Corona: ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಕೊರೋನಾ, ಆಸ್ಪತ್ರೆಯಲ್ಲಿ ಬೆಡ್ ಮೀಸಲಿಗೆ ಸೂಚನೆ!

ಹಬ್ಬಗಳ ಹೊತ್ತಲ್ಲೇ ದೇಶದಲ್ಲಿ ಮತ್ತು ಕರ್ನಾಟಕದಲ್ಲಿ ಕೊರೋನಾ ಹೆಚ್ಚಾಗ್ತಿದೆ. ಈ ಹಿನ್ನೆಲೆ ಸರ್ಕಾರ ಕೂಡ ಈಗಿನಿಂದಲೇ ಎಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವತ್ತ ಹೆಜ್ಜೆ ಇಟ್ಟಿದೆ. ಪ್ರಮುಖವಾಗಿ ಬೆಂಗಳೂರಿನ 2 ಆಸ್ಪತ್ರೆಗಳಲ್ಲಿ ಬೆಡ್​​ಗಳನ್ನು ಕೋವಿಡ್ ರೋಗಿಗಳಿಗೆ ಕಾಯ್ದಿರಿಸುವಂತೆ ಸೂಚಿಸಲಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಹಬ್ಬದ ಸಾಲು ಸಾಲು ಬಂದಿರೋವಾಗಲೇ ದೇಶದಲ್ಲಿ ಕೊರೋನಾ ಮತ್ತೆ ತಾಂಡವವಾಡೋಕೆ ಶುರು ಮಾಡಿದೆ. ಗೌರಿ-ಗಣೇಶ ಹಬ್ಬ (Ganesh festival), ಸ್ವಾತಂತ್ರ್ಯ ದಿನಾಚರಣೆ (Independence day) ಸಮೀಪಿಸುತ್ತಿದ್ದಂತೆ ಕೊರೋನಾ (Corona) ಕೇಸ್ ಕೂಡ ಹೆಚ್ಚಾಗ್ತಿದೆ. ಕರ್ನಾಟಕದಲ್ಲಿ (Karnataka) ಶನಿವಾರ ಒಂದೇ ದಿನ ಕರ್ನಾಟಕದಲ್ಲಿ 1329 ಮಂದಿಗೆ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ. 5 ಮಂದಿ ಕೊರೋನಾಗೆ ಸಾವನ್ನಪ್ಪಿದ್ದಾರೆ. ಅದರಲ್ಲೂ ಬೆಂಗಳೂರು (Bengaluru) ಒಂದರಲ್ಲೇ 700ಕ್ಕೂ ಅಧಿಕ ಮಂದಿ ಕೊರೋನಾಗೆ ತುತ್ತಾಗಿದ್ದಾರೆ. ರಾಜ್ಯ ರಾಜಧಾನಿ ಬೆಂಗಳೂರು ಒಂದರಲ್ಲೇ ಕಳೆದ ಒಂದು ವಾರದಿಂದ 500ಕ್ಕಿಂತ ಹೆಚ್ಚು ಕೇಸ್ ದಾಖಲಾಗ್ತಾ ಇರೋದ್ರಿಂದ ಆಸ್ಪತ್ರೆಗಳಲ್ಲಿ (Hospital) ಮುನ್ನೆಚ್ಚರಿಕೆ ಕೈಗೊಳ್ಳಲು ಸೂಚನೆ ಕೊಡಲಾಗಿದೆ.

ಹಬ್ಬಗಳ ಹೊತ್ತಲ್ಲೇ ದೇಶದಲ್ಲಿ ಮತ್ತು ಕರ್ನಾಟಕದಲ್ಲಿ ಕೊರೋನಾ ಹೆಚ್ಚಾಗ್ತಿದೆ. ಈ ಹಿನ್ನೆಲೆ ಸರ್ಕಾರ ಕೂಡ ಈಗಿನಿಂದಲೇ ಎಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವತ್ತ ಹೆಜ್ಜೆ ಇಟ್ಟಿದೆ. ಪ್ರಮುಖವಾಗಿ ಬೆಂಗಳೂರಿನ 2 ಆಸ್ಪತ್ರೆಗಳಲ್ಲಿ ಬೆಡ್​​ಗಳನ್ನು ಕೋವಿಡ್ ರೋಗಿಗಳಿಗೆ ಕಾಯ್ದಿರಿಸುವಂತೆ ಸೂಚಿಸಲಾಗಿದೆ.

ಹೈರಿಸ್ಕ್ ಕೇಸ್​​ಗಳ ಮೇಲೆ ನಿಗಾ

ಕೊರೋನಾ ಸೋಂಕುಗಳ ಉಲ್ಬಣದ ಮಧ್ಯೆ, ಕರ್ನಾಟಕ ಆರೋಗ್ಯ ಇಲಾಖೆಯು ಬೆಂಗಳೂರಿನ ಎರಡು ಆಸ್ಪತ್ರೆಗಳಿಗೆ ಮುನ್ನೆಚ್ಚರಿಕಾ ಸಂದೇಶ ರವಾನಿಸಿದೆ. ಸೋಂಕಿತರಿಗಾಗಿ ಮತ್ತು ಹೆಚ್ಚು ಅಸ್ವಸ್ಥರಾಗಿರುವ ಕೊರೋನಾ ಸೋಂಕಿತರಿಗೆ ಅಂದರೆ ಹೈರಿಸ್ಕ್ ಕೇಸ್​​ಗಳಿಗೆ ಹಾಸಿಗೆಗಳನ್ನು ಕಾಯ್ದಿರಿಸಲು ನಿರ್ದೇಶಿಸಿದೆ.

corona case increasing in Bengaluru 2 hospital inform to reserve bed
ಕೊರೋನಾ ಹೆಚ್ಚಳ ಆತಂಕ


2 ಆಸ್ಪತ್ರೆಗಳಲ್ಲಿ ಹೈರಿಸ್ಕ್ ಕೇಸ್​​​ಗೆ ಬೆಡ್ ನಿಗದಿಗೆ ಸೂಚನೆ

ಸಿವಿ ರಾಮನ್ ಜನರಲ್ ಆಸ್ಪತ್ರೆ ಮತ್ತು ಅಟಲ್ ಬಿಹಾರಿ ವಾಜಪೇಯಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಈ ಸೂಚನೆ ನೀಡಲಾಗಿದೆ. ಈ ಆಸ್ಪತ್ರೆಗಳಲ್ಲಿ ಹೈರಿಸ್ಕ್ ಪೇಶೆಂಟ್ಗಳಿಗೆ ಬೆಡ್ ಮೀಸಲಿಡಲು ನಿರ್ದೇಶಿಸಲಾಗಿದೆ. ಆರೋಗ್ಯ ಇಲಾಖೆ ಈ ಬಗ್ಗೆ ಸೂಚನೆ ನೀಡಿದೆ.

ಇದನ್ನೂ ಓದಿ: ಕೊರೋನಾ, ಭಯಾನಕ: ದೀರ್ಘಕಾಲದ ಸೋಂಕಿನಿಂದ ಮೆದುಳಿನ ಗಡ್ಡೆ, ನಿರ್ಲಕ್ಷ್ಯ ಬೇಡ!

ಶನಿವಾರ ರಾಜ್ಯದಲ್ಲಿ 1329 ಕೇಸ್

ಜುಲೈ 27ರಿಂದ ಕನಿಷ್ಠ ಐದು ದಿನಗಳಲ್ಲಿ ಬೆಂಗಳೂರಿನಲ್ಲಿ 1,000 ಕೊರೋನಾ ಪ್ರಕರಣಗಳು ವರದಿಯಾಗಿವೆ. ಶನಿವಾರ ಕೂಡ ರಾಜ್ಯದಲ್ಲಿ ಕೊರೋನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆಯಲ್ಲಿ ಏರಿಳಿತ ಮುಂದುವರೆದಿದೆ. ಕಳೆದ 24 ಗಂಟೆಯಲ್ಲಿ 1329 ಮಂದಿಗೆ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ.

ಬೆಂಗಳೂರಲ್ಲಿ ಮತ್ತೆ 500ಕ್ಕಿಂತ ಹೆಚ್ಚು ಕೇಸ್

ರಾಜ್ಯದಲ್ಲಿ ಮಹಾಮಾರಿ ಕೊರೋನಾದಿಂದ ಶನಿವಾರ ಐವರು ಮೃತಪಟ್ಟಿದ್ದಾರೆ. ಇನ್ನು ಬೆಂಗಳೂರಿನಲ್ಲಿ ಶನಿವಾರ ಒಂದೇ ದಿನ 791 ಮಂದಿಗೆ ಸೋಂಕು ದೃಢಪಟ್ಟಿದೆ. ಬೆಂಗಳೂರಿನಲ್ಲಿ 500ಕ್ಕಿಂತ ಹೆಚ್ಚು ಪ್ರಕರಣ ಪತ್ತೆಯಾಗ್ತಿರೋದು ಆತಂಕ ಹೆಚ್ಚಿಸಿದೆ.

corona case increasing in Bengaluru 2 hospital inform to reserve bed
ಸಾಂಕೇತಿಕ ಚಿತ್ರ


ರಾಜ್ಯದಲ್ಲಿ ಶನಿವಾರ 1614 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಕರ್ನಾಟಕದಲ್ಲಿ ಇನ್ನು ಕೂಡ 10,105 ಸಕ್ರಿಯ ಪ್ರಕರಣಗಳಿವೆ. ಈಗಾಗಲೇ ಕೊರೋನಾ ಹೆಚ್ಚಾಗ್ತಾ ಇರೋ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಕೂಡ ಕರ್ನಾಟಕಕ್ಕೆ ಎಚ್ಚರಿಕೆ ಸಂದೇಶ ರವಾನಿಸಿದೆ.

ಇದನ್ನೂ ಓದಿ: ಮಂಕಿಪಾಕ್ಸ್​ಗೆ ಮರುನಾಮಕರಣ! ಭಯಾನಕ ರೋಗಕ್ಕೆ ನೀವೂ ಹೆಸರು ಸೂಚಿಸಬಹುದು!

ಆರೋಗ್ಯಸೌಧದಲ್ಲಿ ಮಾಸ್ಕ್ ಧರಿಸದಿದ್ರೆ ದಂಡ!

ಕೋವಿಡ್ ಪ್ರಕರಣಗಳು, ವಿಶೇಷವಾಗಿ ಬೆಂಗಳೂರಿನಲ್ಲಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಕಡ್ಡಾಯ ಮಾಸ್ಕ್ ಧರಿಸೋ ಕಾಲ ಸನಿಹದಲ್ಲೇ ಇದೆ. ದಂಡ ವಿಧಿಸುವ ಮೊದಲ ಹೆಜ್ಜೆಯಾಗಿ ಆರೋಗ್ಯಸೌಧ ಮತ್ತು ಅದರ ಆವರಣದಲ್ಲಿ ಮಾಸ್ಕ್ ಧರಿಸದವರಿಗೆ 250 ರೂಪಾಯಿ ದಂಡ ವಿಧಿಸಲು ಆರೋಗ್ಯ ಆಯುಕ್ತ ಡಿ. ರಂದೀಪ್ ಆದೇಶ ಹೊರಡಿಸಿದ್ದಾರೆ.

ಆರೋಗ್ಯ ಸೌಧದ ಹೌಸ್ ಕೀಪಿಂಗ್ ಸಿಬ್ಬಂದಿ ಸೇರಿದಂತೆ ಅಧಿಕಾರಿಗಳು, ಸಿಬ್ಬಂದಿಗೆ ಮತ್ತು ಆರೋಗ್ಯಸೌಧಕ್ಕೆ ಭೇಟಿ ನೀಡುವ ಇತರರಿಗೆ ಈ ನಿಯಮ ಅನ್ವಯಿಸುತ್ತದೆ. ರಾಜ್ಯದಾದ್ಯಂತ ಆರೋಗ್ಯ ಇಲಾಖೆ ಮತ್ತು ವೈದ್ಯಕೀಯ ಕಾಲೇಜುಗಳ ಇತರ ಎಲ್ಲಾ ಕಚೇರಿಗಳಲ್ಲಿ ಈ ನಿಯಮ ಅನ್ವಯವಾಗಲಿದೆ ಎನ್ನಲಾಗಿದೆ.

ದೆಹಲಿಯಲ್ಲಿ ಮಾಸ್ಕ್ ಧರಿಸದಿದ್ರೆ 500 ರೂ. ದಂಡ

ಕೋವಿಡ್ ಪ್ರಕರಣಗಳ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ದೆಹಲಿ ಸರ್ಕಾರ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಿದೆ. ನಿಯಮ ಉಲ್ಲಂಘಿಸಿದರೆ 500 ರೂಪಾಯಿ ದಂಡ ವಿಧಿಸುವುದಾಗಿ ತಿಳಿಸಿದೆ. ಮಾತ್ರವಲ್ಲ ಸರ್ಕಾರ ಹೊರಡಿಸಿರುವ ಅಧಿಸೂಚನೆಯ ಪ್ರಕಾರ, ಈ ದಂಡವು ನಾಲ್ಕು ಚಕ್ರದ ಖಾಸಗಿ ವಾಹನಗಳಲ್ಲಿ ಒಟ್ಟಿಗೆ ಪ್ರಯಾಣಿಸುವ ವ್ಯಕ್ತಿಗಳಿಗೆ ಅನ್ವಯಿಸುವುದಿಲ್ಲ.
Published by:Thara Kemmara
First published: