ಸಮುದಾಯದೊಳಿತಿಗೆ ಶಾಸಕರು ರಾಜೀನಾಮೆ ನೀಡಿದರೆ, ಎಚ್​ಡಿಕೆ ಗೊಟಕ್; ವಿವಾದಾತ್ಮಕ ಹೇಳಿಕೆ ನೀಡಿದ ಪ್ರಸನ್ನಾನಂದ ಸ್ವಾಮೀಜಿ

Valmiki Community: ಕಾಂಗ್ರೆಸ್​​ ಶಾಸಕರು ರಾಜೀನಾಮೆ ಕೊಟ್ಟು ಸರ್ಕಾರ ಬೀಳಿಸಲು ಮುಂದಾಗಬೇಕು. ರಾಜ್ಯದಲ್ಲಿ ಒಟ್ಟು 17 ನಮ್ಮ ಶಾಸಕರು ಇದ್ದಾರೆ, ಇದರಲ್ಲಿ ಸುಮಾರು 8 ವಾಲ್ಮೀಕಿ ಸಮುದಾಯದ ನಾಯಕರಿದ್ದಾರೆ. ಎಲ್ಲ ಕಾಂಗ್ರೆಸ್​ ಶಾಸಕರು ರಾಜೀನಾಮೆ ನೀಡಬೇಕು.

Seema.R | news18
Updated:June 25, 2019, 4:06 PM IST
ಸಮುದಾಯದೊಳಿತಿಗೆ ಶಾಸಕರು ರಾಜೀನಾಮೆ ನೀಡಿದರೆ, ಎಚ್​ಡಿಕೆ ಗೊಟಕ್; ವಿವಾದಾತ್ಮಕ ಹೇಳಿಕೆ ನೀಡಿದ ಪ್ರಸನ್ನಾನಂದ ಸ್ವಾಮೀಜಿ
ಪ್ರಸನ್ನಾನಂದ ಸ್ವಾಮೀಜಿ
  • News18
  • Last Updated: June 25, 2019, 4:06 PM IST
  • Share this:
ಬೆಂಗಳೂರು (ಜೂ.25): ಸಮುದಾಯದ ಒಳಿತಿಗಾಗಿ ಪಕ್ಷಾತೀತವಾಗಿ ಶಾಸಕರು ರಾಜೀನಾಮೆ ನೀಡಬೇಕು. ಈ ರೀತಿ ಮಾಡಿದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಗೊಟಕ್​ ಎನ್ನುತ್ತಾರೆ ಎಂದು ಪ್ರಸನ್ನಾನಂದ ಸ್ವಾಮೀಜಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಸಿಎಂ ಕುಮಾರಸ್ವಾಮಿ ತಮ್ಮ ಸ್ಥಾನ ಉಳಿಸಿಕೊಳ್ಳಲು ಎಷ್ಟು ನಾಟಕ ಮಾಡುತ್ತಾರೆ ಎಂಬುದು ಗೊತ್ತಿದೆ. ನಮ್ಮ ಶಾಸಕರಿಗೆ ಹೈಕಮಾಂಡ್​ ಫೋನ್​ ಮಾಡಲ್ಲ. ಆದರೆ ಕೈ ಶಾಸಕರಿಗೆ ಈ ಸಿಎಂ ಫೋನ್ ಮಾಡುತ್ತಾರೆ. ಫೋನ್​ ಮಾಡಿ ಅಣ್ಣ ನಿಮಗೇನು ಬೇಕೆಂದು ಕೇಳುತ್ತಾರೆ. ನಿಮಗೇನು ಬೇಕೆಂದು ಕಾಲು ಬೇಕಾದರೂ ಹಿಡೀತಾರೆ. ನಮ್ಮ ಶಾಸಕರು ಒಟ್ಟಾಗಿ ಎಲ್ಲರೂ ರಾಜೀನಾಮೆ ನೀಡಿದರೆ ಕುಮಾರಸ್ವಾಮಿ ಅಲ್ಲ, ಅವರಪ್ಪನೂ ಮಾತು ಕೇಳುತ್ತಾರೆ ಎಂದು ಗುಡುಗಿದರು.

Valmiki community Pritest
ಸಮುದಾಯದ ಪ್ರತಿಭಟನೆಯಲ್ಲಿ ಭಾಗಿಯಾದ ಜನರು


ಕಾಂಗ್ರೆಸ್​​ ಶಾಸಕರು ರಾಜೀನಾಮೆ ಕೊಟ್ಟು ಸರ್ಕಾರ ಬೀಳಿಸಲು ಮುಂದಾಗಬೇಕು. ರಾಜ್ಯದಲ್ಲಿ ಒಟ್ಟು 17 ನಮ್ಮ ಶಾಸಕರು ಇದ್ದಾರೆ, ಇದರಲ್ಲಿ ಸುಮಾರು 8 ವಾಲ್ಮೀಕಿ ಸಮುದಾಯದ ನಾಯಕರಿದ್ದಾರೆ. ಎಲ್ಲ ಕಾಂಗ್ರೆಸ್​ ಶಾಸಕರು ರಾಜೀನಾಮೆ ನೀಡಬೇಕು. ಆಗ ಸರ್ಕಾರ ಉಳಿಸಲು ಮುಂದಾಗುವ ಸಿಎಂ ನಮ್ಮ ಬೇಡಿಕೆಯನ್ನು ಪರಿಗಣಿಸುತ್ತಾರೆ ಎಂದರು

ಇದನ್ನು ಓದಿ: ಸಮುದಾಯದ ಒಳಿತಿಗೆ ಸ್ವಾಮೀಜಿ ಆದೇಶಿಸಿದರೆ ರಾಜೀನಾಮೆ ನೀಡಲು ಸಿದ್ಧ; ಮಾಜಿ ಸಚಿವ ಶ್ರೀರಾಮುಲು

ಸರ್ಕಾರ ಉಳಿಸಲು ಕಾಲು ಹಿಡೀತೀರಿ ಅನ್ನೋದು ಎಲ್ಲರೂ ಗೊತ್ತಿದೆ. ಇಂತಹ ಕುಮಾರಸ್ವಾಮಿ ಸಿಎಂ ಆಗಿ ಮುಂದುವರೆಯಬೇಕಾ ಎಂಬುದು ಇಂದೇ ನಿರ್ಧಾರ ಆಗಲಿ ಎಂದ ಪ್ರಸನ್ನಾನಂದ ಶ್ರೀಗಳು ಸವಾಲು ಹಾಕಿದರು.

First published:June 25, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ