• Home
  • »
  • News
  • »
  • state
  • »
  • Mangaluru Blast Case: ಬೆಂಗಳೂರಿನಲ್ಲಿ ಮತ್ತೊಬ್ಬ ಶಂಕಿತ ಅರೆಸ್ಟ್; ರಾಜಧಾನಿಯಲ್ಲಿ ವಿಧ್ವಂಸಕ ಕೃತ್ಯಕ್ಕೆ ನಡೆದಿತ್ತಾ ಪ್ಲಾನ್​!?

Mangaluru Blast Case: ಬೆಂಗಳೂರಿನಲ್ಲಿ ಮತ್ತೊಬ್ಬ ಶಂಕಿತ ಅರೆಸ್ಟ್; ರಾಜಧಾನಿಯಲ್ಲಿ ವಿಧ್ವಂಸಕ ಕೃತ್ಯಕ್ಕೆ ನಡೆದಿತ್ತಾ ಪ್ಲಾನ್​!?

ಮಂಗಳೂರು ಸ್ಫೋಟದ ರಿಕ್ಷಾ

ಮಂಗಳೂರು ಸ್ಫೋಟದ ರಿಕ್ಷಾ

ಬೆಂಗಳೂರಿನಲ್ಲಿ  ಶಂಕಿತನೋರ್ವನನ್ನು ಮೈಸೂರು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬೆಂಗಳೂರಿನ ಕೆ.ಜಿ ಹಳ್ಳಿಯಲ್ಲಿ ಮಹಮದ್ ರುಹುಲ್ಲಾ​ ಎಂಬಾತನನ್ನು ಪೊಲೀಸರು ವಿಚಾರಣೆಗೊಳಪಡಿಸಿದ್ದಾರೆ.

  • News18 Kannada
  • Last Updated :
  • Karnataka, India
  • Share this:

ಬೆಂಗಳೂರು (ನ.21): ಮಂಗಳೂರು ಆಟೋದಲ್ಲಿ ಕುಕ್ಕರ್ ಬಾಂಬ್ ಸ್ಫೋಟ (Cooker Bomb Explosion) ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ  ಶಂಕಿತನೋರ್ವನನ್ನು (Suspect) ಮೈಸೂರು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬೆಂಗಳೂರಿನ ಕೆ.ಜಿ ಹಳ್ಳಿಯಲ್ಲಿ ಮಹಮದ್ ರುಹುಲ್ಲಾ​ ಎಂಬಾತನನ್ನು ಪೊಲೀಸರು ವಿಚಾರಣೆಗೊಳಪಡಿಸಿದ್ದಾರೆ. ಮಹಮದ್ ರುಹುಲ್ಲಾ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ (Inquiry) ನಡೆಸಿದ್ದಾರೆ. ಶಾರೀಕ್​ ಬಗ್ಗೆ ಕೂಡ ಮಾಹಿತಿ ಬಹಿರಂಗವಾಗಿದೆ. ಕೆ ಜಿ ಹಳ್ಳಿಯಲ್ಲಿ ಕಾರ್ಯಕ್ರಮಕ್ಕೆ ಒಂದಕ್ಕೆ ಅಗಮಿಸಿದ್ದ ಮಹಮದ್ ರುಹುಲ್ಲಾ, ಶಾರೀಕ್​ ಜೊತೆಗೆ ನಿರಂತರ ಸಂಪರ್ಕದಲ್ಲಿದ್ದ.  ಮಹಮದ್ ರುಹುಲ್ಲಾಗಾಗಿ ನಿನ್ನೆಯೇ ಮೈಸೂರು ಪೊಲೀಸರು ಬೆಂಗಳೂರಿಗೆ ಬಂದಿದ್ದರು. 


ಪೊಲೀಸರಿಂದ ಶಂಕಿತರ ಬಂಧನ


ಮಹಮದ್ ರುಹುಲ್ಲಾ ಬಗ್ಗೆ ಪೂರ್ವ ವಿಭಾಗ ಪೊಲೀಸರಿಗೆ ಮೈಸೂರು ಪೊಲೀಸರು ಮಾಹಿತಿ ನೀಡಿದ್ದರು. ಬಳಿಕ ಕೆ.ಜಿ ಹಳ್ಳಿಯಲ್ಲಿ ಮಹಮದ್ ರುಹುಲ್ಲಾನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ನಂತ್ರ ಆತನನ್ನು ಮೈಸೂರು ಪೊಲೀಸರಿಗೆ ಒಪ್ಪಿಸಿದ್ದಾರೆ. ಸದ್ಯ ಮಹಮದ್ ರುಹುಲ್ಲಾ ನನ್ನು ಮಂಗಳೂರಿಗೆ ಕರೆದೊಯ್ಯಲಾಗಿದೆ.


ಮಂಗಳೂರು ಬ್ಲಾಸ್ಟ್​ ಕೇಸ್


ಈತ ಬೆಂಗಳೂರಿಗೆ ಬಂದಿದ್ದು ಯಾಕೆ?


ಮಹಮದ್ ರುಹುಲ್ಲಾ ಬೆಂಗಳೂರಿಗೆ ಬಂದಿದ್ದು ಯಾಕೆ ಎನ್ನುವ ಪ್ರಶ್ನೆ ಕೂಡ ಇದೀಗ ಪೊಲೀಸರನ್ನು ಕಾಡುತ್ತಿದೆ. ಬೆಂಗಳೂರಿನಲ್ಲಿ ವಿಧ್ವಂಸಕ ಕೃತ್ಯ ಮಾಡಲು ಪ್ಲ್ಯಾನ್ ಮಾಡಿದ್ನಾ ಎನ್ನುವ ಅನುಮಾನ ಹೆಚ್ಚಾಗಿದೆ.


ಪೊಲೀಸರ ಬಳಿ ಸುಳ್ಳು ಹೇಳಿದ ಶಂಕಿತ 


ಪೊಲೀಸರು ಈತನನ್ನು ವಶಕ್ಕೆ ಪಡೆದ ವೇಳೆ ಯಾವುದೋ ಕಾರ್ಯಕ್ರಮ ಇತ್ತು ಹಾಗಾಗಿ ಬಂದಿದ್ದೇ ಅಂದಿದ್ದಾನೆ. ಆದ್ರೆ ಪೊಲೀಸರು ಈ ಕುರಿತು ಚೆಕ್ ಮಾಡಿದಾಗ ಯಾವ ಕಾರ್ಯಕ್ರಮವೂ ಇರಲಿಲ್ಲ, ಹೀಗಾಗಿ ಪೊಲೀಸರಲ್ಲಿ ಹಲವು ಅನುಮಾನ ಮೂಡಿದೆ.


ಇದನ್ನೂ ಓದಿ: Mangaluru Blast: ಶಂಕಿತ ಉಗ್ರ ಸೂಸೈಡ್ ಬಾಂಬರ್ ಆಗಿದ್ನಾ? ಶಾರೀಕ್ ಪೋಷಕರನ್ನು ಕರೆಸುತ್ತಿರುವ ಪೊಲೀಸರು


ಮಹಮದ್ ರುಹುಲ್ಲಾ ಬಗ್ಗೆ ಮಾಹಿತಿ ಸಂಗ್ರಹ


ಮಹಮದ್ ರುಹುಲ್ಲಾ ಯಾರನ್ನ ಭೇಟಿ ಮಾಡಲು ಬೆಂಗಳೂರಿಗೆ ಬಂದಿದ್ದ. ಶಾರೀಕ್ ಗೂ ರುಹುಲ್ಲಾಗೂ ಏನ್ ಸಂಬಂಧ ಎನ್ನುವ ಬಗ್ಗೆ ವಿಚಾರಣೆ ನಡೆಯುತ್ತಿದೆ. ರುಹುಲ್ಲಾ  ಬ್ಯಾಗ್ರೌಂಡ್, ಮನೆ ವಿಳಾಸ ಸೇರಿ ಹಲವು ಮಾಹಿತಿಗಳನ್ನು ಮೈಸೂರಿನಲ್ಲಿ ವಿಶೇಷ ತಂಡ ಮಾಹಿತಿ ಸಂಗ್ರಹ ಮಾಡಿದೆ.


ಮಂಗಳೂರಿನ ನಾಗುರಿ ಬಳಿಯಲ್ಲಿ ನಡೆದ ಸ್ಫೋಟದ ಕುರಿತು ಎಡಿಜಿಪಿ ಅಲೋಕ್ ಕುಮಾರ್ ಸುದ್ದಿಗೋಷ್ಠಿ ನಡೆಸಿ ಇಡೀ ಪ್ರಕರಣದ ಮಾಹಿತಿ ನೀಡಿದರು. ಆಟೋದಲ್ಲಿ ಸ್ಫೋಟವೊಂದು (Auto Blast) ನಡೆದಿತ್ತು. ಈ ಸ್ಫೋಟದಲ್ಲಿ ಆಟೋ ಚಾಲಕ ಪುರುಷೋತ್ತಮ್ ಮತ್ತು ಉಗ್ರ ಶಾರೀಕ್ ಗಾಯಗೊಂಡಿದ್ದರು. ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಂಗಳೂರು ಕಮಿಷನರ್ (Mangaluru Commissioner) ಕೂಡಲೇ ತನಿಖೆ ಕೈಗೊಂಡಿದ್ದರು.


ಇತ್ತ ಮೈಸೂರಿನಲ್ಲಿಯೂ ಕಮಿಷನರ್ ತನಿಖೆ ಕೈಗೊಂಡಿದ್ದರು. ಶಿವಮೊಗ್ಗದಲ್ಲಿ ನಡೆದ ಗಲಾಟೆಯಲ್ಲಿ ಜಬಿವುಲ್ಲಾ ಎಂಬಾತನನ್ನು ಅರೆಸ್ಟ್ ಮಾಡಲಾಗಿತ್ತು. ಈ ವೇಳೆ ತಪ್ಪಿಸಿಕೊಂಡಿದ್ದ ಶಾರೀಕ್ ಕೊಯಂಬತ್ತೂರು ಮತ್ತು ಮೈಸೂರಿನಲ್ಲಿ ವಾಸವಾಗಿದ್ದನು.

ಶಾರೀಕ್​​ನನ್ನು ಗುರುತಿಸಿದ ಕುಟುಂಬಸ್ಥರು


ಆಧಾರ್ ಕಾರ್ಡ್​ ನೋಡಿದಾಗ ಈತ ಶಾರೀಕ್ ಇರಬಹುದು ಎಂಬ ಅನುಮಾನ ಮೂಡಿತ್ತು. ಸಂಬಂಧಿಕರು ಈತನನ್ನು ಶಾರೀಕ್ ಎಂದು ಗುರುತಿಸಿದ್ದಾರೆ.


ಬ್ಲಾಸ್ಟ್​ ಮಾಡಲು ಸಂಚು




2020ರಲ್ಲಿ ಈಸ್ಟ್ ಪೊಲೀಸ್ ಮತ್ತು ನಾರ್ತ್ ಪೊಲೀಸ್ ನಲ್ಲೂ ಕೇಸ್ ಆಗಿತ್ತು. ಶಾರೀಕ್, ಮಾಜ್ ,ಯಾಸಿನ್, ಅರಾಫತ್ ಎಂಬುವರ ವಿರುದ್ಧ ಕೇಸ್ ಆಗಿತ್ತು. ಅರಾಫತ್ ಸದ್ಯ ದುಬೈನಲ್ಲಿದ್ದಾನೆ. ಮೈಸೂರು ಮನೆಯಲ್ಲಿಯೇ ಸ್ಫೋಟಕ ತಯಾರಿಕೆ ಮಾಡಿಕೊಂಡು ಬ್ಲಾಸ್ಟ್​ ಮಾಡಲು ಸಂಚು ರೂಪಿಸಿದ್ದನು.


ಆದ್ರೆ ಇದ್ಯಾವುದೂ ಮನೆ ಮಾಲೀಕ ಮೋಹನ್​ಗೆ ಗೊತ್ತಿರಲಿಲ್ಲ. ಮನೆಯಲ್ಲಿ ಸ್ಫೋಟಕ ವಸ್ತುಗಳು ಪತ್ತೆಯಾಗಿವೆ. ಮೈಸೂರಿನಿಂದ ಮಡಿಕೇರಿ ಮೂಲಕ ಮಂಗಳೂರಿಗೆ ಒಂದು ವಾರದ ಹಿಂದೆ ಬಂದು ತಿರುಗಾಡಿದ್ದನು.


Published by:ಪಾವನ ಎಚ್ ಎಸ್
First published: