HOME » NEWS » State » CORONA POSITIVE CONFIRMED WHO HAD FELICITATED TO KPCC PRESIDENT DK SHIVAKUMAR IN KALABURGI LG

ಕೆಪಿಸಿಸಿ ಅಧ್ಯಕ್ಷರಿಗೆ ಸನ್ಮಾನಿಸಿದ್ದಾತನಿಗೆ ಕೊರೋನಾ; ಡಿಕೆಶಿಗೂ ಪಾಸಿಟಿವ್ ಭೀತಿ

ನೂರಾರು ಜನ ಸೇರಿಕೊಂಡು ಡಿಕೆ ಶಿವಕುಮಾರ್ ಗೆ ಸನ್ಮಾನ ಮಾಡಿದ್ದರು. ಡಿಕೆಶಿ ಅವರಿಗೆ ಪೇಟ ತೊಡಿಸಿ ಸಂಭ್ರಮಿಸಿದ್ದರು. ಈ ವೇಳೆ ಕಾರಿನಲ್ಲಿದ್ದ ಪ್ರಿಯಾಂಕ್ ಖರ್ಗೆಗೆ ಸನ್ಮಾನಿಸುವುದಾಗಿ ಕರೆದರೂ ಪ್ರಿಯಾಂಕ್ ಖರ್ಗೆ ಕಾರಿನಿಂದ ಇಳಿದಿರಲಿಲ್ಲ. ಇದೀಗ ಡಿಕೆಶಿಗೆ ಸನ್ಮಾನ ಮಾಡಿದ್ದ ವ್ಯಕ್ತಿಗೆ ಸೋಂಕು ಧೃಡಪಟ್ಟಿದೆ.

news18-kannada
Updated:August 7, 2020, 2:27 PM IST
ಕೆಪಿಸಿಸಿ ಅಧ್ಯಕ್ಷರಿಗೆ ಸನ್ಮಾನಿಸಿದ್ದಾತನಿಗೆ ಕೊರೋನಾ; ಡಿಕೆಶಿಗೂ ಪಾಸಿಟಿವ್ ಭೀತಿ
ಡಿಕೆಶಿಗೆ ಸನ್ಮಾನ ಮಾಡಿದ್ದ ವ್ಯಕ್ತಿ
  • Share this:
ಕಲಬುರ್ಗಿ(ಆ.07):  ಕೊರೋನಾ ಹಾಟ್ ಸ್ಪಾಟ್ ಎನಿಸಿಕೊಂಡಿದ್ದ ಕಲಬುರ್ಗಿಗೆ ಇತ್ತೀಚೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಭೇಟಿ ನೀಡಿದ್ದರು. ಕೊರೋನಾ ತಾರಕಕ್ಕೇರಿದ್ದರೂ ಸಹ ಸಾಮಾಜಿಕ ಅಂತರವಿಲ್ಲದೆ, ಕೆಲವರು ಮಾಸ್ಕ್​​​ ಸಹ ಹಾಕದೆ ಡಿ.ಕೆ.ಶಿ. ಸನ್ಮಾನ ಮಾಡಿ ಗೌರವಿಸಿದ್ದರು. ಕೆಪಿಸಿಸಿ ಅಧ್ಯಕ್ಷರಾದ ನಂತರ ಕಲಬುರ್ಗಿಗೆ ಮೊದಲ ಬಾರಿಗೆ ಭೇಟಿ ನೀಡಿದ್ದರಿಂದ ಡಿಕೆ ಶಿವಕುಮಾರ್ ಸಹ ಖುಷಿಯಿಂದಲೇ ಸನ್ಮಾನ ಮಾಡಿಸಿಕೊಂಡಿದ್ದರು. ಈಗ ಸನ್ಮಾನ ಮಾಡಿಸಿಕೊಂಡಿರುವುದರಿಂದಾಗಿ ಡಿಕೆಶಿಗೆ ಕೊರೋನಾ ಭೀತಿ ಎದುರಾಗಿದೆ. 

ಹೌದು, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್  ಅವರಿಗೆ ಕೊರೋನಾ ಟೆನ್ಷನ್ ಶುರುವಾಗಿದೆ. ಡಿಕೆಶಿ ಗೆ ಸನ್ಮಾನ ಮಾಡಿದ್ದ ವ್ಯಕ್ತಿಗೆ ಕೊರೋನಾ ಬಂದಿರುವ ಹಿನ್ನೆಲೆಯಲ್ಲಿ ಈ ಭೀತಿ ಸೃಷ್ಟಿಯಾಗಿದೆ. ಜೆ.ಎಂ.ಕೊರಬು ಫೌಂಡೇಷನ್ ಅಧ್ಯಕ್ಷ ಜಯಪ್ಪ ಕೊರಬುಗೆ ಪಾಸಿಟಿವ್ ಬಂದಿದೆ. ಆಗಸ್ಟ್ 4 ರಂದು ಡಿ.ಕೆ.ಶಿವಕುಮಾರ್ ಕಲಬುರ್ಗಿಗೆ ಭೇಟಿ ನೀಡಿದ್ದ ವೇಳೆ ಸನ್ಮಾನ ಮಾಡಲಾಗಿತ್ತು. ಅಫಜಲಪುರ ತಾಲ್ಲೂಕಿನ ಚೌಡಾಪುರ ಕ್ರಾಸ್ ನಲ್ಲಿ ಡಿಕೆಶಿಗೆ ಸನ್ಮಾನ ಮಾಡಲಾಗಿತ್ತು. ಡಿಕೆಶಿ ದತ್ತಾತ್ರೇಯ ದೇವಸ್ಥಾನಕ್ಕೆ ತೆರಳುವ ವೇಳೆ ಮಾರ್ಗ ಮಧ್ಯದಲ್ಲಿ ಸನ್ಮಾನ ಮಾಡಿದ್ದರು.

ನೂರಾರು ಜನ ಸೇರಿಕೊಂಡು ಡಿಕೆ ಶಿವಕುಮಾರ್ ಗೆ ಸನ್ಮಾನ ಮಾಡಿದ್ದರು. ಡಿಕೆಶಿ ಅವರಿಗೆ ಪೇಟ ತೊಡಿಸಿ ಸಂಭ್ರಮಿಸಿದ್ದರು. ಈ ವೇಳೆ ಕಾರಿನಲ್ಲಿದ್ದ ಪ್ರಿಯಾಂಕ್ ಖರ್ಗೆಗೆ ಸನ್ಮಾನಿಸುವುದಾಗಿ ಕರೆದರೂ ಪ್ರಿಯಾಂಕ್ ಖರ್ಗೆ ಕಾರಿನಿಂದ ಇಳಿದಿರಲಿಲ್ಲ. ಇದೀಗ ಡಿಕೆಶಿಗೆ ಸನ್ಮಾನ ಮಾಡಿದ್ದ ವ್ಯಕ್ತಿಗೆ ಸೋಂಕು ಧೃಡಪಟ್ಟಿದೆ.

Karnataka SSLC Result 2020: ಸೋಮವಾರ ಮಧ್ಯಾಹ್ನ 3ಕ್ಕೆ ಎಸ್​ಎಸ್​ಎಲ್​ಸಿ ಫಲಿತಾಂಶ ಪ್ರಕಟ

ಜೆ.ಎಂ.ಕೊಬರು ಸೇರಿದಂತೆ ಹಲವರಿಗೆ ಸೋಂಕು ದೃಢಪಟ್ಟಿದೆ. ಹೀಗಾಗಿ ಸನ್ಮಾನಿತಗೊಂಡಿರುವ ಡಿಕೆಶಿಗೂ ಸೋಂಕಿನ ಭೀತಿ ಎದುರಾಗಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಜೆ.ಎಂ.ಕೊರಬು, ನನ್ನ ಮಗನಿಗೆ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ನಾನೂ ಟೆಸ್ಟ್ ಮಾಡಿಸಿಕೊಂಡಿದ್ದೆ. ನಾನು ಸೇರಿದಂತೆ ನನ್ನ ಸಂಪರ್ಕದಲ್ಲಿದ್ದ ಕೆಲವರಿಗೆ ಸೋಂಕು ದೃಢಪಟ್ಟಿದೆ ಎಂದಿದ್ದಾರೆ. ತಮ್ಮ ಫಾರ್ಮ್ ಹೌಸ್ ನಲ್ಲಿ ಕೆಲಸ ಮಾಡುವ ಕಾರ್ಮಿಕರಿಗೂ ಟೆಸ್ಟ್ ಮಾಡಿಸಲಾಗುತ್ತಿದ್ದು, ಓರ್ವ ಕಾರ್ಮಿಕರಿಗೆ ಸೋಂಕು ದೃಢಪಟ್ಟಿದೆ. ಹೀಗಾಗಿ ಡಿಕೆಶಿ ಸೇರಿ ಈ ವೇಳೆ ಉಪಸ್ಥಿತರಿದ್ದ ಕಾಂಗ್ರೆಸ್ ನಾಯಕರಿಗೆ ಕೊರೋನಾ ಸೋಂಕು ತಗುಲಿರಬಹುದಾ ಎಂಬ ಅನುಮಾನಗಳು ಹುಟ್ಟಿಕೊಂಡಿವೆ.

ನಾನು ಯಾರ ಪ್ರಾಥಮಿಕ ಸಂಪರ್ಕದಲ್ಲೂ ಇಲ್ಲ ಎಂದಿದ್ದ ಡಿ.ಕೆ.ಶಿ

ಆಗಸ್ಟ್​​ 04 ರಂದು ಗಾಣಗಾಪುರದಲ್ಲಿ ದತ್ತ ದರ್ಶನ ಪಡೆದುಕೊಂಡ ನಂತರ ಕಲಬುರ್ಗಿಗೆ ವಾಪಸ್ಸಾಗಿದ್ದ ಡಿ.ಕೆ.ಶಿವಕುಮಾರ್, ನಾನು ಯಾರ ಜೊತೆಯೂ ಪ್ರೈಮರಿ ಕಾಂಟ್ಯಾಕ್ಟ್ ನಲ್ಲಿಲ್ಲ. ಇದೆಲ್ಲ ಗಾಳಿ ಸುದ್ದಿ ಎಂದಿದ್ದರು. ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯಗೆ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಅವರ ಜೊತೆ ಹೋರಾಟ ಮಾಡಿದ್ದ ತಮಗೂ ಸೋಂಕಿನ ಭೀತಿ ಇದೆಯೇ ಎಂದು ಪತ್ರಕರ್ತರು ಪ್ರಶ್ನಿಸಿದ್ದಾಗ, ನಾನು ಫಿಟ್ ಆ್ಯಂಡ್ ಫೈನ್ ಇದೇನೆ ಎಂದಿದ್ದರು.ಸಮಯಕ್ಕೆ ತಕ್ಕಂತೆ ನಾನು ಟ್ರೀಟ್‌ಮೆಂಟ್ ತೆಗೆದುಕೊಳ್ಳುತ್ತಿದ್ದೇನೆ. ಸಂಜೆಯಾದ್ರೆ ಮದ್ದು ಗುಂಡುಗಳನ್ನ ಸೇವಿಸುತ್ತೇನೆ ಎಂದಿದ್ದರು. ನಾನು ಆರೋಗ್ಯವಾಗಿದ್ದೇನೆ ಎಂದು ಹೇಳಿ ಡಿಕೆಶಿ ಕೊರಳಲ್ಲಿನ ಆಸ್ಪತ್ರೆ ಐಡಿ ಕಾಡ್೯ ಕೂಢ ತೋರಿಸಿದ್ದರು. ಯಾರು ಭಯ ಪಡುವ ಅವಶ್ಯಕತೆ ಇಲ್ಲ ಎಂದು ಸ್ಪಷ್ಟನೆ ನೀಡಿದ್ದರು.

ನಂತರ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಭಾಗಿಯಾಗಿ, ಸಂಜೆ ಶರಣಬಸವೇಶ್ವರ ದೇವಸ್ಥಾನ ಹಾಗೂ ಖ್ವಾಜಾ ಬಂದೇನವಾಜ್ ದರ್ಗಾಕ್ಕೆ ಭೇಟಿ ನೀಡಿದ್ದರು. ಇದೀಗ ಅವರಿಗೆ ಸನ್ಮಾನ ಮಾಡಿದ ವ್ಯಕ್ತಿಯೋರ್ವರಿಗೆ ಕೊರೋನಾ ಪಾಸಿಟಿವ್ ಬಂದಿರುವ ಜೊತೆಗೆ, ಅವರ ಜೊತೆಗಿದ್ದವರಿಗೂ ಸೋಂಕು ತಗುಲಿರುವುದರಿಂದ ಡಿಕೆಶಿಗೂ ಪಾಟಿಸಿವ್ ಭೀತಿ ಎದುರಾಗಿದೆ.
Published by: Latha CG
First published: August 7, 2020, 2:27 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories