ್ತ ಸರ್ಕಾರ ನಿರ್ಧಾರ ಮಾಡಿದೆ. ಒಟ್ಟಿನಲ್ಲಿ ನಗರದಲ್ಲಿ ಕೊರೋನಾ ಕಾಲ ಮುಗಿದೋಯ್ತು ಅನ್ನೋ ವೇಳೆಗೆ ಮತ್ತೆ ಮಾಹಾಮಾರಿಯ ಆತಂಕ ದಿನದಿನಕ್ಕೂ ಹೆಚ್ಚಾಗಲಾರಂಭಿಸಿದೆ. ಅತ್ತ ಜನ ಸಹ ಕೊರೋನಾ ಎಲ್ಲಾ ಮಾಮೂಲು ಅನ್ನೋ ಮನಸ್ಥಿತಿಗೆ ಬಂದಿದ್ದು ಕೋವಿಡ್ ಅನ್ನು ನೆಗ್ಲೆಟ್ ಮಾಡಲಾರಂಭಿಸಿದ್ದಾರೆ. ಜನರ ಈ ವರ್ತನೆ ಸರ್ಕಾರಕ್ಕೆ ತಲೆನೋವಾಗಿದ್ದು ಅನಿವಾರ್ಯವಾದ್ರೆ ಮತ್ತೆ ದಂಡಂ ದಶಗುಣಂ ಅಸ್ತ್ರ ಪ್ರಯೋಗಕ್ಕೆ ಸರ್ಕಾರ ತೀರ್ಮಾನಿಸಿದೆ.

(ವರದಿ- ಆಶಿಕ್ ಮುಲ್ಕಿ)
Published by:MAshok Kumar
First published: