ಕೊರೋನಾ ಭೀತಿ; ಮೈಸೂರಿನ ಶಾಸಕರೊಂದಿಗೆ ವಿಡಿಯೋ ಕಾನ್ಫರೆನ್ಸ್‌ ನಡೆಸಿದ ಮಾಜಿ ಸಿಎಂ ಎಚ್‌ಡಿಕೆ

ವಿಡಿಯೋ ಕಾನ್ಫರೆನ್ಸ್‌ನಲ್ಲಿ ಮಾಜಿ ಸಚಿವ, ಕೆಆರ್‌ ನಗರ ಶಾಸಕ ಸಾ.ರಾ ಮಹೇಶ್‌, ಟಿ. ನರಸೀಪುರ ಶಾಸಕ ಅಶ್ವಿನ್‌ ಕುಮಾರ್‌, ಪಿರಿಯಾಪಟ್ಟಣ ಶಾಸಕ ಮಹದೇವು ಪಾಲ್ಗೊಂಡಿದ್ದರು ಎಂದು ತಿಳಿದುಬಂದಿದೆ.

MAshok Kumar | news18-kannada
Updated:March 30, 2020, 4:04 PM IST
ಕೊರೋನಾ ಭೀತಿ; ಮೈಸೂರಿನ ಶಾಸಕರೊಂದಿಗೆ ವಿಡಿಯೋ ಕಾನ್ಫರೆನ್ಸ್‌ ನಡೆಸಿದ ಮಾಜಿ ಸಿಎಂ ಎಚ್‌ಡಿಕೆ
ಹೆಚ್‌.ಡಿ. ಕುಮಾರಸ್ವಾಮಿ.
  • Share this:
ಬೆಂಗಳೂರು: ಕೊರೊನಾ ವೈರಸ್‌ನಿಂದ ಭಾದಿತವಾಗಿರುವ ಮೈಸೂರು ಜಿಲ್ಲೆಯ ಸ್ಥಿತಿಗತಿಯ ಕುರಿತು ಮಾಜಿ ಮುಖ್ಯಮಂತ್ರಿ ಎಚ್‌.ಡಿ ಕುಮಾರಸ್ವಾಮಿ ಅವರು ಜಿಲ್ಲೆಯ ಶಾಸಕರೊಂದಿಗೆ ವಿಡಿಯೋ ಕಾನ್ಫರೆನ್ಸ್‌ ಮೂಲಕ ಇಂದು ಚರ್ಚಿ ನಡೆಸಿದ್ಧಾರೆ.

ವಿಡಿಯೋ ಕಾನ್ಫರೆನ್ಸ್‌ನಲ್ಲಿ ಮಾಜಿ ಸಚಿವ, ಕೆಆರ್‌ ನಗರ ಶಾಸಕ ಸಾ.ರಾ ಮಹೇಶ್‌, ಟಿ. ನರಸೀಪುರ ಶಾಸಕ ಅಶ್ವಿನ್‌ ಕುಮಾರ್‌, ಪಿರಿಯಾಪಟ್ಟಣ ಶಾಸಕ ಮಹದೇವು ಪಾಲ್ಗೊಂಡಿದ್ದರು ಎಂದು ತಿಳಿದುಬಂದಿದೆ.

ಲಾಕ್‌ಡೌನ್‌ ನಿಮಿತ್ತ ಮನೆಯಲ್ಲೇ ಉಳಿದುಕೊಂಡಿರುವ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಮೈಸೂರು ಭಾಗದ ತಮ್ಮ ಪಕ್ಷದ ಶಾಸಕರ ಜೊತೆಗೆ ವಿಡಿಯೋ ಕಾನ್ಫರೆನ್ಸ್ ನಡೆಸಿದ್ಧಾರೆ. ಅಲ್ಲದೆ, "ಎಲ್ಲದಕ್ಕೂ ಸರ್ಕಾರಕ್ಕೇ ಕಾಯದೇ ಶಾಸಕರೇ ಸ್ಥಳೀಯವಾಗಿ ಜನರಲ್ಲಿ ಜಾಗೃತಿ ಮೂಡಿಸುವಂತೆಯೂ, ಸಾರ್ವಜನಿಕರಿಗೆ ನೆರವಾಗುವಂತೆಯೂ" ತಿಳಿಸಿದ್ದಾರೆ ಎನ್ನಲಾಗುತ್ತಿದೆ.

ಇದನ್ನೂ ಓದಿ : ಲಾಕ್‌ಡೌನ್‌ನಿಂದಾಗಿ ರೈತ ಹಾಗೂ ಬಳಕೆದಾರ ಇಬ್ಬರೂ ಕಂಗಾಲಾಗಿದ್ದಾರೆ ಸರ್ಕಾರ ತಕ್ಷಣ ಮಧ್ಯಪ್ರವೇಶಿಸಲಿ; ಸಿದ್ದರಾಮಯ್ಯ
First published: March 30, 2020, 4:04 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading