ಬೆಂಗಳೂರು (ಮಾ. 17): ರಾಜ್ಯಾದ್ಯಂತ ಕೊರೋನಾ ಭೀತಿ ಹೆಚ್ಚಾಗಿದ್ದು, ಈಗಾಗಲೇ ಓರ್ವ ವ್ಯಕ್ತಿ ಸಾವನ್ನಪ್ಪಿದ್ದು, 9 ಜನರಿಗೆ ಸೋಂಕು ಕಾಣಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಆರೋಗ್ಯ ಇಲಾಖೆ ಎಲ್ಲೆಡೆ ಕಟ್ಟೆಚ್ಚರ ವಹಿಸಲು ಸೂಚಿಸಿದೆ. ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲ ನಗರಗಳಲ್ಲೂ ಕೊರೋನಾ ಭೀತಿಯಿಂದಾಗಿ ಬಸ್ ಪ್ರಯಾಣಿಕರ ಸಂಖ್ಯೆ ಭಾರೀ ಇಳಿಮುಖವಾಗಿದೆ. ಕೆಎಸ್ಆರ್ಟಿಸಿ ಮತ್ತು ಬಿಎಂಟಿಸಿಗೂ ಕೊರೋನಾ ಬಿಸಿ ತಟ್ಟಿದೆ. ಕಳೆದ 15 ದಿನಗಳಿಂದ ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದ್ದು, ಮೂರೂವರೆ ಕೋಟಿ ರೂ.ನಷ್ಟ ಉಂಟಾಗಿದೆ.
ಕಳೆದ 10 ದಿನಗಳಿಂದ ಪ್ರಯಾಣಿಕರ ಸಂಖ್ಯೆ ಭಾರೀ ಕಡಿಮೆಯಾಗಿರುವುದರಿಂದ ಸಾರಿಗೆ ಸಂಸ್ಥೆಗಳಿಗೆ ಹೊಡೆತ ಬಿದ್ದಿದೆ. 10 ದಿನಗಳಲ್ಲಿ ಕೋಟಿಗಟ್ಟಲೆ ನಷ್ಟ ಉಂಟಾಗಿದೆ. ಕೊರೋನಾ ವೈರಸ್ ಆತಂಕದ ಪರಿಣಾಮ ಬರೋಬ್ಬರಿ 3,40,40,466 ರೂ. ನಷ್ಟ ಸಂಭವಿಸಿದೆ. ಮಾ. 11 ರಿಂದ 15ರ ಅವಧಿಯಲ್ಲಿ ಕೆಎಸ್ಆರ್ಟಿಸಿಗೆ ಅತಿ ಹೆಚ್ಚು ನಷ್ಟ ಉಂಟಾಗಿದೆ.
ಇದನ್ನೂ ಓದಿ: ಕೊರೋನಾ ಬೆನ್ನಲ್ಲೇ ಹಕ್ಕಿಜ್ವರ ಭೀತಿ; ಮೈಸೂರಿನಲ್ಲಿ ಸಾಕಿರುವ ಎಲ್ಲಾ ಹಕ್ಕಿಗಳನ್ನು ಕೊಲ್ಲಲು ಆದೇಶ!
ಕೊರೋನಾ ಭೀತಿಯಿಂದ ಬಿಎಂಟಿಸಿ ಮತ್ತು ಕೆಎಎಸ್ಆರ್ಟಿಸಿ ವಹಿವಾಟಿನಲ್ಲಿ ಶೇ. 50ಕ್ಕೂ ಹೆಚ್ಚು ಇಳಿಕೆಯಾಗಿದೆ. ಹೆಚ್ಚು ಜನ ಗುಂಪು ಸೇರಬಾರದು ಎನ್ನುವ ಎಚ್ಚರಿಕೆ ಹಿನ್ನೆಲೆ ಬಸ್ಗಳಲ್ಲಿ ಓಡಾಡಲು ಜನ ಹಿಂಜರಿಯುತ್ತಿದ್ದಾರೆ. ಬೆಳಗಿನ ಹೊತ್ತು ಜನರಿಂದ ತುಂಬಿ ತುಳುಕುತ್ತಿದ್ದ ಮೆಜೆಸ್ಟಿಕ್ ಈಗ ಬಿಕೋ ಎನ್ನುತ್ತಿದೆ. ಶಾಲೆ, ಕಚೇರಿಗಳಿಗೆ ತೆರಳುವವರು ಇಲ್ಲದೆ ಬಸ್ಗಳು ಖಾಲಿ ಹೊಡೆಯುತ್ತಿವೆ. ಶಾಲೆಗಳಿಗೆ ರಜೆ, ಕಚೇರಿಗಳು ವರ್ಕ್ ಫ್ರಮ್ ಹೋಮ್, ಹೊರರಾಜ್ಯಗಳಿಗೆ ಹೋಗೋರಂತೂ ಇಲ್ಲವೇ ಇಲ್ಲ. ಈ ಹಿನ್ನೆಲೆಯಲ್ಲಿ ಕೆಎಸ್ಆರ್ಟಿಸಿ ಮತ್ತು ಬಿಎಂಟಿಸಿಗೆ ಭಾರೀ ಹೊಡೆತ ಬಿದ್ದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ