ST Somashekar: ಸಾಮಾನ್ಯ ಜನರಿಂದ ಸಾಲ ವಸೂಲಿ ಮಾಡಿದಂತೆ ಜನಪ್ರತಿನಿಧಿಗಳಿಂದಲೂ ಸಾಲ ವಸೂಲಿ; ಸಹಕಾರ ಸಚಿವ ಎಸ್.ಟಿ. ಸೋಮಶೇಖರ್

ಎಲೆಕ್ಷನ್ ಹತ್ರ ಬಂದಾಗ ಅಲ್ಲಿಂದ ಇಲ್ಲಿಗೆ, ಇಲ್ಲಿಂದ ಅಲ್ಲಿಗೆ ಹೋಗೊದು ಕಾಮನ್. ಸದ್ಯಕ್ಕೆ ಯಾರು ಎಲ್ಲೂ ಹೋಗಲ್ಲ. ಮಿತ್ರ ಮಂಡಳಿಯಲ್ಲಿ ಯಾರು ಹೋಗಲ್ಲ. ಕೆಲವರು ಉದ್ದೇಶ ಪೂರ್ವಕವಾಗಿ ಪ್ರಚಾರದಲ್ಲಿ ಇರಲು ಪ್ರಯತ್ನ ಮಾಡ್ತಿರಬಹುದು ಎಂದು ಸಚಿವ ಎಸ್.ಟಿ. ಸೋಮವೇಖರ್ ಅವರು ಹೇಳಿದರು.

ಎಸ್​ಟಿ ಸೋಮಶೇಖರ್​

ಎಸ್​ಟಿ ಸೋಮಶೇಖರ್​

 • Share this:
  ನವದೆಹಲಿ: ಸಹಕಾರ ಸಮೃದ್ಧ ಕಾರ್ಯಕ್ರಮದಲ್ಲಿ (National Cooperative Conference) ಭಾಗಿಯಾಗಲು ಬಂದಿದ್ದೇವು. ಎಲ್ಲ ರೀತಿಯ ಸಹಕಾರ ಸಂಸ್ಥೆಗಳು ಬಂದಿದ್ದವು. ಕರ್ನಾಟಕದಿಂದ 200 ಜನ ಆಗಮಿಸಿದ್ದೇವೆ.  ಇಫ್ಕೋ ಈ ಕಾರ್ಯಕ್ರಮ ಆಯೋಜನೆ ಮಾಡಿತ್ತು. ಸಹಕಾರ ವ್ಯವಸ್ಥೆಯಲ್ಲಿದ್ದ ಸಮಸ್ಯೆ ಚರ್ಚೆ ಮಾಡಿದೆ. ಕೇಂದ್ರ ಸಹಕಾರ ಸಚಿವ ಅಮಿತ್ ಶಾ ಕೂಡ ಸಮಸ್ಯೆಗಳನ್ನು ಬಗೆಹರಿಸುವುದಾಗಿ ಹೇಳಿದ್ದಾರೆ. ಎಲ್ಲ ಕೊ ಆಪರೇಟಿವ್ ಸಂಸ್ಥೆ ಒಂದೇ ನೆಲೆಯಲ್ಲಿ ತರುವ ಉದ್ದೇಶದ ಬಗ್ಗೆ ಚರ್ಚೆ ಮಾಡಿದೆ. ನಾಳೆ ಅಮಿತ್ ಶಾ ಭೇಟಿ ಮಾಡಿ ಅಕ್ಟೋಬರ್, ನವೆಂಬರ್ ನಲ್ಲಿ ಬರುವಂತೆ ಆಹ್ವಾನ ನೀಡಲಿದ್ದೇವೆ ಎಂದು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ (Co operative Minister ST Somashekar) ಹೇಳಿದರು.

  ದೆಹಲಿಯಲ್ಲಿ ಸಹಕಾರ ಸಮಾವೇಶದಲ್ಲಿ ಪಾಲ್ಗೊಂಡ ಬಳಿಕ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಸಚಿವ ಎಸ್‌.ಟಿ ಸೋಮಶೇಖರ್, 20810 ಕೋಟಿ ಹೊಸದಾಗಿ ಸಾಲ ನೀಡಲು ಪ್ಲ್ಯಾನ್ ಮಾಡಿದೆ. ಹೆಚ್ಚು ರೈತರಿಗೆ ಸಾಲ ನೀಡಲು ಚಿಂತಿಸಲಾಗಿದೆ. ಎಲ್ಲ ಕೋ ಆಪರೇಟಿವ್ ಬ್ಯಾಂಕುಗಳನ್ನು ಒಂದೇ ಸಾಫ್ಟ್‌ವೇರ್ ಅಡಿಯಲ್ಲಿ ತರುವ ಬಗ್ಗೆ ಚರ್ಚೆ ನಡೆದಿದೆ. ನಾವು ಬಜೆಟ್ ನಲ್ಲಿ ಈ ಬಗ್ಗೆ ಘೋಷಿಸಿದ್ದೇವೆ. ಈಗ ಅಮಿತ್ ಶಾ ಅವರು ಈ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲ ಬ್ಯಾಂಕ್ ಗಳನ್ನು ಒಂದೇ ಸಾಫ್ಟ್‌ವೇರ್ ನಲ್ಲಿ ತರಲಿದ್ದೇವೆ. ಇದರಿಂದ ಹೆಚ್ಚಿನ ಲಾಭ ಆಗಲಿದೆ. ಸಮಗ್ರ ಮಾಹಿತಿ ಎಲ್ಲ ಜಿಲ್ಲೆಗಳಿಂದ ಒಂದು ನೆಲೆಯಲ್ಲಿ ಸಿಗಲಿದೆ ಎಂದು ತಿಳಿಸಿದರು.

  ಸಹಕಾರಿ ಬ್ಯಾಂಕುಗಳಲ್ಲಿ ಜನಪ್ರತಿನಿಧಿಗಳ ಸಾಲ ಬಾಕಿ ವಿಚಾರವಾಗಿ ಪ್ರತಿಕ್ರಿಯಿಸಿದ ಸಚಿವ ಎಸ್‌.ಟಿ ಸೋಮಶೇಖರ್, ಇದನ್ನು ಗಂಭೀರವಾಗಿ ಪರಿಗಣಿಸಲು ಸೂಚಿಸಲಾಗಿದೆ. ಕೆಲವರು ಬಡ್ಡಿ ಮಾತ್ರ ಕಟ್ಟುತ್ತಿದ್ದಾರೆ. ಇನ್ನು ಕೆಲವರು ಬಡ್ಡಿ, ಅಸಲು ಎರಡು ಕಟ್ಟಿಲ್ಲ. ಅವರಿಗೆ ನೋಟಿಸ್ ಜಾರಿ ಮಾಡಲು ಸೂಚಿಸಲಾಗಿದೆ. ಸಾಮಾನ್ಯ ಜನರಿಂದ ಹೇಗೆ ಬಡ್ಡಿ ವಸೂಲು ಮಾಡುತ್ತಾರೋ ಅದೇ ರೀತಿ ಜನಪ್ರತಿನಿಧಿಗಳಿಂದಲೂ ಸಾಲ ವಸೂಲು ಮಾಡಲು ಕ್ರಮ ತೆಗೆದುಕೊಳ್ಳಲು ಸೂಚಿಸಲಾಗಿದೆ ಎಂದರು.

  ರಾಜಕೀಯದಲ್ಲಿ ಬದಲಾವಣೆ ಯತ್ನಾಳ್ ಹೇಳಿಕೆ ವಿಚಾರವಾಗಿ ಮಾತನಾಡಿ, ಯಾವ ಬದಲಾವಣೆಯೂ ಆಗಲ್ಲ. ಸಿಎಂ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿದ್ದಾರೆ. ಯಾವ ಶಾಡೋನೂ ಆಗಲ್ಲ, ಅವರು ಕ್ಲವರ್ ಇದ್ದಾರೆ ಎಂದರು. ಇನ್ನು ಬಿಜೆಪಿಯಿಂದ ಕಾಂಗ್ರೆಸಿಗೆ ಶಾಸಕರು ಹೋಗುವ ವಿಚಾರವಾಗಿ, ಎಲೆಕ್ಷನ್ ಹತ್ರ ಬಂದಾಗ ಅಲ್ಲಿಂದ ಇಲ್ಲಿಗೆ, ಇಲ್ಲಿಂದ ಅಲ್ಲಿಗೆ ಹೋಗೊದು ಕಾಮನ್. ಸದ್ಯಕ್ಕೆ ಯಾರು ಎಲ್ಲೂ ಹೋಗಲ್ಲ. ಮಿತ್ರ ಮಂಡಳಿಯಲ್ಲಿ ಯಾರು ಹೋಗಲ್ಲ. ಕೆಲವರು ಉದ್ದೇಶ ಪೂರ್ವಕವಾಗಿ ಪ್ರಚಾರದಲ್ಲಿ ಇರಲು ಪ್ರಯತ್ನ ಮಾಡ್ತಿರಬಹುದು ಎಂದು ಸಚಿವ ಎಸ್.ಟಿ. ಸೋಮವೇಖರ್ ಅವರು ಹೇಳಿದರು.

  ಇದನ್ನು ಓದಿ: National Cooperative Conference: ದೇಶದ ಅಭಿವೃದ್ಧಿಯಲ್ಲಿ ಸಹಕಾರಿ ವಲಯಗಳ ಕೊಡುಗೆ ಬಹಳಷ್ಟಿದೆ- ಅಮಿತ್ ಶಾ

  ಅಮಿತ್ ಶಾ ಭಾಷಣ

  ಗೃಹ ಸಚಿವ ಅಮಿತ್ ಶಾ(Amit Shah)  ರಾಷ್ಟ್ರ ರಾಜಧಾನಿಯಲ್ಲಿ ಸಹಕಾರಿ ಸಂಘಗಳ ಮೊದಲ ಮೆಗಾ ಸಮ್ಮೇಳನವನ್ನು(National Cooperative Conference) ಉದ್ದೇಶಿಸಿ ಮಾತನಾಡಿದ್ದು, ಅಲ್ಲಿ ಅವರು ಕ್ಷೇತ್ರದ ಅಭಿವೃದ್ಧಿಗಾಗಿ ಸರ್ಕಾರದ ದೃಷ್ಟಿಕೋನ ಮತ್ತು ಮಾರ್ಗಸೂಚಿಯನ್ನು ವಿವರಿಸಿದ್ದಾರೆ. ಸಮ್ಮೇಳನದಲ್ಲಿ ಮಾತನಾಡಿದ ಅವರು, ಸಹಕಾರಿ ವಲಯವನ್ನು ಬಲಪಡಿಸಲು ಮತ್ತು ಆಧುನೀಕರಣಗೊಳಿಸಲು ಸಹಕಾರದ  ಈ ಸಚಿವಾಲಯ ರೂಪುಗೊಂಡಿದೆ. ಸಹಕಾರ ಸಚಿವಾಲಯ, ಭಾರತ ಸರ್ಕಾರವು ಎಲ್ಲಾ ರಾಜ್ಯಗಳೊಂದಿಗೆ ಸಹಕಾರದಿಂದ ಕಾರ್ಯನಿರ್ವಹಿಸುತ್ತದೆ, ಇದನ್ನು ಯಾವುದೇ ರಾಜ್ಯದೊಂದಿಗೆ ಸಂಘರ್ಷ ಮಾಡುವ ಉದ್ದೇಶದಿಂದ ರಚಿಸಲಾಗಿಲ್ಲ.   ಸರ್ಕಾರಿ ಸಮಿತಿಗಳನ್ನು ತಳಮಟ್ಟಕ್ಕೆ ಕೊಂಡೊಯ್ಯುವ ಕೆಲಸವನ್ನು ಈ ಸಚಿವಾಲಯದ ಅಡಿಯಲ್ಲಿ ಮಾಡಲಾಗುತ್ತದೆ ಎಂದು ಕೇಂದ್ರ ಸಹಕಾರ ಸಚಿವರೂ ಆಗಿರುವ ಗೃಹ ಸಚಿವ ಅಮಿತ್ ಶಾ ಅವರು ಹೇಳಿದರು.
  Published by:HR Ramesh
  First published: