ಚುನಾವಣೆ ಮುಗಿದ ಬಳಿಕ ಹೆಚ್ಚಾದ ಕೊರೋನಾ ಭೀತಿ; ಇಡೀ ಶಿರಾ ಕ್ಷೇತ್ರಕ್ಕೇ ರ‍್ಯಾಪಿಡ್ ಟೆಸ್ಟ್

ಹತ್ತು ದಿನಗಳಲ್ಲಿ ಸುಮಾರು 50 ಸಾವಿರ ಮಂದಿಗೆ ಟೆಸ್ಟ್ ಮಾಡಲೇಬೇಕು ಎಂಬ ಟಾರ್ಗೆಟ್ ನ್ನ ಆರೋಗ್ಯ ಇಲಾಖೆ ಕೊಟ್ಟಿದೆ. ನಿನ್ನೆ ಕ್ಷಿಪ್ರಗತಿಯಲ್ಲಿ ಟೆಸ್ಟ್ ಪ್ರಾರಂಭಿಸಿರೋ ವೈದ್ಯರು ಒಂದೇ ದಿನ 1300 ಟೆಸ್ಟ್ ಗಳನ್ನ ಮಾಡಿ 28 ಕೋವಿಡ್ ಎ ಸಿಂಪ್ಟಮಟಿಕ್ ಸೋಂಕಿತರನ್ನ ಪತ್ತೆಹಚ್ಚಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ತುಮಕೂರು(ನ.07): ಬಹುನಿರೀಕ್ಷಿತ ಶಿರಾ ಉಪಚುನಾವಣೆ ಮುಗಿದಿದೆ. ಕೋವಿಡ್ ಸಂದರ್ಭದಲ್ಲಿ ಸರ್ಕಾರ ಸಾಕಷ್ಟು‌ ಮುಂಜಾಗ್ರತಾ ಕ್ರಮ ಅನುಸರಿಸಿ ಚುನಾವಣೆ ನಡೆಸಿದ್ರೂ‌ ಕೂಡ,  ಶಿರಾ ತಾಲೂಕಿನಲ್ಲಿ ಕೊರೋನಾ ಹೆಚ್ಚುವ ಆತಂಕ ಎದುರಾಗಿದೆ. ಇದಕ್ಕಾಗಿಯೇ ಜಿಲ್ಲಾಡಳಿತ ಬಹಳ ದೊಡ್ಡ ಹೆಜ್ಜೆ ಇಟ್ಟಿದ್ದು ತಾಲೂಕಿನ ಶೇ‌. 20 ರಷ್ಟು  ಜನರಿಗೆ ಹಂತ ಹಂತವಾಗಿ ಕೋವಿಡ್ ಪರೀಕ್ಷೆ ಮಾಡಲು ಮುಂದಾಗಿದೆ. ಕೋವಿಡ್ ಮಹಾಮಾರಿ ಎಲ್ಲಡೆ ಹೆಚ್ಚಾಗ್ತಿದೆ. ಭಾರತ ಸೇರಿದಂತೆ ಅನೇಕ ದೇಶಗಳು ಎರಡನೇ ಹಂತದ ಕೊರೋನಾತಂಕದ ಭೀತಿಗೆ ಒಳಗಾಗಿವೆ. ಈ ನಡುವೆ ಸಾರ್ವಜನಿಕರು ಕೋವಿಡ್ ಎಲ್ಲಾ ಸುರಕ್ಷತೆಗಳನ್ನು ಧಿಕ್ಕರಿಸಿ ಒಡಾಡ್ತಿದ್ದಾರೆ. ಕರ್ನಾಟಕದಲ್ಲಿ ಕೋವಿಡ್ ಸೋಂಕಿತರು ಕಡಿಮೆಯಾದರೂ ವೈರಸ್ ಹರಡುವ ಭೀತಿ ಕಡಿಮೆಯಾಗಿಲ್ಲ. ಈ ನಡುವೆ ನಡೆದ ಆರ್.ಆರ್.ನಗರ ಹಾಗೂ ಶಿರಾ ಉಪಚುನಾವಣೆ ಕೊರೋನಾ ಹೆಚ್ಚಾಗುವ ಭಯ ತಂದೊಡ್ಡಿದೆ.

ಕೊರೋನಾ ಸೋಂಕಿತರನ್ನು ಬಹುಬೇಗ ಪತ್ತೆ ಹಚ್ಚಿ ಸಮುದಾಯಕ್ಕೆ ಹರಡುವುದನ್ನ ತಪ್ಪಿಸಲು ಜಿಲ್ಲಾ ಆರೋಗ್ಯ ಇಲಾಖೆ ಮುಂದಾಗಿದ್ದು ಶೇ‌‌.20 ರಷ್ಟು ಜನರಿಗೆ ಪರೀಕ್ಷೆ ಮಾಡಲು ಮುಂದಾಗಿದೆ. ಈಗಾಗಲೇ ಶಿರಾ ಉಪಚುನಾವಣೆ ಹಿನ್ನಲೆಯಲ್ಲಿ ಸಾಕಷ್ಟು ಬಹಿರಂಗ ಪ್ರಚಾರ ಕಾರ್ಯಕ್ರಮಗಳು ನಡೆದಿದ್ದು, ತಾಲೂಕಿಗೆ ಬೇರೆ ಬೇರೆ ಜಿಲ್ಲೆ ಹಾಗೂ ರಾಜ್ಯಗಳಿಂದ ಬಂದು ಪ್ರಚಾರದಲ್ಲಿ ಪಕ್ಷಗಳ ಕಾರ್ಯಕರ್ತರು ತೊಡಗಿಕೊಂಡಿದ್ದರು. ಇದೇ ಈಗ ತಾಲೂಕಿನಲ್ಲಿ ಕೊರೋನಾ ಹೆಚ್ಚಳಕ್ಕೆ ಕಾರಣವಾಗಿದ್ದು, ನಿನ್ನೆಯಿಂದ ಶಿರಾ ತಾಲ್ಲೂಕಿನಾದ್ಯಂತ ಶೇಕಡ 20ರಷ್ಟು ಮಂದಿಗೆ ಕೊರೋನಾ ಪರೀಕ್ಷೆ ಮಾಡಲು ಜಿಲ್ಲಾ ಆರೋಗ್ಯ ಇಲಾಖೆ ಮುಂದಾಗಿದೆ.

ಪಿಎಂ ಕಿಸಾನ್ ಯೋಜನೆಯಡಿ ಸಹಾಯಧನ ಪಡೆದ ಫಲಾನುಭವಿಗಳಿಗೆ ನೋಟೀಸ್ ಶಾಕ್; ಹಣ ವಾಪಾಸ್ ಕಟ್ಟಲು ಸೂಚಿಸಿದ ಕೃಷಿ ಇಲಾಖೆ

ಹತ್ತು ದಿನಗಳಲ್ಲಿ ಸುಮಾರು 50 ಸಾವಿರ ಮಂದಿಗೆ ಟೆಸ್ಟ್ ಮಾಡಲೇಬೇಕು ಎಂಬ ಟಾರ್ಗೆಟ್ ನ್ನ ಆರೋಗ್ಯ ಇಲಾಖೆ ಕೊಟ್ಟಿದೆ. ನಿನ್ನೆ ಕ್ಷಿಪ್ರಗತಿಯಲ್ಲಿ ಟೆಸ್ಟ್ ಪ್ರಾರಂಭಿಸಿರೋ ವೈದ್ಯರು ಒಂದೇ ದಿನ 1300 ಟೆಸ್ಟ್ ಗಳನ್ನ ಮಾಡಿ 28 ಕೋವಿಡ್ ಎ ಸಿಂಪ್ಟಮಟಿಕ್ ಸೋಂಕಿತರನ್ನ ಪತ್ತೆಹಚ್ಚಿದ್ದಾರೆ. ಆರೋಗ್ಯ ಇಲಾಖೆ ಹಾಗೂ ಬೇರೆ ಬೇರೆ ಇಲಾಖೆಯ ಸಿಬ್ಬಂದಿಗಳನ್ನು ಒಳಗೊಂಡ ತಂಡವೊಂದನ್ನು ರಚನೆ ಮಾಡಲಾಗಿದೆ.

ಒಟ್ಟು ಶಿರಾ ತಾಲ್ಲೂಕಿನ 33 ಗ್ರಾಮ ಪಂಚಾಯ್ತಿಯಲ್ಲಿ ಪರೀಕ್ಷೆ ಮಾಡಲಾಗ್ತಿದೆ. ಮೊದಲ ಹಂತದಲ್ಲಿ ವಯೋವೃದ್ಧರಿಗೆ ಕಡ್ಡಾಯವಾಗಿ ಕೊರೋನಾ ಟೆಸ್ಟ್ ಹಾಗೂ ಮೊದಲ ಆದ್ಯತೆ ಮೇರೆಗೆ ಪರೀಕ್ಷೆ ನಡೆಸಲಾಗ್ತಿದ್ದು ಜ್ವರ, ಕೆಮ್ಮು, ಶೀತ ಲಕ್ಷಣದವರಿಗೆ ಕೊರೋನಾ ಪರೀಕ್ಷೆ ಮಾಡಲಾಗ್ತಿದೆ. ಶಿರಾ ತಾಲ್ಲೂಕಿನ 10 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲೂ ಏಕಕಾಲದಲ್ಲಿ ಟೆಸ್ಟ್ ಮಾಡಲಾಗುತ್ತಿದೆ. ಇದಕ್ಕಾಗಿ 40ಕ್ಕೂ ಹೆಚ್ಚು ಟೀಂ ಮಾಡಲಾಗಿದೆ.

ಒಟ್ಟಾರೆ ಉಪಚುನಾವಣೆ ಯಾರಿಗೆ ಗೆಲುವಿನ ಮಾಲೆ ಹಾಕುವುದೋ  ಗೊತ್ತಿ.ಲ್ಲ ಆದರೆ ಕೋವಿಡ್ ಉರುಳು ತಾಲೂಕಿನ ಜನಕ್ಕೆ ನಿಧಾನವಾಗಿ ಸುತ್ತಿಕೊಳ್ಳಲು ಶುರುಮಾಡಿದೆ. ಆದಷ್ಟೂ ಬೇಗ ಪರೀಕ್ಷೆ ಮಾಡಿ ಕೋವಿಡ್ ನಿಂದ ಜನರನ್ನ ರಕ್ಷಿಸುವ ಹೊಣೆ ಸರ್ಕಾರದ ಮೇಲಿದೆ..
Published by:Latha CG
First published: