Edible Oil Price Hike: ಕಳೆದ ಎರಡು ವಾರಗಳಿಂದ ಕಡಿಮೆಯಾಗಿದ್ದ ಅಡುಗೆ ಎಣ್ಣೆಯ ಬೆಲೆಗಳು ಈಗ ಹೆಚ್ಚಾಗಿದೆ. ಅಡುಗೆ ಎಣ್ಣೆಗಳ ಆಮದು ಇಳಿಕೆಯಾಗಿದೆ, ಹಾಗಾಗಿ ಬೆಲೆಗಳು ಗಗನಕ್ಕೇರುತ್ತಿವೆ. ಅಲ್ಲದೇ ಈಗ ಆಷಾಢ ಮಾಸ ಇರುವುದರಿಂದ ಹೆಚ್ಚಿನ ಪ್ರಮಾಣದಲ್ಲಿ ಸಮಾರಂಭಗಳು ನಡೆಯುವುದಿಲ್ಲ. ಕೊರೊನಾ ಆತಂಕ ಸಂಪೂರ್ಣವಾಗಿ ನಿಲ್ಲದ ಕಾರಣ ಹೆಚ್ಚಿನ ವ್ಯಾಪಾರ ನಡೆಯುತ್ತಿಲ್ಲ ಎನ್ನುತ್ತಾರೆ ವರ್ತಕರು. ಇದೆಲ್ಲಾ ಕಾರಣಗಳಿಂದಾಗಿ ಸದ್ಯ ಅಡುಗೆ ಎಣ್ಣೆಯ ಬೆಲೆ ಗಮನಿಸಬೇಕಾದಷ್ಟು ಪ್ರಮಾಣದಲ್ಲಂತೂ ಏರಿಕೆಯಾಗಿದೆ. ಅಡುಗೆ ಎಣ್ಣೆಯಲ್ಲಿ ಅತ್ಯಂತ ಹೆಚ್ಚು ಬಳಕೆಯಾಗೋದು ಸೂರ್ಯಕಾಂತಿ ಎಣ್ಣೆ ಮತ್ತು ಪಾಮ್ ಆಯಿಲ್. ಸದ್ಯ ಇವೆರಡರ ಬೆಲೆಯೂ ಹೆಚ್ಚಾಗಿರೋದು ಗೃಹಿಣಿಯರಂತೂ ಭಾರೀ ತಲೆ ಕೆಡಿಸಿಕೊಂಡಿದ್ದಾರೆ.
ಸೂರ್ಯಕಾಂತಿ ಬೀಜಗಳ ಬೆಲೆಯೇ ಏರಿಕೆಯಾಗಿದೆ. ಹಾಗಾಗಿ ಸಹಜವಾಗಿ ಎಣ್ಣೆಯ ಬೆಲೆಯೂ ಜಾಸ್ತಿಯಾಗಿದೆ. ಲೀಟರ್ಗೆ 10 ರೂಪಾಯಿ ಹೆಚ್ಚಾಗಿದ್ದು ಸದ್ಯ ಸೂರ್ಯಕಾಂತಿ ಎಣ್ಣೆಯ ಬೆಲೆ ಒಂದು ಲೀಟರ್ಗೆ ಬರೋಬ್ಬರಿ 155 ರೂಪಾಯಿ ಆಗಿದೆ. ಇನ್ನು ಪಾಮ್ ಆಯಿಲ್ ಕೂಡಾ ಕೆಜಿಗೆ 5 ರೂಪಾಯಿ ಜಾಸ್ತಿಯಾಗಿದ್ದು ಹೋಲ್ ಸೇಲ್ ಮಾರುಕಟ್ಟೆಯಲ್ಲೇ ಕೆಜಿಗೆ 120 ಆಗಿಬಿಟ್ಟಿದೆ. ದಿನಬಳಕೆಯ ವಸ್ತುಗಳೆಲ್ಲಾ ತುಟ್ಟಿಯಾಗ್ತಿರುವಾಗ ಎಣ್ನೆಯ ಬೆಲೆಯೂ ಹೀಗೆ ಗಗನಕ್ಕೇರುತ್ತಿರುವುದು ಮಧ್ಯಮ ಮತ್ತು ಕೆಳಮಧ್ಯಮ ವರ್ಗದ ಜನರ ಜೇಬಿಗೆ ಕತ್ತರಿ ಬಿದ್ದಿದೆ.
ಇದನ್ನೂ ಓದಿ: Trek for Health: ಶುದ್ಧ ಗಾಳಿಗಾಗಿ ಕಪ್ಪತ್ತಗುಡ್ಡಕ್ಕೆ ಹೋಗ್ತಿದ್ದಾರೆ ಜನ, ಇಲ್ಲಿರೋ ಔಷಧೀಯ ಸಸ್ಯಗಳಿಂದ ಆರೋಗ್ಯ ಸುಧಾರಣೆ ?
ಇನ್ನು ಚಿಕನ್ ಬೆಲೆ ಕೂಡಾ ಏರಿಕೆಯಾಗಿದೆ. ಈ ವಾರ ಬಾಯ್ಲರ್ ಕೋಳಿ ಬೆಲೆ ಕೆಜಿಗೆ 30 ರೂಪಾಯಿ ಹೆಚ್ಚಾಗಿಬಿಟ್ಟಿದೆ. ಬಾಯ್ಲರ್ ಕೋಳಿ ಒಂದು ಕೆಜಿಗೆ 180 ರೂಪಾಯಿ ಇದ್ರೆ ರೆಡಿ ಚಿಕನ್ 260 ರೂಪಾಯಿಗಳಷ್ಟಿದೆ. ಸ್ಥಳೀಯವಾಗಿ ಬರುತ್ತಿದ್ದ ಕೋಳಿಗಳು ಈಗ ಮಾರುಕಟ್ಟೆಗೆ ಬರುತ್ತಿಲ್ಲ, ಹೊರ ರಾಜ್ಯಗಳಿಂದಲೇ ತರಿಸಬೇಕಾಗಿದೆ.. ಈ ಕಾರಣಕ್ಕೆ ಬೆಲೆಗಳು ಏರಿಕೆಯಾಗಿವೆ ಎನ್ನುತ್ತಾರೆ ವ್ಯಾಪಾರಿಗಳು. ಸಾಮಾನ್ಯವಾಗಿ ಶ್ರಾವಣ ಮಾಸದಲ್ಲಿ ಕೋಳಿ ವ್ಯಾಪಾರ ಕಡಿಮೆಯಾಗುತ್ತದೆ. ಆದ್ರೆ ಈ ಬಾರಿ ಆಷಾಢ ಮಾಸದಲ್ಲೇ ವಹಿವಾಟು ಕುಸಿದು ಬೆಲೆ ಏರಿಕೆಯಾಗಿರೋದು ವ್ಯಾಪಾರಿಗಳಿಗೂ ಆತಂಕ ತಂದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ