• Home
  • »
  • News
  • »
  • state
  • »
  • ದಸರಾ ಬೋನಸ್ ಕಸಿದ ಕೊರೋನಾ; ಅನ್ ಲಾಕ್ ಕಳೆದರೂ ಕೈಗಾರಿಕೆ ವಲಯ ನಿರೀಕ್ಷಿತ ಚೇತರಿಕೆಯಿಲ್ಲ

ದಸರಾ ಬೋನಸ್ ಕಸಿದ ಕೊರೋನಾ; ಅನ್ ಲಾಕ್ ಕಳೆದರೂ ಕೈಗಾರಿಕೆ ವಲಯ ನಿರೀಕ್ಷಿತ ಚೇತರಿಕೆಯಿಲ್ಲ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಕೊರೋನಾದಿಂದ ಈ ವರ್ಷ ಕೆಲಸ‌ ಮಾಡುತ್ತಿರುವ ಶೇ.50 ಕಾರ್ಮಿಕರಿಗೂ ವೇತನ ಕೊಡುವುದು ಕಷ್ಟವಾಗಿದೆ. ಕಾರ್ಮಿಕರಿಗೆ ತಮಗಾದ‌ ಮಟ್ಟಿಗೆ ಒಂದಷ್ಟು ಕೊಡುಗೆ ನೀಡಿದ್ದಾರೆ.

  • Share this:

ಬೆಂಗಳೂರು(ಅಕ್ಟೋಬರ್​. 27): ಪ್ರತಿ ವರ್ಷ ವಿಜಯದಶಮಿ ಹಬ್ಬ ಕೈಗಾರಿಕಾ ವಲಯದ ಕಾರ್ಮಿಕರಿಗೆ ಸಾಕಷ್ಟು ನಿರೀಕ್ಷೆಗಳಿರುತ್ತವೆ.‌ ಯಾಕೆಂದರೆ ವರ್ಷವಿಡೀ ದುಡಿದ ಕಾರ್ಮಿಕರಿಗೆ ಬೋನಸ್ ಸಿಗುವುದು ಈ ಹಬ್ಬದಂದೇ. ಆದರೆ ಈ ವರುಷ ಕೊರೋನಾ ಸಂಕಷ್ಟ ಇವರ ನಿರೀಕ್ಷೆಗಳಿಗೆ ತಣ್ಣೀರೆರಚಿದೆ. ಹಬ್ಬದಂದು ಬೋನಸ್ ಬಿಡಿ, ಸಂಬಳ ಪಡೆಯೋದು ದುಸ್ಸಾಹಸವಾಗಿದೆ. ಪ್ರತಿ ವರ್ಷ ಕಾರ್ಮಿಕರಿಗೆ ಮಾಲೀಕರು ಆಯುಧ ಪೂಜೆ ನಂತರ ಬೋನಸ್ ನೀಡಿ ಸಿಹಿ ಹಂಚುವುದು ವಾಡಿಕೆ. ಈ ಬಾರಿ ಆರ್ಥಿಕವಾಗಿ ಮುಗ್ಗರಿಸಿರುವ ಕಾರ್ಖಾನೆಗಳು ಬೋನಸ್ ಇರಲಿ, ಸಂಬಳ ನೀಡುವುದೇ ಹೆಚ್ಚು ಎಂಬ ಸ್ಥಿತಿಗೆ ತಲುಪಿದೆ. ಲಾಕ್​ ​ಡೌನ್, ಅಂತಾರಾಷ್ಟ್ರೀಯ ಮಾರುಕಟ್ಟೆ ಕುಸಿತ ರಾಜ್ಯದ ಕೈಗಾರಿಕೆಗಳಿಗೆ ಹೊಡೆತ ಇದಕ್ಕೆ ಪ್ರಮುಖ ಕಾರಣವಾದರು ಕೊರೊನಾ ಸಂಕಷ್ಟವೇ ಇದಕ್ಕೆಲ್ಲ ನೇರ ಹೊಣೆ. ಕೊರೊನಾ‌ ಅನ್ ಲಾಕ್ ಕಳೆದ ಹಲವು ತಿಂಗಳು ಕಳೆದರೂ ಕೈಗಾರಿಕೆ ವಲಯ ನಿರೀಕ್ಷಿತ ಚೇತರಿಕೆ ಕಾಣುತ್ತಿಲ್ಲ.


ಆರ್ಥಿಕ ಸಂಕಷ್ಟ ಮುಂದುವರಿಕೆ ಹಿನ್ನೆಲೆಯಲ್ಲಿ ಈ ಬಾರಿ ಪೀಣ್ಯ ಕೈಗಾರಿಕಾ ವಲಯದಲ್ಲಿಲ್ಲ ದಸರಾ ಹಬ್ಬದ ಕಳೆ ಕಾಣುತ್ತಿಲ್ಲ. ಪ್ರತಿ ವರ್ಷ ಲಕ್ಷಾಂತರ ಕಾರ್ಮಿಕರಿಗೆ ಕೊಡುತ್ತಿದ್ದ ಬೋನಸ್ ಇಲ್ಲ, ವೇತನಕ್ಕೂ ಸಂಕಷ್ಟ ಬಂದಿದೆ. ಈ ಬಾರಿಯ ದಸರಾ ಆಚರಣೆ ಪ್ರತಿ ವರ್ಷದಂತಿಲ್ಲ. ಪ್ರತಿ ಬಾರಿ ಕೈಗಾರಿಕೆಯ ಸಿಬ್ಬಂದಿ ಸಂಭ್ರಮದಿಂದ ಆಚರಣೆ ಮಾಡುವ ಈ ಹಬ್ಬ. ಕೊರೋನಾ ಮಹಾಮಾರಿಯಿಂದ ಆಚರಣೆ ಹಿಂದಿನಂತಿಲ್ಲ ಎಂದು  ಪೀಣ್ಯದಲ್ಲಿ ಸಣ್ಣ ಕೈಗಾರಿಕ ಗಣೇಶ್ ಪೈಂಟ್ಸ್ ಮಾಲಿಕ ಶಿವಲಿಂಗಪ್ಪ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.


ಬೆಂಗಳೂರಿನ ಪೀಣ್ಯಾ ಕೈಗಾರಿಕೆ ಏಷ್ಯಾದಲ್ಲಿ ಅತಿ ದೊಡ್ಡ ಹಬ್ . ಪ್ರತಿ ವರುಷ ಆಯುಧ ಪೂಜೆ ಪೀಣ್ಯಾದಲ್ಲಿ ಬಲು ಜೋರಾಗಿ ನಡೆಯುತ್ತಿತ್ತು‌. ವರ್ಷವಿಡೀ ದುಡಿದ ಕಾರ್ಮಿಕರಿಗೆ ಮೆಷಿನರ್ ಪೂಜೆ ದಿನ ಗಿಫ್ಟ್ ಸಿಗುತ್ತಿತ್ತು. ಕಾರ್ಮಿಕರಿಗೆ ಒಂದು ತಿಂಗಳ ಬೋನಸ್, ಮತ್ತಷ್ಟು ಕೊಡುಗೆ ಸಿಗುತ್ತಿತ್ತು. ಆದರೆ, ಈ ಬಾರಿ ಅದ್ಧೂರಿ ದಸರಾ ಆಯುಧ ಪೂಜೆಯಿಲ್ಲ. ಪೀಣ್ಯಾ ಕೈಗಾರಿಕಾ ವಲಯ ಹಬ್ಬ ವಾತಾವರಣ ಮಾಯವಾಗಿದೆ.


ಇದನ್ನೂ ಓದಿ : ಕಾಂಗ್ರೆಸ್‌ಗೆ ಸಂವಿಧಾನದ ಮೂಲ ಆಶಯಗಳ ಮೇಲೆ ನಂಬಿಕೆಯಿಲ್ಲ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ


ಕಾರ್ಮಿಕರಿಗೂ ಈ ಬಾರಿ ಹೆಚ್ಚು ಕೆಲಸವೂ ಇಲ್ಲ. ವೇತನವೂ ಕಡಿಮೆ, ಬೋನಸ್ ಮಾತೇ ಇಲ್ಲ. ಕೊರೋನಾ ಎಫೆಕ್ಟ್ ಈಗಲೂ ಬೇಡಿಕೆಯಿಲ್ಲದೆ ಮಾಲಿಕರು ಕಂಗಾಲಾಗಿದ್ದಾರೆ. ಇದರ ಎಫೆಕ್ಟ್ ಕಾರ್ಮಿಕರನ್ನು ಬಹುವಾಗಿ ಕಾಡುತ್ತಿದೆ.


ಪೀಣ್ಯದಲ್ಲಿ 5 ಸಾವಿರ ದೊಡ್ಡ, 20 ಸಾವಿರಕ್ಕೂ ಹೆಚ್ಚು ಸಣ್ಣ ಹಾಗೂ ಸೂಕ್ಷ್ಮ ಕೈಗಾರಿಕೆಗಳಿವೆ.‌ ಒಂಬತ್ತುವರೆ ಲಕ್ಷ ಕಾರ್ಮಿಕರು ಇಲ್ಲಿ ಕೆಲಸ ಮಾಡುತ್ತಿದ್ದರು. ಕೊರೋನಾದಿಂದ ಈ ವರ್ಷ ಕೆಲಸ‌ ಮಾಡುತ್ತಿರುವ ಶೇ.50 ಕಾರ್ಮಿಕರಿಗೂ ವೇತನ ಕೊಡುವುದು ಕಷ್ಟವಾಗಿದೆ. ಕಾರ್ಮಿಕರಿಗೆ ತಮಗಾದ‌ ಮಟ್ಟಿಗೆ ಒಂದಷ್ಟು ಕೊಡುಗೆ ನೀಡಿದ್ದಾರೆ. ಆದರೆ ದಸರಾ ಕೊರೋನಾದಿಂದಾಗಿ ಕಾರ್ಮಿಕರಿಗೆ ಬೋನಸ್ ಸಿಗದಂತಾಗಿದೆ.

Published by:G Hareeshkumar
First published: