• Home
 • »
 • News
 • »
 • state
 • »
 • ಆರ್​ಬಿಐ ಆದೇಶ ದಿಕ್ಕರಿಸಿ ಸಾಲ ವಸೂಲಿಗೆ ಇಳಿದ ಖಾಸಗಿ ಫೈನಾನ್ಸ್

ಆರ್​ಬಿಐ ಆದೇಶ ದಿಕ್ಕರಿಸಿ ಸಾಲ ವಸೂಲಿಗೆ ಇಳಿದ ಖಾಸಗಿ ಫೈನಾನ್ಸ್

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಲಾಕ್​ಡೌನ್​ ನಡುವೆಯೂ ಬೆಳಗಾವಿ‌ ಜಿಲ್ಲೆಯ ಅಥಣಿ ತಾಲೂಕಿನ ಸುಟ್ಟಟ್ಟಿ ಗ್ರಾಮದ ರೈತರ ಮನೆಗೆ ತೆರಳಿದ ಫೈನಾನ್ಸ್ ಸಿಬ್ಬಂದಿ ಸಾಲ‌ ಪಾವತಿಸುವಂತೆ ಆಗ್ರಹಿಸಿದ್ದಾರೆ.

 • Share this:

  ಚಿಕ್ಕೋಡಿ(ಮಾ.30): ಕೊರೋನಾ ಪರಿಣಾಮ ಇಡೀ ದೇಶವೇ ಲಾಕ್​​​​ ಡೌನ್ ಆದ ಹಿನ್ನೆಲೆಯಲ್ಲಿ ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ದೆಹಲಿಯಲ್ಲಿ ಮಹತ್ವದ ಆದೇಶ ನೀಡಿದ್ದು, ರಾಷ್ಟ್ರೀಕೃತ, ಸಹಕಾರಿ ಮತ್ತು ಗ್ರಾಮೀಣ ಬ್ಯಾಂಕುಗಳು ಎಲ್ಲ ಫೈನಾನ್ಸ್​ಗಳ ಎಲ್ಲಾ ರೀತಿಯ ಸಾಲಗಳ ಇಎಂಐ ಅನ್ನು ಜೂನ್​ವರೆಗೆ ಮುಂದೂಡಿಕೆ ಮಾಡಿದ್ದಾರೆ.


  ಡಿಸಿಎಂ ಲಕ್ಷ್ಮಣ್ ಸವದಿ ಅವರ ಸ್ವಕ್ಷೇತ್ರದಲ್ಲಿ ಅಥಣಿಯಲ್ಲಿ ವಿಸ್ತಾರ ಎನ್ನುವ ಖಾಸಗಿ ಫೈನಾನ್ಸ್ ಕಂಪನಿಯ ಸಿಬ್ಬಂದಿ ಆರಬಿಐ ಆದೇಶಕ್ಕೆ ತದ್ವಿರುದ್ಧವಾಗಿ ನಡೆದುಕೊಂಡಿದೆ. ಲಾಕ್​ಡೌನ್​ ನಡುವೆಯೂ ಬೆಳಗಾವಿ‌ ಜಿಲ್ಲೆಯ ಅಥಣಿ ತಾಲೂಕಿನ ಸುಟ್ಟಟ್ಟಿ ಗ್ರಾಮದ ರೈತರ ಮನೆಗೆ ತೆರಳಿದ ಫೈನಾನ್ಸ್ ಸಿಬ್ಬಂದಿ ಸಾಲ‌ ಪಾವತಿಸುವಂತೆ ಆಗ್ರಹಿಸಿದ್ದಾರೆ.


  ಸುಟ್ಟಟ್ಟಿ ಗ್ರಾಮದ ರೈತ ಮಾಹವೀರ ವೀರಗೌಡ ಎಂಬವವರಿಗೆ ಸಾಲ ಪಾವತಿಸುವಂತೆ ಆಗ್ರಹಿಸಲಾಗಿದೆ. ಇದಕ್ಕೆ  ರೈತ ಮಹಾವೀರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ವಿಸ್ತಾರ ಫೈನಾನ್ಸ್ ಅವರಿಂದ ನಾಲ್ಕು ಲಕ್ಷ ಸಾಲ ಮಾಡಿದ್ದೇನೆ. ಈಗ ಕೊರೋನಾ ವೈರಸ್ ನಿಂದ ಕೆಲಸ ಇಲ್ಲ ಹಾಗೂ ಹೈನುಗಾರಿಕೆಗೆ ನಷ್ಟದಿಂದ ಈ ತಿಂಗಳು ಕಂತು ಕಟ್ಟಕ್ಕೆ ಆಗುತ್ತಿಲ್ಲ ಎಂದು ತಮ್ಮ ಅಸಹಾಯಕತೆಯನ್ನು ವ್ಯಕ್ತಪಡಿಸಿದ್ದಾರೆ.


  ಸದ್ಯದ ಸ್ಥಿತಿಯಲ್ಲಿ ಜನರಿಂದ ಹಣ ಪಾವತಿಸಿಕೊಳ್ಳಬೇಡಿ ಎಂದು ಆರ್​ಬಿಐ ನಿರ್ದೇಶನ ನೀಡಿದೆ. ಈ ಬಗ್ಗೆ ಫೈನಾನ್ಸ್ ಸಿಬ್ಬಂದಿಯನ್ನು ಕೇಳಿದರೇ ನಮಗೆ ಇದುವರೆಗೆ ಆರ್​ಬಿಐ ನಿಂದ ಹಣ ಮರುಪಾವತಿ ಮುಂದೂಡಿ ಎಂದು ಯಾವುದೇ ನಿರ್ದೇಶನ ಬಂದಿಲ್ಲಾ ಎಂದು ಜಾರಿಕೊಂಡಿದ್ದಾರೆ.


  ಇದನ್ನೂ ಓದಿ : ಗೋವಾ ಸರ್ಕಾರದಿಂದ ಕನ್ನಡಿಗರಿಗೆ ಹಳಸಿದ ಅನ್ನ; ನಮ್ಮದು ನಾಯಿ ಪಾಡು ಎಂದ ಕಾರ್ಮಿಕರು


  ಅಥಣಿ ತಾಲೂಕಿನ ಕೆಲವು ಫೈನಾನ್ಸ್​ಗಳು ವಸೂಲಿಗೆ ಮುಂದಾಗಿವೆ. ಸಂದಿಗ್ಧ ಪರಿಸ್ಥಿತಿಯಲ್ಲಿ ಹಣ ಮರುಪಾವತಿ ಸಾಧ್ಯವಿಲ್ಲ ನಮಗೆ ಆತ್ಮಹತ್ಯೆ ಒಂದೇ ದಾರಿ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ. ಇನ್ನಾದರೂ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡು ರೈತರಿಗೆ ನ್ಯಾಯ ಒದಗಿಸಬೇಕಾಗಿದೆ.

  Published by:G Hareeshkumar
  First published: