ಮಂಡ್ಯ (ಸೆ.17): ಪ್ರತಿವರ್ಷ ಪಿತೃಪಕ್ಷ ಬಂತೆಂದ್ರೆ ಸಾಕು ಶ್ರೀರಂಗಪಟ್ಟಣದ ಕಾವೇರಿ ನದಿ ತಟದಲ್ಲಿ ಸಾವಿರಾರು ಜನರು ತಮ್ಮ ಹಿರಿಯರಿಗೆ ಪಿಂಡ ಪ್ರಧಾನ ಮಾಡಲು ಸೇರುತ್ತಿದ್ದರು. ಕೇವಲ ರಾಜ್ಯವಲ್ಲದೇ ಹೊರ ರಾಜ್ಯ ದಿಂದಲೂ ಇಲ್ಲಿಗೆ ಜನರು ಬಂದು ಕಾವೇರಿ ನದಿ ತಟ ದಲ್ಲಿ ಪಿಂಡ ಪ್ರದಾನ ಮಾಡಿ ತಿಲತರ್ಪಣ ನೀಡುತ್ತಿದ್ದರು. ಆದರೆ, ಈ ಬಾರಿ ಕೊರೋನಾ ಸೋಂಕು ಪಿತೃಪಕ್ಷದ ಮೇಲೂ ತನ್ನ ಕರಿ ನೆರಳು ಬೀರಿದೆ. ಕೊರೋನಾ ಭಯ ದಿಂದ ಈ ಭಾರೀ ಕಾವೇರಿ ನದಿ ತಟದಲ್ಲಿ ಖಾಲಿ ಖಾಲಿ ಇದ್ದು ಬೆರಳೆಣಿಕೆಯ ಜನರು ಮಾತ್ರ ಬಂದು ಇಲ್ಲಿಗೆ ಬಂದು ಪಿತೃಕಾರ್ಯ ನೆರವೇರಿಸಿ ಹೋಗುತ್ತಿದ್ದಾರೆ.
ಮಹಾಲಯ ಅಮಾವಾಸ್ಯೆ ದಿನದಲ್ಲಿ ಪಿತೃಗಳು ಯಮಲೋಕದಿಂದ ಭೂಲೋಕಕ್ಕೆ ಆಗಮಿಸಿ, . ತಮ್ಮ ಮಕ್ಕಳು ಕೊಡುವ ತರ್ಪಣ ಸ್ವೀಕರಿಸುತ್ತಾರೆ ಎಂಬ ನಂಬಿಕೆ ಇದೆ. ಕಾವೇರಿ ನದಿ ತಟದ ಪ್ರದೇಶಗಳಾದ ಸಂಗಮ, ಸ್ನಾನಘಟ್ಟ, ಹಾಗೂ ಪಶ್ಚಿಮವಾಹಿನಿಯಲ್ಲಿ ಜನರು ಪಿಂಡ ಪ್ರಧಾನ ಮಾಡಿದರೆ ಒಳ್ಳೆಯದು. ಇಲ್ಲಿ ತಿಲ ತರ್ಪಣ ನೀಡಿ ಅಗಲಿದ ತಮ್ಮ ಪಿತೃಗಳ ಸದ್ಗತಿ ಸಿಗುತ್ತದೆ ಎಂದು ಪ್ರಾರ್ಥಿಸುತ್ತಿದ್ದರು. ಆದರೆ, ಈ ಬಾರಿ ಕೊರೋನಾ ಹಿನ್ನಲೆ ಜನರು ಗುಂಪು ಸೇರಲು ಹೆದರುತ್ತಿದ್ದಾರೆ.
ಇದನ್ನು ಓದಿ: ಮುಗಿಯಿತು ಕೊರೋನಾ ಭೀತಿ; ದಾಂಡೇಲಿಗೆ ದಾಂಗುಡಿಯಿಡುತ್ತಿದ್ದಾರೆ ಪ್ರವಾಸಿಗರು
ಈ ಹಿಂದೆ ಅತಿ ಹೆಚ್ಚು ಕೊರೋನಾ ಜಿಲ್ಲೆಯಲ್ಲಿ ದೃಢಪಟ್ಟಿತ್ತು. ಈ ಹಿನ್ನಲೆ ಜನರು ಕೂಡ ಮುನ್ನೆಚ್ಚರಿಕೆ ವಹಿಸುತ್ತಿದ್ದಾರೆ. ಈ ಕಾರಣ ಯಾವುದೇ ಸಭೆ, ಸಮಾರಂಭ ಸೇರಿದಂತೆ ಜನನಿಬಿಡ ಪ್ರದೇಶಗಳಿಗೆ ಹೋಗಲು ಹಿಂದೇಟು ಆಗುತ್ತಿದ್ದು, ಮನೆಯಲ್ಲಿಯೇ ಹಿರಿಯರ ಪೂಜೆಗೆ ಮುಂದಾಗಿದ್ದಾರೆ.
ಅರ್ಚಕರಿಗೂ ಇಲ್ಲ ಆದಾಯ
14 ದಿನಗಳ ಈ ಪಿತೃ ಪಕ್ಷದಲ್ಲಿ ಜನರು ಪಿಂಡ ತರ್ಪಣಕ್ಕೆ ಸಾವಿರಾರು ಸಂಖ್ಯೆಯಲ್ಲಿ ಜನರು ಆಗಮಿಸಿ, ವೈದಿಕ ವಿಧಿವಿಧಾನದಂತೆ ಶ್ರಾದ್ಧ ನಡೆಸುತ್ತಿದ್ದರು. ಇದರಿಂದಾಗಿ ಇಲ್ಲಿನ ಅರ್ಚಕರಿಗೂ ಬಿಡುವಿಲ್ಲದಂತೆ ಕಾರ್ಯಸಿಗುತ್ತಿತ್ತು. ಆದರೆ, ಈಗ ಬೆರಳೆಣಿಕೆ ಸಂಖ್ಯೆಯಲ್ಲಿ ಜನರು ಆಗಮಿಸುತ್ತಿರುವ ಹಿನ್ನಲೆ, ಅರ್ಚಕರಿಗೂ ಕೂಡ ಆದಾಯವಿಲ್ಲದಂದೆ ಆಗಿದೆ.
ಅಲ್ಲದೇ ಅಂಗಡಿ ಮುಗ್ಗಟ್ಟುಗಳಲ್ಲಿ ಕೂಡ ಪೂಜಾ ಸಾಮಾಗ್ರಿಗಳಲ್ಲಿಯೂ ಕೂಡ ವ್ಯಾಪಾರವಿಲ್ಲದಂದೆ ಆಗಿದ್ದು, ಜನರು ವ್ಯಾಪಾರಿಗಳು ಪರಿತಪಿಸುವಂತೆ ಆಗಿದೆ.
ಮುನ್ನೆಚ್ಚರಿಕೆ ಕ್ರಮ
ಕೊರೋನಾ ಹಿನ್ನಲೆ ಈ ಬಾರಿ ಈ ಕಾರ್ಯಕ್ಕೆ ಆಗಮಿಸುವ ಜನರಿಗೆ ಬಿಗಿಭದ್ರತೆ ಜೊತೆಗೆ ಮುನ್ನೆಚ್ಚರಿಕೆ ಕ್ರಮ ಅನುಸರಿಸಲಾಗಿದೆ. 60ವರ್ಷಕ್ಕಿಂತ ಮೇಲ್ಪಟ್ಟ ಹಾಗೂ ಸಣ್ಣ ಮಕ್ಕಳಿಗೆ ಪ್ರವೇಶ ನಿರಾಕರಿಸಲಾಗಿದೆ. ಜೊತೆಗೆ ಸಾಮಾಜಿಕ ಅಂತರ ಕಾಯ್ದುಕೊಂಡು, ಶುಚಿತ್ವಕ್ಕೆ ಒತ್ತು ನೀಡಲಾಗಿದೆ. ಮಹಾಲಯ ಅಮವಾಸ್ಯೆಯಂದು ಟೋಕನ್ ವ್ಯವಸ್ಥೆ ಜಾರಿಗೆ ಮಾಡಲಾಗಿದ್ದು, ನಿಗದಿತ ಜನರಿಗೆ ಮಾತ್ರ ಕಾರ್ಯಕ್ಕೆ ಅವಕಾಶ ಕಲ್ಪಿಸಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ