HOME » NEWS » State » CORONA NIGHT CURFEW IN BANGALORE FLYOVER CLOSES AT 9 30 PM SESR

Bangalore Night Curfew: ರಾಜಧಾನಿಯ ಗಡಿಯಲ್ಲಿ ನಾಕಬಂದಿ; 9.30ಕ್ಕೆ ಫ್ಲೈ ಓವರ್ ಸಂಚಾರ ಬಂದ್

ಕರ್ಫ್ಯೂ ಹಿನ್ನಲೆ ರಾತ್ರಿ 9:30ರೊಳಗೆ ಎಲ್ಲಾ ಫ್ಲೈ ಓವರ್ ಬಂದ್​​ ಮಾಡಲು ಸೂಚನೆ ನೀಡಲಾಗಿದೆ. ನಗರದ ಒಟ್ಟು 47 ಫ್ಲೈ ಓವರ್​​​ಗಳು ಬಂದ್ ಮಾಡಿದ ಬಳಿಕ ಪೊಲೀಸರು ರಸ್ತೆಗಳನ್ನು ಬಂದ್​ ಮಾಡಲಿದ್ದಾರೆ.

news18-kannada
Updated:April 10, 2021, 8:08 PM IST
Bangalore Night Curfew: ರಾಜಧಾನಿಯ ಗಡಿಯಲ್ಲಿ ನಾಕಬಂದಿ; 9.30ಕ್ಕೆ ಫ್ಲೈ ಓವರ್ ಸಂಚಾರ ಬಂದ್
ನೈಟ್ ಕರ್ಫ್ಯೂ
  • Share this:
ಬೆಂಗಳೂರು (ಏ. 10): ರಾಜ್ಯದಲ್ಲಿ ಕೊರೋನಾ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನಲೆ ಇಂದಿನಿಂದ ನೈಟ್​ ಕರ್ಫ್ಯೂ ಜಾರಿಯಾಗಲಿದೆ. ರಾಜಧಾನಿ ಸೇರಿದಂತೆ 7 ಜಿಲ್ಲೆಗಳಲ್ಲಿ ಇಂದು ರಾತ್ರಿ 10 ರಿಂದ ಬೆಳಗ್ಗೆ 5ರವರೆಗೆ ಕರ್ಫ್ಯೂ ಜಾರಿಯಾಗಲಿದೆ. ರಾಜಧಾನಿಯಲ್ಲಿ ಅತಿಹೆಚ್ಚು ಸೋಂಕು ಪ್ರಕರಣ ಪತ್ತೆಯಾಗುತ್ತಿರುವ ಹಿನ್ನಲೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಾಗಿದ್ದು, ಕರ್ಫ್ಯೂ ವೇಳೆ ನಿಯಮ ಉಲ್ಲಂಘಿಸಿ ಸಂಚಾರ ಕಂಡು ಬಂದರೆ ಅವರ ವಾಹನ ಜಪ್ತಿ ಮಾಡಲು ಕಮಿಷನರ್​ ಆದೇಶಿಸಿದ್ದಾರೆ. ಕರ್ಫ್ಯೂಗೆ ಈಗಾಗಲೇ ಸಿದ್ಧತೆ ಆರಂಭಿಸಿದ್ದು, ಅಂತರ್ ಜಿಲ್ಲಾ ಚೆಕ್ ಪಾಯಿಂಟ್ ಗಳನ್ನು ನಿರ್ಮಿಸಲಾಗಿದೆ. ನಗರದ ನಾಲ್ಕು ದಿಕ್ಕಿನಲ್ಲೂ ಪ್ರವೇಶ ದ್ವಾರದ ಬಳಿ ಚೆಕ್​ ಪಾಯಿಂಟ್​ ನಿರ್ಮಿಸಲಾಗಿದ್ದು, ಪೊಲೀಸ್ ಭದ್ರತೆ ನಿಯೋಜಿಸಲಾಗಿದೆ.

ನಗರದಲ್ಲಿ ವಿನಾಯತಿ ವಾಹನಗಳ ಓಡಾಟಕ್ಕೆ ಅವಕಾಶ ಮಾಡಿಕೊಡಲಾಗಿದೆ. ಮೆಡಿಕಲ್ ಎಮರ್ಜೆನ್ಸಿ, ಗೂಡ್ಸ್ ವಾಹನ ಓಡಾಟ ಮಾಡಲಿದ್ದು, ಬೇರೆ ಯಾವ ವಾಹನ ಓಡಾಟಕ್ಕೂ ಅವಕಾಶವಿಲ್ಲ. ಒಂದು ವೇಳೆ ಖಾಲಿ ರಸ್ತೆ ಸಂಚಾರ ಎಂದು ಸುಖಾಸುಮ್ಮನೆ ರೋಡಿಗೆ ಬಂದರೆ ಎಂಡಿಎಂಎ ಆಕ್ಟ್ ಅಡಿಯಲ್ಲಿ ವಾಹನ ವಶಕ್ಕೆ ಪಡೆಯಲಾಗುವುದು ಎಂದು ಈಗಾಗಲೇ ತಿಳಿಸಲಾಗಿದೆ.

ರಾಜಧಾನಿ ಗಡಿಯಲ್ಲಿ ಚೆಕ್​ಪೋಸ್ಟ್​​

ಕೆಂಗೇರಿ ಬಳಿಯ ನೈಸ್ ಜಂಕ್ಷನ್ ಬಳಿ ಅಂತರ್ಜಿಲ್ಲಾ ಚೆಕ್ ಪಾಯಿಂಟ್ ರೂಪಿಸಲಾಗಿದ್ದು, ಈಗಾಗಲೇ‌ ಬ್ಯಾರಿಕೇಡ್ ಗಳನ್ನು ಹಾಕಿ ಪೊಲೀಸರು ಸಿದ್ದಗೊಳಿಸಿದ್ದಾರೆ. ಅಲ್ಲದೇ ಹೆಚ್ಚುವರಿಯಾಗಿ ಪೊಲೀಸ್ ಭದ್ರತೆ ಸಹ ನಿಯೋಜನೆ ಮಾಡಲಾಗಿದೆ. ಬೆಂಗಳೂರಿನಿಂದ ಹೋಗುವವರಿಗೆ ಟಿಕೆಟ್ ಕಡ್ಡಾಯವಾಗಿದ್ದು, ಟಿಕೆಟ್ ತೋರಿಸಿ ಹೊರ ಹೋಗಲು ಅವಕಾಶ ನೀಡಲಾಗಿದೆ.

ಬಾಗಲಗುಂಟೆ ಪೊಲೀಸರಿ ಬೆಂಗಳೂರು ಗಡಿಯಲ್ಲಿ ನಾಕಬಂದಿಗೆ ಸಿದ್ಧತೆ  ನಡೆಸಿದ್ದಾರೆ. 8ನೇ ಮೈಲಿ ಬಳಿ ಬ್ಯಾರಿಕೇಡ್ ಹಾಕಿದ್ದು, ಬೆಂಗಳೂರು-ತುಮಕೂರು ರಾ.ಹೆದ್ದಾರಿಯಲ್ಲಿ ರಾತ್ರಿ 10ಕ್ಕೆ ಬೆಂಗಳೂರು ಪ್ರವೇಶ ಸಂಪೂರ್ಣ ಬಂದ್ ಆಗಲಿದೆ.

ಇದನ್ನು ಓದಿ: 15 ದಿನದೊಳಗಾಗಿ ಬಿಬಿಎಂಪಿಯ ದಕ್ಷಿಣ ವಲಯದಲ್ಲಿ 5 ಲಕ್ಷ ಲಸಿಕೆ; ಸಚಿವ ಅಶೋಕ್ ಸೂಚನೆ

ರಾತ್ರಿ 9:30ರೊಳಗೆ ಫ್ಲೈ ಓವರ್ ಬಂದ್ಕರ್ಫ್ಯೂ ಹಿನ್ನಲೆ ರಾತ್ರಿ 9:30ರೊಳಗೆ ಎಲ್ಲಾ ಫ್ಲೈ ಓವರ್ ಬಂದ್​​ ಮಾಡಲು ಸೂಚನೆ ನೀಡಲಾಗಿದೆ. ನಗರದ ಒಟ್ಟು 47 ಫ್ಲೈ ಓವರ್​​​ಗಳು ಬಂದ್ ಮಾಡಿದ ಬಳಿಕ ಪೊಲೀಸರು ರಸ್ತೆಗಳನ್ನು ಬಂದ್​ ಮಾಡಲಿದ್ದಾರೆ.

ಅನೇಕ ರಸ್ತೆಗಳು ಬಂದ್​

ಇಪ್ಪತ್ತು ಮುಖ್ಯ ರಸ್ತೆಗಳನ್ನು ಸಿಂಗಲ್ ರಸ್ತೆಗಳಾಗಿ ಪರಿವರ್ತನೆ ಮಾಡಲಾಗಿದೆ. 24 ಮುಖ್ಯ ರಸ್ತೆಗಳು‌ ಬಂದ್ ಮಾಡಿದ್ದು, 42 ಸಣ್ಣ ಮತ್ತು ಅತಿ ಸಣ್ಣ‌ ರಸ್ತೆಗಳನ್ನು ಮುಚ್ಚಲಾಗಿದೆ. ಆಗ್ನೆಯ‌ ವಿಭಾಗದಲ್ಲಿ ಒಟ್ಟು 36 ಚೆಕ್ ಪೋಸ್ಟ್ ಗಳು ನಿರ್ಮಾಣ ಮಾಡಲಾಗಿದೆ. ಕೋರಮಗಲ, ತಿಲಕ್ ನಗರ, ಎಲೆಕ್ಟ್ರಾನಿಕ್ ಸಿಟಿ, ಬೊಮ್ಮನಹಳ್ಳಿ, ಆಡುಗೋಡಿ , ಸದ್ದುಗುಂಟೆಪಾಳ್ಯ ,ಬಂಡೇಪಾಳ್ಯ, ಹುಳಿಮಾವು, ಪೊಲೀಸರಿಂದ ಬಿಗಿ ಬಂದೋಬಸ್ತ್ ನಡೆಸಲಾಗಿದೆ.

ಕೈಗಾರಿಕೆಗಳಿಗೆ ಪ್ರತ್ಯೇಕ ಮಾರ್ಗಸೂಚಿ ಹೊರಡಿಸಿದ ರಾಜ್ಯ ಸರ್ಕಾರ

ನೈಟ್​ಕರ್ಪ್ಯೂ ಹಿನ್ನಲೆ ರಾಜ್ಯ ಸರ್ಕಾರ ಕೈಗಾರಿಕೆಗಳಿಗೆ ಪ್ರತ್ಯೇಕ ಮಾರ್ಗಸೂಚಿ ಹೊರಡಿಸಿದೆ. ನೌಕರರನ್ನ ಕೈಗಾರಿಕೆಗಳಿಗೆ ತೆರಳಲು ಇರುವ ವಾಹನಗಳಿಗೆ ಅನುಮತಿ ನೀಡಿದ್ದು, ಆ ವಾಹನಗಳಿಗೆ ಅದೇ ಕಂಪನಿಯ ಅಧಿಕೃತ ಪತ್ರ ಕಡ್ಡಾಯವಾಗಿದೆ. ಎಲ್ಲಾ ಸಿಬ್ಬಂದಿಗಳು ಅವರು ಕಂಪನಿಯ ಗುರುತಿನ ಚೀಟ್ ಕಡ್ಡಾಯವಾಗಿ ಅವರ ಬಳಿ ಇರಬೇಕು. ಕೋವಿಡ್ ನಿಯಮಗಳನ್ನ ಕಡ್ಡಾಯ ಎಲ್ಲರು ಪಾಲಿಸಬೇಕು ಎಂದು ತಿಳಿಸಿದೆ.

ಬೆಂಗಳೂರು ಹೊರತುಪಡಿಸಿ ಮೈಸೂರು, ಮಂಗಳೂರು, ಕಲ್ಬುರ್ಗಿ, ಬೀದರ್​, ತುಮಕೂರು, ಉಡುಪಿ-ಮಣಿಪಾಲ ನಗರಗಳಲ್ಲಿ ರಾತ್ರಿ ಕರ್ಫ್ಯೂ ಇಂದಿನಿಂದ ಜಾರಿಯಾಗಲಿದೆ. ಅಲ್ಲಿನ ಜಿಲ್ಲಾಡಳಿತ, ಪೊಲೀಸ್​ ಅಧಿಕಾರಿಗಳು ಈಗಾಗಲೇ ಸಿದ್ಧತೆ ನಡೆಸಿದ್ದು, ರಾತ್ರಿ ಸಂಚಾರಕ್ಕೆ ಸಂಪೂರ್ಣ ತಡೆ ನೀಡಲಿದ್ದಾರೆ. ಇಂದಿನಿಂದ ಏಪ್ರಿಲ್​ 20ರವರೆಗೆ ಈ ಕರ್ಫ್ಯೂ ಜಾರಿಯಲಿರಲಿದೆ.
Published by: Seema R
First published: April 10, 2021, 7:51 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories