ಬೆಂಗಳೂರು(ಮಾ.20) : ರಾಜ್ಯದಲ್ಲಿ ಕೊರೋನಾ ಭೀತಿಯ ಹಿನ್ನೆಲೆಯಲ್ಲಿ ಶಾಲೆಗಳಿಗೆ ರಜೆಯನ್ನು ನೀಡಲಾಗಿದೆ. ರಜಾ ದಿನಗಳಲ್ಲೂ ಮಧ್ಯಾಹ್ನ ಬಿಸಿಯೂಟದ ಆಹಾರ ಪದಾರ್ಥಗಳನ್ನು ವಿದ್ಯಾರ್ಥಿಗಳು ಅಥವಾ ಪೋಷಕರಿಗೆ ವಿತರಿಸುವಂತೆ ರಾಜ್ಯದ ಎಲ್ಲಾ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು ಆದೇಶ ಹೊರಡಿಸಿದ್ದಾರೆ.
ಬಿಸಿಯೂಟ ಪಡೆಯಲು ಮಕ್ಕಳು- ಮಕ್ಕಳ ಪೋಷಕರು ಪ್ರತಿ ದಿನ ಶಾಲೆಗೆ ಆಗಮಿಸಬೇಕು. ಗುಂಪುಗಳಲ್ಲಿ ಬರುವುದರಿಂದ ವೈರಸ್ ಹರಡುವ ಭೀತಿಯನ್ನು ತಪ್ಪಿಸಲು ಬಿಸಿಯೂಟ ಕಾರ್ಯಕ್ರಮದಲ್ಲಿ ಬದಲಾವಣೆ ಮಾಡಲಾಗಿದೆ. ಮಧ್ಯಾಹ್ನದ ಬೀಸಿಯೂಟವನ್ನು ನೀಡುವುದರ ಬದಲು ಆಹಾರ ಪದಾರ್ಥಗಳನ್ನು ವಿತರಣೆ ಮಾಡಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.
1 ರಿಂದ 5 ತರಗತಿವರೆಗೆ - 100ಗ್ರಾಂ ಅಕ್ಕಿ, 50ಗ್ರಾಂ ತೊಗರಿಬೆಳೆ (ಪ್ರತಿ ಮಗುವಿಗೆ ಪ್ರತಿನಿತ್ಯ), 6-10ನೇ ತರಗತಿ ವರೆಗೆ - 150ಗ್ರಾಂ ಅಕ್ಕಿ, 75ಗ್ರಾಂ ತೊಗರಿ ಬೇಳೆ (ಪ್ರತಿ ಮಗುವಿಗೆ ಪ್ರತಿನಿತ್ಯ) ಈ ರೀತಿಯ ಲೆಕ್ಕಾಚಾರದಂತೆ ಒಂದೇ ಬಾರಿಗೆ ಆಹಾರ ಪದಾರ್ಥ ವಿತರಣೆ ಮಾಡಬೇಕು.
ವಿತರಣೆ ವೇಳೆ ಮಕ್ಕಳ ಹೆಸರು, ತರಗತಿ ಯನ್ನು ನಮೂದಿಸಿ, ಪೋಷಕರಿಂದ ಸ್ವೀಕೃತಿ ಸಹಿ ಮೂಲಕ ದಾಖಲೆ ತೆಗೆದುಕೊಳ್ಳುವುದು ಕಡ್ಡಾಯವಾಗಿದೆ. ಶಾಲೆಯ ಎಲ್ಲಾ ಮಕ್ಕಳು ಅಥವಾ ಪೋಷಕರನ್ನು ಒಂದೇ ಬಾರಿಗೆ ಕರೆಯದೇ ಹಂತ ಹಂತವಾಗಿ ಆಹಾರ ಸಾಮಾಗ್ರಿಗಳನ್ನು ನೀಡುವಂತೆ ಸೂಚಿಸಲಾಗಿದೆ.
ಇದನ್ನೂ ಓದಿ :
ಕೊರೋನಾ ಎಫೆಕ್ಟ್: ರಾಜ್ಯದ ಎಲ್ಲಾ ದೇವಸ್ಥಾನಗಳು ಬಂದ್ - ಮುಜರಾಯಿ ಇಲಾಖೆ ಆದೇಶ
ಮಾರ್ಚ್ 27ಕ್ಕೆ ಎಂದಿನಂತೆ ಎಸ್ ಎಸ್ ಎಸ್ ಎಲ್ ಸಿ ಪರೀಕ್ಷೆ ನಡೆಯಲಿದೆ. ದಿನಾಂಕದಲ್ಲಿ ಯಾವುದೇ ಬದಲಾವಣೆ ಇಲ್ಲ. ಆದರೆ ಪರೀಕ್ಷೆ ನಡೆಸುವ ಬಗ್ಗೆ ಕೆಲ ಸೂಚನೆ ಕೊಟ್ಟಿದ್ದೇವೆ. ದೂರ ದೂರ ಕುಳಿತು ಪರೀಕ್ಷೆ ಬರೆಯಲು ಹಾಗೂ ಮಾಸ್ಕ್ ಧರಿಸಿ ಪರೀಕ್ಷೆ ಬರೆಯಲು ಈಗಾಗಲೇ ಈ ಬಗ್ಗೆ ಅಧಿಕಾರಿ ಗಳಿಗೆ ಸೂಚನೆ ಕೊಡಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ