ಬೇಯಿಸಿದ ಚಪಾತಿಯಲ್ಲಿ ಅಲ್ಲಾ ಅಕ್ಷರ ಜಮಖಂಡಿಯಲ್ಲಿ ನಡೆದದ್ದು ಪವಾಡವೇ ?

news18
Updated:June 18, 2018, 8:43 PM IST
ಬೇಯಿಸಿದ ಚಪಾತಿಯಲ್ಲಿ ಅಲ್ಲಾ ಅಕ್ಷರ ಜಮಖಂಡಿಯಲ್ಲಿ ನಡೆದದ್ದು ಪವಾಡವೇ ?
news18
Updated: June 18, 2018, 8:43 PM IST
- ರಾಚಪ್ಪ ಬನ್ನಿದಿನ್ನಿ, ನ್ಯೂಸ್ 18 ಕನ್ನಡ 

ಬಾಗಲಕೋಟೆ ( ಜೂನ್ 18) :  ಅಡುಗೆ ಮನೆಯಲ್ಲಿ ಮಾಡಿದ ಚಪಾತಿಯಲ್ಲೇ  ಅಲ್ಲ ಎಂಬ ಸಂಕೇತ ಮೂಡಿ ಅಚ್ಚರಿ ಘಟನೆಯೊಂದು ಬಾಗಲಕೋಟೆ ಜಿಲ್ಲೆಯ ಜಮಖಂಡಿ ಪಟ್ಟಣದಲ್ಲಿ ನಡೆದಿದೆ.

ಜಮಖಂಡಿ ನಗರದ ಪೆಂಡಾರ ಗಲ್ಲಿಯ ಮುಜಾಫರ ಪೌಜಿ ಎಂಬುವವರ ಮನೆಯಲ್ಲಿ ಇಂದು ಚಪಾತಿ ಮಾಡೋ ವೇಳೆ ಅಕಸ್ಮಾತ್ ಆಗಿ ಅಲ್ಲಾ ಎಂಬ ಸಂಕೇತ ಮೂಡಿ ಬಂದಿದೆ. ತಕ್ಷಣ ಮನೆಯವರಲ್ಲಿ ಅಚ್ಚರಿ ಮೂಡಿಸಿದೆ. ಇನ್ನು ಈ ಸುದ್ದಿ ತಿಳಿಯುತ್ತಿದ್ದಂತೆ ಸುತ್ತಮುತ್ತಲಿನ ನಿವಾಸಿಗಳು ಪೌಜಿ ಅವರ ಮನೆಗೆ ಆಗಮಿಸಿ ಅಚ್ಚರಿ ಘಟನೆ ನೋಡುವುದಕ್ಕೆ ಆಗಮಿಸುತ್ತಿರುವುದು ಕಂಡು ಬಂದಿದೆ.

ಇತ್ತ ರಮಜಾನ್ ಹಬ್ಬದ ಆಚರಣೆ ಮುಗಿಯುತ್ತಲೇ ಈ ರೀತಿ ಚಪಾತಿಯಲ್ಲಿ ಅಲ್ಲಾ ಎಂಬ ಸಂಕೇತ ಮೂಡಿರುವುದು ಮನೆಯವರಲ್ಲಿ ಸಂತಸ ಮೂಡಿಸಿದೆ. ಇದು ಅಲ್ಲಾನ ಕೃಪೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸ್ತಿದ್ದಾರೆ. ಅಚ್ಚರಿ ಘಟನೆ ನೋಡಿದ ಜನರು ಬೆರಗಾಗಿದ್ದಾರೆ.
First published:June 18, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ