Gold Missing Case; 1.7 ಕೆಜಿ ಚಿನ್ನ ಕಾಣೆ ಪ್ರಕರಣದಲ್ಲಿ ತಗ್ಲಾಕೊಂಡೋರು ಇವರೇ ನೋಡಿ!

ಕಸ್ಟಮ್ಸ್ ನ ಇಬ್ಬರು ಅಧೀಕ್ಷಕರು ಮತ್ತು ಇಬ್ಬರು ಇನ್ಸ್‌ಪೆಕ್ಟರ್‌ಗಳ ವಿರುದ್ಧ ಸೆಕ್ಷನ್ 409 (ಸಾರ್ವಜನಿಕ ಸೇವಕರಿಂದ ನಂಬಿಕೆ ದ್ರೋಹ) ಮತ್ತು 420 (ಮೋಸ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಕಸ್ಟಮ್ಸ್‌ನ ಉಪ ನಿರ್ದೇಶಕರು ಸಿಆರ್ ಕಟ್ಟಡದಲ್ಲಿರುವ ಕಸ್ಟಮ್ಸ್ ಕಚೇರಿಯ ಗೋದಾಮನ್ನು ಪರಿಶೀಲಿಸಿದಾಗ ಈ ಘಟನೆ ಬೆಳಕಿಗೆ ಬಂದಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:

    ಬೆಂಗಳೂರು: ಸಾಮಾನ್ಯವಾಗಿ ಚಿನ್ನ (Gold Theft) ಕಳುವಾಗಿದೆ ಎಂದು ಯಾರಾದರೂ ಚಿನ್ನದ ಅಂಗಡಿಯ ಮಾಲೀಕರು ಅಥವಾ ಮನೆಯವರು ಪೊಲೀಸರಲ್ಲಿ (police) ದೂರು ದಾಖಲಿಸಿದರೇ, ಪೊಲೀಸರು ಆ ಕಳ್ಳತನ ಪ್ರಕರಣದ ಸಮಗ್ರವಾದ ತನಿಖೆ ನಡೆಸಿದ ನಂತರ ಅದರಲ್ಲಿ ಭಾಗಿಯಾದವರನ್ನು ಬಂಧಿಸುವುದನ್ನು ನಾವು ಅನೇಕ ಬಾರಿ ಕೇಳಿರುತ್ತೇವೆ ಮತ್ತು ಟಿವಿಯಲ್ಲಿ ನೋಡಿರುತ್ತೇವೆ.ಆದರೆ ಇತ್ತೀಚೆಗೆ ಕೆಲವು ಪ್ರಕರಣಗಳಲ್ಲಿ ಕಸ್ಟಮ್ಸ್ ಅಧಿಕಾರಿಗಳೇ (Custom Officers) ತಾವು ವಶಪಡಿಸಿಕೊಂಡಿರುವ ಚಿನ್ನ(Gold)ವನ್ನು ದುರುಪಯೋಗ ಮಾಡಿ ಸಿಕ್ಕಿಹಾಕಿಕೊಂಡಿರುವ ಘಟನೆಗಳು ಬೆಳಕಿಗೆ ಬಂದಿದ್ದು ನಿಜಕ್ಕೂ ಗಂಭೀರವಾದ ವಿಷಯವಾಗಿದೆ. ಇದು ಬೇಲಿಯೇ ಎದ್ದು ಹೊಲ ಮೇಯ್ದಂತಾಗಿದೆ.


    ಬೆಂಗಳೂರಿನ ಕ್ವೀನ್ಸ್ ರಸ್ತೆಯ (Bengaluru) ಸಿಆರ್ ಬಿಲ್ಡಿಂಗ್‌ನಲ್ಲಿ ಒಂದು ಬೇರೆಯದ್ದೇ ರೀತಿಯ ಘಟನೆ ನಡೆದಿದ್ದು, ಅದನ್ನು ಕೇಳಿದರೆ ನೀವು ಹೀಗೂ ಆಗಬಹುದೇ ಎಂದು ಬೆಚ್ಚಿ ಬೀಳ್ತೀರಾ. ಸಿಆರ್ ಬಿಲ್ಡಿಂಗ್‌ನಲ್ಲಿರುವ ಕಸ್ಟಮ್ಸ್ ಕಚೇರಿಯ ಗೋದಾಮಿನಿಂದ 1.7 ಕೆಜಿ ತೂಕದ ಚಿನ್ನ ಕಾಣೆಯಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ನಗರ ಪೊಲೀಸರು ಸೋಮವಾರದಂದು ಕಸ್ಟಮ್ಸ್‌ನ ಇಬ್ಬರು ಅಧೀಕ್ಷಕರು ಮತ್ತು ಇಬ್ಬರು ಇನ್ಸ್‌ಪೆಕ್ಟರ್‌ಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.


    ಇದನ್ನೂ ಓದಿ:  ಹೈದರಾಬಾದ್ ಏರ್​ಪೋರ್ಟ್​ನಲ್ಲಿ 25 ಕೋಟಿ ರೂ ಮೌಲ್ಯದ ಅಕ್ರಮ ಚಿನ್ನ ವಶಕ್ಕೆ

    ವರದಿಯ ಪ್ರಕಾರ, ಕಸ್ಟಮ್ಸ್‌ನ ಅಧೀಕ್ಷಕ ಶ್ರೀನಿವಾಸ ಗೋಪಾಲ್ ಚಿನ್ನವಿರುವ ಸಾಮಾನು ಸರಂಜಾಮುಗಳ ಉಸ್ತುವಾರಿ ವಹಿಸಿದ್ದ ನಾಲ್ವರು ಅಧಿಕಾರಿಗಳ ವಿರುದ್ಧ ದೂರು ದಾಖಲಿಸಿದ್ದಾರೆ.


    ಚಿನ್ನ ಕಾಣೆಯಾದ ಪ್ರಕರಣದಲ್ಲಿ ಕಸ್ಟಮ್ಸ್ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲು


    ಕಸ್ಟಮ್ಸ್ ನ ಇಬ್ಬರು ಅಧೀಕ್ಷಕರು ಮತ್ತು ಇಬ್ಬರು ಇನ್ಸ್‌ಪೆಕ್ಟರ್‌ಗಳ ವಿರುದ್ಧ ಸೆಕ್ಷನ್ 409 (ಸಾರ್ವಜನಿಕ ಸೇವಕರಿಂದ ನಂಬಿಕೆ ದ್ರೋಹ) ಮತ್ತು 420 (ಮೋಸ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಕಸ್ಟಮ್ಸ್‌ನ ಉಪ ನಿರ್ದೇಶಕರು ಸಿಆರ್ ಕಟ್ಟಡದಲ್ಲಿರುವ ಕಸ್ಟಮ್ಸ್ ಕಚೇರಿಯ ಗೋದಾಮನ್ನು ಪರಿಶೀಲಿಸಿದಾಗ ಈ ಘಟನೆ ಬೆಳಕಿಗೆ ಬಂದಿದೆ.


    ಚಿನ್ನ ವಶಪಡಿಸಿಕೊಳ್ಳುವಲ್ಲಿ ಅಧಿಕಾರಿಗಳ ಕೈವಾಡವಿದೆ ಎಂದು ಆರೋಪಿಸಲಾಗಿದೆ


    ಘಟನೆಯ ಬಗ್ಗೆ ಪ್ರತಿಕ್ರಿಯಿಸಿರುವ ದೂರುದಾರರಾದ ಶ್ರೀನಿವಾಸ ಗೋಪಾಲ್, 2012ರಲ್ಲಿ ವಶಪಡಿಸಿಕೊಳ್ಳಲಾದ 722 ಗ್ರಾಂ ಚಿನ್ನ ಮತ್ತು 2016ರಲ್ಲಿ ವಶಪಡಿಸಿಕೊಳ್ಳಲಾದ 1,042 ಗ್ರಾಂ ಚಿನ್ನವನ್ನು ತೋರಿಸಲು ಸಂಬಂಧಪಟ್ಟ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ತಿಳಿಸಿದ್ದಾರೆ.


    ಇದನ್ನೂ ಓದಿ:  ಕೇರಳದ ಚಿನ್ನದ ಸ್ಮಗ್ಲಿಂಗ್​ಗೂ ದಾವೂದ್​ ಇಬ್ರಾಹಿಂಗೂ ನಂಟು; ಶಾಕಿಂಗ್ ವಿಚಾರ ಬಿಚ್ಚಿಟ್ಟ ಎನ್​ಐಎ

    "ಗೋದಾಮಿನ ಮೇಲ್ವಿಚಾರಣೆಯ ಉಸ್ತುವಾರಿ ವಹಿಸಿದ್ದ ಇಬ್ಬರು ಅಧೀಕ್ಷಕರು ಮತ್ತು ಇಬ್ಬರು ಇನ್ಸ್‌ಪೆಕ್ಟರ್‌ಗಳು ಚಿನ್ನವನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ" ಎಂದು ಸುದ್ದಿ ಮಾಧ್ಯಮವು ಉಲ್ಲೇಖಿಸಿದೆ.


    6 ಕಸ್ಟಮ್ಸ್ ಅಧಿಕಾರಿಗಳ ವಿರುದ್ಧ ಪ್ರಕರಣ

    ಈ ಮಧ್ಯೆ, ಇತ್ತೀಚಿನ ದಿನಗಳಲ್ಲಿ ಕಸ್ಟಮ್ಸ್ ಅಧಿಕಾರಿಗಳ ವಿರುದ್ಧ ದಾಖಲಾದ ಎರಡನೇ ಪ್ರಕರಣ ಇದಾಗಿದ್ದು, ಈ ಹಿಂದೆ ಕೇಂದ್ರೀಯ ತನಿಖಾ ದಳ (ಸಿಬಿಐ) 2.6 ಕೆಜಿ ತೂಕದ ಚಿನ್ನ ಕಾಣೆಯಾಗಿದೆ ಎಂದು 6 ಕಸ್ಟಮ್ಸ್ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಿತ್ತು.


    ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆದಿದ್ದ ಚಿನ್ನ

    ಜೂನ್ 2012ರಿಂದ ಡಿಸೆಂಬರ್ 2014ರವರೆಗೆ ಬೆಂಗಳೂರಿನ ಏರ್​ಪೋರ್ಟ್​ನಲ್ಲಿ ಪ್ರಯಾಣಿಕರಿಂದ ಜಪ್ತಿ ಮಾಡಲಾಗಿದ್ದ ಚಿನ್ನವನ್ನು ವಿಮಾನ ನಿಲ್ದಾಣದ ಎಂಹೆಚ್​ಬಿ ಗೋಡಾನ್​ನಲ್ಲಿ ಶೇಖರಣೆ ಮಾಡಲಾಗಿತ್ತು. ಚಿನ್ನ ಕಳವು ಬಗ್ಗೆ ಆಂತರಿಕ ತನಿಖೆ ಕೈಗೊಂಡಿದ್ದ ಕಸ್ಟಮ್ಸ್​ ಇಲಾಖೆಯ ವಿಜಿಲೇನ್ಸ್ ಅಧಿಕಾರಿಗಳು ತನಿಖೆ ವೇಳೆ 13 ಪ್ರಕರಣಗಳಲ್ಲಿ ಜಪ್ತಿ ಮಾಡಲಾಗಿದ್ದ 2 ಕೆಜಿ 594 ಗ್ರಾಂ. ಚಿನ್ನ ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ.


    ಮಂಗಳೂರಿನಲ್ಲಿ ಚಿನ್ನ ಸಾಗಾಟ

    ಮಂಗಳೂರು ವಿಮಾನ ನಿಲ್ದಾಣದಲ್ಲಿ ಅಕ್ರಮ ‌ಚಿನ್ನ ಸಾಗಾಟ ಪ್ರಕರಣ ಮಿತಿ ಮೀರುತ್ತಿದೆ. ಕಳೆದ ಮೂರು ತಿಂಗಳಿನಿಂದ ಈ ಹಿಂದೆ ಎಂದೂ ಕಾಣದಷ್ಟು ಅಕ್ರಮ ಚಿನ್ನ ಸಾಗಾಟ ಪ್ರಕರಣಗಳು ಕಂಡು ಬಂದಿದೆ. ಲಾಕ್ ಡೌನ್ ತೆರವಾದ ಬಳಿಕ ವಿಮಾನಯಾನ ಆರಂಭವಾದ  ಈ ಹಿಂದೆ ಎಂದೂ ಆಗದಷ್ಟು ಅಕ್ರಮ‌ಚಿನ್ನ ಸಾಗಾಟ ಪ್ರಕರಣ ಗಳು ನಡೆದಿದೆ. ಜನವರಿಯಿಂದ ಎಪ್ರಿಲ್ ವರೆಗೆ ಸುಮಾರು 10ಕೋಟಿ ಮೌಲ್ಯದ 21 ಕೆಜಿ ಚಿನ್ನ ಸಾಗಾಟ ಪ್ರಕರಣ ನಡೆದಿದ್ದು,ಕಸ್ಟಮ್ಸ್ ಅಧಿಕಾರಿಗಳೇ ಈ ರೀತಿಯ ಬೆಳವಣಿಗೆ ಕಂಡು ಬೆಚ್ಚಿ ಬಿದ್ದಿದ್ದಾರೆ.
    First published: