Coriander Greens: ಸೆಂಚುರಿ ಬಾರಿಸಿದ ಕೊತ್ತಂಬರಿ ಸೊಪ್ಪು! ರೇಟ್​ ಕೇಳಿದ ಗ್ರಾಹಕರಿಗೆ ಶಾಕ್​!

ಮಳೆಯಿಂದಾಗಿ ಕೆಲವೆಡೆ ಬೆಳೆ ನಷ್ಟವಾಗಿದ್ದು, ಮಾರುಕಟ್ಟೆಗೆ ಬರುವ ಬೆಳೆಯ ದರ ಏರಿಕೆ ಕಾಣುತ್ತಿದೆ. ಅದರಲ್ಲೂ ಕೊತ್ತಂಬರಿ ಸೊಪ್ಪಿನ ಬೆಲೆಯಂತೂ ನಿರೀಕ್ಷೆ ಮೀರಿ ಏರಿಕೆಯಾಗಿದೆ.

ಕೊತ್ತಂಬರಿ ಬೆಲೆ ಏರಿಕೆ

ಕೊತ್ತಂಬರಿ ಬೆಲೆ ಏರಿಕೆ

  • Share this:
ಸಾಮಾನ್ಯವಾಗಿ ಹಬ್ಬದ ಹತ್ತಿರ ಬರ್ತಿದ್ದಂತೆ ತರಕಾರಿ ಬೆಲೆಗಳು ಏರಿಕೆಯಾಗೋದನ್ನು (Price Hike) ನಾವು ನೋಡಿದ್ದೇವೆ. ಆದ್ರೆ ಇದೀಗ ಕೊತ್ತಂಬರಿ ಸೊಪ್ಪಿನ (Coriander Greens) ಬೆಲೆ ಗಗನಕ್ಕೇರಿದೆ. ಮನೆಯಲ್ಲಿ ಸಾಮಾನ್ಯವಾಗಿ ಹೆಚ್ಚಿನ ಅಡುಗೆಗೆ (Dish) ಕೊತ್ತಂಬರಿ ಸೊಪ್ಪು ಇರಲೇಬೇಕು. ಕೊತ್ತಂಬರಿ ಸೊಪ್ಪು ಹಾಕಿದ್ರೆ ಅಡುಗೆ ರುಚಿಕರ ಅನ್ನೋ ನಂಬಿಕೆ ಅನೇಕರಿಗಿದೆ. ಒಂದು ಕಟ್​ ಕೊತ್ತಂಬರಿ ಸೊಪ್ಪು 20-30 ರೂಪಾಯಿ ಇರ್ತಿತ್ತು ಆದ್ರೆ, ಈಗ ಅಂಗಡಿಯಲ್ಲಿ ಕೊತ್ತಂಬರಿ ಬೆಲೆ ಕೇಳಿದ್ರೆ ಜನರೇ ಬೆಚ್ಚಿಬೀಳ್ತಿದ್ದಾರೆ.

ಸೆಂಚೂರಿ ದಾಟಿದ ಕೊತ್ತಂಬರಿ

ಮಳೆಯಿಂದಾಗಿ ಕೆಲವೆಡೆ ಬೆಳೆ ನಷ್ಟವಾಗಿದ್ದು, ಮಾರುಕಟ್ಟೆಗೆ ಬರುವ ಬೆಳೆಯ ದರ ಏರಿಕೆ ಕಾಣುತ್ತಿದೆ. ಅದರಲ್ಲೂ ಕೊತ್ತಂಬರಿ ಸೊಪ್ಪಿಗೆ ಡಿಮಾಂಡ್‌ ಸೃಷ್ಟಿಯಾಗಿದ್ದು, ಪ್ರತಿ ಕಟ್ಟಿಗೆ 100 ರಿಂದ 120ರೂ ಇದ್ದು,  ರೇಟ್​ ಕೇಳಿದ ಗ್ರಾಹಕರು ಶಾಕ್​ ಆಗಿದ್ದಾರೆ.

coriander leaves benefits
ಕೊತ್ತಂಬರಿ ಸೊಪ್ಪು


ಹಲವೆಡೆ ಬೆಳೆ ಕೊತ್ತಂಬರಿ ಬೆಳೆ ನಾಶ

ಬೆಂಗಳೂರು ಗ್ರಾಮಾಂತರ ಜಿಲ್ಲೆ ಮಾತ್ರವಲ್ಲದೆ ಚಿಕ್ಕಬಳ್ಳಾಪುರ, ಕೋಲಾರ ಸೇರಿದಂತೆ ಇನ್ನಿತರೆ ಜಿಲ್ಲೆಗಳಲ್ಲಿ ಕೊತ್ತಂಬರಿ ಬೆಳೆದ ರೈತರು ನಷ್ಟಕ್ಕೀಡಾಗಿದ್ದಾರೆ. ಅನಿರೀಕ್ಷಿತ ಮಳೆಯ ಹೊಡೆತಕ್ಕೆ ಸಿಲುಕಿ ಎಕರೆಗಟ್ಟಲೆ ಕೊತ್ತಂಬರಿ ನಾಶವಾಗಿದೆ. ಹೀಗಾಗಿ ಮಾರುಕಟ್ಟೆಗೆ ಬಾರದ ಸ್ಥಿತಿ ನಿರ್ಮಾಣವಾಗಿದ್ದು, ಪೂರೈಕೆ ಕುಸಿತಗೊಂಡು ಬೆಲೆ ಏರಿಕೆಯಾಗಿದೆ. ಇದರಿಂದಾಗಿ ವ್ಯಾಪಾರಿಗಳು ಲಾಭದಲ್ಲಿದ್ದು, ಗ್ರಾಹಕರಿಗೆ ಬೆಲೆ ಏರಿಕೆ ಬಿಸಿ ತಟ್ಟುತ್ತಿದೆ.

ಮಾರುಕಟ್ಟೆಯಲ್ಲಿ 100, ಅಂಗಡಿಯಲ್ಲಿ 120

ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಬೆಳೆಯಲಾಗುವ ಕೊತ್ತಂಬರಿ ಸೊಪ್ಪಿಗೆ ಸ್ಥಳೀಯ ಎಪಿಎಂಸಿಗಳು ಸೇರಿದಂತೆ ಬೆಂಗಳೂರಿನಲ್ಲಿ ಉತ್ತಮ ಮಾರುಕಟ್ಟೆಯಿದೆ. ಸದ್ಯ ಮಾರುಕಟ್ಟೆಯಲ್ಲಿ ಕೊತ್ತಂಬರಿ ಸೊಪ್ಪಿನ ಬೆಲೆ 100 ರೂಪಾಯಿ ಇದ್ರೆ, ಹೊರಗೆ ಅಂಗಡಿಗಳಲ್ಲಿ 110 ರಿಂದ 120 ರೂಗಳಿವೆ. ಬಹುತೇಕ ವ್ಯಾಪಾರಿಗಳು ಇಲ್ಲಿಂದ ಕಡಿಮೆ ದರಕ್ಕೆ ಸೊಪ್ಪನ್ನು ಖರೀದಿಸಿ ಆಂಧ್ರದ ಹಿಂದೂಪುರ, ಅನಂತಪುರ, ವಾರಂಗಲ್‌ ಮಾರುಕಟ್ಟೆಗಳಿಗೆ ರಫ್ತು ಮಾಡುತ್ತಿದ್ದಾರೆ. ಅದ್ದರಿಂದ ಬೆಲೆ ಏರಿಕೆ ಕಂಡಿದೆ ಅನ್ನುತ್ತಾರೆ  ವ್ಯಾಪಾರಸ್ಥರು

ಮಳೆಯಿಂದ ಬೆಲೆ ಹಾನಿ

ರಾಜ್ಯದಲ್ಲಿ ಮಳೆ ಎಫೆಕ್ಟ್  ನಿಂದ ಕೆಲವು ಬೆಳೆಗಳ ದರ ಏರಿಕೆಗೆ ಕಾರಣವಾಗಿದೆ. ಪ್ರತಿ ಚೀಲ ಟಮೋಟೋ ದರ 50ರಿಂದ 80ಕ್ಕೆ ಏರಿಕೆ ಕಂಡಿದೆ. ಈರುಳ್ಳಿ ಬೆಲೆ ಕೂಡ ಏರಿಕೆಯಾಗಿದೆ. ಬೆಳ್ಳುಳ್ಳಿ ಪ್ರತಿ ಕೆಜಿಗೆ 80ರಿಂದ 100ರೂ. ಮುಟ್ಟಿದೆ. ಇದರ ಮಧ್ಯೆ ಕೊತ್ತಂಬರಿ ದರ ದುಪ್ಪಟ್ಟಾಗಿದ್ದು, ಸ್ಥಳೀಯ ಮಾರುಕಟ್ಟೆಗಳಲ್ಲಿ ಬೇಡಿಕೆಗೆ ತಕ್ಕಂತೆ ಪೂರೈಕೆ ಸಾಧ್ಯವಾಗುತ್ತಿಲ್ಲ. ಹೀಗಾಗಿ, ಬೆಲೆಯು ನಿರೀಕ್ಷೆ ಮೀರಿ ಏರಿಕೆ ಕಾಣುತ್ತಿದೆ.

ಇದನ್ನೂ ಓದಿ: Vegetables Rate: ಇನ್ನೂ 2 ತಿಂಗಳು ಕಡಿಮೆಯಾಗಲ್ವಂತೆ ತರಕಾರಿ ರೇಟ್, ಇಂದಿನ ದರಪಟ್ಟಿ ಹೀಗಿದೆ..!

ತರಕಾರಿಗಳು ಪ್ರತಿನಿತ್ಯದ ಅಗತ್ಯ ವಸ್ತುಗಳಲ್ಲಿ ಒಂದು. ಈಗಾಗಲೇ ಹಲವಾರು ತರಕಾರಿಗಳ ಬೆಲೆ ಹೆಚ್ಚಾಗಿದೆ. ಅದರ ಜೊತೆಗೆ ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ, ದಿನಸಿ, ತರಕಾರಿ ಬೆಲೆಗಳ ನಿರಂತರ ಏರಿಕೆಯಿಂದ ಜನರ ಬದುಕು ನಿಜಕ್ಕೂ ಕಷ್ಟಕರವಾಗುತ್ತಿದೆ. ತರಕಾರಿಗಳ ಬೆಲೆ ಏರಿದರೆ ಅದು ಗಾಯದ ಮೇಲೆ ಬರೆ ಎಳೆದಂತೆ.

ಜನಸಾಮಾನ್ಯರ ನಿದ್ದೆಗೆಡಿಸಿದೆ ಬೆಲೆ ಏರಿಕೆ

ಬಡ ಹಾಗೂ ಮಧ್ಯಮ ವರ್ಗದ ಜನರ ಬದುಕನ್ನು ಊಹಿಸಿಕೊಳ್ಳುವುದು ಅಸಾಧ್ಯ. ಹೀಗೆ ಬೆಲೆ ಏರಿಕೆ ಹೆಚ್ಚಾದರೆ ಬದುಕು ಬೀದಿಗೆ ಬರುವುದು ಅನ್ನೋ ಭಯ ಜನರಿಗಿದೆ. ಬೆಲೆ ಏರಿಕೆ ಬಿಸಿ ಜನಸಾಮಾನ್ಯರ ನಿದ್ದೆಗೆಡಿಸಿದೆ. ಬೇಳೆ ಕಾಳುಗಳು, ಅಕ್ಕಿ, ತರಕಾರಿ ಎಲ್ಲದರ ಬೆಲೆ ಹೆಚ್ಚಾದರೆ ಬದುಕುವುದು ಹೇಗೆ ಎಂಬ ಪ್ರಶ್ನೆ ಜನರಲ್ಲಿ ಮೂಡಿದೆ.

ಇನ್ನು ಮಧ್ಯೆ ಗ್ರಾಮೀಣ ಭಾಗದಲ್ಲಿ ರೈತರು ತಮ್ಮ ಬೆಳೆಗೆ ಸರಿಯಾದ ಬೆಲೆ ಸಿಗದೆ ಪರದಾಡುತ್ತಿದ್ದಾರೆ. ಮಳೆ, ಪ್ರವಾಹ, ಬರಗಾಲದ ನಡುವೆ ಕಷ್ಟಪಟ್ಟು ಬೆಳೆದ ಬೆಳೆಗಳಿಗೆ ಸರಿಯಾದ ಬೆಲೆ ಸಿಗದಿದ್ದಲ್ಲಿ ಅವರ ಬದುಕು ಕೂಡ ಮೂರಾಬಟ್ಟೆಯಾಗುತ್ತದೆ.
Published by:ಪಾವನ ಎಚ್ ಎಸ್
First published: