ಕೊರೋನಾ ಎಫೆಕ್ಟ್ ಈ ವರ್ಷ ಬೇಸಿಗೆ ರಜೆ ಅನುಮಾನ ; ಜನವರಿಯಲ್ಲಿ SSLC, PUC ತರಗತಿ ಆರಂಭ ಸಾಧ್ಯತೆ..!

ಕೇವಲ ಮೂರು ತಿಂಗಳಿನಲ್ಲಿ ಶಾಲೆಗಳ ಪಠ್ಯಕ್ರಮ ಪೂರ್ಣಗೊಳಿಸುವುದು ಕಷ್ಟಸಾಧ್ಯ. ಇದರಿಂದಾಗಿ ಏಪ್ರಿಲ್, ಮೇ ತಿಂಗಳ ಬೇಸಿಗೆ ರಜೆ ದಿನಗಳಲ್ಲಿ ಶಾಲೆ ಮುಂದುವರೆಯಲು ಸರ್ಕಾರ ಗಂಭೀರವಾಗಿ ಚಿಂತನೆ ನಡೆಸಿದೆ.

ಸಾಂಸರ್ಭಿಕ ಚಿತ್ರ

ಸಾಂಸರ್ಭಿಕ ಚಿತ್ರ

  • Share this:
ಬೆಂಗಳೂರು(ಡಿಸೆಂಬರ್​. 15): ಕೊರೋನಾ ಎಫೆಕ್ಟ್ ನಿಂದಾಗಿ ಇದುವರೆಗೆ ಶಾಲೆಗಳು ಆರಂಭವಾಗಿಲ್ಲ. ಕಾಲೇಜು ಆರಂಭವಾದರೂ ಪಠ್ಯಕ್ರಮ ಪೂರ್ಣಗೊಳಿಸಲು ಕಷ್ಟವಾಗುತ್ತಿದೆ. ಎಲ್ಲ ಅಂದುಕೊಂಡಂತಾದರೆ ಈ ಜನವರಿಯಲ್ಲಿ ಎಸ್​ಎಸ್​​ಎಲ್​​ಸಿ ಹಾಗೂ ಪಿಯುಸಿ ತರಗತಿಗಳು ಆರಂಭವಾಗಲಿದೆ. ಆದರೆ ಮೂರೇ ತಿಂಗಳಿನಲ್ಲಿ‌ ಪಠ್ಯಕ್ರಮ ಪೂರ್ಣಗೊಳಿಸುವುದು ಕಷ್ಟಸಾಧ್ಯ. ಇದರಿಂದಾಗಿ ಈ ವರ್ಷ ಶಾಲಾ ಕಾಲೇಜುಗಳ ಬೇಸಿಗೆ ರಜೆ ಸಿಗೋದು ಅನುಮಾನ. ರಜೆ ಕಡಿತಗೊಳಿಸಿ ತರಗತಿ ನಡೆಸಲು ಸರ್ಕಾರ ಗಂಭೀರವಾಗಿ ಚಿಂತನೆ ಮಾಡುತ್ತಿದೆ. ರಾಜ್ಯದಲ್ಲಿ ಕೊರೋನಾ‌ ಕೇಸ್ ಇಳಿಮುಖವಾಗುತ್ತಿದೆ. ಕಳೆದ ವಾರದಿಂದ ಇದರ ಸಂಖ್ಯೆ ಇನ್ನಷ್ಟು ಕಡಿಮೆಯಾಗುತ್ತಿದೆ. ಕಳೆದ ತಿಂಗಳು ಶಾಲೆ ಆರಂಭಿಸಲು ಶಿಕ್ಷಣ ಇಲಾಖೆ ಸರಣಿ ಸಭೆ ನಡೆಸಿ ತಜ್ಞರಿಂದ ವರದಿಯನ್ನು ತರಿಸಿ ಸರ್ಕಾರಕ್ಕೆ‌ ಸಲ್ಲಿಸಿದೆ‌. ಈ ನಡುವೆ ಜನವರಿಯಿಂದ ಅಧಿಕೃತವಾಗಿ ಶಾಲೆ ಆರಂಭಿಸಲು ಉತ್ಸುಕತೆ ತೋರುತ್ತಿದೆ. ಆದರೆ ಕೇವಲ ಮೂರು ತಿಂಗಳಿನಲ್ಲಿ ಶಾಲೆಗಳ ಪಠ್ಯಕ್ರಮ ಪೂರ್ಣಗೊಳಿಸುವುದು ಕಷ್ಟಸಾಧ್ಯ. ಇದರಿಂದಾಗಿ ಏಪ್ರಿಲ್, ಮೇ ತಿಂಗಳ ಬೇಸಿಗೆ ರಜೆ ದಿನಗಳಲ್ಲಿ ಶಾಲೆ ಮುಂದುವರೆಯಲು ಸರ್ಕಾರ ಗಂಭೀರವಾಗಿ ಚಿಂತನೆ ನಡೆಸಿದೆ.

ಈ ಕುರಿತು ಶಿಕ್ಷಣ ಇಲಾಖೆಯ ಅಧಿಕಾರಿಗಳ ಸಭೆಯಲ್ಲಿ ಜನವರಿಯಿಂದ ಶಾಲೆ ತೆರೆದರೆ ಬೇಸಿಗೆ ರಜೆ ಕಡಿತಗೊಳಿಸುವುದು ಅನಿವಾರ್ಯವಾಗುತ್ತದೆ ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ. ಈ ರೀತಿ ಜರುಗಿದರೆ ಮಾತ್ರ ಈ ಶೈಕ್ಷಣಿಕ ವರ್ಷ ಪಠ್ಯಕ್ರಮ ಪೂರ್ಣಗೊಳಿಸಿ ಪರೀಕ್ಷೆ ನಡೆಸಿ, ಫಲಿತಾಂಶ ನೀಡಬಹುದು ಎಂಬ ಚಿಂತನೆ ನಡೆದಿದೆ. ಕಳೆದ ತಿಂಗಳು ಪದವಿ ಕಾಲೇಜು ಆರಂಭವಾಗಿದೆಯಾದರೂ ಅದರ ಪರಿಸ್ಥಿತಿ ಇದೇ ರೀತಿ ಇದ್ದು, ಈ ವರ್ಷದ ಬೇಸಿಗೆ ರಜೆ ಕಡಿತಗೊಳಿಸಲು ಸರ್ಕಾರ ಚಿಂತಿಸುತ್ತಿದೆ‌. ಇದಕ್ಕೆ ಶಾಲಾ ಶಿಕ್ಷಕರ ಸಂಘ ಮಕ್ಕಳ ವಯೋಮಿತಿ ಮೇರೆಗೆ ಪಠ್ಯಕ್ರಮ ಕಡಿತಗೊಳಿಸಿ. ಒಮ್ಮೆಲೆ ಬೇಸಿಗೆ ರಜೆ ಕೊಡುವುದು ಶಿಕ್ಷಕರಿಗಲ್ಲ ಮಕ್ಕಳಿಗೆ. ಹದಿನೈದು ಬೇಸಿಗೆ ರಜೆ ನೀಡಿದರೆ ಒಳ್ಳೆಯದು ಎಂದು ಅಭಿಪ್ರಾಯಪಡುತ್ತಾರೆ.

ಕಳೆದ 10 ತಿಂಗಳಿನಿಂದ ಶಾಲಾ ಕಾಲೇಜು ತೆರೆದಿಲ್ಲ. ವಿದ್ಯಾಗಮ ಸ್ಥಗಿತಗೊಂಡಿದೆ. ಪರಿಷ್ಕೃತ ವಿದ್ಯಾಗಮ ಆರಂಭವಾಗಬೇಕಿದೆ. ಆನ್ ಲೈನ್ ಕ್ಲಾಸ್ ಗಳು ಜರುಗಿದರೂ ಪೋರ್ಷನ್ ಮುಗಿದಿಲ್ಲ. ಮಕ್ಕಳ ವಯೋಮಾನಕ್ಕೆ ತಕ್ಕಂತೆ ಬೋಧನೆ ಮಾಡಬೇಕಾಗುತ್ತೆ.  ಕೆಲವೇ ತಿಂಗಳಿನಲ್ಲಿ ಪಠ್ಯಕ್ರಮ ಪೂರ್ಣಗೊಳಿಸಲು ಆಗುವುದಿಲ್ಲ. ಇಂಥ ಸಂದರ್ಭದಲ್ಲಿ ಎಲ್ಲ ಅಂದುಕೊಂಡಂತೆ ಆದರೆ ಜನವರಿ ತಿಂಗಳಿನಿಂದ ಶಾಲೆ ಪ್ರಾರಂಭಿಸಲು ಶಿಕ್ಷಣ ಇಲಾಖೆ ರೆಡಿಯಾಗುತ್ತಿದೆ. ಮೊದಲ ಹಂತದಲ್ಲಿ 10 ಹಾಗೂ 12 ನೇ ತರಗತಿ ಪ್ರಾರಂಭಿಸಲು ಚಿಂತನೆ ನಡೆಸಿದೆ.

ಇದನ್ನೂ ಓದಿ : ಪ್ರತಿ ಕ್ವಿಂಟಲ್ ತೊಗರಿಗೆ 7500 ರೂಪಾಯಿ ಬೆಲೆಗೆ ಆಗ್ರಹ ; ಉಗ್ರ ಹೋರಾಟದ ಎಚ್ಚರಿಕೆ ನೀಡಿದ ಕಾಂಗ್ರೆಸ್

1 ರಿಂದ 9ನೇ ತರಗತಿ ಶಾಲೆ ಪ್ರಾರಂಭಿಸುವ ಕುರಿತು ಕೋವಿಡ್19 ತಾಂತ್ರಿಕ ಸಲಹಾ ಸಮಿತಿ ಜೊತೆ ಚರ್ಚಿಸಿ‌ದ ನಂತರ ನಿರ್ಧಾರ ಕೈಗೊಳ್ಳಲಿದೆ. ಶಾಲೆಗೆ ಸೇರಿಸದೇ ಇರುವ ಪೋಷಕರಿಗೆ ಮತ್ತೊಂದು ಅವಕಾಶವನ್ನು ಶಿಕ್ಷಣ ಇಲಾಖೆ ನೀಡಿದೆ.

ಮುಂದಿನ ತರಗತಿಗೆ ಕೆಲ ಪೋಷಕರು ತಮ್ಮ ಮಕ್ಕಳನ್ನ ಇದುವರೆಗೂ ಶಾಲೆಗೆ ಸೇರಿಸಿಲ್ಲ. ಅಂತ ಮಕ್ಕಳನ್ನ ಪುನಃ ಶಾಲೆಗೆ ಸೇರಿಸುವಂತೆ ಪೋಷಕರಲ್ಲಿ‌ ಶಿಕ್ಷಣ ಇಲಾಖೆ ಮನವಿ ಮಾಡಿದೆ. ಎಲ್ಲ ಅಂದುಕೊಂಡಂತೆ ಆದರೆ ಬರುವ ತಿಂಗಳಿನಿಂದ ಪಿಯುಸಿ, ಹೈಸ್ಕೂಲ್ ಆರಂಭವಾಗಲಿದೆ. ಆದರೆ ಈ ಬಾರಿಯ ಬೇಸಿಗೆ ರಜೆ ಕೊರೋನಾ ಕಾರಣದಿಂದ ಕಡಿತಗೊಳ್ಳುವ ಸಾಧ್ಯತೆ‌ ಹೆಚ್ಚಿದೆ‌.
Published by:G Hareeshkumar
First published: