ಮುಸಕಿನ ಜೋಳಕ್ಕೆ ಕೀಟಬಾಧೆ - ಬೆಳೆ ಬೆಳೆದ ರೈತರು ಕಂಗಾಲು

news18
Updated:August 30, 2018, 3:36 PM IST
ಮುಸಕಿನ ಜೋಳಕ್ಕೆ ಕೀಟಬಾಧೆ - ಬೆಳೆ ಬೆಳೆದ ರೈತರು ಕಂಗಾಲು
news18
Updated: August 30, 2018, 3:36 PM IST
- ಅಭಿಷೇಕ್ ಡಿ.ಆರ್, ನ್ಯೂಸ್ 18 ಕನ್ನಡ

ನೆಲಮಂಗಲ (ಆಗಸ್ಟ್ 30) :  ಸೈನಿಕರು ಎಂದಾಕ್ಷಣ ಅವರಿದ್ದರೆ ನಮಗೆ ಯಾವುದೇ ಅಪಾಯವಿಲ್ಲ ಎಂಬ ಗೌರವ ಭಾವನೆ ಮೂಡತ್ತೇ, ಆದರೆ ಇಲ್ಲಿ ಸೈನಿಕ ಎಂಬ ಹುಳುಗಳ ಗುಂಪು ರೈತರ ನಿದ್ದೆಗೆಡಿಸಿದೆ. ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಯರಮಂಚನಹಳ್ಳಿ ಗ್ರಾಮದಲ್ಲಿ.

ಹೌದು ರೈತರು ಮಹತ್ವಾಕಾಂಕ್ಷೆಯಿಂದ ಬೆಳೆದ ಮುಸುಕಿನ ಜೋಳದ ಬೆಳೆಗೆ ಸಂಕಷ್ಟ ಎದುರಾಗಿದೆ. ಉತ್ತಮ ಫಸಲಿನ ನಿರೀಕ್ಷೆಯಲ್ಲಿದ್ದ ರೈತನ ಬೆಳೆಗೆ ಸೈನಿಕ ಹುಳುವಿನ ಭಾದೆ ಎದುರಾಗಿದೆ.

ಇನ್ನೂ ಯರಮಂಚನಹಳ್ಳಿ ಗ್ರಾಮ ಒಂದರಲ್ಲೇ ಸುಮಾರು 100 ಎಕರೆ ಬೆಳೆ ನೆಲಕಚ್ಚಿದ್ದು, ಇಡೀ ನೆಲಮಂಗಲ ತಾಲೂಕಿನಾದ್ಯಂತ 1250ಕ್ಕೂ ಹೆಚ್ಚು ಎಕರೆ ಮುಸುಕಿನ ಜೋಳ ಈ ರೋಗಕ್ಕೆ ತುತ್ತಾಗಿದೆ. ಯಾವ ವರ್ಷವೂ ಜೋಳಕ್ಕೆ ಈ ರೀತಿ ಕೀಟಗಳ ಭಾದೆಯಾಗಿರಲಿಲ್ಲ. ಈ ಮುಂಗಾರಿನಿಂದ ಬಿತ್ತನೆ ಮಾಡಿದ ಜೋಳಕ್ಕೆ ಸೈನಿಕ ಹುಳು ಎಂಬ ಕೀಟಾಣುಗಳು, ಜೋಳದ ಸುಳಿಯ ಭಾಗದಲ್ಲಿ ಕಾಣೆಸಿಕೊಂಡು ರೈತನಿಗೆ ತಲೆನೋವಾಗಿ ಪರಿಣಿಮಿಸಿದೆ.

ಇನ್ನೂ ಪ್ರತಿ ವರ್ಷವು ಒಂದು ಎಕರೆಗೆ ಸುಮಾರು, 40 ಕ್ವಿಂಟಾಲ್ ಜೋಳದ ಬೆಳೆಗಾಗಿ ಸುಮಾರು 30 ಸಾವಿರ ರೈತ ವೆಚ್ಚ ಮಾಡುತ್ತಿದ್ದರು. ಈ ಸಾಲಿನಲ್ಲಿ ಅಲ್ಪ ಆದಾಯವಾಗದೆ ಸಾಕಷ್ಟು ನಷ್ಟ ಉಂಟಾಗುತ್ತಿದೆ. ಅಲ್ಲದೇ ಜೋಳ ಬೆಳೆ ಹುಟ್ಟಿದ ಹದಿನೈದು ದಿನದಲ್ಲೇ ಈ ರೋಗ ಕಾಣಿಸಿಕೊಂಡಿದ್ದು, ಜೋಳದ ಸುಳಿಯ ಭಾಗದಲ್ಲಿ ಚಿಟ್ಟೆ ರೂಪದಲ್ಲಿ ಕಾಣಿಸಿಕೊಂಡ ಹುಳು ನಂತರ ಕೀಟವಾಗಿ ತೊಂದರೆ ನೀಡುತ್ತಿದ್ದು ಅನ್ನದಾತರು ತೊಂದರೆ ಅನುಭವಿಸುತ್ತಿದ್ದಾರೆ.

ಇನ್ನೂ ಕೃಷಿ ಇಲಾಖೆಯಿಂದ 235 ರೂಪಾಯಿಗೆ ಕೀಟನಾಶಕ ವಿತರಿಸುತ್ತಿದ್ದಾರೆ. ಈ ಕೀಟನಾಶಕ ಸಿಂಪಡಿಸಿದರೆ 15 ದಿನಗಳ ಕಾಲ 1ಮಾತ್ರ ರೋಗ ಮುಕ್ತವಾಗಿ, ನಂತರ ಮತ್ತೆ ಚಿಟ್ಟೆಗಳು ಕಾಣಿಸಿಕೊಳ್ಳುತ್ತವೆ ಎಂದು ರೈತರು ಬೇಸರ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಖಾಸಗಿ ಮಾರುಕಟ್ಟೆಗಳಲ್ಲಿಇದೇ ಕೀಟನಾಶಕಕ್ಕೆ 800 ರಿಂದ 900 1ರೂಪಾಯಿಗಳು ಮಾರುತ್ತಿದ್ದಾರೆ. ಆದರೆ ಇದರಿಂದ ಯಾವುದೇ ಉಪಯೋಗವಾಗಿಲ್ಲ. ಆಗಾಗ್ಗೆ ನೆಲಮಂಗಲ ಕೃಷಿ ಇಲಾಖೆಯ ಅಧಿಕಾರಿಗಳು ಹೊಲಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು ಯಾವುದೇ ಪ್ರಯೋಜನವಾಗಿಲ್ಲ ಎಂದು ರೈತರು ತಮ್ಮ ಅಳಲನ್ನ ತೋಡಿಕೊಂಡಿದ್ದಾರೆ.

ಒಟ್ಟಾರೇ ಯಾವ ವರ್ಷವೂ ರೈತರ ಜೋಳಕ್ಕೆ ತೊಂದರೆ ನೀಡದ ಕೀಟಗಳು ಈ ವರ್ಷ ಶಾಪವಾಗಿ ಪರಿಣಮಿಸಿದೆ, ಇನ್ನಾದರೂ ಈ ಸೈನಿಕ ಹುಳಗಳ ಭಾದೆಗೆ ಶಾಶ್ವತ ಪರಿಹಾರ ಕಂಡುಹಿಡಿಯುವ ನಿಟ್ಟಿನಲ್ಲಿ ಕೃಷಿ ಇಲಾಖೆ ಅಧಿಕಾರಿಗಳು ಪ್ರಯತ್ನ ನಡೆಸಬೇಕಿದೆ.
Loading...

 
First published:August 30, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...