ಕೊಡಗಿನಲ್ಲಿ ಕಾಲೇಜು ಹುಡುಗಿಯನ್ನು ಮುಕ್ಕಿ ಮುಗಿಸಿದ ಬಂಗಾಳ ಮೂಲದ ಇಬ್ಬರು ಕಾಮುಕರು

ಯುವತಿಯನ್ನು ರೇಪ್ ಮಾಡಿ ಕೊಲೆಗೈದವರೇ ಪೊಲೀಸರ ಶೋಧ ಕಾರ್ಯಾಚರಣೆಯಲ್ಲಿ ಕೈಜೋಡಿಸಿ ಅಮಾಯಕರಂತೆ ನಟಿಸಿದ್ದರು.

Vijayasarthy SN | news18
Updated:February 14, 2019, 6:47 PM IST
ಕೊಡಗಿನಲ್ಲಿ ಕಾಲೇಜು ಹುಡುಗಿಯನ್ನು ಮುಕ್ಕಿ ಮುಗಿಸಿದ ಬಂಗಾಳ ಮೂಲದ ಇಬ್ಬರು ಕಾಮುಕರು
ಅತ್ಯಾಚಾರ-ಕೊಲೆ ಆರೋಪಿಗಳು
Vijayasarthy SN | news18
Updated: February 14, 2019, 6:47 PM IST
- ರವಿ ಎಸ್. ಹಳ್ಳಿ,

ಕೊಡಗು: ಅಂದು ಫೆಬ್ರವರಿ 4, ಸಮಯ ಸಂಜೆ 4ರ ಸಮಯ.. ಕೊಡಗು ಜಿಲ್ಲೆ ಸೋಮವಾರಪೇಟೆ ತಾಲೂಕಿನ ಸಿದ್ದಾಪುರದಲ್ಲಿ ಆಕೆ ಎಲ್ಲರಂತೆಯೇ ಕಾಲೇಜು ಮುಗಿಸಿಕೊಂಡು ಮನೆಗೆ ಬರುತ್ತಿದ್ದಳು. ಹೀಗೆ ದಾರಿಯಲ್ಲಿ ಬರುವಾಗ ಮುಂಬೈನಲ್ಲಿರೋ ತನ್ನ ಸಂಬಂಧಿಯೊಬ್ಬನ ಜೊತೆ ಮಾತನಾಡಿಕೊಂಡೇ ಆ ಯುವತಿ ಮನೆ ಕಡೆ ಹೆಜ್ಜೆ ಹಾಕಿದ್ದಳು. ಪರಸ್ಪರ ಕುಶಲೋಪರಿ ಮಾತನಾಡಿ, ಇನ್ನೇನು ಕರೆ ಕಟ್ ಮಾಡಬೇಕು ಅನ್ನುವಷ್ಟರಲ್ಲಿ ಆಕೆಯನ್ನ ಯಾರೋ ಬಲವಂತವಾಗಿ ಬಾಯಿ ಮುಚ್ಚಿಸಿ ಕಿಡ್ನಾಪ್ ಮಾಡಿದ್ದರು. ಇದು ಪೋನ್ ಮೂಲಕ ಮುಂಬೈನಿಂದ ಮಾತನಾಡ್ತಿದ್ದ ಕಿಶೋರ್ ಎಂಬಾತನಿಗೆ ಗೊತ್ತಾಗಿದೆ. ಕರೆಯೂ ಕಟ್ಟಾಗಿದೆ. ಅಷ್ಟೇ.. ಕೆಲ ದಿನಗಳು ಕಳೆದರೂ ಆಕೆಯೇ ಸುಳಿವೇ ಸಿಕ್ಕಿರಲಿಲ್ಲ. ವಾರ ಕಳೆದರೂ ಯುವತಿಯ ಮಾಹಿತಿಯೇ ಸಿಗದಿದ್ದಾಗ ಸಾಮಾನ್ಯವಾಗಿ ಪೊಲೀಸರ ಮೇಲೂ ಒತ್ತಡ ಜಾಸ್ತಿ ಆಗಿತ್ತು. ಪೊಲೀಸರ ಎಲ್ಲಾ ಕಡೆಗಳಿಂದಲೂ ಮಾಹಿತಿ ಕಲೆಹಾಕಿದ್ರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಈ ಮಧ್ಯೆ ತನ್ನ ಮನೆಯ ಸಮೀಪದ ಕೆರೆ ಪಕ್ಕದಲ್ಲಿ ಫೆಬ್ರವರಿ 10ರಂದು ಬ್ಯಾಗ್, ಶೂ ಪತ್ತೆಯಾಗಿದ್ದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿತ್ತು.  ಕೊನೆಗೂ ಆ ಅನುಮಾನ ನಿಜವೇ ಆಯ್ತು. ಪ್ರತಿಷ್ಠಿತ ಟಾಟಾ ಕಾಫಿ ಎಸ್ಟೇಟ್ ಒಳಗೆ ಕೊನೆಗೂ ಆ ಬಾಲಕಿ ಸಿಕ್ಕಿದ್ದು ಹೆಣವಾಗಿ. ಅದೂ ಕೂಡ ನೋಡಲಾರದ ಸ್ಥಿತಿಯಲ್ಲಿ.

ಇದನ್ನೂ ಓದಿ: 2050ರಷ್ಟರಲ್ಲಿ ವಿಶ್ವದಲ್ಲಿ ಮುಸ್ಲಿಮರೇ ಬಹುಸಂಖ್ಯಾತರು? ಕ್ರೈಸ್ತರ ಅಗ್ರಸ್ಥಾನಕ್ಕೆ ಬಂತು ಕುತ್ತು

ಹೀಗೆ 17ರ ಯುವತಿಯ ಬಾಳಿಗೆ ಕೊಳ್ಳಿಯಿಟ್ಟಿದ್ದು ಪಶ್ಚಿಮ ಬಂಗಾಳ ಮೂಲದ ಸಂದೀಪ್ ಹಾಗೂ ರಂಜಿತ್ ಅವರಿಬ್ಬರು. ಕೆಲ ದಿನಗಳಿಂದ ಈ ಕಿರಾತರು ಹುಡಗಿಯ ಬೆನ್ನು ಬಿದ್ದಿರುತ್ತಾರೆ. ಆದರೆ, ಇಬ್ಬರಿಗೂ ಮಂಗಳಾರತಿ ಮಾಡಿ ಕಳುಹಿಸಿದ ಹುಡುಗಿಗೆ ಈ ದುಷ್ಟರು ಮುಂದೊಂದು ದಿನ ತನ್ನ ಜೀವನವನ್ನೇ ಬಲಿ ತೆಗೆದುಕೊಳ್ಳುತ್ತಾರೆ ಅನ್ನೋದು ಮಾತ್ರ ಕನಸು ಮನಸ್ಸಿನಲ್ಲಿಯೂ ಯೋಚನೆ ಬಂದಿಲ್ಲ. ಫೆಬ್ರವರಿ 4ರಂದು ಸಂಜೆ ಮುಗ್ಧ ಹುಡುಗಿ ಕಾಲೇಜಿನಿಂದ ಬರೋದನ್ನ ಕಾಯ್ತಿದ್ದ ಈ ಪಾಪಿಗಳು, ಆಕೆಯನ್ನ ಅತ್ಯಾಚಾರ ಮಾಡಿ ಕೊನೆಗೆ ಬಾಯಿ ಮುಚ್ಚಿ ಉಸಿರುಗಟ್ಟಿಸಿ ಸಾಯಿಸಿದ್ದಾರೆ. ಆ ಬಳಿಕ ಕಾಫಿ ತೋಟದ ಮೂಲೆಯೊಂದರಲ್ಲಿ ಹೂತಿಟ್ಟು ಅದರ ಮೇಲೆ ಕಲ್ಲು ಹಾಕಿ ಯಾರಿಗೂ ತಿಳಿಯದಂತೆ ಸ್ಥಳದಿಂದ ಎಸ್ಕೇಪ್ ಆಗಿರುತ್ತಾರೆ.

ಇದನ್ನೂ ಓದಿ: ಪ್ರೇಮಿಗಳ ದಿನದಂದು ಹಸೆಮಣೆ ಏರಿದ ಐಎಎಸ್ ಅಧಿಕಾರಿಗಳು!

ಈ ಮಧ್ಯೆ ಆರೋಪಿಗಳಿಗೆ ಕಠಿಣ ಗಲ್ಲು ಶಿಕ್ಷೆಯಾಗಬೇಕು ಹಾಗೂ ಕಾಫಿ ತೋಟದಲ್ಲಿ ಕೆಲಸ ಮಾಡುವ ಅಸ್ಸಾಂ ಕಾರ್ಮಿಕರನ್ನ ಓಡಿಸಬೇಕು ಎಂದು ಒತ್ತಾಯಿಸಿ ಸಿದ್ದಾಪುರ ಪಟ್ಟಣ ಬಂದ್ ಮಾಡಿ ನೂರಾರು ಮಂದಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ರು. ವಿಪರ್ಯಾಸವೆಂದರೆ ಫೆಬ್ರವರಿ 4ರಂದು ಅತ್ಯಾಚಾರ ಮಾಡಿ ಕೊಲೆಗೈದಿದ್ದ ಆರೋಪಿಗಳು, ಫೆಬ್ರವರಿ 10ರಂದು ಯುವತಿಯ ಬ್ಯಾಗ್, ಶೂ ಸಿಕ್ಕಿದಾಗ ಹಾಗೂ ಅಗ್ನಿಶಾಮಕದಳದ ಸಿಬ್ಬಂದಿ ಕೆರೆಯನ್ನ ಜಾಲಾಡುವಾಗ ಆ ಶೋಧ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ರು. ಆ ವೇಳೆಯಲ್ಲಿ ಏನೂ ಸುಳಿವು ಬಿಟ್ಟುಕೊಡದ ದುರುಳರು ನಾವು ಸೇಫ್ ಅಂದುಕೊಂಡಿದ್ರು. ಆದರೆ ಈ ಕೀಚಕರು ಚಾಪೆ ಕೆಳಗೆ ತೂರಿದ್ರೆ, ಕೊಡಗು ಪೊಲೀಸರು ರಂಗೋಲಿ ಕೆಳಗೆ ನುಗ್ಗಿ ಆರೋಪಿಗಳ ಕೈಗೆ ಕೋಳ ತೊಡಿಸಿದ್ದಾರೆ. ಅದೇನೆ ಆಗಲಿ, ಬಾಳಿ ಬದುಕಬೇಕಾದ ಮುಗ್ಧ ಬಾಲಕಿಯನ್ನ ಈ ರೀತಿ ಮುಕ್ಕಿದ್ದ ಕಾಮುಕರಿಗೆ ಸರಿಯಾದ ಶಿಕ್ಷೆಯಾಗಲಿ ಎನ್ನೋದೇ ನಮ್ಮ ಒತ್ತಾಯ.
First published:February 14, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...