ಬೆಂಗಳೂರು/ಮಂಗಳೂರು: ಪೆರೋಲ್ (Parole) ಮೇಲೆ ಬಂದು ನಾಪತ್ತೆಯಾಗಿದ್ದ ಅಪರಾಧಿಯನ್ನು (Convict) 15 ವರ್ಷದ ಬಳಿಕ ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿನ (Bengaluru) ಮಂಗಮ್ಮನಪಾಳ್ಯದ ನಿವಾಸಿಯಾಗಿದ್ದ ಮೊಹಮ್ಮದ್ ಸುಹೇಲ್ ಅಲಿಯಾಸ್ ಮೊಹಮ್ಮದ್ ಅಯಾಜ್ (44) 2007ರಿಂದ ನಾಪತ್ತೆಯಾಗಿದ್ದನು. ಪೆರೋಲ್ ಮೇಲೆ ಬಂದಿದ್ದ ಸುಹೇಲ್ ಆಯುರ್ವೇದ ಔಷಧ ತಜ್ಞನಾಗಿ ಬದಲಾಗಿದ್ದನು. 2004ರಲ್ಲಿ ಸುಹೇಲ್ ಮತ್ತು ಆತನ ಸಹಚರರು ನಿವೃತ್ತ ಸೈನಾಧಿಕಾರಿಯನ್ನು (Ex Army Man) ಕೊಲೆಗೈದ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ (Life Sentence Convict) ಗುರಿಯಾಗಿದ್ದರು. 2007 ಮಾರ್ಚ್ನಲ್ಲಿ ಪೆರೋಲ್ ಮೇಲೆ ಸುಹೇಲ್ ಜೈಲಿನಿಂದ ಹೊರ ಬಂದಿದ್ದನು. ಇತ್ತೀಚೆಗಷ್ಟೇ ಪೆರೋಲ್ ಮೇಲೆ ಹೋಗಿ ನಾಪತ್ತೆಯಾದವರನ್ನು ಬಂಧಿಸುವಂತೆ ನ್ಯಾಯಾಲಯ ಸೂಚನೆ ನೀಡಿತ್ತು. ನ್ಯಾಯಾಲಯದ ಆದೇಶ ಬೆನ್ನಲ್ಲೇ ಮರೆತು ಹೋಗಿದ್ದ ಪ್ರಕರಣವನ್ನು ಕೈಗೆತ್ತಿಕೊಂಡ ಮಡಿವಾಳ ಪೊಲೀಸರು (Madivala Police) ಸುಹೇಲ್ನನ್ನು ಬಂಧಿಸಿದ್ದಾರೆ.
ಇದೇ ಪ್ರಕರಣದ ಮತ್ತೋರ್ವ ಆರೋಪಿ ಶಂಕರ್ ಎಂಬಾತ ಸಹ ಪೆರೋಲ್ ಮೇಲೆ ಬಂದು ತಪ್ಪಿಸಿಕೊಂಡಿದ್ದನು. ಈ ಶಂಕರ್ 2017ರಲ್ಲಿ ಡಿಜೆ ಹಳ್ಳಿಯಲ್ಲಿ ಸಾವನ್ನಪ್ಪಿದ್ದನು. ಸಾಯುವ ತನ್ನ ಆಪ್ತ ದಿನೇಶ್ ಎಂಬಾತತನಿ ಶಂಕರ್ ತನ್ನ ಆದಾಯದ ಮೂಲವನ್ನು ಹೇಳಿದ್ದನು.
ಸುಳಿವು ನೀಡಿದ ಸಾಗರ್ ಎಂಟರ್ಪ್ರೈಸಸ್
ದಿನೇಶ್ ಉಪ್ಪಿನಂಗಡಿಗೆ ತೆರಳಿ ಶಂಕರ್ ಸ್ನೇಹಿತನನ್ನು ಭೇಟಿಯಾಗಿ ಹಣ ಪಡೆದುಕೊಂಡು ಬರುತ್ತಿದ್ದನು. ಉಪ್ಪಿನಂಗಡಿಯಲ್ಲಿರುವ ಸಾಗರ್ ಎಂಟರ್ಪ್ರೈಸಸ್ಗೆ ತೆರಳಿ ದಿನೇಶ್ ಹಣ ಪಡೆದುಕೊಂಡು ಬರುತ್ತಿದ್ದನು. ಈ ಸಾಗರ್ ಎಂಟರ್ಪ್ರೈಸಸ್ ಪೊಲೀಸರಿಗೆ ಮಹತ್ವದ ಸುಳಿವು ನೀಡಿತ್ತು.
ಒಮ್ಮೆ ವೇಣುಗೋಪಾಲ್ ಎಂಬಾತ ಸುಹೇಲ್ನನ್ನು ಕೊಲೆ ಮಾಡಲು ಪ್ರಯತ್ನಿಸಿದ್ದನು. ಈ ವೇಳೆ ಸುಹೇಲ್ಗೆ ಬೆನ್ನಿಗೆ ಚಾಕು ಹಾಕಿದ್ದನು. ಚಾಕು ಹಾಕಿದ ಕಲೆಗಳು ಸುಹೇಲ್ ಬೆನ್ನ ಮೇಲಿತ್ತು. ಬೆಂಗಳೂರು ತೊರೆಯುವ ಮೊದಲೇ ಸಾಗರ್ ಎಂಟರ್ಪ್ರೈಸಸ್ ಜಿಎಸ್ಟಿ ಪ್ರಮಾಣಪತ್ರವನ್ನು ಪೊಲೀಸರು ಪರಿಶೀಲಿಸಿದ್ದರು.
ಫೋಟೋ ಪರಿಶೀಲನೆ
ಈ ಪ್ರಮಾಣ ಪತ್ರದಲ್ಲಿದ್ದ ಫೋಟೋ ಸುಹೇಲ್ ರೀತಿ ಹೋಲಿಕೆ ಆಗುತ್ತಿತ್ತು. ಈ ಸುಳಿವುಗಳ ಆಧಾರದ ಮೇಲೆ ಬೆಂಗಳೂರು ಪೊಲೀಸರು ಉಪ್ಪಿನಂಗಡಿಗೆ ತೆರಳಿದ್ದರು.
ಉಪ್ಪಿನಂಗಡಿಗೆ ತೆರಳಿದ ಇನ್ಸ್ಪೆಕ್ಟರ್ ಕಿಶೋರ್ ಬಿ.ಟಿ. ನೇತೃತ್ವದ ತಂಡ ಮೊದಲಿಗೆ ಸ್ಥಳೀಯರಿಂದ ಮಾಹಿತಿ ಸಂಗ್ರಹಿಸಿತ್ತು. ಉಪ್ಪಿನಂಗಡಿಯಲ್ಲಿ ಸುಹೇಲ್ ತನ್ನ ಹೆಸರನ್ನು ಮೊಹಮ್ಮದ್ ಅಯಾಜ್ ಎಂದು ಬದಲಿಸಿಕೊಂಡಿದ್ದನು.
ಆಯುರ್ವೇದ ಔಷಧಿ ಮಾರಾಟ
ಎಂಟನೇ ಕ್ಲಾಸ್ ಓದಿರುವ ಸುಹೇಲ್ ಆಯುರ್ವೇದದ ಪುಸ್ತಕಗಳನ್ನು ಓದಿಕೊಂಡು ಔಷಧಿ ಸಿದ್ಧಮಾಡುತ್ತಿದ್ದನು. ಇದೇ ಔಷಧಿಗಳನ್ನು ಮಾರಾಟ ಮಾಡುತ್ತಾ ಕಳೆದ 15 ವರ್ಷಗಳಿಂದ ಆಯುರ್ವೇದ ತಜ್ಞನಾಗಿ ಉಪ್ಪಿನಂಗಡಿಯಲ್ಲಿ ಗುರುತಿಸಿಕೊಂಡಿದ್ದನು.
ನೀವು ಬೆಂಗಳೂರು ಪೊಲೀಸರಾ?
ಸೋಮವಾರ ಸಂಜೆ ಸ್ಥಳೀಯ ಪೊಲೀಸರ ನೆರವಿನಿಂದ ಸುಹೇಲ್ನನ್ನು ಬಂಧಿಸಿದ್ದಾರೆ. ಬಂಧನ ವೇಳೆ ಪೊಲೀಸರು ಸುಹೇಲ್ ಬೆನ್ನ ಮೇಲಿದ್ದ ಗಾಯವನ್ನು ಪರಿಶೀಲಿಸಿದ್ದಾರೆ. ತನ್ನ ಬಳಿ ಪೊಲೀಸರು ಬಂದ ಕೂಡಲೇ ನೀವು ಬೆಂಗಳೂರು ಪೊಲೀಸರಾ ಎಂದು ಸುಹೇಲ್ ಕೇಳಿದ್ದಾನೆ. ಸದ್ಯ ಉಪ್ಪಿನಂಗಡಿಯಿಂದ ಬೆಂಗಳೂರಿಗೆ ಸುಹೇಲ್ನನ್ನು ಕರೆತರಲಾಗಿದೆ.
ಇದನ್ನೂ ಓದಿ: Gadag: ಶಿಕ್ಷಕನಿಂದ ವಿದ್ಯಾರ್ಥಿ ಕೊಲೆ ಕೇಸ್ಗೆ ಟ್ವಿಸ್ಟ್; ಹತ್ಯೆ ಹಿಂದೆ ತ್ರಿಕೋನ ಪ್ರೇಮಕಥೆ
ಅವಮಾನ ತಾಳದೇ ಮೂವರು ಆತ್ಮಹತ್ಯೆ
ಒಂದೇ ಕುಟುಂಬದ ಮೂವರು ಮನೆಯಲ್ಲೇ ನೇಣಿಗೆ ಶರಣಾದ ಘಟನೆ ಹಾವೇರಿ ತಾಲೂಕಿನ ಅಗಡಿ ಗ್ರಾಮದಲ್ಲಿ ನಡೆದಿದೆ. ತಾಯಿ ಭಾರತಿ, ಮಗ ಕಿರಣ್, ಸೊಸೆ ಸೌಜನ್ಯ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕಿರಿಮಗ ಅರುಣ್ ಹಾಗೂ ಗೌರಮ್ಮ ಅನ್ನೋರು ಪ್ರೀತಿಸಿ ಮದುವೆಯಾಗಿದ್ರು. ಅದೇ ಕಾರಣಕ್ಕೆ ಗೌರಮ್ಮ ಕುಟುಂಬಸ್ಥರು ಭಾರತಿ ಕುಟುಂಬಕ್ಕೆ ಥಳಿಸಿದ್ರು. ನಿಮ್ಮ ಮಗ ನಮ್ಮ ಹುಡುಗಿಯನ್ನ ಓಡಿಸಿಕೊಂಡು ಹೋಗಿದ್ದಾನೆ ಎಂದು ಹಿಂಸೆ ಕೊಡ್ತಿದ್ರಂತೆ. ಅದರ ಅವಮಾನ ತಾಳಲಾಗದೇ ಮೂವರೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ