Karnataka Politics: ರಾಜಣ್ಣನಿಗೆ ದೇವೇಗೌಡರ ಚಾಲೆಂಜ್; ಕೈ ನಾಯಕನ ವಿರುದ್ಧ ಗೌಡ್ರ ಮಕ್ಕಳು, ಮೊಮ್ಮಕ್ಕಳು ಫುಲ್ ಗರಂ

ಬೆಂಗಳೂರಿನ ಜನತೆ ಕಾವೇರಿ ನೀರು ಕುಡಿಯುತ್ತಿದ್ರೆ, ಅದು ದೇವೇಗೌಡರು ಕೊಟ್ಟ ಕೊಡುಗೆ, ಇದನ್ನು ಕಾಂಗ್ರೆಸ್‌, ಬಿಜೆಪಿಯವರು ಕೊಟ್ಟಿದ್ದಲ್ಲ. ನಿಮ್ಮ ಬದುಕನ್ನ ಕಟ್ಟುವ ಕಾರ್ಯಕ್ರಮ ಕೊಡೊದು ನನ್ನ ಉದ್ದೇಶ. ರಾಜಣ್ಣ ದೇವೇಗೌಡರ ಸಾವಿನ ಬಗ್ಗೆ ಮಾತನಾಡಿದ್ದಾರೆ. ಆದರೆ ಮೇಲೊಬ್ಬ ಇದ್ದಾನೆ. ದೇವೇಗೌಡರು ಶತಾಯುಷಿಗಳಾಗ್ತಾರೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ

ಕುಮಾರಸ್ವಾಮಿ, ಹೆಚ್​.ಡಿ ದೇವೇಗೌಡ

ಕುಮಾರಸ್ವಾಮಿ, ಹೆಚ್​.ಡಿ ದೇವೇಗೌಡ

  • Share this:
ಬೆಂಗಳೂರು (ಜು.1): H.D ದೇವೇಗೌಡರಿಗೆ (H.D Deve Gowda) ಕೂರಲು ಓಡಾಡಲು ಆಗಲ್ಲ ಎಂದು ಅಪಹಾಸ್ಯ ಮಾಡೋವ್ರು ಇದ್ದಾರೆ. ಅದನ್ನು ಸಾಧ್ಯ ಮಾಡಿ ತೋರಿಸುತ್ತೇವೆ. ಈ ಸಲ ದೈವ ಶಕ್ತಿ ನಮ್ಮ ಮೇಲಿದೆ. ಕುಮಾರಸ್ವಾಮಿ (Kumarswamy), ದೇವೇಗೌಡ, ಇಬ್ರಾಹಿಂ ಅಲ್ಲ. ಇಲ್ಲಿ ಇರುವ ಅಣ್ಣ ತಮ್ಮಂದಿರನ್ನು ನೋಡಿ ಎಲ್ಲರೂ ಹೋರಾಟಕ್ಕೆ ಕೆಚ್ಚೆದೆಯಿಂದ ನಿಂತಿದ್ದಾರೆ. ಇಂದು ಜನತಾ ಮಿತ್ರ ಕಾರ್ಯಕ್ರಮ ಮಾಡಲಾಗುತ್ತಿದೆ. 1 ತಿಂಗಳು ಈ  ಕಾರ್ಯಕ್ರಮ ನಡೆಯಲಿದೆ. ನಾನು ಸಿಎಂ ಆದಾಗ ಬೆಂಗಳೂರಿಗೆ ಏನಾಯ್ತು ಅನ್ನೋದರ ಬಗ್ಗೆ ತುಂಬಾ ವಿಚಾರ ಮಾತಾಡ ಬಲ್ಲೆ. ಬೆಂಗಳೂರಿಗೆ (Bengaluru) ಏನೇನು ಮಾಡಿದ್ದೀನಿ ಅನ್ನೋದನ್ನ ವಿವರವಾಗಿ ಹೇಳುವ ಕಾಲ ಬರುತ್ತದೆ ಎಂದ ದೇವೇಗೌಡರು ಹೇಳಿದ್ದಾರೆ

ಏನೇ ಮಾಡಿದ್ರು JDS ಪಕ್ಷ ತುಳಿಯಲು ಆಗಲ್ಲ

ಈ ಕ್ಷೇತ್ರದಲ್ಲಿ ಎಂಥಾ ಕೆಟ್ಟ ಸ್ಥಿತಿ ಇತ್ತು ಅಂದರೆ, ದೇವೇಗೌಡ ಒಬ್ಬ ಹಳ್ಳಿಯ ರೈತನ ಮಗ, ಅವನೇನು ಮಾಡಿಯಾನು ಎಂದ ಮಹಾನುಭಾವರು ಇದ್ದಾರೆ. ಎಲ್ಲವೂ ನನಗೆ ನೆನಪಿದೆ ಮಾತಾಡೋ ಜ್ಞಾಪಕ ಶಕ್ತಿ ಇದೆ. ಈ ಪಕ್ಷ ತುಳಿಯಲು ಏನು ಮಾಡಿದ್ರು ಸಾಧ್ಯವಾಗಲ್ಲ. ಪಕ್ಷ ಉಳಿಸಲು ಶಥಾಯ ಗತಾಯ ಪ್ರಯತ್ನ ಮಾಡುತ್ತೇವೆ ಎಂದು ಹೇಳಿದ್ದಾರೆ.

ಬೆಂಗಳೂರಿಗೆ ಕಾವೇರಿ ದೇವೇಗೌಡರು ಕೊಟ್ಟ ಕೊಡುಗೆ

ಬೆಂಗಳೂರಿನ ಜನತೆ ಕಾವೇರಿ ನೀರು ಕುಡಿಯುತ್ತಿದ್ರೆ, ಅದು ದೇವೇಗೌಡರು ಕೊಟ್ಟ ಕೊಡುಗೆ, ಇದನ್ನು ಕಾಂಗ್ರೆಸ್‌, ಬಿಜೆಪಿಯವರು ಕೊಟ್ಟಿದ್ದಲ್ಲ. ನಿಮ್ಮ ಬದುಕನ್ನ ಕಟ್ಟುವ ಕಾರ್ಯಕ್ರಮ ಕೊಡೊದು ನನ್ನ ಉದ್ದೇಶ. ರಾಜಣ್ಣ ದೇವೇಗೌಡರ ಸಾವಿನ ಬಗ್ಗೆ ಮಾತನಾಡಿದ್ದಾರೆ. ಆದರೆ ಮೇಲೊಬ್ಬ ಇದ್ದಾನೆ. ನಂಗೆ ವಿಶ್ವಾಸವಿದೆ, ದೇವೇಗೌಡರು ಶತಾಯುಷಿಗಳಾಗ್ತಾರೆ. ನನ್ನ ತಂದೆ ಅಂತಲ್ಲ, ಅವರು ಎಲ್ಲವನ್ನೂ ನೋಡಿದ್ದಾರೆ. ಇನ್ನೊಂದು ಸಲ ಮಾತನಾಡುವಾಗ ಹುಷಾರ್ ಅಂತಾ ಹೇಳ್ತೇನೆ. ನಾನು ದೇವೇಗೌಡರ ಮಗ ಇನ್ನೂ ಬದುಕಿದ್ದೇನೆ. ಮಧುಗಿರಿಯಲ್ಲಿ ತೋರಿಸುತ್ತೇನೆ ಎಂದು ಕುಮಾರಸ್ವಾಮಿ ಚುನಾವಣಾ ಸವಾಲು ಹಾಕಿದ್ದಾರೆ.

ಇದನ್ನೂ ಓದಿ: Karwara: ನಗರಸಭೆಯಲ್ಲಿ ಗೋಲ್ಮಾಲ್! ಕಾಮಗಾರಿ ಮುಗಿದ‌ ಮೇಲೆ ಟೆಂಡರ್ ಯಾಕೆ ಸ್ವಾಮಿ?

ರಾಜಣ್ಣ ವಿರುದ್ಧ ಮಾಜಿ ಸಿಎಂ ಕುಮಾರಸ್ವಾಮಿ ಕಿಡಿ

ತಮ್ಮ ಭಾಷಣದ ವೇಳೆ ರಾಜಣ್ಣ ವಿರುದ್ಧ ಕುಮಾರಸ್ವಾಮಿ ಆಕ್ರೋಶ ಹೊರಹಾಕಿದ್ದಾರೆ. ದೇವೇಗೌಡರ ಬಗ್ಗೆ ರಾಜಣ್ಣ ಮಾತನ್ನಾಡಿದ್ದಾರೆ. ಅದು ಅವರ ಸಂಸ್ಕೃತಿ ತೋರಿಸುತ್ತೆ. ಕಳೆದ 2004ರಲ್ಲಿ ಅವರು ಬೆಳ್ಳಾವಿ ಜೆಡಿಎಸ್ ಅಭ್ಯರ್ಥಿಯಾಗಿದ್ದರು. ಕೊನೆಯ ದಿನ ದೇವೇಗೌಡರು ಹೋಗಿ ಪ್ರಚಾರ ಮಾಡಿದ್ದರು. ಆಗ ಆ ವ್ಯಕ್ತಿ ವಿಧಾನಸೌಧಕ್ಕೆ ಮೆಟ್ಟಿಲು ಹತ್ತಲು ಸಾಧ್ಯವಾಯ್ತು. ಇಲ್ಲದಿದ್ದರೆ ಅವರನ್ನ ಯಾರು ಕೇಳುತ್ತಿದ್ದರು. ದೇವೇಗೌಡರ ಆರೋಗ್ಯ ಲೆಕ್ಕಿಸದೆ ಮಾತನ್ನಾಡಿದ್ದಾರೆ. ಇಬ್ಬರು ಹೆಗಲಿಗೆ ಹೆಗಲು ಕೊಡುತ್ತಾರೆ.

ದೇವಸ್ಥಾನದ ಆವರಣದಲ್ಲಿ ಪೂಜೆ ಸಲ್ಲಿಸುತ್ತೇವೆ. ದೇವರ ಮೆರವಣಿಗೆಗೂ ಭುಜ ಕೊಡಬೇಕು. ಭುಜಕೊಟ್ಟೇ ಮೆರವಣಿಗೆ ಮಾಡೋದಲ್ಲವೇ?. ಅವರ ಮಾತಿನ ದುರಹಂಕಾರ ಕೇಳಿದ್ದೇನೆ. ನೀನು ಬ್ರಹ್ಮ ಅಲ್ಲ, ನೀನು ಒಬ್ಬ ಹುಲು ಮಾನವ, ದೇವೇಗೌಡರು ಶತಾಯುಷಿಗಳಾಗಿ ನಾಡಿನಲ್ಲಿ ಬದುಕುತ್ತಾರೆ. ಹಲವಾರು ಒತ್ತಡಗಳಿಗೆ ಚುನಾವಣೆಗೆ ನಿಲ್ಲಿಸಿದರು. ತುಮಕೂರಿನಲ್ಲಿ ನಿಲ್ಲಿಸಿ ಸೋಲಿಸಿದರು. ಅವರನ್ನ ಸೋಲಿಸಲು ಕುತಂತ್ರ ನಡೆಸಿದ್ದು ರಾಜಣ್ಣ, ಇನ್ನೆರಡು ಮೂರು ತಿಂಗಳು ನೋಡಲಿ. ಅವರೇ ಸ್ವತಂತ್ರವಾಗಿ ಓಡಾಡುತ್ತಾರೆ. ಹಣೆಬರಹ ಬರೆದವರು ಎಲ್ಲರೂ ಹೋಗಿದ್ದಾರೆ. ಕ್ಷಮೆ ಕೇಳಬೇಕು ಅಂತಾ ಹೇಳೋದಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ರು.

ನೀಚನ ಬಾಯಲ್ಲಿ ನೀಚ ಪದ ಬಂದಿದೆ

ರಾಜಣ್ಣ ಜನಪ್ರತಿನಿಧಿಯಾಗಲು ಲಾಯಕ್ಕಿಲ್ಲ ಎಂದು ಮಧುಗಿರಿ ಜನ ಮನೆಗೆ ಕಳುಹಿಸಿದ್ದಾರೆ. ಲೆಕ್ಕಿಕ್ಕಿಲ್ಲದವರ ಬಗ್ಗೆ ನಾನು ಏಕೆ ಪ್ರತಿಕ್ರಿಯೆ ಕೊಡಬೇಕು. ದೊಡ್ಡ ದಂಧೆಕೋರ ಅವನು ದೇವೇಗೌಡರ ಕಾಲಿನ ಧೂಳಿಗು ಸಮ ಇಲ್ಲ ಅವನು, ನೀಚನ ಬಾಯಲ್ಲಿ ನೀಚ ಪದ ಬಂದಿದೆ. ಇದಕ್ಕೆ ದೇವರು ಉತ್ತರ ಕೊಡ್ತಾರೆ. ಅವನು ಜನಪ್ರತಿನಿಧಿಯಲ್ಲ ಸೋತು ಮನೆಯಲ್ಲಿ ಕೂಳಿತುಕೊಂಡಿದ್ದಾರೆ. ಹೀಗೆ ಮಾತನಾಡಿದ್ರೆ ಸಂತೆಯಲ್ಲಿ ಹುಚ್ಚುನಾಯಿಗೆ ಹೊಡೆದಂಗೆ ಹೊಡಿಯುತ್ತಾರೆ. ಕೆ.ಎನ್.ರಾಜಣ್ಣ ವಿರುದ್ಧ ಸಂಸದ ಪ್ರಜ್ವಲ್ ರೇವಣ್ಣ ವಾಗ್ದಾಳಿ ನಡೆಸಿದ್ರು.
Published by:Pavana HS
First published: