Murugesh Nirani: ಮುರುಗೇಶ್​ ನಿರಾಣಿ ಮುಂದಿನ ಮುಖ್ಯಮಂತ್ರಿ?- ಬಾಗಲಕೋಟೆಯಲ್ಲಿ ಪೋಸ್ಟರ್ ವಿವಾದ!

ಸಚಿವ ಮುರುಗೇಶ್ ನಿರಾಣಿ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಈ ಹೊತ್ತಲ್ಲೇ ನಿರಾಣಿ ಆಪ್ತರೊಬ್ಬರು ‘ನಿರಾಣಿ ಮುಂದಿನ ಸಿಎಂ’ ಅನ್ನೋ ಪೋಸ್ಟರ್ ಹಾಕಿದ್ದಾರೆ. ಇದು ವಿವಾದಕ್ಕೆ ಕಾರಣವಾಗಿದೆ. ಸದ್ಯ ಇದಕ್ಕೆ ನಿರಾಣಿ ಕೂಡ ಸ್ಪಷ್ಟನೆ ನೀಡಿದ್ದಾರೆ.

ಮುರುಗೇಶ್​ ನಿರಾಣಿ

ಮುರುಗೇಶ್​ ನಿರಾಣಿ

 • Share this:
  ಕರ್ನಾಟಕದಲ್ಲಿ (Karnataka) ಈಗ ಮುಖ್ಯಮಂತ್ರಿ (Chief Minister) ಬದಲಾವಣೆ ಕುರಿತು ನಿರಂತರಚ ಚರ್ಚೆ, ವಾದ-ವಿವಾದ ನಡೆಯುತ್ತಲೇ ಇದೆ. ಸಿಎಂ ಖುರ್ಚಿ ಸುತ್ತ ಒಂದಿಲ್ಲೊಂದು ವಿವಾದ (Controversy) , ಚರ್ಚೆ ನಡೆಯುತ್ತನೇ ಇರುತ್ತೆ. ಕೆಲದಿನಗಳ ಹಿಂದೆಯಷ್ಟೇ ಸಿಎಂ ಬದಲಾವಣೆ (CM Change) ಬಗ್ಗೆ ಕಾಂಗ್ರೆಸ್‌ (Congress)  ಮಾಡಿದ ಟ್ವೀಟ್ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿತ್ತು. ಸದ್ಯ ಬಿಜೆಪಿಯಲ್ಲಿ ಮೂರನೇ ಸಿಎಂ ಬಗ್ಗೆ ಚರ್ಚೆಯಾಗಿ ತಣ್ಣಗಾಗಿದೆ. ಇತ್ತ ಕಾಂಗ್ರೆಸ್​ನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ (Siddaramiah) ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ ಮುಖ್ಯಮಂತ್ರಿ ಖುರ್ಚಿ ಮೇಲೆ ಕಣ್ಣಿಟ್ಟಿದ್ದಾರೆ. ಇದರ ನಡುವೆ ಈಗ ಸಚಿವ ಮುರುಗೇಶ್ ನಿರಾಣಿ ಮುಂದಿನ ಸಿಎಂ ಅನ್ನೋ ಪೋಸ್ಟರ್​ ಹೊಸತೊಂದು ಚರ್ಚೆ ಹುಟ್ಟುಹಾಕಿದೆ.

  ಸಚಿವ ಮುರುಗೇಶ್​ ನಿರಾಣಿ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಈ ಹೊತ್ತಲ್ಲೇ ನಿರಾಣಿ ಆಪ್ತರೊಬ್ಬರು ‘ನಿರಾಣಿ ಮುಂದಿನ ಸಿಎಂ’ ಅನ್ನೋ ಪೋಸ್ಟರ್ ಹಾಕಿದ್ದಾರೆ. ಸದ್ಯ ಇದಕ್ಕೆ ನಿರಾಣಿ ಕೂಡ ಸ್ಪಷ್ಟನೆ ನೀಡಿದ್ದಾರೆ.

  ಬಿಜೆಪಿಗೆ ಪದೇಪದೇ ಮುಜುಗರ!

  ಒಂದೆಡೆ ಸಚಿವ ಮಾಧುಸ್ವಾಮಿ ಆಡಿಯೋ ಲೀಕ್, ಮತ್ತೊಂದೆಡೆ ಸಚಿವ ಶ್ರೀರಾಮುಲು ಸಿದ್ದರಾಮಯ್ಯಗೆ ಬಹುಪರಾಕ್​ನಿಂದ ಬಿಜೆಪಿಗೆ ತೀವ್ರ ಮುಜುಗರವಾಗಿದೆ. ಇದರ ನಡುವೆ ಈಗ ನಿರಾಣಿ ಪೋಸ್ಟರ್​ ಮತ್ತಷ್ಟು ಕಿಚ್ಚು ಹೊತ್ತಿಸಿದೆ.

  Controversy over the poster of Murugesh Nirani as the next Chief Minister in Bagalkot
  ವಿವಾದಿತ ಪೋಸ್ಟರ್​


  ನಿರಾಣಿ ಮುಂದಿನ ಮುಖ್ಯಮಂತ್ರಿ ಎಂದು ಪೋಸ್ಟರ್!

  ನಾಳೆ ಸಚಿವ ಮುರುಗೇಶ್​ ನಿರಾಣಿಯವರ ಹುಟ್ಟುಹಬ್ಬ. ಈ ಹಿನ್ನೆಲೆ ಬಾಗಲಕೋಟೆಯಲ್ಲಿ ಪೋಸ್ಟರ್​ವೊಂದನ್ನು ಹಾಕಲಾಗಿದ್ದು ವಿವಾದಕ್ಕೆ ಎಡೆಮಾಡಿಕೊಟ್ಟಿದೆ. ಪೋಸ್ಟರ್​ನಲ್ಲಿ ‘ಮುರುಗೇಶ್ ನಿರಾಣಿ ಮುಂದಿನ ಮುಖ್ಯಮಂತ್ರಿ’ ಎಂದು ಹಾಕಲಾಗಿದೆ.

  ಇದನ್ನೂ ಓದಿ: ರಾಷ್ಟ್ರಮಟ್ಟದಲ್ಲಿ ಬಿ ಎಸ್ ಯಡಿಯೂರಪ್ಪಗೆ ಸ್ಥಾನ ನೀಡಿದ ಬಿಜೆಪಿ

  ವಿವಾದಿತ ಪೋಸ್ಟರ್​ನಲ್ಲಿ ಏನಿದೆ?

  ‘ಮುಂದಿನ ಮುಖ್ಯಮಂತ್ರಿ, ಜಮಖಂಡಿ ಜಿಲ್ಲೆಯ ಕನಸು ನನಸು ಮಾಡುವ ನಾಯಕ. ಕರ್ನಾಟಕ ಸರ್ಕಾರದ ಬೃಹತ್ ಮತ್ತು ಕೈಗಾರಿಕಾ ಸಚಿವರಾದ ಮುರುಗೇಶ್ ನಿರಾಣಿ ಅವರಿಗೆ 57ನೇ ಜನ್ಮ ದಿನದ ಶುಭಾಶಯಗಳು’ ಅಂತಾ ಪೋಸ್ಟರ್​ನಲ್ಲಿ ಬರೆಯಲಾಗಿದೆ.

  ಆಪ್ತ ಸಹಾಯಕನಿಂದ ಪೋಸ್ಟರ್?

  ಹುಟ್ಟುಹಬ್ಬದ ಬ್ಯಾನರ್​ನಲ್ಲಿ  ಮುರುಗೇಶ್​ ನಿರಾಣಿ ಮುಂದಿನ ಮುಖ್ಯಮಂತ್ರಿ ಎಂದು ಆಪ್ತ ಸಹಾಯಕರೊಬ್ಬರು ಹಾಕಿಸಿದ್ದಾರೆ ಎನ್ನಲಾಗಿದೆ. ಆಪ್ತ ಸಹಾಯಕ ಕಿರಣ್ ಬಡಿಗೇರ್ ಎಂಬುವವರೇ ಇದನ್ನು ಹಾಕಿಸಿದ್ದು ಎನ್ನಲಾಗಿದೆ. ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟರ್ ವೈರಲ್ ಆಗಿದೆ. ನಾಳೆ ನಿರಾಣಿಯವರ ಹುಟ್ಟುಹಬ್ಬ ಇದ್ದು ಬಿಜೆಪಿಗೆ ಬಿಜೆಪಿ ನಾಯಕರಿಂದಲೇ ಪದೇ ಪದೇ ಮುಜುಗರವಾದಂತಾಗಿದೆ.

  ಇದನ್ನೂ ಓದಿ: ಮಹಿಳಾ ಸದಸ್ಯರ ವಿರುದ್ಧ HDK ಗರಂ; ಕಾಂಗ್ರೆಸ್ ಪಾದಯಾತ್ರೆಗೆ 25 ಕೋಟಿ ಖರ್ಚು

  ಈ ರೀತಿಯ ಪೋಸ್ಟರ್​, ಬ್ಯಾನರ್ ಹಾಕಬೇಡಿ-ನಿರಾಣಿ

  ಮುಖ್ಯಮಂತ್ರಿ ಪೋಸ್ಟರ್​​ ವೈರಲ್ ಆಗುತ್ತಿದ್ದಂತೆ ಸಚಿವ ಮುರುಗೇಶ್​ ನಿರಾಣಿ ಸ್ಪಷ್ಟನೆ ನೀಡಿದ್ದಾರೆ. ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಇಲ್ಲ. ಬಸವರಾಜ ಬೊಮ್ಮಾಯಿ ಅವರೇ ನಮ್ಮೆಲ್ಲರ ನೆಚ್ಚಿನ ಮುಖ್ಯಮಂತ್ರಿಗಳು. ಅವರ ಕಾರ್ಯವೈಖರಿಯಿಂದ ರಾಜ್ಯ ಅಭಿವೃದ್ಧಿಯತ್ತ ಸಾಗಿದೆ. ಬಿ.ಎಸ್.ಯಡಿಯೂರಪ್ಪ ಹಾಗೂ ಸಾಮೂಹಿಕ ನೇತೃತ್ವದಲ್ಲಿ ಚುನಾವಣೆಗೆ ಹೋಗುತ್ತೇವೆ. ಸಾಮಾಜಿಕ ಜಾಲತಾಣಗಳಲ್ಲಿ, ಪೋಸ್ಟರ್ ಹಾಗೂ ಬ್ಯಾನರ್ ಗಳಲ್ಲಿ ಈ ರೀತಿ ಹಾಕಬಾರದು ಅಂತ ಮನವಿ ಮಾಡಿದ್ದಾರೆ.

  ಬಿಎಸ್​ವೈಗೆ ಬಿಜೆಪಿ ರಾಷ್ಟ್ರಮಟ್ಟದ ಸಮಿತಿಯಲ್ಲಿ ಸ್ಥಾನ

  ಬಿಜೆಪಿ ನೂತನ ಸಂಸದೀಯ ಮಂಡಳಿಯನ್ನು ರಚಿಸಿದ್ದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಸಮಿತಿಯಲ್ಲಿ ಸ್ಥಾನ ನೀಡಲಾಗಿದೆ. ಮಾಜಿ ಸಿಎಂ ಯಡಿಯೂರಪ್ಪ ಅವರಿಗೆ ಬಿಜೆಪಿ ಹೈಕಮಾಂಡ್​​ ರಾಷ್ಟ್ರಮಟ್ಟದ ಸಂಸದೀಯ ಮಂಡಳಿಯಲ್ಲಿ ಸ್ಥಾನ ನೀಡಿದೆ. ಈ ಮೂಲಕ ಬಿ.ಎಸ್.ಯಡಿಯೂರಪ್ಪ ಅವರನ್ನು ಕಡೆಗಣಿಸಿಲ್ಲ ಎಂಬ ಸಂದೇಶವನ್ನು ಬಿಜೆಪಿ ರವಾನಿಸಿದೆ.

  ಹಿರಿಯ ನಾಯಕರಾದ ನಿತಿನ್ ಗಡ್ಕರಿ,  ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ಬಿಜೆಪಿಯ ಪ್ರಮುಖ ಸಂಸದೀಯ ಸಮಿತಿಯಿಂದ ಕೈಬಿಡಲಾಗಿದೆ. ಇನ್ನು ಬಿ.ಎಲ್.ಸಂತೋಷ್ ಅವರನ್ನು ಸಹ ಬಿಜೆಪಿ ಸಂಸದೀಯ ಸಮಿತಿಗೆ ಸೇರ್ಪಡೆ ಮಾಡಿಕೊಂಡಿದೆ. ಬಿಜೆಪಿಯ ನೀತಿ ನಿಯಮಗಳನ್ನು ರೂಪಿಸುವ ಅಧಿಕಾರವನ್ನು ಸಂಸದೀಯ ಮಂಡಳಿ ಹೊಂದಿರಲಿದೆ.

  (ವರದಿ: ಮಂಜುನಾಥ್ ತಳವಾರ  ನ್ಯೂಸ್ 18 ಕನ್ನಡ ಬಾಗಲಕೋಟೆ)
  Published by:Thara Kemmara
  First published: